B.ed at Govt College of Teacher Education Jamkhandi

B.ed at Govt College of Teacher Education Jamkhandi Contact information, map and directions, contact form, opening hours, services, ratings, photos, videos and announcements from B.ed at Govt College of Teacher Education Jamkhandi, Jamkhandi.

ಈ ಜಗತ್ತು ಕಂಡ ಅತ್ಯದ್ಭುತ ವಿಜ್ಞಾನಿ ಸ್ಟೀಫನ್‌ ಹಾಕಿಂಗ್(Stephen William Hawking)ಇಂದು ಬೆಳಗ್ಗೆ ನಿಧನರಾದರು...ಇವರು ವಿಜ್ಞಾನ ಲೋಕಕ್ಕೆ ನ...
14/03/2018

ಈ ಜಗತ್ತು ಕಂಡ ಅತ್ಯದ್ಭುತ ವಿಜ್ಞಾನಿ ಸ್ಟೀಫನ್‌ ಹಾಕಿಂಗ್(Stephen William Hawking)ಇಂದು ಬೆಳಗ್ಗೆ ನಿಧನರಾದರು...ಇವರು ವಿಜ್ಞಾನ ಲೋಕಕ್ಕೆ ನೀಡಿದ ಕೊಡುಗೆ ಅಪಾರ...ಇದು ವಿಜ್ಞಾನ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ

ಸ್ಟೀಫನ್‌ ಹಾಕಿಂಗ್, ಜೀವಶಾಸ್ತ್ರಜ್ಞ ಸಂಶೋಧಕ Dr. ಫ್ರಾಂಕ್‌ ಹಾಕಿಂಗ್ ಹಾಗೂ ಐಸೊಬೆಲ್ ಹಾಕಿಂಗ್‌ರಿಗೆ ಮಗನಾಗಿ ಜನಿಸಿದನು. ಅವರಿಗೆ ಫಿಲಿಪ್ಪಾ ಹಾಗೂ ಮಾರಿಯಾ ಎಂಬ ಇಬ್ಬರು ಕಿರಿಯ ಸಹೋದರಿಯರಿದ್ದು, ಎಡ್ವರ್ಡ್‌ ಎಂಬ ದತ್ತು ತೆಗೆದುಕೊಂಡ ಸಹೋದರನೂ ಇದ್ದಾನೆ.[೧] ಹಾಕಿಂಗ್‌ರ ತಂದೆತಾಯಿಗಳು ಉತ್ತರ ಲಂಡನ್ನಿನಲ್ಲಿ ವಾಸಿಸುತ್ತಿದ್ದರೂ, ಐಸೊಬೆಲ್ ಸ್ಟೀಫನ್‌ನ ಗರ್ಭಿಣಿಯಾಗಿದ್ದಾಗ ತಮ್ಮ ಮೊದಲ ಮಗುವಿನ ಸುರಕ್ಷತೆಯ ಕಾರಣದಿಂದಾಗಿ ಆಕ್ಸ್‌‌ಫರ್ಡ್‌ಗೆ ತೆರಳಿದರು (ಆ ಸಮಯದಲ್ಲಿ ಲಂಡನ್ ಲುಫ್ತ್‌ವಾಫೆಯಿಂದ ದಾಳಿಗೆ ಒಳಗಾಗಿತ್ತು).[೨] ಹಾಕಿಂಗ್, ಒಂದು ಜರ್ಮನ್ ನಿರ್ಮಿತ V-2 ಕ್ಷಿಪಣಿಯು ಕೆಲವೇ ಬೀದಿಗಳ ಅಂತರದಲ್ಲಿ ಸಿಡಿಯಿತು ಎಂದು ಹೇಳುತ್ತಾರೆ.