Rvk Cbse Hagaribommanahalli

Rvk Cbse Hagaribommanahalli

Share

Rashtrotthana Vidya Kendra, HB Halli is providing CBSE curriculum through ‘Pancha Mukhi Shikshana', a five fold holistic approach to schooling.

30/12/2025
Photos from Rvk Cbse Hagaribommanahalli's post 05/11/2024

💥🌺🌺"ಕನ್ನಡದಲ್ಲಿ ಮೂಲ ಶಿಕ್ಷಣ ಅವಶ್ಯಕ; ಮನೆಯಂಗಳದ ಭಾಷೆಯಾಗಿ ಕನ್ನಡ"
ಹಗರಿಬೊಮ್ಮನಹಳ್ಳಿ ; ನವೆಂಬರ್ 1 🌺🌺💥

ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಹಗರಿಬೊಮ್ಮನಹಳ್ಳಿಯಲ್ಲಿ ದಿನಾಂಕ 01-11-2024 ಇಂದು ಕರ್ನಾಟಕ ರಾಜ್ಯೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಗರಿಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಬಸವನಗೌಡರು ವಹಿಸಿದ್ದರು. ಮುಖ್ಯ ವಕ್ತಾರರಾಗಿ ಶಾರದಾ ವಿದ್ಯಾಮಂದಿರದ ಶೈಕ್ಷಣಿಕ ಸಲಹೆಗಾರರಾದ ಶ್ರೀಮತಿ ಪದ್ಮವಿಠ್ಠಲ್ ರವರು ಆಗಮಿಸಿದ್ದರು.

ಅತಿಥಿಗಳಿಂದ ಧ್ವಜಾರೋಹಣ ನೆರವೇರಿಸಲಾಯಿತು. ಮುಖ್ಯ ವಕ್ತಾರರಾದ ಶ್ರೀಮತಿ ಪದ್ಮ ಮಾತಾಜಿಯವರು "ಹೆಸರಾಗಲಿ ಕರ್ನಾಟಕ; ಉಸಿರಾಗಲಿ ಕನ್ನಡ" ಎಂಬ ಹಿರಿಯರ ಆಶಯವನ್ನು ವ್ಯಕ್ತಪಡಿಸುತ್ತಾ "ಮಕ್ಕಳಿಗೆ ಮೂಲ ಶಿಕ್ಷಣ ಕನ್ನಡದಲ್ಲಿ ಆಗಲಿ . ಆಗ ಕರ್ನಾಟಕದಲ್ಲಿ ಕನ್ನಡ ಭಾಷೆ ಆಡಳಿತ ಭಾಷೆಯಾಗಲು ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿ ಕನ್ನಡದಲ್ಲಿ ಕೌಶಲ್ಯಾಭಿವೃದ್ಧಿ ಶಿಕ್ಷಣ ದೊರೆತಾಗ ರೈತರು ತಂತ್ರಜ್ಞಾನದಲ್ಲಿ ಬೆಳವಣಿಗೆ ಹೊಂದುವರು. ದುಡಿಮೆಗೆ ಆಂಗ್ಲ ಭಾಷೆಯಾದರೂ ಅಂಗಳದ ಭಾಷೆಯಾಗಿ, ಮನೆ ಭಾಷೆಯಾಗಿ ಕನ್ನಡವನ್ನು ನಿರರ್ಗಳವಾಗಿ ಮಾತನಾಡಿದಾಗ ನಮ್ಮ ಕರ್ನಾಟಕ ಸರ್ವತೋಮುಖ ಅಭಿವೃದ್ಧಿ ಆಗುವುದು" ಎಂದು ಹೇಳಿದರು.

