Kannada Mitraru - UAE

Kannada Mitraru - UAE "ಮಾತೃಭಾಷಾ ಸಾಕ್ಷರತೆ ಪ್ರತಿಯೊಬ್ಬ ಕನ್ನಡ ?

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ||ಕನ್ನಡ ಮಿತ್ರರು ಪ್ರಾಯೋಜಿತ...
05/09/2026

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ||

ಕನ್ನಡ ಮಿತ್ರರು ಪ್ರಾಯೋಜಿತ ಕನ್ನಡ ಪಾಠ ಶಾಲೆ ದುಬೈ ನ ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆ ಶುಭಾಶಯಗಳು.

*ಶಿಕ್ಷಕರ ದಿನದ ಹಾರ್ದಿಕ ಶುಭಾಶಯಗಳು*ದುಬೈನ ಈ ಮರುಭೂಮಿಯಲ್ಲಿ ಕನ್ನಡದ ತೋಟ ಬೆಳೆಸಿದ ನಮ್ಮೆಲ್ಲಾ ಸ್ವಯಂಸೇವಕ ಶಿಕ್ಷಕರಿಗೆ ನನ್ನ ಹೃದಯಪೂರ್ವಕ ನ...
05/09/2026

*ಶಿಕ್ಷಕರ ದಿನದ ಹಾರ್ದಿಕ ಶುಭಾಶಯಗಳು*

ದುಬೈನ ಈ ಮರುಭೂಮಿಯಲ್ಲಿ ಕನ್ನಡದ ತೋಟ ಬೆಳೆಸಿದ ನಮ್ಮೆಲ್ಲಾ ಸ್ವಯಂಸೇವಕ ಶಿಕ್ಷಕರಿಗೆ ನನ್ನ ಹೃದಯಪೂರ್ವಕ ನಮನಗಳು!

ಸಂಬಳವಿಲ್ಲದೆ, ಸ್ವಾರ್ಥವಿಲ್ಲದೆ, ಪ್ರತಿ ಶುಕ್ರವಾರ-ಶನಿವಾರ ತಮ್ಮ ಅಮೂಲ್ಯ ಸಮಯವನ್ನು ನಮ್ಮ ಮಕ್ಕಳಿಗಾಗಿ ಮೀಸಲಿಟ್ಟು,
*"ಅ ಆ ಇ ಈ ಉ"* ಎಂಬ ಅಕ್ಷರದಿಂದ ನಮ್ಮ ಮಕ್ಕಳಿಗೆ ನಮ್ಮ ನಾಡು, ನುಡಿ, ಸಂಸ್ಕೃತಿಯ ಪರಿಚಯ ಮಾಡಿಸಿದ ನಿಮ್ಮ ತ್ಯಾಗಕ್ಕೆ ನನ್ನ ಕೋಟಿ ಕೋಟಿ ವಂದನೆಗಳು.

ನೀವು ಕೇವಲ ಅಕ್ಷರ ಕಲಿಸಲಿಲ್ಲ...
ನಮ್ಮ ಮಕ್ಕಳಿಗೆ ಕನ್ನಡತನವನ್ನು ಕಲಿಸಿದಿರಿ, ಕನ್ನಡದ ಅಭಿಮಾನವನ್ನು ಹುಟ್ಟಿಸಿದಿರಿ.

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹಾದಿಯಲ್ಲಿ ನಿಮ್ಮ ಸೇವೆ ಅಮರವಾಗಲಿ!

*ನಿಮ್ಮೆಲ್ಲರ ಶ್ರಮಕ್ಕೆ ನಮ್ಮೆಲ್ಲರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು!*

ಶಶಿಧರ ನಾಗರಾಜಪ್ಪ
ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ
*ಕನ್ನಡ ಮಿತ್ರರು ಯುಎಇ*
*ಕನ್ನಡ ಪಾಠ ಶಾಲೆ ದುಬೈ*

*ಸಂತಾಪ ಸಂದೇಶ*ಕರ್ನಾಟಕದ ಮಾಜಿ ಶಿಕ್ಷಣ ಸಚಿವರಾದ *ಶ್ರೀ ಬಿ.ಸಿ. ನಾಗೇಶ್* ಅವರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು.ನಾಡು ಕಂಡ ಒಬ್ಬ ನ...
18/08/2026

*ಸಂತಾಪ ಸಂದೇಶ*

ಕರ್ನಾಟಕದ ಮಾಜಿ ಶಿಕ್ಷಣ ಸಚಿವರಾದ *ಶ್ರೀ ಬಿ.ಸಿ. ನಾಗೇಶ್* ಅವರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು.