[೩] ಹಾಕಿಂಗ್ ಜನಿಸಿದ ನಂತರ, ಲಂಡನ್ನಿನಲ್ಲಿರುವ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಫಾರ್ ಮೆಡಿಕಲ್ ರೀಸರ್ಚ್‌ನಲ್ಲಿ ಪರಜೀವಿಶಾಸ್ತ್ರ ವಿಭಾಗದ ಮುಖ್ಯಸ್ಥನಾಗಿದ್ದರಿಂದ ಅವರ ಕುಟುಂಬವು ಲಂಡನ್‌ಗೆ ಮರಳಿತು.[೧] 1950ನೇ ಇಸವಿಯಲ್ಲಿ, ಹಾಕಿಂಗ್ ಮತ್ತವರ ಕುಟುಂಬ ಹಾರ್ಟ್‌ಫೋರ್ಡ್‌ಷೈರ್‌ನಲ್ಲಿರುವ St ಆಲ್ಬಾನ್ಸ್‌ಗೆ ಸ್ಥಳಾಂತರಗೊಂಡರು ಹಾಗೂ 1950ರಿಂದ 1953ನೇ ಇಸವಿಯ ತನಕ ಅಲ್ಲಿನ St ಆಲ್ಬಾನ್ಸ್ ವಿದ್ಯಾರ್ಥಿನಿಯರ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿದರು. (ಆ ಸಮಯದಲ್ಲಿ, ವಿದ್ಯಾರ್ಥಿಗಳಿಗೆ 10ನೇ ವರ್ಷ ಆಗುವವರೆಗೆ ವಿದ್ಯಾರ್ಥಿನಿಯರ ಶಾಲೆಯಲ್ಲಿ ವ್ಯಾಸಂಗ ಮಾಡಬಹುದಿತ್ತು.[೪]) 11ನೇ ವಯಸ್ಸಿನಿಂದ ಅವರು St ಆಲ್ಬಾನ್ಸ್‌ ಶಾಲೆಗೆ ಸೇರಿದರು, ಅಲ್ಲಿ ಅವರು ಒಳ್ಳೆಯ ವಿದ್ಯಾರ್ಥಿಯಾದರೂ ಅಷ್ಟೇನೂ ಪ್ರತಿಭಾವಂತನಾಗಿರಲಿಲ್ಲ.[೧] ಅವರಿಗೆ ತಮ್ಮ ಮೇಲೆ ಪ್ರಭಾವ ಬೀರಿದ ಶಿಕ್ಷಕರ ಹೆಸರನ್ನು ತಿಳಿಸಲು ಸೂಚಿಸಿದಾಗ, ಹಾಕಿಂಗ್ ಗಣಿತಶಾಸ್ತ್ರದ ಬೋಧಕರಾದ ಡಿಕ್ರನ್ ತಹ್ತಾರ ಹೆಸರನ್ನು ಹೇಳುತ್ತಾರೆ.[೫] ಶಾಲೆಯೊಂದಿಗೆ ತಮ್ಮ ಸಂಬಂಧವನ್ನು ಹಾಗೆಯೇ ಮುಂದುವರೆಸಿಕೊಂಡು ಬಂದಿರುವ, ಅವರ ಹೆಸರನ್ನು ನಾಲ್ಕು ವಿಭಾಗಗಳಲ್ಲಿ ಒಂದರ ಹಾಗೂ ಪಠ್ಯೇತರ ವಿಜ್ಞಾನದ ಉಪನ್ಯಾಸ ಸರಣಿಯೊಂದಕ್ಕೆ ಸೂಚಿಸಲಾಗಿದೆ. ಉಪನ್ಯಾಸಗಳನ್ನು ನೀಡಲು ಶಾಲೆಗೆ ಭೇಟಿ ನೀಡಿದ್ದ ಅವರು ಶಾಲೆಯ ದಿ ಅಲ್ಬೇನಿಯನ್ ನಿಯತಕಾಲಿಕೆಗಾಗಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿಸ್ತೃತ ಸಂದರ್ಶನವನ್ನೂ ನೀಡಿದ್ದರು.