ರಾಷ್ಟ್ರೋತ್ಥಾನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಕನ್ನಡ ಶಿಕ್ಷಕರಾದ ಶ್ರೀ ವೀರೇಶರವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀಮತಿ ಕೊಟ್ಟೂರೇಶ್ವರಿಯವರು ಸರ್ವರನ್ನು ಸ್ವಾಗತಿಸಿದರು. ಆಂಗ್ಲ ವಿಷಯ ಶಿಕ್ಷಕರಾದ ಶ್ರೀ ಎಂ. ವಿ. ಬಡಿಗೇರರವರು ವಂದನಾರ್ಪಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಹಗರಿಬೊಮ್ಮನಹಳ್ಳಿಯ ಸಹ-ಕಾರ್ಯದರ್ಶಿಗಳಾದ ಶ್ರೀದುರ್ಗಣ್ಣರವರು, ಎಲ್ಲ ಪ್ರಕಲ್ಪದ ಮುಖ್ಯಸ್ಥರು, ಶಿಕ್ಷಕ ವೃಂದದವರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

Photos from Rvk Cbse Hagaribommanahalli's post 20/10/2024

ಆದಿಕವಿ ವಾಲ್ಮೀಕಿ ಜಯಂತಿ
ಹಗರಿಬೊಮ್ಮನಹಳ್ಳಿ ; ಅಕ್ಟೋಬರ್ 17
ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿ.ಬಿ.ಎಸ್.ಇ ಹಗರಿಬೊಮ್ಮನಹಳ್ಳಿಯಲ್ಲಿ ದಿನಾಂಕ 17/10/2024 ಇಂದು
'ಮಹರ್ಷಿ ವಾಲ್ಮೀಕಿ ಜಯಂತಿ' ಆಚರಿಸಲಾಯಿತು. ಶಾಲೆಯ ಪ್ರಧಾನಾಚಾರ್ಯರಾದ ಶ್ರೀರಂಗನಾಥರವರು ಮಾತನಾಡಿ "ಸಾಮಾನ್ಯ ಮನುಷ್ಯ ಮಹರ್ಷಿಯಾಗಲು ತಪ:ಶಕ್ತಿ ಅವಶ್ಯ" ಎನ್ನುತ್ತಾ ಕಾರ್ಯಕ್ರಮದ ವಕ್ತಾರರಾದ ಶಾಲೆಯ ಸಂಸ್ಕೃತ ಶಿಕ್ಷಕರಾದ ಶ್ರೀವಿನಾಯಕ ಭಟ್ಟರನ್ನು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ವಿನಾಯಕ ಭಟ್ಟರು ಮಾತನಾಡಿ "ಅಶ್ವಿಜಮಾಸದ ಶುಕ್ಲ ಪಕ್ಷದ ಪೌರ್ಣಿಮಾ ದಿವಸವನ್ನು ವಾಲ್ಮೀಕಿ ಜಯಂತಿ ಎಂದು ಆಚರಿಸುತ್ತೇವೆ. ಮಹರ್ಷಿ ವಾಲ್ಮೀಕಿ ಅವರು ಕ್ರಿಸ್ತಪೂರ್ವ ಐದು ಸಾವಿರ ವರ್ಷಗಳ ಹಿಂದೆ ಇದ್ದರು ಎಂದು ವಿಮರ್ಶಕರು ಹೇಳುತ್ತಾರೆ.
ಮಹರ್ಷಿ ವಾಲ್ಮೀಕಿ 28000 ಶ್ಲೋಕಗಳನ್ನು ಒಳಗೊಂಡಿರುವ ಆದಿಕಾವ್ಯವಾದ ರಾಮಾಯಣವನ್ನು ರಚನೆ ಮಾಡಿದ್ದಾರೆ. ರಾಮಾಯಣ ಅತ್ಯದ್ಭುತ ಆಧ್ಯಾತ್ಮಿಕ ಪ್ರಾಪಂಚಿಕ ಅಂಶಗಳನ್ನು ಒಳಗೊಂಡಿದೆ ಇದನ್ನು ನಾವೆಲ್ಲರೂ ತಿಳಿದು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ" ಎಂದು ಹೇಳಿದರು.

03/10/2024

ಶರನ್ನವರಾತ್ರಿಯ ಶುಭಾಶಯಗಳು
*ದಿನ 1: ಶೈಲಪುತ್ರೀ*
ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಾಮ್ |
ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್ ||
--
https://www.facebook.com/rashtrotthanaparishath/

Want your school to be the top-listed School/college?

Telephone

Website