ನಾಡು ಕಂಡ ಒಬ್ಬ ನಿಷ್ಠಾವಂತ ರಾಜಕಾರಿಣಿ ಹಾಗೂ ಶೈಕ್ಷಣಿಕ ಕಾಳಜಿ ಉಳ್ಳ ಸಹೃದಯಿಯನ್ನು ಕಳೆದುಕೊಂಡಿದ್ದೇವೆ.

ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ, ಕನ್ನಡ ಮತ್ತು ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸಿದ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ಅವರ ಸೇವೆ ಸದಾ ನೆನಪಿನಲ್ಲಿ ಉಳಿಯುತ್ತದೆ.

ಕನ್ನಡ ಪಾಠ ಶಾಲೆ ದುಬೈನ ಆಹ್ವಾನದಮೆರೆಗೆ ದುಬೈನಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವಕ್ಕೆ -2021ರ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕ್ಷಣಗಳನ್ನು ಮರೆಯಲಾಗದು.

ಕನ್ನಡ ಪಾಠಶಾಲೆ ದುಬೈ ಮತ್ತು ಕರ್ನಾಟಕ ಸಂಘ ದುಬೈ ವತಿಯಿಂದ ಅವರ ಕುಟುಂಬ ವರ್ಗಕ್ಕೆ ನಮ್ಮ ಮನದಾಳದ ಸಂತಾಪ 🙏🏽💐🙏🏽

ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ.

ಇಂತಿ
ಸರ್ವ ಸದಸ್ಯರು
ಕನ್ನಡ ಪಾಠ ಶಾಲೆ ದುಬೈ ಹಾಗೂ
ಕರ್ನಾಟಕ ಸಂಘ ದುಬೈ

https://youtu.be/Pwo8b-ZD_h8?si=KOrYawvL2wUFgS3t
17/08/2026

https://youtu.be/Pwo8b-ZD_h8?si=KOrYawvL2wUFgS3t

ಹೊರನಾಡಲ್ಲಿ ಮಾತೃಭಾಷೆಯ ಕಲಿಕೆಗೆ ಪಣತೊಟ್ಟ ಕನ್ನಡ ಪಾಠಶಾಲೆ ದುಬೈನ ವಿದ್ಯಾರ್ಥಿ...

14/08/2026

ಹೊರನಾಡಲ್ಲಿ ಮಾತೃಭಾಷೆಯ ಕಲಿಕೆಗೆ ಪಣತೊಟ್ಟ ಕನ್ನಡ ಪಾಠಶಾಲೆ ದುಬೈನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರ ಜೊತೆ..
ಸ್ವಾತಂತ್ರ್ಯೋತ್ಸವ ವಿಶೇಷ
ಥಟ್ ಅಂತ ಹೇಳಿ?!
ಆಗಸ್ಟ್ 17ರಿಂದ 24
ಸೋಮವಾರದಿಂದ ಶುಕ್ರವಾರ
ರಾತ್ರಿ 9.30ಕ್ಕೆ ..

ಕನ್ನಡ ಪಾಠ ಶಾಲೆ ದುಬೈನ ಐತಿಹಾಸಿಕ ಕ್ಷಣಗಣನೆ ಆರಂಭ ! *ಥಟ್ ಅಂತ ಹೇಳಿ* ಕನ್ನಡ ಈ ಕಾರ್ಯಕ್ರಮದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರುವ ಕನ್ನಡ ಪ...
13/08/2026

ಕನ್ನಡ ಪಾಠ ಶಾಲೆ ದುಬೈನ ಐತಿಹಾಸಿಕ ಕ್ಷಣಗಣನೆ ಆರಂಭ !

*ಥಟ್ ಅಂತ ಹೇಳಿ* ಕನ್ನಡ ಈ ಕಾರ್ಯಕ್ರಮದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರುವ ಕನ್ನಡ ಪಾಠ ಶಾಲೆ ದುಬೈ ನ ಮಕ್ಕಳು ಮತ್ತು ಪೋಷಕರಿಗೆ ಹಾರ್ದಿಕ ಶುಭಾಶಯಗಳು.