ಹಾಕಿಂಗ್‌ರು ಯಾವಾಗಲೂ ವಿಜ್ಞಾನದಲ್ಲಿ ಆಸಕ್ತಿ ಉಳ್ಳವರಾಗಿದ್ದರು.[೧] ತನ್ನ ಗಣಿತಶಾಸ್ತ್ರದ ಬೋಧಕರಿಂದ ಪ್ರೇರಿತರಾಗಿದ್ದ ಇವರು, ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರವನ್ನು ಅಧ್ಯಯನ ನಡೆಸಬೇಕೆಂದು ಅಂದುಕೊಂಡಿದ್ದರು. ಆದರೂ ಹಾಕಿಂಗ್‌ರನ್ನು, ಅವರ ತಂದೆ ತಾವು ವ್ಯಾಸಂಗ ಮಾಡಿದ ಆಕ್ಸ್‌ಫರ್ಡ್‌ನ ಯೂನಿವರ್ಸಿಟಿ ಮಹಾವಿದ್ಯಾಲಯಕ್ಕೆ ಅರ್ಜಿ ಹಾಕುವಂತೆ ಮಾಡಿದರು. ಆ ಸಮಯದಲ್ಲಿ ಯೂನಿವರ್ಸಿಟಿ ಮಹಾವಿದ್ಯಾಲಯದಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕರು ಇರಲಿಲ್ಲವಾದ್ದರಿಂದ, ಗಣಿತಶಾಸ್ತ್ರಕ್ಕೆಂದು ಅರ್ಜಿಹಾಕಿದ ವಿದ್ಯಾರ್ಥಿಗಳನ್ನು ತಿರಸ್ಕರಿಸಿತು. ಇದರಿಂದಾಗಿ ಹಾಕಿಂಗ್ ಪ್ರಾಕೃತ ವಿಜ್ಞಾನವನ್ನು ವ್ಯಾಸಂಗ ಮಾಡಲು ತೀರ್ಮಾನಿಸಿದ್ದು, ಅದರಲ್ಲಿ ಅವರು ವಿದ್ಯಾರ್ಥಿವೇತನವನ್ನೂ ಗಳಿಸಿದರು. ಯೂನಿವರ್ಸಿಟಿ ಮಹಾವಿದ್ಯಾಲಯಕ್ಕೆ ಒಮ್ಮೆ ಸೇರಿಕೊಂಡ ನಂತರ ಹಾಕಿಂಗ್ ಭೌತಶಾಸ್ತ್ರದಲ್ಲಿ ಪರಿಣಿತಿ ಹೊಂದಿದರು.[೨] ಈ ಬಾರಿ ಅವರು ಉಷ್ಣಬಲವಿಜ್ಞಾನ, ಸಾಪೇಕ್ಷತೆ, ಹಾಗೂ ಕ್ವಾಂಟಮ್‌ ಯಂತ್ರಶಾಸ್ತ್ರದತ್ತ ಒಲವು ತೋರಿಸಿದರು. ಅವರ ಭೌತಶಾಸ್ತ್ರ ಬೋಧಕ, ರಾಬರ್ಟ್ ಬೆರ್ಮನ್, ದಿ ನ್ಯೂಯಾರ್ಕ್ ಟೈಮ್ಸ್ ಮ್ಯಾಗಜೈನ್‌ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳುತ್ತಾರೆ..
ಸ್ಟೀಫನ್‌ ವಿಲಿಯಂ ಹಾಕಿಂಗ್ ರವರು, CH, CBE, FRS, FRSA (ಜನನ 8 ಜನವರಿ 1942) ಬ್ರಿಟೀಷ್‌ ಸೈದ್ಧಾಂತಿಕ ಭೌತಶಾಸ್ತ್ರಜ್ಞರಾಗಿದ್ದು, 40 ವರ್ಷಗಳ ಸುದೀರ್ಘ ಕಾಲ ವೈಜ್ಞಾನಿಕ ಕ್ಷೇತ್ರದಲ್ಲಿ ವಿಶ್ವಪ್ರಸಿದ್ಧಿ ಹೊಂದಿದವರು. ಅವರ ಪುಸ್ತಕಗಳು ಹಾಗೂ ಸಾರ್ವಜನಿಕ ಸ್ವರೂಪಗಳು ಅಧ್ಯಯನ ಕ್ಷೇತ್ರದಲ್ಲಿ ಅವರನ್ನೊಬ್ಬ ಪ್ರಖ್ಯಾತ ತಾರೆಯನ್ನಾಗಿ ಹಾಗೂ ರಾಯಲ್ ಸೊಸೈಟಿ ಆಫ್ ಆರ್ಟ್ಸ್‌ನ ಗೌರವಾನ್ವಿತ ಫೆಲೋವನ್ನಾಗಿ ಮಾಡಿತು, ಅವರು ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್‌ನಲ್ಲಿ ಆಜೀವ ಸದಸ್ಯತ್ವ ಹೊಂದಿದ್ದಾರೆ,ಹಾಗೂ 