Campus Front of India - Karnataka State

Campus Front of India - Karnataka State Campus Front of India is a Student organisation built for social change.

ಕ್ಯಾಂಪಸ್ ಫ್ರಂಟ್ ಮೇಲಿನ ನಿಷೇಧವು ಪ್ರಜಾಪ್ರಭುತ್ವ  ಮತ್ತು ಸಂವಿಧಾನ ವಿರೋಧಿಯಾಗಿದೆ;  ನ್ಯಾಯಾಲಯದಲ್ಲಿ ಈ ಕುರಿತು ಪ್ರಶ್ನಿಸಲಾಗುವುದು.  ಕಾನೂ...
29/09/2022

ಕ್ಯಾಂಪಸ್ ಫ್ರಂಟ್ ಮೇಲಿನ ನಿಷೇಧವು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿಯಾಗಿದೆ; ನ್ಯಾಯಾಲಯದಲ್ಲಿ ಈ ಕುರಿತು ಪ್ರಶ್ನಿಸಲಾಗುವುದು. ಕಾನೂನಿನ ಆದೇಶದಂತೆ ಸಂಘಟನಾ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಮೇಲಿನ ಕೇಂದ್ರ ಸರ್ಕಾರದ ನಿಷೇಧವು ಪ್ರಜಾಪ್ರಭುತ್ವ ವಿರೋಧಿ ಮತ್ತು ನಮ್ಮ ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿದೆ. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಒಂದು ದಶಕದಿಂದ ದೇಶಾದ್ಯಂತ ಸಾಮಾಜಿಕ ಕಳಕಳಿಯುಳ್ಳ ಮತ್ತು ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಮನೋಭಾವವುಳ್ಳ ಜವಾಬ್ದಾರಿಯುತ ಯುವಕರನ್ನು ನಿರ್ಮಿಸುವ ದೃಷ್ಟಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಒಂದು ಮಟ್ಟಿಗೆ ಅದನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಸಂಘಟನೆಯ ಭಾಗವಾಗಿದ್ದ ಅನೇಕ ವಿದ್ಯಾವಂತ ಯುವಕರು ಈಗ ಸಾಮಾಜಿಕ ಚಟುವಟಿಕೆಗಳ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ. CFI ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡಿಕೊಳ್ಳುತ್ತಾ ಬಂದಿದೆ. ನಮ್ಮ ಕಾನೂನಿಗೆ ವಿರುದ್ಧವಾದ ಯಾವುದೇ ಚಟುವಟಿಕೆಗಳನ್ನು ನಾವು ಈ ವರೆಗೂ ತೊಡಗಿಕೊಂಡಿಲ್ಲ ಮತ್ತು ಬೆಂಬಲಿಸಿಲ್ಲ. ಆದ್ದರಿಂದ, ಕಾನೂನಿಗೆ ಅನುಸಾರವಾಗಿ, ಕೇಂದ್ರ ಗೃಹ ಇಲಾಖೆಯ ನಿಷೇಧ ಆದೇಶವನ್ನು ಒಪ್ಪಿಕೊಂಡು, ಮತ್ತು ತಕ್ಷಣವೇ ಜಾರಿಗೆ ಬರುವಂತೆ ಭಾರತದಲ್ಲಿ ಸಂಘಟನೆಯು ತನ್ನ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸಿದೆ.

ಅದೇ ರೀತಿ PFI ಗೆ ಸಂಬಂಧಿಸಿದಂತೆ ಕ್ಯಾಂಪಸ್ ಫ್ರಂಟ್ ವಿರುದ್ಧದ ಎಲ್ಲಾ ಆಧಾರರಹಿತ ಆರೋಪಗಳನ್ನು ನಾವು ತಿರಸ್ಕರಿಸುತ್ತೇವೆ . ಸಂಬಂಧಪಟ್ಟ ಕಾನೂನು ತಜ್ಞರೊಂದಿಗೆ ಚರ್ಚಿಸಿದ ನಂತರ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು.