*ಥಟ್ ಅಂತ ಬನ್ನಿ ಕನ್ನಡ ರಸಪ್ರಶ್ನೆಗೆ*ಕನ್ನಡ ಮಿತ್ರರು ಯು.ಏ.ಇ ಆಯೋಜನೆಯ ಕನ್ನಡ ಪಾಠ ಶಾಲೆ ದುಬೈ ನ ಮಕ್ಕಳಿಗಾಗಿ ರಾಷ್ಟ್ರೀಯ ದೂರದರ್ಶನ “ಚಂದನ”...
11/08/2026

*ಥಟ್ ಅಂತ ಬನ್ನಿ ಕನ್ನಡ ರಸಪ್ರಶ್ನೆಗೆ*

ಕನ್ನಡ ಮಿತ್ರರು ಯು.ಏ.ಇ ಆಯೋಜನೆಯ ಕನ್ನಡ ಪಾಠ ಶಾಲೆ ದುಬೈ ನ ಮಕ್ಕಳಿಗಾಗಿ ರಾಷ್ಟ್ರೀಯ ದೂರದರ್ಶನ “ಚಂದನ” ವಾಹಿನಿಯ ಪ್ರಖ್ಯಾತ ಕಾರ್ಯಕ್ರಮ “ಥಟ್ ಅಂತ ಹೇಳಿ” ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಸುಪ್ರಸಿದ್ಧ ನಿರೂಪಕರಾಗಿರುವ ಶ್ರೀ ಡಾ. ನಾ. ಸೋಮೇಶ್ವರ ರವರು ನಡೆಸಿಕೊಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕನ್ನಡ ಪಾಠ ಶಾಲೆ ದುಬೈ ನ ಮಕ್ಕಳು ಮತ್ತು ಪೋಷಕರು ಪಾಲ್ಗೊಳ್ಳಲಿದ್ದು, ಚಿತ್ರೀಕರಣವನ್ನು ದಿನಾಂಕ 13- ಆಗಸ್ಟ್-2026 ರಂದು ಆಯೋಜಿಸಲಾಗಿದೆ.

ಈ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಮಕ್ಕಳು ಮತ್ತು ಪೋಷಕರು ಅಥವಾ ಅವರ ಕುಟುಂಬದವರು ತ್ವರಿತವಾಗಿ ತಮ್ಮ ಹೆಸರು ನೋಂದಾಯಿಸಲಿ ವಿನಂತಿ.

ಥಟ್ ಅಂತ ಹೇಳಿ
* ದಿನಾಂಕ :13- ಆಗಸ್ಟ್-2026
* ಸಮಯ : ಬೆಳಗ್ಗೆ 10:00 ಘಂಟೆ ಯಿಂದ ಮಧ್ಯಾನ್ಹ 4:00 ಘಂಟೆ ವರೆಗೆ
* ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು
ಅಕ್ಕಮಹಾದೇವಿ ಸಭಾಂಗಣ
ಪಂಪ ಮಹಾ ಕವಿ ರಸ್ತೆ, ಚಾಮರಾಜ ಪೇಟೆ.
ಬೆಂಗಳೂರು.

ಭಾಗವಹಿಸಲು ಇಚ್ಛಿಸುವವರು ಕೂಡಲೇ ಸಂಪರ್ಕಿಸಿ.

ಶ್ರೀಮತಿ ರೂಪಾ ಶಶಿಧರ್
ಸಂಚಾಲಕಿ ಹಾಗೂ ಮುಖ್ಯ ಶಿಕ್ಷಕಿ
ಕನ್ನಡ ಪಾಠ ಶಾಲೆ ದುಬೈ
+91 97310 30302

ಧನ್ಯವಾದ
ಶಶಿಧರ್ ನಾಗರಾಜಪ್ಪ
ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ
ಕನ್ನಡ ಪಾಠ ಶಾಲೆ ದುಬೈ

ಕನ್ನಡ ಮಿತ್ರರು ಪ್ರಯೋಜನ ಕನ್ನಡ ಪಾಠ ಶಾಲೆ, ದುಬೈ ಶಿಕ್ಷಕರಿಗೆ "ಗುರು ಪೂರ್ಣಿಮಾ ದಿವಸ ಗುರು ವಂದನೆಗಳು"ಗುರು ಬ್ರಹ್ಮ, ಗುರು ವಿಷ್ಣು, ಗುರು ದ...
29/07/2026

ಕನ್ನಡ ಮಿತ್ರರು ಪ್ರಯೋಜನ ಕನ್ನಡ ಪಾಠ ಶಾಲೆ, ದುಬೈ ಶಿಕ್ಷಕರಿಗೆ "ಗುರು ಪೂರ್ಣಿಮಾ ದಿವಸ ಗುರು ವಂದನೆಗಳು"
ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ ಗುರು ಸಾಕ್ಷಾತ್‌ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ, 🙏

Kannada Pata student student  Anvaya Bharadwaj  singing and performing for the song of "TOGETHER WE STAND FOR"
09/07/2026

Kannada Pata student student Anvaya Bharadwaj singing and performing for the song of "TOGETHER WE STAND FOR"

Together We Stand for UAE 🇦🇪A heartfelt tribute to the spirit, str...

