SRI GURU VIDYA VIKASA KENDRA NANJANGUD

SRI GURU VIDYA VIKASA KENDRA NANJANGUD SCHOOL

19/12/2025

ಶ್ರೀ ಗುರು ವಿದ್ಯವಿಕಾಸ ಕೇಂದ್ರ ನಂಜನಗೂಡಿನಲ್ಲಿ ಈ ದಿನ ನಡೆದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಮಕ್ಕಳ ಸಂತೆ ಕಾರ್ಯಕ್ರಮ

12/01/2024

ನಂಜನಗೂಡಿನ ಆರ್. ಪಿ. ರಸ್ತೆ ,13ನೇ ಕ್ರಾಸ್ ನಲ್ಲಿರುವ ಶ್ರೀ ಗುರು ವಿದ್ಯಾ ವಿಕಾಸ ಸಂಸ್ಥೆಯಲ್ಲಿ ರಾಷ್ಟ್ರೀಯ ಯುವಕರ ದಿನಾಚರಣೆಯನ್ನು ಆಚರಿಸಲಾಯಿತು, ಸುತ್ತೂರಿನ ಜೆಎಸ್ಎಸ್ ಸಂಸ್ಥೆಯ ಶಿಕ್ಷಕರಾದ ಎನ್‌ ಪಿ ಪರಶಿವಮೂರ್ತಿಯವರು ಮುಖ್ಯಭಾಷಣಗಾರರಾಗಿ ಆಗಮಿಸಿ ಮಾತನಾಡುತ್ತಾ ಸ್ವಾಮಿ ವಿವೇಕಾನಂದರು ಭಾರತದ ಸನಾತನ ಧರ್ಮದ ಆಧ್ಯಾತ್ಮಿಕ, ಸಾಂಸ್ಕೃತಿಕ, ಹಿರಿಮೆ - ಗರಿಮೆ, ಭ್ರಾತೃತ್ವ ಮತ್ತು ವಿವೇಕವನ್ನು ಇಡೀ ವಿಶ್ವಕ್ಕೆ ಸಾರಿದ ಶ್ರೇಷ್ಠ ವೀರ ಸನ್ಯಾಸಿ, ಯುವ ಮನಸ್ಸುಗಳ ಮಹಾಗುರು, "ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ " ನಿಮ್ಮ ಏಳಿಗೆಗೆ ನೀವೇ ಶಿಲ್ಪಿ. ಯುವಕರ ನಿದ್ದೆಯನ್ನು ಬಡಿದು ಎಚ್ಚರಿಸಿ ಸ್ಪೂರ್ತಿಯ ತುಳುಮೆಯನ್ನು ತುಂಬುವ ಈ ಮಾತುಗಳನ್ನು ಕೇಳಿದ ಕೂಡಲೇ ನಮಗೆ ನೆನಪಾಗುವುದೇ ಸ್ವಾಮಿ ವಿವೇಕಾನಂದರು. ಯುವಕರಿಗೆ ಈ ಕರೆಕೊಟ್ಟರು. ವಿವೇಕಾನಂದರಿಗೆ ಯುವಶಕ್ತಿಯ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟಿದ್ದರು. ಯುವ ಶಕ್ತಿಗಿಂತ ಮಿಗಿಲಾದುದ್ದು ಯಾವುದು ಇಲ್ಲ. ನೂರು ಜನ ಗಟ್ಟಿಮುಟ್ಟಾದ ಯುವಕರನ್ನು ಕೊಡಿ ನಾವು ನವ ಭಾರತವನ್ನು ನಿರ್ಮಾಣ ಮಾಡುತ್ತೇವೆ ಎನ್ನುತ್ತಿದ್ದರು. ಸ್ವಾಮಿ ವಿವೇಕಾನಂದರ ಹೆಸರು ಕೇಳಿದರೆ ಸಾಕು ಮೈ ರೋಮಾಂಚನಗೊಳ್ಳುತ್ತದೆ. ಕಣಕಣದಲು ದೇಶಭಕ್ತಿ ತುಂಬಿಕೊಂಡಿರುವ ಮಹಾನ್ ಚೇತನ ಭಾರತ ದೇಶದ ವೈಶಿಷ್ಟ್ಯವನ್ನು ವಿಶ್ವಕ್ಕೆ ಪರಿಚಯಿಸಿದವರು. ನಿಮ್ಮ ಮೇಲೆ ನೀವು ನಂಬಿಕೆ ಇಡಿ ಆಗ ಜಗತ್ತು ನಿಮ್ಮ ಪಾದದಡಿಯಲ್ಲಿರುತ್ತದೆ. ನಿಮ್ಮನ್ನು ನೀವು ಜಯಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ. ಒಂದು ಸಾಮಾನ್ಯ ಕೆಲಸವನ್ನು ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರಕುತ್ತದೆ.
‘ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶದಿಂದ ಬದುಕದಿದ್ದರೆ ಬದುಕಿಗೇ ಅವಮಾನ'. ಮನುಷ್ಯ ಬದುಕಿದಷ್ಟು ದಿನ ಆದರ್ಶವಾಗಿ ಬದುಕಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಶ್ರೀ ರಾಜಪ್ಪ, ಸಹ ಶಿಕ್ಷಕರಾದ ಡಿ ಎಂ ಕುಮಾರಸ್ವಾಮಿ, ದೈಹಿಕ ಶಿಕ್ಷಕರಾದ ಚಂದ್ರಶೇಖರ್, ವಿನುತಾ, ವಿಜಯಲಕ್ಷ್ಮಿ, ಮಮತಾ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

20/11/2023

green day

2023ನಾಗಮ್ಮ2  ಪ್ರತಿಬಾ ಕಾರಂಜಿ ಸ್ಪರ್ದೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ SGVK ಶಾಲಾ ವಿಧ್ಯಾಥಿ೯ಗಳು
23/09/2023

2023ನಾಗಮ್ಮ2 ಪ್ರತಿಬಾ ಕಾರಂಜಿ ಸ್ಪರ್ದೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ SGVK ಶಾಲಾ ವಿಧ್ಯಾಥಿ೯ಗಳು

09/09/2023

Address

Nanjangud Town

Website

Alerts

Be the first to know and let us send you an email when SRI GURU VIDYA VIKASA KENDRA NANJANGUD posts news and promotions. Your email address will not be used for any other purpose, and you can unsubscribe at any time.

Shortcuts

Share