Campus Front-udupi

Campus Front-udupi

Share

Contact information, map and directions, contact form, opening hours, services, ratings, photos, videos and announcements from Campus Front-udupi, Udupi.

Photos from Campus Front of India - Karnataka State's post 20/09/2022
20/09/2022

19 September

14 years of
Batla House
Fake Encounter

Never Forget
Never Forgive

Justice for Atif & Sajid

Campus Front of India

29/08/2022

ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ- ಸಚಿವ ಬಿ.ಸಿ ನಾಗೇಶ್ ರನ್ನು ಬಂಧಿಸಿ ; ಕ್ಯಾಂಪಸ್ ಫ್ರಂಟ್

ಕರ್ನಾಟಕ ಸರ್ಕಾರದ 40% ಕಮಿಷನ್ ದಂಧೆ ಎಗ್ಗಿಲ್ಲದೆ ನಡೆಯುವ ಬಗ್ಗೆ ಎಲ್ಲಾ ಕಡೆಗಳಲ್ಲಿಯೂ ವ್ಯಾಪಕ ಆಕ್ರೋಶಕ್ಕೆ ಗುರಿಯಾಗುತ್ತಿರುವಾಗಲೇ ಶಿಕ್ಷಣ ಸಚಿವರ ಸಮಕ್ಷಮದಲ್ಲಿಯೇ ಶಿಕ್ಷಣ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ 13ಸಾವಿರ ಶಿಕ್ಷಣ ಸಂಸ್ಥೆಗಳು ಆರೋಪ ಮಾಡಿದ್ದಾರೆ. ಈ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯವರು ಮತ್ತು ಲೋಕಾಯುಕ್ತ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥ ಸಚಿವರನ್ನು ಮತ್ತು ಅಧಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ಆಗ್ರಹಿಸುತ್ತಿದೆ.