ಈ ಹಿಂದೆ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದ ಎಲ್ಲಾ ವಿದ್ಯಾರ್ಥಿಗಳಲ್ಲಿ ಸಂಸ್ಥೆಯ ಹೆಸರಿನಲ್ಲಿ ಯಾವುದೇ ಕಾರ್ಯಕ್ರಮ ಅಥವಾ ಚಟುವಟಿಕೆಯನ್ನು ನಡೆಸದಂತೆ ನಾವು ವಿನಂತಿಸುತ್ತೇವೆ. ಯಾವುದೇ ಕಾರ್ಯಕ್ರಮ ಅಥವಾ ಚಟುವಟಿಕೆ ಅಥವಾ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತು ಕಾಮೆಂಟ್‌ಗಳಿಗೆ ಸಂಸ್ಥೆಯ ಹೆಸರು ಅಥವಾ ಬ್ಯಾನರ್ ಅನ್ನು ಬಳಸಿದರೆ ,ಅದಕ್ಕೆ ನಾವು ಜವಾಬ್ದಾರರಾಗಿರುವುದಿಲ್ಲ.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ

ಕ್ಯಾಂಪಸ್ ಫ್ರಂಟ್ ಬಳ್ಳಾರಿ ಜಿಲ್ಲೆಯ ವತಿಯಿಂದ ಹೆಚ್ಚಿಸಿರುವ ಪರೀಕ್ಷಾ ಶುಲ್ಕವನ್ನು ಕಡಿಮೆಗೊಳಿಸಿ, ಶುಲ್ಕ ಕಟ್ಟುವ ಸಮಯ ವಿಸ್ತರಿಸಲು ಅಗ್ರಹಿಸಿ...
16/09/2022

ಕ್ಯಾಂಪಸ್ ಫ್ರಂಟ್ ಬಳ್ಳಾರಿ ಜಿಲ್ಲೆಯ ವತಿಯಿಂದ ಹೆಚ್ಚಿಸಿರುವ ಪರೀಕ್ಷಾ ಶುಲ್ಕವನ್ನು ಕಡಿಮೆಗೊಳಿಸಿ, ಶುಲ್ಕ ಕಟ್ಟುವ ಸಮಯ ವಿಸ್ತರಿಸಲು ಅಗ್ರಹಿಸಿ ಬಳ್ಳಾರಿ ಯೂನಿವರ್ಸಿಟಿಗೆ ಮಾರ್ಚ್

ಬಳ್ಳಾರಿ : ಕ್ಯಾಂಪಸ್ ಫ್ರಂಟ್ ಬಳ್ಳಾರಿ ಜಿಲ್ಲೆಯ ವತಿಯಿಂದ ಹೆಚ್ಚಿಸಿರುವ ಪರೀಕ್ಷಾ ಶುಲ್ಕವನ್ನು ಕಡಿಮೆಗೊಳಿಸಿ, ಶುಲ್ಕ ಕಟ್ಟುವ ಸಮಯ ವಿಸ್ತರಿಸಲು ಅಗ್ರಹಿಸಿ ಬಳ್ಳಾರಿ ಯೂನಿವರ್ಸಿಟಿಗೆ ಮಾರ್ಚ್ ಮಾಡಲಾಯಿತು.

ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯರಾದ ಚಾಂದ್ ಸಲ್ಮಾನ್ ಮಾತನಾಡಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲ ವಿಷಯದಲ್ಲಿ ಬೆಲೆಯೇರಿಕೆಯಾಗಿದ್ದು ಜನರು ಹಣವಿಲ್ಲದೆ ತತ್ತರಿಸಿ ಹೋಗಿದ್ದಾರೆ, ಇಂತಹ ಸಂದರ್ಭದಲ್ಲಿ ಸರ್ಕಾರ ಮತ್ತು ಬಳ್ಳಾರಿ ವಿಶ್ವವಿದ್ಯಾಲಯದಿಂದ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಲು ಹೊರಟಿದ್ದು ಸರಿಯಲ್ಲ, ಪರೀಕ್ಷೆ ಸಂದರ್ಭದಲ್ಲಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿ ಬೀದಿಗೆ ತಂದು ನಿಲ್ಲಿಸಿದೆ, ವಿದ್ಯಾರ್ಥಿಗಳಿಂದ ಇಷ್ಟು ವಿರೋಧ ವ್ಯಕ್ತವಾದರು ಉಪಕುಲಪತಿಗಳು ಪರೀಕ್ಷಾ ಶುಲ್ಕ ಕಡಿಮೆ ಮಾಡುವುದಿಲ್ಲ ಎಂದು ಹೇಳುತ್ತಿದ್ದು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದರೆ ನಮ್ಮ ಬೇಡಿಕೆ ಇಷ್ಟೇ ಪರೀಕ್ಷೆ ಶುಲ್ಕ ಕಟ್ಟುವ ಸಮಯವನ್ನು ವಿಸ್ತರಿಸಬೇಕು ಹಾಗೂ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಬೇಕು ಒಂದು ವೇಳೆ ವಿಶ್ವವಿದ್ಯಾಲಯದ ಈ ಸಮಸ್ಯೆಯನ್ನು ಬಗೆಹರಿಸದೆ ಹೋದರೆ ಇನ್ನುಮುಂದೆ ಬಳ್ಳಾರಿ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳನ್ನು ಸಂಘಟಿಸಿ ದೊಡ್ಡ ಪ್ರಮಾಣದಲ್ಲಿ ವಿಶ್ವವಿದ್ಯಾಲಯದ ಮುಂದೆ ಮತ್ತೆ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಬಳ್ಳಾರಿ ಜಿಲ್ಲಾಧ್ಯಕ್ಷರಾದ ಸೋಹೈಲ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಹಬೀಬ್, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿಕ್ಷಣವನ್ನು ವಿಷಮುಕ್ತಗೊಳಿಸಿ- ಹಿಂದುತ್ವ ಪ್ರಾಬಲ್ಯ ತೊಡೆದು ಹಾಕಿ; ಕ್ಯಾಂಪಸ್ ಫ್ರಂಟ್ ನಿಂದ ವಿಚಾರ ಸಂಕಿರಣಚಿಕ್ಕಮಗಳೂರು :- ಶಿಕ್ಷಣವನ್ನು ವ...
10/09/2022

ಶಿಕ್ಷಣವನ್ನು ವಿಷಮುಕ್ತಗೊಳಿಸಿ- ಹಿಂದುತ್ವ ಪ್ರಾಬಲ್ಯ ತೊಡೆದು ಹಾಕಿ; ಕ್ಯಾಂಪಸ್ ಫ್ರಂಟ್ ನಿಂದ ವಿಚಾರ ಸಂಕಿರಣ

