03/12/2023
*ಶಾರದಾ ವಿಲಾಸ ಸಮೂಹ ಶಾಲೆಗಳ 2023-2024*
ಶಾಲಾ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ
30/ 11/ 2023 ರ ಗುರುವಾರ ಬೆಳಗ್ಗೆ
*ಶ್ರೀ ರಾಮ ತಾರಕ ಹೋಮ*
ಶಾಲಾ ಆವರಣದಲ್ಲಿ ಜರುಗಿತು.
ಅದೇ ದಿನ ಬೆಳಗ್ಗೆ 10.30 ಕ್ಕೆ ಶಿಶುವಿಹಾರ ದಿಂದ 4 ನೇ ತರಗತಿ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಶಾಲಾಭಿವೃದ್ಧಿ ಸಮಿತಿಯ ಸಹ ಕಾರ್ಯದರ್ಶಿಗಳಾದ
*ಶ್ರೀ ತಪನ ಭಾಸ್ಕರ ಎಂ.ಎಸ್* ನಡೆಸಿಕೊಟ್ಟರು.
ಅದೇ ದಿನ ಸಂಜೆ ಶಿಶುವಿಹಾರದ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳ "ಸಾಂಸ್ಕೃತಿಕ ಸಂಭ್ರಮ" ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮವನ್ನು ಡಾ.ಪಿ ನಾರಾಯಣ್ ಖ್ಯಾತ ವೈದ್ಯರು,
ಶರಾವತಿ ನರ್ಸಿಂಗ್ ಹೋಂ, ಶಿವಮೊಗ್ಗ
ಇವರು ಉದ್ಘಾಟಿಸಿದರು.
ಮಾರನೆಯ ದಿನ, ದಿನಾಂಕ 01/12 ರಂದು ಬೆಳಗ್ಗೆ 10:30 ಕ್ಕೆ 5ನೇ ತರಗತಿಯಿಂದ 10ನೇ ತರಗತಿಯ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ *ಶ್ರೀ ಎನ್.ರಾಮಚಂದ್ರ ಚಾರ್ಟಡ್ ಅಕೌಂಟೆಂಟ್ ಶಿವಮೊಗ್ಗ*
ಇವರು ಬಹುಮಾನಗಳನ್ನು ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀವಿಜಯೇಂದ್ರ ಪ್ರಕಾಶ್ ಎಂ.ಎನ್,
ಉಪಾಧ್ಯಕ್ಷರು, ಶಾರದಾ ಶಾಲಾಭಿವೃದ್ಧಿ ಸಮಿತಿ ಮತ್ತೂರು ಇವರು ವಹಿಸಿದ್ದರು.
ಅದೇ ದಿನ ಸಂಜೆ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ 'ಸಾಂಸ್ಕೃತಿಕ ಸಂಭ್ರಮ' ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.
ಎರಡು ದಿನಗಳ ಕಾಲ ನಡೆದ ಈ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವು ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರಲು ಸೂಕ್ತವಾದ ವೇದಿಕೆಯನ್ನು ಕಲ್ಪಿಸಿತು.
ಶಾಲೆಯ ಎಲ್ಲಾ ಮಕ್ಕಳು ಕಳೆದ ಕೆಲವು ದಿನಗಳಿಂದ ನೃತ್ಯ ಅಭ್ಯಾಸದಲ್ಲಿ ತೊಡಗಿದ್ದು ಆಯಾ ತರಗತಿ ಶಿಕ್ಷಕರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸ ಮಾಡಿ ಉತ್ತಮ ಪ್ರದರ್ಶನ ನೀಡಿದರು.
ಭಾರತೀಯ ಸಂಸ್ಕೃತಿ, ಸಂಸ್ಕಾರ, ದೇಸೀಯತೆ, ಜಾನಪದ, ವಿಜ್ಞಾನ, ವಿನೋದ ಇನ್ನಿತರೆ ವಿಷಯಗಳ ವಿಶೇಷತೆ ನೃತ್ಯಗಳಲ್ಲಿ ಇತ್ತು. ಎರಡೂ ದಿನಗಳಂದು ವಿದ್ಯಾರ್ಥಿಗಳ ಪೋಷಕ ವೃಂದ, ಶಾಲೆಯ ಹಿರಿಯ ವಿದ್ಯಾರ್ಥಿಗಳು, ಸುತ್ತಲಿನ ಗ್ರಾಮಗಳ ಅನೇಕ ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಕಣ್ತುಂಬಿಕೊಂಡು ಮಕ್ಕಳ ಪ್ರದರ್ಶನವನ್ನು, ಶಿಕ್ಷಕರ ತಯಾರಿಯನ್ನು ಮುಕ್ತವಾಗಿ ಶ್ಲಾಘಿಸಿದರು. ಎರಡೂ ದಿನಗಳ ಕಾರ್ಯಕ್ರಮಗಳು ಮತ್ತೂರಿನ ಸಾಂಸ್ಕೃತಿಕ ಘನತೆಗೆ ತಕ್ಕಂತೆ ಉತ್ಕೃಷ್ಟವಾಗಿ ಮತ್ತು ಮಾದರಿಯಾಗಿ ಮೂಡಿಬಂದಿತು.
ಆ ಮಧುರ ಕ್ಷಣಗಳ ಕೆಲವು ಚಿತ್ರಗಳು ಇಲ್ಲಿವೆ. 🙏
ಇದರ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು.