BSNDP Foundation

Directions

BSNDP Foundation 🏏 Karnataka’s biggest State-Level Cricket Tournament is here!

Register your team today and represent your constituency with pride. 🔥
🏆 Exciting prizes
👥 Great exposure for players
🤝 Unity through sports
💥 Passion • Performance • Pride

ನೀವು ಬನ್ನಿ ನಿಮ್ಮವರನ್ನು ಕರೆತನ್ನಿ  Guttedar
20/09/2026

ನೀವು ಬನ್ನಿ ನಿಮ್ಮವರನ್ನು ಕರೆತನ್ನಿ
Guttedar

🙏🌺 ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು! 🐘✨ಶ್ರೀ ಗೌರಿ ಗಣೇಶನ ದಿವ್ಯ ಆಶೀರ್ವಾದದಿಂದ ನಿಮ್ಮ ಹಾಗೂ ನಿಮ್ಮ ಕುಟುಂಬದ ಜೀವನದಲ್ಲಿ ಸುಖ, ಶಾಂತಿ...
14/09/2026

🙏🌺 ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು! 🐘✨

ಶ್ರೀ ಗೌರಿ ಗಣೇಶನ ದಿವ್ಯ ಆಶೀರ್ವಾದದಿಂದ ನಿಮ್ಮ ಹಾಗೂ ನಿಮ್ಮ ಕುಟುಂಬದ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ, ಸಂತೋಷ ಮತ್ತು ಸಮೃದ್ಧಿ ಸದಾ ನೆಲೆಸಿರಲಿ. 🙏

ವಿಘ್ನ ವಿನಾಶಕ ಶ್ರೀ ಗಣೇಶನು ನಿಮ್ಮ ಎಲ್ಲಾ ವಿಘ್ನಗಳನ್ನು ದೂರ ಮಾಡಿ, ಯಶಸ್ಸು ಮತ್ತು ನೆಮ್ಮದಿಯನ್ನು ಕರುಣಿಸಲಿ. 🌸🪔

ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು! 🌼🙏

ಬೆಂಗಳೂರು ಕೆಂಗೇರಿ ಉಪನಗರದ ಟೊಯೋಟಾ ಗ್ರೂಪ್ ಶ್ರೀ ಗಜಾನನ ಯುವಕ ಸಂಘ ಹಾಗೂ ಉತ್ತರ ಕರ್ನಾಟಕ ಗೆಳೆಯರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿರುವ...
11/09/2026

ಬೆಂಗಳೂರು ಕೆಂಗೇರಿ ಉಪನಗರದ ಟೊಯೋಟಾ ಗ್ರೂಪ್
ಶ್ರೀ ಗಜಾನನ ಯುವಕ ಸಂಘ ಹಾಗೂ ಉತ್ತರ ಕರ್ನಾಟಕ ಗೆಳೆಯರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿರುವ 23ನೇ ವರ್ಷದ ಅದ್ದೂರಿ ಗಣೇಶೋತ್ಸವದ ಮುಖ್ಯ ಅತಿಥಿಗಳಾಗಿ BSNDP & DDUOBC ಸಂಘಟನೆಯ ರಾಜ್ಯಾಧ್ಯಕ್ಷರಾದ
ಶ್ರೀ ಸೈದಪ್ಪ ಕೆ. ಗುತ್ತೇದಾರ್ ಅವರನ್ನು ಆಹ್ವಾನ ಪತ್ರಿಕೆ ನೀಡುವ ಮೂಲಕ ಆತ್ಮೀಯವಾಗಿ ಆಹ್ವಾನಿಸಲಾಯಿತು.

ಈ ಸಂದರ್ಭದಲ್ಲಿ ಟೊಯೋಟಾ ಗ್ರೂಪ್ ಶ್ರೀ ಗಜಾನನ ಯುವಕ ಸಂಘ ಹಾಗೂ ಉತ್ತರ ಕರ್ನಾಟಕ ಗೆಳೆಯರ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ ಪ್ರಭಾಕರ್ ನಾಡೋರ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದು, ಆತ್ಮೀಯವಾಗಿ ಆಹ್ವಾನಿಸಿದರು.

