27/05/2022
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಾವ ರೀತಿ ಓದಬೇಕು ? ಏನನ್ನು ಓದಬೇಕು ? ಕೋಚಿಂಗ್ ಎಲ್ಲಿ ಚೆನ್ನಾಗಿದೆ ? ಫೀಸ್ ಎಷ್ಟು ? ಸಿಲಬಸ್ ಯಾವುದು ? ನೋಟಿಫಿಕೇಷನ್ ಯಾವಾಗ ? ಮುಂತಾದ ಹತ್ತು ಹಲವು ಪ್ರಶ್ನೆಗಳೊಂದಿಗೆ ನನಗೆ ಹಲವು ಕರೆಗಳು ಬರುತ್ತಿರುತ್ತವೆ.
ಗ್ರಾಮೀಣ ಭಾಗದ ಮಕ್ಕಳ ಈ ಎಲ್ಲಾ ಪ್ರಶ್ನೆಗಳಿಗೆ ಪರಿಹಾರವಾಗಿ 'ಪ್ರಜಾವಾಣಿ - ಡೆಕ್ಕನ್ ಹೆರಾಲ್ಡ್ ಸಹಯೋಗದಲ್ಲಿ 'ಮಾಸ್ಟರ್ ಮೈಂಡ್ ' ಎಂಬ ಇ ಪೇಪರ್ ಅನ್ನು ಹೊರತರುತ್ತಿದೆ.
ನಿತ್ಯ ಪ್ರಚಲಿತ ವಿದ್ಯಮಾನಗಳು,ಅಂತರ್ ರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಣೆ,ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಎಲ್ಲಾ ಸ್ಥಿರ ವಿಷಯಗಳ ಮೇಲೆ ಇಂಗ್ಲಿಷ್ ಹಾಗೂ ಅಚ್ಚಕನ್ನಡದಲ್ಲಿ ಅಧ್ಯಯನ ಸಾಮಗ್ರಿಗಳನ್ನು ನೀಡುತ್ತಿದ್ದೇವೆ.
ವೀಡಿಯೋಗಳಂತೂ ಮ್ಯಾಪ್ ಗಳ ಸಮೇತದ ವಿವರಣೆಯೊಂದಿಗೆ ಮರೆಯಲಾಗದ ಕಲಿಕೆಯ ಅನುಭವವನ್ನು ನೀಡುವಂತಿವೆ.
ಕನ್ನಡದಲ್ಲಿ ಕಲಿಕಾ ಸಾಮಗ್ರಿಗಳಿಗೆ ಇರುವ ಅಡಚಣೆಗಳು ಏನು ಅನ್ನುವಂತಹದ್ದು ಇಂದು ಎಲ್ಲರಿಗೂ ತಿಳಿದ ವಿಚಾರ.
ಇಂತಹಾ ಉತ್ತಮ ಉಡುಗೊರೆಗಳ ಗುಚ್ಛವನ್ನು ಪ್ರಜಾವಾಣಿ ಅತ್ಯಂತ ಕಡಿಮೆ ದರದಲ್ಲಿ ನೀಡುತ್ತಿದೆ.
ಬರೇ ವರ್ಷಕ್ಕೆ 399 ರೂಪಾಯಿಗಳು ಅಷ್ಟೇ.
ನಿಮ್ಮ ಬಂಧು ಬಳಗದ ಮಕ್ಕಳು ಯಾರಾದರೂ ಸಿವಿಲ್ ಸರ್ವಿಸ್ ಪರೀಕ್ಷೆಗಳತ್ತ ಒಲವು ತೋರುತ್ತಿದ್ದರೆ ಖಂಡಿತವಾಗಲೂ ಇದು ನೀವು ಅವರಿಗೆ ಮಾಡಬಹುದಾದ ಚೆಂದದ ಉಪಕಾರ.
ಪೋಷಕರು ಮಕ್ಕಳಿಗೂ ಕೊಡಬಹುದಾದ ಮಿತದರದ ಉಡುಗೊರೆಯಿದು.
ಹಣವಂತೂ ಒಂದು ತಿಂಗಳ ಮೊಬೈಲ್ ರಿಚಾರ್ಜ್ ನ ದುಡ್ಡು ಅಲ್ಲವೇ ?
ನಿರ್ವಹಣೆಯಂತೂ ಸಂಪೂರ್ಣ ನಮ್ಮ ಸುಪರ್ದಿನಲ್ಲಿಯೇ ನಡೆಯುತ್ತಿದೆ.ಹಾಗಾಗಿ ತಕ್ಷಣ ನಿಮ್ಮ ಲೆಕ್ಕದಿಂದ ಯಾರಾದರೊಬ್ಬ ವಿದ್ಯಾರ್ಥಿಗೆ ಉಡುಗೊರೆ ನೀಡಿದರೆ ಬಹಳ ಸಂತೋಷ.
U T Farzana Ashraf