ರಾಜ್ಯದ ವಿವಿಧ ಇಲಾಖೆಗಳ ಕೆಲಸ ಕಾರ್ಯಗಳು ನಡೆಯಲು ಸಚಿವರಿಗೆ 40% ಕಮಿಷನ್ ನೀಡಲೇಬೇಕು ಎಂದು ಎಲ್ಲಾ ಕಡೆಗಳಿಂದಲೂ ಆರೋಪ ಬರುತ್ತಿದ್ದರೂ ಸಹ ತನಿಖಾ ಸಂಸ್ಥೆಗಳು ಇದನ್ನು ಗಂಭೀರವಾಗಿ ಪರಿಗಣಿಸದೇ ಸರ್ಕಾರದ ವಿರುದ್ಧ ಮೌನ ನಿಲುವನ್ನು ತಾಳಿರುವುದು ಖಂಡನೀಯ. ಇಂತಹ ಗಂಭಿರವಾದ ಆರೋಪಗಳನ್ನು ಮರೆಮಾಚುವ ಸಲುವಾಗಿ ಧರ್ಮ ದಂಗಲ್, ಹಿಜಾಬ್, ಮದ್ರಸ ಶಿಕ್ಷಣದಲ್ಲಿ ಹಸ್ತಕ್ಷೇಪ, ಭಗವಧ್ಗೀತೆ ಇತ್ಯಾದಿ ವಿಚಾರಗಳನ್ನು ನಿರಂತರವಾಗಿ ಚರ್ಚೆಗೆ ತಂದಿಡುತ್ತಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಅಧಿಕಾರಕ್ಕೇರಿದ ಅಂದಿನಿಂದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ನಿರಂತರವಾಗಿ ಬಯಲಿಗೆ ಬರುತ್ತಿದ್ದು, ಪಿಎಸ್ಐ ಹಗರಣ, ಸಮವಸ್ತ್ರದಲ್ಲಿ ಹಗರಣ,ವಿವಿಧ ಪರೀಕ್ಷೆಗಳಲ್ಲಿ ಹಗರಣ, 40% ಕಮಿಷನ್ ಇದೀಗ ಶಿಕ್ಷಣ ಇಲಾಖೆಯಲ್ಲೂ ಬಹುದೊಡ್ಡ ಹಗರಣ ಬೆಳಕಿಗೆ ಬಂದಿದ್ದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರ ಬಣ್ಣ ಬಯಲಾಗಿದೆ.
ಹೊಸ ಶೈಕ್ಷಣಿಕ ವರ್ಷ ಆರಂಭಗೊಂಡರೂ ಸರಕಾರ ನಿಗದಿಪಡಿಸಿದ ಪಠ್ಯಪುಸ್ತಕಗಳು ಇನ್ನೂ ಶಾಲೆಗಳಿಗೆ ತಲುಪಿಲ್ಲ ,ಖಾಸಗಿ ಶಾಲೆಗಳಿಗೆ ಪದೇ ಪದೇ ಅಧಿಕಾರಿಗಳು ತೊಂದರೆ ಕೊಡುತ್ತಿದ್ದು ಲಂಚಕ್ಕೆ ಬೇಡಿಕೆಯಿಡುತ್ತಿದ್ದಾರೆ ಇನ್ನೊಂದೆಡೆ ಸರ್ಕಾರಿ ಶಾಲೆಗಳನ್ನು ಮಾರಾಟಕ್ಕೆ ಇಡುತ್ತಿದ್ದಾರೆ. ಒಟ್ಟಾರೆಯಾಗಿ ರಾಜ್ಯ ಕಂಡ ಅತೀ ಭ್ರಷ್ಟ ಮತ್ತು ಕೋಮುವಾದಿ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ರವರು ತಕ್ಷಣ ರಾಜಿನಾಮೆ ನೀಡಬೇಕು. ನ್ಯಾಯಾಲಯ ಮಧ್ಯಪ್ರವೇಶಿಸಿ ಲೋಕಾಯುಕ್ತ ಇಲಾಖೆ ಸೂಕ್ತ ತನಿಖೆ ನಡೆಸಿ ಹಗರಣದ ಹಿಂದಿರುವ ಕೈಗಳನ್ನು ಶೀಘ್ರ ಬಂಧಿಸಬೇಕೆಂದು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಥಾವುಲ್ಲ ಪುಂಜಾಲಕಟ್ಟೆ ಆಗ್ರಹಿಸಿದ್ದಾರೆ.

27/06/2022

ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸುತ್ತಿರುವ ಆರ್. ಎಸ್. ಎಸ್ ನೊಂದಿಗೆ ಸಂಪರ್ಕ ಹೊಂದಿರುವ ಗುಂಪುಗಳನ್ನು ಕೈ ಬಿಡಿ: ಹಿಂದುತ್ವ ಭಯೋತ್ಪಾದನೆಯಿಂದ ಶಿಕ್ಷಣವನ್ನು ಉಳಿಸಿ

ಶಾಲಾ ಪಠ್ಯಪುಸ್ತಕಗಳಿಗೆ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ಪರಿಷ್ಕರಿಸಲು
ಆರ್‌.ಎಸ್‌.ಎಸ್‌ ನೊಂದಿಗೆ ಸಂಪರ್ಕ ಹೊಂದಿರುವ 25 ಗುಂಪುಗಳನ್ನು ಬಿಜೆಪಿ ಸರ್ಕಾರವು ನೇಮಿಸಿದೆ. ಇದರಲ್ಲಿರುವ 24 ಗುಂಪುಗಳಲ್ಲಿ, 17 ಮಂದಿ ಹಿಂದುತ್ವ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆ. ಇವರಲ್ಲಿ ಎಂಟು ಮಂದಿ RSS ನ ವಿದ್ಯಾರ್ಥಿ ಅಂಗ ಸಂಸ್ಥೆಯಾದ ABVP ಯ ಪ್ರಮುಖ ಸದಸ್ಯರಾಗಿದ್ದರೆ ಮತ್ತು ಹೆಚ್ಚಿನವರು ಸಂಘದ ಮಾಜಿ ಪದಾಧಿಕಾರಿಗಳು ಅಥವಾ ಕಾರ್ಯಕಾರಿಗಳಾಗಿದ್ದಾರೆ. ಈ ಎಲ್ಲಾ ಗುಂಪುಗಳನ್ನು ರದ್ದುಪಡಿಸಲು ಮತ್ತು ಭಯೋತ್ಪಾದಕ ಸಂಪರ್ಕ ಹೊಂದಿರುವ ಆರೋಪಿಗಳನ್ನು ಇದರಿಂದ ದೂರವಿಡಲು ನಾವು ಒತ್ತಾಯಿಸುತ್ತಿದ್ದೇವೆ.

