01/06/2026
ನೂತನ ಪ್ರಾಂಶುಪಾಲರಾದ
ಡಾ. ಯೋಗೀಶ್ ಸಿ. ಅವರಿಗೆ ಅಭಿನಂದನೆಗಳು.
ದಿನಾಂಕ: 01-06-2026 ರಂದು ವಿಶ್ರಾಂತ ಪ್ರಾಂಶುಪಾಲರಾದ ಡಾ. ಶಿವರಾಮಯ್ಯ ಅವರು ಕೆ.ಟಿ.ಎಸ್.ವಿ. ಸಂಘದ ಆಡಳಿತ ಮಂಡಳಿಯ ಅನುಮತಿ ಹಾಗು ಉಪಸ್ಥಿತಿಯಲ್ಲಿ ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಡಾ. ಯೋಗೀಶ್ ಸಿ. ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಕೆ.ಟಿ.ಎಸ್.ವಿ. ಸಂಘದ ಅಧ್ಯಕ್ಷರಾದ ಶ್ರೀ ಎಸ್. ಕೆ. ಸಿದ್ದಯ್ಯ, ಕಾರ್ಯದರ್ಶಿಯಾದ ಶ್ರೀ ಎ ಎನ್ ಕೃಷ್ಣಯ್ಯ, ಗೌರವ ಕಾರ್ಯದರ್ಶಿಯಾದ ಶ್ರೀ ಕೆಂಪಯ್ಯನವರು ಮತ್ತು ಪ್ರಾಧ್ಯಾಪಕರು ಉಪಸ್ಥಿತರಿದ್ದರು.
31/05/2026
ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಿವರಾಮಯ್ಯ ಅವರ ವಯೋನಿವೃತ್ತಿಯ ಬೀಳ್ಕೊಡುಗೆ ಹಾಗೂ ಅಭಿನಂದನೆಯ ಸಮಾರಂಭ
ಕಳೆದ 33 ವರ್ಷಗಳಿಂದ ಕೆ.ಟಿ.ಎಸ್.ವಿ.ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ರಾಜಾಜಿನಗರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಪ್ರಾಂಶುಪಾಲರಾಗಿ ಸುದೀರ್ಘ ಸೇವೆಯನ್ನು ಸಲ್ಲಿಸವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಸಾವಿರಾದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಅವರ ಬದುಕನ್ನು ಉಜ್ವಲಗೊಳಿಸಿದ್ದಾರೆ. ಇವರ ಆಕರ್ಷಕ ವೃತ್ತಿ ಮತ್ತು ಪ್ರವೃತ್ತಿಯನ್ನು ಸ್ಮರಿಸುವ, ಮೆಲುಕು ಹಾಕುವ ಮೂಲಕ ಬೀಳ್ಕೊಡುಗೆಯನ್ನು ನೀಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ರಮೇಶ್ ಬಿ. ಅವರು ಆಗಮಿಸಿದ್ದರು. ಕೆ.ಟಿ.ಎಸ್.ವಿ. ಸಂಘದ ಅಧ್ಯಕ್ಷರಾದ ಶ್ರೀ ಎಸ್. ಕೆ. ಸಿದ್ದಯ್ಯ, ಗೌರವಾಧ್ಯಕ್ಷರಾದ ನೆ.ಲ. ನರೇಂದ್ರಬಾಬು, ಎ. ಎಚ್. ಬಸವರಾಜು, ಬಿ ನರಸಿಂಹಮೂರ್ತಿ, ರೇವಣಸಿದ್ದಯ್ಯ, ಕಾರ್ಯದರ್ಶಿಗಳಾದ ಎ ಎನ್ ಕೃಷ್ಣಯ್ಯ, ಗೌರವ ಕಾರ್ಯದರ್ಶಿಗಳಾದ ಶ್ರೀ ಕೆಂಪಯ್ಯ ಹಾಗೂ ಆಡಳಿತ ಮಂಡಳಿ ಸದಸ್ಯರು ಆಗಿಮಿಸಿದರು.
ನಗರದ ವಿವಿಧ ವಿದ್ಯಾ ಸಂಸ್ಥೆಯ ಮುಖ್ಯಸ್ಥರು, ಹಿರಿಯ ವಿದ್ಯಾರ್ಥಿಗಳು, ಸ್ನೇಹಿತರು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ದಿನಾಂಕ: 30-05-2026
ಸ್ಥಳ: ಟಿ ವಿ ತಿಮ್ಮೇಗೌಡ ಸಭಾಂಗಣ
28/05/2026
ಆತ್ಮೀಯರೇ / ವಿದ್ಯಾರ್ಥಿ ಮಿತ್ರರೇ ನಮ್ಮ ಕಾಲೇಜಿನ ಪ್ರಾoಶುಪಾಲರು ಹಾಗೂ ಪ್ರಾಧ್ಯಪಕರಾ ಡಾ. ಶಿವರಾಮಯ್ಯ ಅವರು 30 ಮೇ 2026 ರಂದು ವಯೋ ನಿವೃತ್ತಿ ಹೊಂದುತ್ತಿದ್ದು, ಬೀಳ್ಕೊಡುಗೆ ಸಮಾರಂಭವನ್ನು ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದೆ. ತಾವುಗಳು ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಪ್ರೀತಿಪೂರ್ವಕವಾಗಿ ಸ್ವಾಗತಿಸುತ್ತೇವೆ.
ದಿನಾಂಕ: 30-05-2026, ಶನಿವಾರ
ಸಮಯ: ಬೆಳಗ್ಗೆ 10.30ಕ್ಕೆ
ಸ್ಥಳ: ಟಿ ವಿ ತಿಮ್ಮೇಗೌಡ ಸಭಾಂಗಣ, ಬಿ.ಇಡಿ. ಕಾಲೇಜ್
Rajajinagar College of Education (KTSV) Ktsv Rce
07/05/2026
The Voices of the Programs
Anchors Vibe😊
07/05/2026
2023-2025 ಬಿ.ಇಡಿ. ಬ್ಯಾಚಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ಸನ್ಮಾನ
ಜಯಶ್ರೀ
ಪೂರ್ಣಿಮಾ
ಕೀರ್ತಿಕಾ
#ಸಾಮುದಾಯಿಕ ಜೀವನ ಶಿಬಿರ