ಚಿಕ್ಕಮಗಳೂರು :- ಶಿಕ್ಷಣವನ್ನು ವಿಷಮುಕ್ತಗೊಳಿಸಿ ಹಾಗೂ ಹಿಂದುತ್ವ ಪ್ರಾಬಲ್ಯ ತೊಡೆದು ಹಾಕಿ , ಎಲ್ಲರನ್ನೊಳಗೊಂಡ ಶಿಕ್ಷಣಕ್ಕಾಗಿ ಕ್ಯಾಂಪಸ್ ಫ್ರಂಟ್ ನಡೆಸುತ್ತಿರುವ ರಾಷ್ಟ್ರೀಯ ಅಭಿಯಾನದ ಭಾಗವಾಗಿ ವಿಚಾರ ಸಂಕಿರಣ ಕಾರ್ಯಕ್ರಮವು ಚಿಕ್ಕಮಗಳೂರಿನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕ್ಯಾಂಪಸ್ ಫ್ರಂಟ್ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ ಮಾತನಾಡಿ ದೇಶದ ಅಭಿವೃದ್ದಿಗೆ ಪೂರಕವಾಗಿರುವ ಶಿಕ್ಷಣ ವ್ಯವಸ್ಥೆಯು ಇಂದು ಹಿಂದುತ್ವ ಸಿದ್ದಾಂತದ ಹೇರಿಕೆಯ ಮುಖಾಂತರ ವಿಷಮುಕ್ತಗೊಳ್ಳುತ್ತಿದೆ, ರಾಷ್ಟ್ರೀಯ ಶಿಕ್ಷಣ ನೀತಿಯ ಮುಖಾಂತರ ಶಿಕ್ಷಣ ವ್ಯವಸ್ಥೆಯನ್ನು ಕೇಸರೀಕರಣ ನಡೆಸುವ ಮುಖಾಂತರ ಬ್ರಾಹ್ಮಣೀಕರಣದ ಅಜೆಂಡಾದೊಂದಿಗೆ ಬಿಜೆಪಿ-ಆರ್ಎಸ್ಎಸ್ ಕಲುಷಿತಗೊಳಿಸುತ್ತಿದೆ ಇದರ ವಿರುಧ್ದ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಹೋರಾಟಕ್ಕೆ ಸಜ್ಜಾಗಿಸಬೇಕಾದ ಅನಿವಾರ್ಯತೆ ಇದೆ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾ ಸಂಯೋಜಕರಾದ ಚಿದಂಬರರವರು ಮಾತನಾಡಿ ಶೋಷಿತ ವರ್ಗವು ಇಂದಿಗೂ ಶಿಕ್ಷಣದಿಂದ ವಂಚಿತರಾಗುತ್ತಲೇ ಇದೆ, ಬ್ರಾಹ್ಮಣ್ಯ ಅಧಿಪತ್ಯವು ಇಂದು ಒಂದು ವರ್ಗವನ್ನು ಶಿಕ್ಷಣದಿಂದ ತಡೆಯುತ್ತಿದ್ದು ಈ ಅಧಿಪತ್ಯವನ್ನು ನಾವು ಸೋಲಿಸಬೇಕಾಗಿದೆ. ಈ ದೇಶದ ಮೂಲನಿವಾಸಿಗಳಾದ ಬಹುಸಂಖ್ಯಾತರಾಗಿರುವ ದಲಿತರು,ಮುಸಲ್ಮಾನರು ಒಟ್ಟಾಗಿ ಸೇರಿದರೆ ಇಲ್ಲಿನ ಈ ಕೇಸರೀಕರಣವನ್ನು ಖಂಡಿತವಾಗಿಯೂ ತಡೆಯಬಹುದು ಎಂದರು. ಕ್ಯಾಂಪಸ್ ಫ್ರಂಟ್ ಜಿಲ್ಲಾ ನಾಯಕಿ ಶಝ್ಮಾ ಫಾತಿಮಾ ಕೇಸರೀಕರಣದಿಂದ ವಿದ್ಯಾರ್ಥಿನಿಯರು ಎದುರಿಸಲಿರುವ ಸವಾಲುಗಳನ್ನು ವಿವರಿಸಿದರು. ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಚಾಂದ್ ಸಲ್ಮಾನ್ ಸಮಾರೋಪ ಮಾತುಗಳನ್ನಾಡಿದರು. ಜಿಲ್ಲಾಧ್ಯಕ್ಷ ರಸೂಲ್ ಖಾನ್ ಸ್ವಾಗತಿಸಿ ಜಿಲ್ಲಾ ಕಾರ್ಯದರ್ಶಿ ಫರಾನ್ ವಂದಿಸಿದರು. ಜಿಲ್ಲಾ ಸಮಿತಿ ಸದಸ್ಯ ಶಹಬಾಝ್ ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಣವನ್ನು ವಿಷಮುಕ್ತಗೊಳಿಸಿಹಿಂದುತ್ವ ಪ್ರಾಬಲ್ಯ ತೊಡೆದು ಹಾಕಿಎಲ್ಲರನ್ನೊಳಗೊಂಡ ಶಿಕ್ಷಣಕ್ಕಾಗಿರಾಷ್ಟ್ರೀಯ ಅಭಿಯಾನವಿಚಾರ ಸಂಕಿರಣ10-09-2022...
10/09/2022