ಹೊಸ ಪಠ್ಯಪುಸ್ತಕಗಳ ಅಡಿಪಾಯವಾಗಿರುವ ವಿವಿಧ ವಿಷಯಗನ್ನು ತಯಾರಿಸಲು ಈ ಗುಂಪುಗಳನ್ನು ರಚಿಸಲಾಗಿದೆ. NCERT ಮತ್ತು CBSE ಮಂಡಳಿಗಳು ಈಗಾಗಲೇ ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ ಪಠ್ಯಪುಸ್ತಕಗಳಿಂದ ಜಾತಿ ತಾರತಮ್ಯ, ಗುಜರಾತ್ ಗಲಭೆಗಳು ಮತ್ತು ಮೊಘಲ್ ಆಳ್ವಿಕೆಯ ಅನೇಕ ಅಧ್ಯಾಯಗಳನ್ನು ಅಳಿಸಿವೆ. ಇಡೀ ದೇಶದ ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳನ್ನು ಆರ್‌.ಎಸ್‌.ಎಸ್‌ ಗೆ ವಹಿಸುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಆರೆಸ್ಸೆಸ್ ವಿವಿಧ ಆಯಾಮಗಳ ಮೂಲಕ ಹಿಂದುತ್ವ ರಾಷ್ಟ್ರವನ್ನು ರಚಿಸಲು ಪ್ರಯತ್ನಿಸುತ್ತಿದೆ. ಸುಳ್ಳು ಇತಿಹಾಸ ಮತ್ತು ವಂಚಿಸುವ ವಿಜ್ಞಾನವನ್ನು ಕಲಿಸುವ ಮೂಲಕ ಅವರು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮತ್ತು ಭವಿಷ್ಯದ ಪೀಳಿಗೆಯನ್ನು ನಾಶಪಡಿಸುತ್ತಾರೆ. ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಭಗ್ನಗೊಳಿಸಲು ಮತ್ತು ದೇಶದಲ್ಲಿ RSS-ಪ್ರಸ್ತಾಪಿತ ಹೊಸ ಶಿಕ್ಷಣವನ್ನು ರಚಿಸಲು NEP ಯನ್ನು ಪರಿಚಯಿಸಲಾಯಿತು. ಈ ಕ್ರಮವನ್ನು ನಾವು ಖಂಡಿಸುತ್ತೇವೆ ಮತ್ತು ಇಂತಹ ಪ್ರಯತ್ನಗಳಿಂದಾಗಿ ಸಹಸ್ರರಿಗೂ ಸಮಸ್ಯೆಯಾಗಲಿದೆ ಎಂದು ಸರ್ಕಾರವನ್ನು ಎಚ್ಚರಿಸುತ್ತಿದ್ದೇವೆ. ಈ ಕುರಿತಾಗಿ ಕ್ಯಾಂಪಸ್ ಫ್ರಂಟ್ ಮುಂದಾಗುವ ಅಪಾಯದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಕಾರ್ಯಕ್ರಮಗಳು ಮತ್ತು ಪ್ರತಿಭಟನೆಗಳನ್ನು ನಡೆಸಲಿದೆ.

27/06/2022

Campus Front Released 'Know the Activist' Magazine at Press Club of India, New Delhi

Campus Front of India

Want your school to be the top-listed School/college in Udupi?

Click here to claim your Sponsored Listing.

Location

Address

Udupi