ಇಂದು ಬೈಂದೂರಿನ ಹೋಳಿಹೊಳೆಯ ಶ್ರೀ ಬಿಳಿಸೆಲೆ ವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ಪರಮಪೂಜ್ಯ ಮಹಾ ಮಂಡಲೇಶ್ವರ 1008 ಸದ್ಗುರು ಶ್ರೀ ಶ್ರೀ ಶ್...
09/09/2026

ಇಂದು ಬೈಂದೂರಿನ ಹೋಳಿಹೊಳೆಯ ಶ್ರೀ ಬಿಳಿಸೆಲೆ ವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ಪರಮಪೂಜ್ಯ ಮಹಾ ಮಂಡಲೇಶ್ವರ 1008 ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳವರ ಪವಿತ್ರ ಚಾತುರ್ಮಾಸ್ಯ ವೃತಾಚರಣೆ ಕಾರ್ಯಕ್ರಮದಲ್ಲಿ ನಮ್ಮ BSNDP ಸಂಘಟನೆಯ ಅಪಾರ ಭಕ್ತಾದಿಗಳೊಂದಿಗೆ ಭಾಗವಹಿಸಿದೆವು.

ಈ ಸುಸಂದರ್ಭದಲ್ಲಿ ಪೂಜ್ಯ ಶ್ರೀಗಳ ದಿವ್ಯ ಪಾದಪೂಜೆ ನೆರವೇರಿಸಿ, ಗುರುಗಳ ಅನುಗ್ರಹ ಮತ್ತು ಆಶೀರ್ವಾದ ಪಡೆದುಕೊಳ್ಳಲಾಯಿತು. ನಂತರ ಶ್ರೀ ಬಿಳಿಸೆಲೆ ವಿನಾಯಕ ದೇವರ ದರ್ಶನ ಪಡೆದು, ನಮ್ಮ ಸಮಸ್ತ ಬಂಧುಗಳ ಸುಖ, ಶಾಂತಿ, ಆರೋಗ್ಯ ಹಾಗೂ ಅಭಿವೃದ್ಧಿಗಾಗಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಿದೆವು.

ಸದ್ಗುರುಗಳ ದಿವ್ಯ ಸಾನ್ನಿಧ್ಯ ಮತ್ತು ಕೃಪೆ ಸದಾ ನಮ್ಮೆಲ್ಲರ ಮೇಲಿರಲಿ.

ಭಟ್ಕಳ–ಶಿರಾಲಿಯ ಶಾರದ ಹೊಳೆ ಶ್ರೀ ಕ್ಷೇತ್ರ ಹಳೆಕೋಟೆಯ ಶ್ರೀ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿ,ಶ್ರೀ ದೇವರ ದರ್ಶನ ಪಡೆದು ಆಶೀರ್ವಾದ ಪಡೆಯಲಾಯಿ...
09/09/2026

ಭಟ್ಕಳ–ಶಿರಾಲಿಯ ಶಾರದ ಹೊಳೆ ಶ್ರೀ ಕ್ಷೇತ್ರ ಹಳೆಕೋಟೆಯ ಶ್ರೀ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿ,
ಶ್ರೀ ದೇವರ ದರ್ಶನ ಪಡೆದು ಆಶೀರ್ವಾದ ಪಡೆಯಲಾಯಿತು.

ದೇವಸ್ಥಾನದ ಅರ್ಚಕರಾದ ಶ್ರೀ ಲೋಕೇಶ್ ಶಾಂತಿ ರವರು ವಿಶೇಷ ಪೂಜೆ ಸಲ್ಲಿಸಿ, ಮಹಾಮಂಗಳಾರತಿಯ ಮೂಲಕ ಆಶೀರ್ವದಿಸಿದರು.

ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಕೃಷ್ಣ ಎಸ್. ನಾಯ್ಕ್ ರವರು ದೇವಸ್ಥಾನ ಆಡಳಿತ ಮಂಡಳಿಯ ಪರವಾಗಿ BSNDP ಸಂಘಟನೆಯ ರಾಜ್ಯಾಧ್ಯಕ್ಷರಾದ ಸೈದಪ್ಪ ಕೆ. ಗುತ್ತೇದಾರ್ ರವರು ಸೇರಿದಂತೆ ರಾಜ್ಯ ಮುಖಂಡರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ BSNDP ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕಾಂತರಾಜ್ ಆರ್ಯ, ರಾಜ್ಯ ಉಪಾಧ್ಯಕ್ಷರಾದ ಕೆ.ವಿ. ರವಿದಾಸ್, ರಾಜ್ಯ ಮುಖಂಡರಾದ ಜಗದೀಶ್ ನಾಯ್ಕ್ ಶಿರಸಿ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ಹನುಮಂತ ದೇವರ ಕೃಪಾಶೀರ್ವಾದ ಎಲ್ಲರ ಮೇಲಿರಲಿ.
ಜೈ ಭಜರಂಗಬಲಿ. ಜೈ ಆಂಜನೇಯ.