2009ನೇ ಇಸವಿಯಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಶ್ರೇಷ್ಠ ಪ್ರಶಸ್ತಿಯಾದಪ್ರೆಸಿಡೆಂಟಲ್ ಮೆಡಲ್ ಆಫ್ ಫ್ರೀಡಂ ನೀಡಿ ಅವರನ್ನು ಗೌರವಿಸಲಾಗಿದೆ. ಗಾನ್‌ವಿಲ್ಲೆ ಅಂಡ್ ಕಾಯಸ್ ವಿದ್ಯಾಲಯದಲ್ಲಿ ಫೆಲೋ ಆಗಿ, ಕೇಂಬ್ರಿಡ್ಜ್‌ ಹಾಗೂಒಂಟಾರಿಯೊದ ವಾಟರ್‌ಲೂನ, ಪೆರಿಮೀಟರ್ ಇನ್ಸ್‌ಟಿಟ್ಯೂಟ್‌ ಫಾರ್ ಥಿಯೊರೆಟಿಕಲ್ ಫಿಸಿಕ್ಸ್‌ ಸಂಸ್ಥೆಯಲ್ಲಿ ಪ್ರತ್ಯೇಕ ಸಂಶೋಧಕ ಪ್ರಾಧ್ಯಾಪಕ ಸ್ಥಾನವನ್ನು ಕೂಡ ಅಲಂಕರಿಸಿದ್ದರು. ವಿಶ್ವವಿಜ್ಞಾನ ಹಾಗೂ ಕ್ವಾಂಟಮ್‌ ಗುರುತ್ವಾಕರ್ಷಣೆಯಲ್ಲಿ, ಅದರಲ್ಲಿಯೂ ಮುಖ್ಯವಾಗಿ ಕಪ್ಪು ರಂಧ್ರ/ಕೃಷ್ಣ ವಿವರಗಳನ್ನು ಕುರಿತು ನೀಡಿದ ತನ್ನ ಕೊಡುಗೆಗಳಿಗೆ ಪ್ರಸಿದ್ಧಿ ಹೊಂದಿದ್ದಾರೆ.ಸುಪ್ರಸಿದ್ಧ ವೈಜ್ಞಾನಿಕ ಕೃತಿಗಳಾದ ತನ್ನ ಸ್ವಂತ ಸಿದ್ಧಾಂತಗಳು ಹಾಗೂ ಸಾಮಾನ್ಯ ವಿಶ್ವವಿಜ್ಞಾನದಲ್ಲಿ ಅವರು ಯಶಸ್ಸನ್ನೂ ಗಳಿಸಿದ್ದಾರೆ; ಅವುಗಳಲ್ಲಿ ಪ್ರಮುಖವಾಗಿ ಮಾರಾಟವಾಗಲ್ಪಟ್ಟ ಎ ಬ್ರೀಫ್ ಹಿಸ್ಟರಿ ಆಫ್ ಟೈಮ್‌ ದಾಖಲೆಯಾಗಿ 237 ವಾರಗಳ ಕಾಲ ಬ್ರಿಟೀಷ್‌ ಸಂಡೇ ಟೈಮ್ಸ್‌ನ ಅತ್ಯಂತ ಯಶಸ್ವಿ ಮಾರಾಟದ ಪುಸ್ತಕಗ ಳ ಪಟ್ಟಿಯಲ್ಲಿ ಉಳಿದುಕೊಂಡಿದೆ. ಹಾಕಿಂಗ್‌ರ, ರೋಜರ್ ಪೆನ್‌ರೋಸ್‌ ಜೊತೆಗೂಡಿ ಇಂದಿನ ತನಕ ಮಾಡಿದ ಪ್ರಮುಖ ವೈಜ್ಞಾನಿಕ ಸಾಧನೆಗಳು,ವೈಶಿಷ್ಟ್ಯತೆಗಳಾದ ಸಾಮಾನ್ಯ ಸಾಪೇಕ್ಷತೆ ಸಿದ್ಧಾಂತಗಳು, ಹಾಗೂ ಸೈದ್ಧಾಂತಿಕವಾಗಿ ಊಹಿಸಲಾದ ಕಪ್ಪು ರಂಧ್ರ/ಕೃಷ್ಣ ವಿವರಗಳು ವಿಕಿರಣವನ್ನು ಹೊರಸೂಸುತ್ತದೆ ಎಂಬುದನ್ನು ತಿಳಿಸಿದ್ದು, ಇದೇ ಹಾಕಿಂಗ್ ವಿಕಿರಣ ಹೊರಸೂಸುವಿಕೆ (ಅಥವಾ ಕೆಲವು ಬಾರಿ ಬೆಕೆನ್ಸ್‌ಟೀನ್‌-ಹಾಕಿಂಗ್ ವಿಕಿರಣ ಹೊರಸೂಸುವಿಕೆ) ಎಂದು ಇಂದು ಪ್ರಸಿದ್ಧವಾಗಿದೆ. ಹಾಕಿಂಗ್, ಹಲವಾರು ವರ್ಷಗಳ ಕಾಲ ಬೆಳವಣಿಗೆ ಹೊಂದಿದ್ದು ಅವರನ್ನು ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ಒಳಪಡಿಸಿದ ಸ್ಥಿತಿಯಾದ ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್‌ಗೆ (ALS) ಸಂಬಂಧಿಸಿದ ನರ-ಸ್ನಾಯು ಕ್ಷಯಕ್ಕೆ ಒಳಗಾದರು.