16/01/2026

ಭಾರತ ಸರ್ಕಾರದ ಅಭಿನಂದನೆ ಪಾತ್ರವಾದ ಕನ್ನಡ ಪಾಠ ಶಾಲೆ ದುಬೈ.

ಯು.ಎ.ಇ ಪ್ರವಾಸದಲ್ಲಿದ್ದ ಶ್ರೀ ಪ್ರಹ್ಲಾದ್ ಜೋಶಿ -ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವರು ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು ದುಬೈನಲ್ಲಿ ದಿನಾಂಕ 13ನೇ ಜನವರಿ 2026 ರಂದು ಐಪಿಎಫ಼್ ಮತ್ತು ಭಾರತದ ಕಾನ್ಸುಲೇಟ್ ಜನರಲ್ ದುಬೈ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಪಾಠ ಶಾಲೆ ದುಬೈನ ಮತೃಭಾಷಾ ಸೇವೆಯನ್ನು ಅಭಿನಂದಿಸಿದರು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ರವರು ತಮ್ಮ “ ಮನದ ಮಾತು” ಕಾರ್ಯಕ್ರಮದಲ್ಲಿ ದುಬೈ ಕನ್ನಡ ಪಾಠ ಶಾಲೆಯು ಮಾತೃಭಾಷಾ ಪೋಷಣೆ ಗೆ ಒಂದು ಜಾಗತಿಕ ಮಾದರಿ ಎಂದು ಪ್ರಶಂಸಿದ್ದ ಹಿನ್ನೆಲೆಯಲ್ಲಿ ಶ್ರೀ ಪ್ರಹ್ಲಾದ್ ಜೋಶಿಯವರು ಭಾರತ ಸರ್ಕಾರದ ಪರವಾಗಿ ಕನ್ನಡ ಪಾಠ ಶಾಲೆಯ ಸ್ಥಾಪಕ ಅಧ್ಯಕ್ಷ ಶ್ರೀ ಶಶಿಧರ್ ನಾಗರಾಜಪ್ಪ ರವರನ್ನು ಸನ್ಮಾನಿಸಿ ಕಾರ್ಯಕಾರಿ ಸಮಿತಿಯನ್ನು , ಶಿಕ್ಷಕಿಯರು ಮತ್ತು ಸ್ವಯಂಸೇವಕರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಪುರಸ್ಕಾರದ ಅಭಿನಂದನೆ ಸ್ವೀಕರಿಸಿದ ಶಾಲೆಯ ಸಂಚಾಲಕಿ ಮತ್ತು ಮುಖ್ಯ ಶಿಕ್ಷಕಿ ರೂಪ ಹೆಚ್ ಜಿ, ಉಪಾಧ್ಯಕ್ಷ ಸಿದ್ದಲಿಂಗೇಶ್ , ಕಾರ್ಯದರ್ಶಿ ಸುನೀಲ್ ಕವಾಸ್ಕರ್, ಜಂಟಿ ಕಾರ್ಯದರ್ಶಿ ಶಶಿಧರ್ ಮುಂಡರಗಿ, ಖಜಾಂಚಿ ನಾರರಾಜ್ ರಾವ್, ಗೌರವ ಪೋಷಕರಾದ ಪ್ರವೀಣ್ ಶೆಟ್ಟಿ, ಮೋಹನ್ ನರಸಿಂಹಸಮೂರ್ತಿ, ಸಲಹೆಗಾರ ಮೊಹಮ್ಮದ್ ಇಬ್ರಾಹಿಂ ಮೊಳೂರು ಸಂತಸದ ಕೃತಜ್ಞತೆ ವ್ಯಕ್ತಪಡಿಸಿದರು

Address

Dubai

Alerts

Be the first to know and let us send you an email when Kannada Mitraru - UAE posts news and promotions. Your email address will not be used for any other purpose, and you can unsubscribe at any time.

Contact The School

Send a message to Kannada Mitraru - UAE:

Shortcuts

Share