ಬೈಂದೂರಿನಲ್ಲಿ ಶ್ರೀ ಕೋಟಿ ಚೆನ್ನಯ್ಯ ಶ್ರೀ ಪಂಜುರ್ಲಿ 66ನೇ ಗರಡಿ, ಬಿಜೂರು ಇದರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು, ಖ್ಯಾತ ಉದ್ಯಮಿಗಳಾದ ಶ್ರೀ ...
06/09/2026

ಬೈಂದೂರಿನಲ್ಲಿ ಶ್ರೀ ಕೋಟಿ ಚೆನ್ನಯ್ಯ ಶ್ರೀ ಪಂಜುರ್ಲಿ 66ನೇ ಗರಡಿ, ಬಿಜೂರು ಇದರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು, ಖ್ಯಾತ ಉದ್ಯಮಿಗಳಾದ ಶ್ರೀ ಗೋವಿಂದ ಬಾಬು ಪೂಜಾರಿ ರವರನ್ನು ಭೇಟಿ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀ ಸೈದಪ್ಪ ಕೆ. ಗುತ್ತೇದಾರ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕಾಂತರಾಜ್ ಆರ್ಯ, ರಾಜ್ಯ ಉಪಾಧ್ಯಕ್ಷರಾದ ಶ್ರೀ ಕೆ.ವಿ. ರವಿದಾಸ್, ರಾಜ್ಯ ಮುಖಂಡರಾದ ಶ್ರೀ ಜಗದೀಶ್ ನಾಯ್ಕ್, ಶಿರಸಿ.BSNDP ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಚಿತ್ರಾ ಅಂಚನ್ ರವರು ಸೇರಿದಂತೆ ಚಾಮರಾಜನಗರ ಜಿಲ್ಲೆಯ ನಿವೃತ್ತ ಅಧಿಕಾರಿಗಳ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
Guttedar

ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳುಧರ್ಮದ ಹಾದಿಯಲ್ಲಿ ನಡೆಯಿರಿ, ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸಿ; ಫಲದ ಚಿಂತೆಯನ್ನು ಬಿಟ್ಟ...
04/09/2026

ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು
ಧರ್ಮದ ಹಾದಿಯಲ್ಲಿ ನಡೆಯಿರಿ, ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸಿ; ಫಲದ ಚಿಂತೆಯನ್ನು ಬಿಟ್ಟು ಭಗವಂತನಲ್ಲಿ ನಂಬಿಕೆ ಇಡಿ” — ಶ್ರೀ ಕೃಷ್ಣನ ಸಂದೇಶ.
ಶ್ರೀ ಕೃಷ್ಣನ ಕೊಳಲಿನ ನಾದದಂತೆ
ನಿಮ್ಮ ಬದುಕಿನಲ್ಲಿ ಸಂತೋಷ ತುಂಬಿರಲಿ…
ಆತನ ಕೃಪೆಯಂತೆ ನಿಮ್ಮ ಮನೆ-ಮನಗಳಲ್ಲಿ
ಶಾಂತಿ, ಸಮೃದ್ಧಿ ಮತ್ತು ನೆಮ್ಮದಿ ನೆಲೆಸಿರಲಿ.

“ಈ ಸಮಯವೂ ಕಳೆದುಹೋಗುತ್ತದೆ…
ಸುಖವಿರಲಿ, ದುಃಖವಿರಲಿ—ಯಾವುದೂ ಶಾಶ್ವತವಲ್ಲ.
ಆದ್ದರಿಂದ ಕಳೆದದ್ದಕ್ಕೆ ಕೊರಗಬೇಡ.
ಬರಲಿರುವುದಕ್ಕೆ ಚಿಂತಿಸಬೇಡ.
ಈ ಕ್ಷಣವನ್ನು ಧೈರ್ಯದಿಂದ ಬದುಕು,
ನಿನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡು.
ಶ್ರೀ ಕೃಷ್ಣನು ಸಾರಿದಂತೆ —
“ನಿನ್ನ ಕರ್ಮದ ಮೇಲೆ ನಿನಗೆ ಹಕ್ಕಿದೆ;
ಫಲದ ಮೇಲೆ ಅಲ್ಲ.”
ಈ ಕೃಷ್ಣ ಜನ್ಮಾಷ್ಟಮಿಯಂದು
ಶ್ರೀ ಕೃಷ್ಣನ ಜ್ಞಾನ, ಧೈರ್ಯ ಮತ್ತು ಭಕ್ತಿಯ ಬೆಳಕು
ನಮ್ಮ ಬದುಕಿಗೆ ದಾರಿದೀಪವಾಗಲಿ.
ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು
ಜೈ ಶ್ರೀ ಕೃಷ್ಣ!
ಜೈ ಶ್ರೀ ಕೃಷ್ಣ 🙏🦚

