27/08/2025
ಮತ್ತೊಮ್ಮೆ ಮಂಜುಶ್ರೀ ಶಾಲೆ ಪ್ರಥಮ
25 - 26 ನೇ ಸಾಲಿನ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಮಂಜುಶ್ರೀ ಶಾಲೆಯ ಹಿರಿಯ ಪ್ರಾಥಮಿಕ ಪಾಠಶಾಲೆ ಮಕ್ಕಳು ಖೋಖೋ ಬಾಲಕರ ವಿಭಾಗ ಪ್ರಥಮ,ಖೋಖೋ ಬಾಲಕಿಯರ ವಿಭಾಗ ಪ್ರಥಮ,ನೆಟ್ ಬಾಲ್ ಬಾಲಕರ ಪ್ರಥಮ, ನೆಟ್ ಬಾಲ್ ಬಾಲಕಿಯರ ವಿಭಾಗ ಪ್ರಥಮ 100 ಮೀಟರ್ ಬಾಲಕಿಯರ ವಿಭಾಗ ಪ್ರಥಮ, 200 ಮೀಟರ್ ಬಾಲಕರ ವಿಭಾಗ ಪ್ರಥಮ, 600 ಮೀಟರ್ ಬಾಲಕರ ವಿಭಾಗ ದ್ವಿತೀಯ &ತೃತೀಯ, ಚಕ್ರ ಎಸೆತ ಬಾಲಕಿಯರ ವಿಭಾಗ ಪ್ರಥಮ ದ್ವಿತೀಯ ಯೋಗಾಸನ ಬಾಲಕಿಯರ ವಿಭಾಗ ದ್ವಿತೀಯ ಯೋಗಾಸನ ಬಾಲಕರ ವಿಭಾಗ ದ್ವಿತೀಯ 4×100 ಬಾಲಕಿಯರ ವಿಭಾಗ ಪ್ರಥಮ ಕ್ರೀಡಾಪಟುಗಳು ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿಜೇತರಿಗೆ ಮಂಜುಶ್ರೀ ಶಾಲೆಯ ಆಡಳಿತ ಮಂಡಳಿಯ ಸಂಸ್ಥಾಪಕರಾದ ಎಸ್ ಮಹಲಿಂಗಪ್ಪ ಸರ್ ಕಾರ್ಯದರ್ಶಿಗಳಾದ ಡಾಕ್ಟರ್ ಎಸ್ ಎಮ್ ಉಮೇಶ್ ಸರ್ ಖಜಾಂಚಿಗಳಾದ ದಿವ್ಯಪ್ರದೀಪಕುಮಾರ್ ಮುಖ್ಯ ಶಿಕ್ಷಕರಾದ ಶಿವಮೂರ್ತಿ ದೈಹಿಕ ಶಿಕ್ಷಣ ಶಿಕ್ಷಕರಾದ ನವೀನ್ ಕುಮಾರ್ ಹೇಮಂತ್ ಕುಮಾರ್ ಹಾಗೂ ವ್ಯವಸ್ಥಾಪರಾದ ಮಧು ಮೇಡಂ ರವರು ಸನ್ಮಾನಿಸಿದರು.