ಶಿಕ್ಷಣವನ್ನು ವಿಷಮುಕ್ತಗೊಳಿಸಿ
ಹಿಂದುತ್ವ ಪ್ರಾಬಲ್ಯ ತೊಡೆದು ಹಾಕಿ

ಎಲ್ಲರನ್ನೊಳಗೊಂಡ ಶಿಕ್ಷಣಕ್ಕಾಗಿ
ರಾಷ್ಟ್ರೀಯ ಅಭಿಯಾನ

ವಿಚಾರ ಸಂಕಿರಣ

10-09-2022 | ಚಿಕ್ಕಮಗಳೂರು

ಮುಖ್ಯ ಅತಿಥಿಗಳು

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ- ಕರ್ನಾಟಕ

09/09/2022

ಶಿಕ್ಷಣವನ್ನು ವಿಷಮುಕ್ತಗೊಳಿಸಿ
ಹಿಂದುತ್ವ ಪ್ರಾಬಲ್ಯ ತೊಡೆದು ಹಾಕಿ

ಎಲ್ಲರನ್ನೊಳಗೊಂಡ ಶಿಕ್ಷಣಕ್ಕಾಗಿ
ರಾಷ್ಟ್ರೀಯ ಅಭಿಯಾನ

ವಿಚಾರ ಸಂಕಿರಣ

10-09-2022 | 3:00 PM
ಅಂಬೇಡ್ಕರ್ ಭವನ, ಚಿಕ್ಕಮಗಳೂರು

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ
ಚಿಕ್ಕಮಗಳೂರು ಜಿಲ್ಲೆ

ಸಂಘಿಗಳ ಗುಂಡೇಟಿಗೆ ಬಲಿಯಾದ ಗೌರಿ ಲಂಕೇಶ್ ನೆನಪಿಸುತ್ತಾ ರಾಜ್ಯಾಧ್ಯಂತ ನಡೆದ ಮೊಂಬತ್ತಿ ಪ್ರತಿಭಟನಾ ಸಭೆ
07/09/2022

ಸಂಘಿಗಳ ಗುಂಡೇಟಿಗೆ ಬಲಿಯಾದ ಗೌರಿ ಲಂಕೇಶ್ ನೆನಪಿಸುತ್ತಾ ರಾಜ್ಯಾಧ್ಯಂತ ನಡೆದ ಮೊಂಬತ್ತಿ ಪ್ರತಿಭಟನಾ ಸಭೆ

ಸಂಘಿಗಳ ಗುಂಡೇಟಿಗೆ ಬಲಿಯಾದ ಗೌರಿ ಲಂಕೇಶ್ ನೆನಪಿಸುತ್ತಾ ರಾಜ್ಯಾಧ್ಯಂತ ನಡೆದ ಪ್ರತಿಭಟನಾ ಸಭೆ
06/09/2022

ಸಂಘಿಗಳ ಗುಂಡೇಟಿಗೆ ಬಲಿಯಾದ ಗೌರಿ ಲಂಕೇಶ್ ನೆನಪಿಸುತ್ತಾ ರಾಜ್ಯಾಧ್ಯಂತ ನಡೆದ ಪ್ರತಿಭಟನಾ ಸಭೆ

ಅತಿಕುರ್ ರೆಹಮಾನ್ ಅವರನ್ನು ಮತ್ತೆ ಜೈಲಿಗೆ ಕಳುಹಿಸಿರುವುದು ದ್ವೇಷ ರಾಜಕಾರಣದ ನೀಚ ಕೃತ್ಯವಾಗಿದೆ:  ಸೂಕ್ತ ಆರೈಕೆಗಾಗಿ ತಕ್ಷಣವೇ ಅವರನ್ನು AIIM...
06/09/2022

ಅತಿಕುರ್ ರೆಹಮಾನ್ ಅವರನ್ನು ಮತ್ತೆ ಜೈಲಿಗೆ ಕಳುಹಿಸಿರುವುದು ದ್ವೇಷ ರಾಜಕಾರಣದ ನೀಚ ಕೃತ್ಯವಾಗಿದೆ: ಸೂಕ್ತ ಆರೈಕೆಗಾಗಿ ತಕ್ಷಣವೇ ಅವರನ್ನು AIIMS ಗೆ ದಾಖಲಿಸಿ.