29/08/2026

🎙️🏏 ಪ್ರಶಾಂತ್ ಕಲ್ಲೂರ ಅವರೊಂದಿಗೆ ವಿಶೇಷ ಸಂದರ್ಶನ!

BSNDP ರಾಜ್ಯಾಧ್ಯಕ್ಷರಾದ ಶ್ರೀ ಸೈದಪ್ಪ ಕೆ. ಗುತ್ತೇದಾರ್ ಅವರು ಪ್ರಶಾಂತ್ ಕಲ್ಲೂರ ಅವರೊಂದಿಗೆ Khelo BSNDP 2026 ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಕುರಿತು ವಿಶೇಷ ಸಂದರ್ಶನ ನಡೆಸಿದರು. 🏆🔥

ಯುವ ಕ್ರೀಡಾ ಪ್ರತಿಭೆಗಳಿಗೆ ಹೊಸ ಅವಕಾಶಗಳು…
ಜಿಲ್ಲಾ ಹಂತದಿಂದ ವಲಯ ಹಂತಕ್ಕೆ…
ವಲಯ ಹಂತದಿಂದ ರಾಜ್ಯ ಚಾಂಪಿಯನ್‌ಶಿಪ್‌ಗೆ! 🏏🏆

Khelo BSNDP 2026 – ಯುವಶಕ್ತಿಯ ಕ್ರೀಡಾ ಕನಸುಗಳಿಗೆ ಹೊಸ ವೇದಿಕೆ! 💪🔥

ನೂಲ ಚಂದಯ್ಯ ಜಯಂತಿಯ ಹಾರ್ದಿಕ ಶುಭಾಶಯಗಳು! 🌺ವಿಜಯಪುರ ಜಿಲ್ಲೆಯ ಮೂಲ ಚಂದಯ್ಯ ಕ್ರೀಡಾ ಜ್ಯೋತಿ ಯಾತ್ರೆ ಹಾಗೂ Khelo BSNDP 2026 – ರಾಜ್ಯ ಮಟ್ಟ...
28/08/2026

ನೂಲ ಚಂದಯ್ಯ ಜಯಂತಿಯ ಹಾರ್ದಿಕ ಶುಭಾಶಯಗಳು! 🌺

ವಿಜಯಪುರ ಜಿಲ್ಲೆಯ ಮೂಲ ಚಂದಯ್ಯ ಕ್ರೀಡಾ ಜ್ಯೋತಿ ಯಾತ್ರೆ ಹಾಗೂ Khelo BSNDP 2026 – ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ಗೆ ಭವ್ಯ ಚಾಲನೆ! 🏏🏆

ಕ್ರೀಡಾ ಪ್ರತಿಭೆಗಳಿಗೆ ವೇದಿಕೆ…
ಯುವಶಕ್ತಿಗೆ ಹೊಸ ಅವಕಾಶ…
ಸಾಮಾಜಿಕ ಒಗ್ಗಟ್ಟಿಗೆ ಮತ್ತೊಂದು ಹೆಜ್ಜೆ! ✨

Khelo BSNDP 2026 — ನಿಮ್ಮ ತಂಡದೊಂದಿಗೆ ಭಾಗವಹಿಸಿ, ಗೆಲುವಿನ ಪಯಣ ಆರಂಭಿಸಿ! 🏆🔥

📞 ಈಗಲೇ ನೋಂದಣಿ ಮಾಡಿ:
95358 23505 | 9380235018
www.bsndpfoundation.com

#ಕ್ರೀಡಾಜ್ಯೋತಿ #ಕ್ರೀಡಾಸಂಭ್ರಮ #ಯುವಶಕ್ತಿ #ಕ್ರಿಕೆಟ್ #ಕರ್ನಾಟಕ

Address

Banglore
Bangalore
560079

Website

Alerts

Be the first to know and let us send you an email when BSNDP Foundation posts news and promotions. Your email address will not be used for any other purpose, and you can unsubscribe at any time.

Shortcuts

Share

Category