ಅತಿಕುರ್ ರೆಹಮಾನ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ನಂತರವೂ ಪ್ರಾಧಿಕಾರವು ಅವರನ್ನು ಜೈಲಿಗೆ ಕಳುಹಿಸಿದೆ, ಇದು ದುರ್ಬಲ ಖೈದಿಯ ವಿರುದ್ಧ ದ್ವೇಷ ರಾಜಕಾರಣದ ನೀಚ ಕೃತ್ಯವಾಗಿದೆ. ಈ ಮೊದಲು ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ಜೈಲಿನಿಂದ ಲಕ್ನೋ ಆಸ್ಪತ್ರೆಗೆ ಕರೆದೊಯ್ಯಲಾಗಿತು. ಆಸ್ಪತ್ರೆಯಲ್ಲಿನ ಅಸಮರ್ಪಕ ಸೌಲಭ್ಯಗಳಿಂದಾಗಿ ಅವರ ಆರೋಗ್ಯವು ಹದಗೆಟ್ಟಿತು ಮತ್ತು ವರದಿಯ ಪ್ರಕಾರ ಅವರ ದೇಹದ ಎಡಭಾಗವು ಭಾಗಶಃ ಪಾರ್ಶ್ವವಾಯುವಿಗೆ ಒಳಗಾಗಿದೆ. ನರಸಂಬಂಧಿತ ಸಮಸ್ಯೆಗಳಿಂದಾಗಿ ಅವರಿಗೆ ತಮ್ಮ ಮಕ್ಕಳನ್ನು ಅಥವಾ ಸಂಬಂಧಿಕರನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರ ಕುಟುಂಬವು ಹೇಳುತ್ತದೆ, ಆದರೆ ಅವರು ದಾಖಲಾದ ಆಸ್ಪತ್ರೆಯಲ್ಲಿ ಇದರ ಮೂಲ ಕಾರಣವನ್ನು ಪತ್ತೆಹಚ್ಚಲು ಮತ್ತು ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಅವರನ್ನು ಮತ್ತೆ ಜೈಲಿಗೆ ಕಳುಹಿಸುವುದು ಅವರ ಜೀವಕ್ಕೆ ಅಪಾಯಕಾರಿಯಾಗಿದೆ. ಅವರ ಪ್ರಸ್ತುತ ಆರೋಗ್ಯ ಬಿಕ್ಕಟ್ಟಿಗೆ ಸರ್ಕಾರ ಮತ್ತು ಜೈಲು ಪ್ರಾಧಿಕಾರ ಮಾತ್ರ ಹೊಣೆಯಾಗಿದೆ. ಅತಿಕೂರ್ ಅವರಿಗೆ ಶಸ್ತ್ರಚಿಕಿತ್ಸೆಯ ನಂತರ ಜೈಲಿನೊಳಗೆ ಸೂಕ್ತ ಚಿಕಿತ್ಸೆ ಮತ್ತು ಪೌಷ್ಟಿಕ ಆಹಾರ ಸಿಗಲಿಲ್ಲ. ಶಸ್ತ್ರಚಿಕಿತ್ಸೆಯ ಆರು ತಿಂಗಳ ನಂತರ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆಗೆ ಒಳಗಾಗುವಂತೆ ಏಮ್ಸ್ ವೈದ್ಯರು ನೀಡಿದ ವೈದ್ಯಕೀಯ ಸಲಹೆಯನ್ನು ಯುಪಿ ಸರ್ಕಾರ ಮತ್ತು ಪ್ರಾಧಿಕಾರ ತಿರಸ್ಕರಿಸಿದೆ. ಖೈದಿಗಳಿಗೆ ಚಿಕಿತ್ಸೆ ಮತ್ತು ಜಾಮೀನು ನೀಡಲು ರಾಜ್ಯವು ನಿರ್ಲಕ್ಷ್ಯ ವಹಿಸಬಾರದು.ಅತಿಕೂರ್ ಅವರನ್ನು ಗುಣಮಟ್ಟದ ಸೂಕ್ತ ಆರೈಕೆಗಾಗಿ ಏಮ್ಸ್‌ಗೆ ದಾಖಲಿಸಲು ಹಾಗೂ ಈ ಸ್ಥಿತಿಯಲ್ಲಿ ಅವರ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವರಿಗೆ ತಕ್ಷಣದ ಜಾಮೀನು ನೀಡಲು ಕ್ಯಾಂಪಸ್ ಫ್ರಂಟ್ ಒತ್ತಾಯಿಸುತ್ತದೆ.

Happy Teachers DaySep 05The influence of teachers extends beyond the classroom, well into the future.Campus Front Of Ind...
05/09/2022

Happy Teachers Day
Sep 05

The influence of teachers extends beyond the classroom, well into the future.

Campus Front Of India, Karnataka

ನಾನು ಗೌರಿI am Gouri ಸಂಘಿಗಳ ಗುಂಡೇಟಿಗೆ ಬಲಿಯಾದ ಹೋರಾಟಗಾರ್ತಿ ಹಾಗೂ ಪ್ರಗತಿಪರ ಲೇಖಕಿ ಗೌರಿ ಲಂಕೇಶ್ ರನ್ನು ನೆನಪಿಸುತ್ತಾ ರಾಜ್ಯಾದ್ಯಂತಪ್ರ...
03/09/2022

ನಾನು ಗೌರಿ
I am Gouri

ಸಂಘಿಗಳ ಗುಂಡೇಟಿಗೆ ಬಲಿಯಾದ ಹೋರಾಟಗಾರ್ತಿ ಹಾಗೂ ಪ್ರಗತಿಪರ ಲೇಖಕಿ ಗೌರಿ ಲಂಕೇಶ್ ರನ್ನು ನೆನಪಿಸುತ್ತಾ

ರಾಜ್ಯಾದ್ಯಂತ
ಪ್ರತಿಭಟನಾ ಸಭೆ

ಸೆಪ್ಟೆಂಬರ್ 5 ,2022

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಕರ್ನಾಟಕ

ಶಿಕ್ಷಣವನ್ನು ವಿಷಮುಕ್ತಗೊಳಿಸಿ ಹಿಂದುತ್ವ ಪ್ರಾಬಲ್ಯ ತೊಡೆದು ಹಾಕಿಎಲ್ಲರನ್ನೊಳಗೊಂಡ ಶಿಕ್ಷಣಕ್ಕಾಗಿ ರಾಷ್ಟ್ರೀಯ ಅಭಿಯಾನಕ್ಯಾಂಪಸ್ ಫ್ರಂಟ್ ಆಫ್ ...
30/08/2022

ಶಿಕ್ಷಣವನ್ನು ವಿಷಮುಕ್ತಗೊಳಿಸಿ ಹಿಂದುತ್ವ ಪ್ರಾಬಲ್ಯ ತೊಡೆದು ಹಾಕಿ

ಎಲ್ಲರನ್ನೊಳಗೊಂಡ ಶಿಕ್ಷಣಕ್ಕಾಗಿ ರಾಷ್ಟ್ರೀಯ ಅಭಿಯಾನ

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಕರ್ನಾಟಕ

Address

Campus Centre, 3rd Floor, Behar Complex, Azizuddin Road, Bunder/Mangalore
Bangalore
574001

Alerts

Be the first to know and let us send you an email when Campus Front of India - Karnataka State posts news and promotions. Your email address will not be used for any other purpose, and you can unsubscribe at any time.

Contact The School

Send a message to Campus Front of India - Karnataka State:

Shortcuts

Share