ಕೇಂಬ್ರಿಡ್ಜ್‌ ಗೆ ಬಂದ ಗಳಿಗೆಯಲ್ಲಿಯೇ, ಅವರಲ್ಲಿ ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್‌ನ (USನ ಆಡುಭಾಷೆಯಲ್ಲಿ ಅದನ್ನು ಲಾಉ ಗೆಹ್‌ರಿಗ್‌ಸ್ ಖಾಯಿಲೆ ಎಂದು ಕರೆಯಲಾಗುತ್ತದೆ) ರೋಗಲಕ್ಷಣಗಳು ಕಾಣಿಸಿಕೊಳ್ಳತೊಡಗಿದವು, ಸ್ನಾಯು ಚಲನೆಗೆ ಸಹಕರಿಸದ ಚಾಲಕ ನರರೋಗವಾದ ಇದರಿಂದ ಅವರು ತಮ್ಮ ನರಸ್ನಾಯುವಿನ ನಿಯಂತ್ರಣವನ್ನು ಕಳೆದುಕೊಂಡರು. ಅವರು ಕೇಂಬ್ರಿಡ್ಜ್‌ನಲ್ಲಿದ್ದ ಮೊದಲ ಎರಡು ವರ್ಷಗಳಲ್ಲಿ, ಅವರಿಗೆ ಯಾವುದೇ ರೀತಿಯ ಬದಲಾವಣೆಗಳೂ ಕಾಣಿಸಿಕೊಳ್ಳಲಿಲ್ಲ, ಆದರೆ, ರೋಗವು ಹದವಾದ ಸ್ಥಿತಿಗೆ ಬಂದ ನಂತರ ಹಾಗೂ ತನ್ನ ವೈದ್ಯಕೀಯ ಸಹಾಯಕರಾದ ಡೇನಿಸ್ ವಿಲಿಯಂ ಸ್ಕಿಯಾಮಾರ ಸಹಾಯದಿಂದ, ಅವರು ತಮ್ಮ Ph.D ಅಧ್ಯಯನಕ್ಕೆ ಮರಳಿದರು[೧]

1974ನೇ ಇಸವಿಯಲ್ಲಿ ಹಾಕಿಂಗ್ ರಾಯಲ್ ಸೊಸೈಟಿಯ ಕಿರಿಯ ಸಂಶೋಧಕರಾಗಿ ಆಯ್ಕೆಯಾದರು, 1982ನೇ ಇಸವಿಯಲ್ಲಿ ಆರ್ಡರ್ ಆಫ್ ದಿ ಬ್ರಿಟೀಷ್‌ ಎಂಪೈರ್‌ಸಂಸ್ಥೆಯ ಕಮ್ಯಾಂಡರ್ ಹುದ್ದೆಯನ್ನು ಸ್ಥಾಪಿಸಿ ಅವರಿಗೆ ನೀಡಲಾಯಿತು, ಹಾಗೂ 1989ನೇ ಇಸವಿಯಲ್ಲಿ ಕಂಪ್ಯಾನಿಯನ್ ಆಫ್ ಹಾನರ್ ಕೂಡ ಆಗಿದ್ದರು. ಹಾಕಿಂಗ್ ದಿ ಬುಲೆಟಿನ್ ಆಫ್ ದಿ ಅಟಾಮಿಕ್ ಸೈಂಟಿಸ್ಟ್ಸ್‌ನ ಪ್ರಾಯೋಜಕ ಮಂಡಳಿಯ ಸದಸ್ಯರೂ ಆಗಿದ್ದಾರೆ.

ALSನಿಂದ ಉಂಟಾದ ಪಾರ್ಶ್ವವಾಯು ಹೆಚ್ಚಾಗುತ್ತಿದ್ದರೂ ಹಾಕಿಂಗ್‌ ತಮ್ಮ ಸಾಧನೆಗಳನ್ನು ಮುಂದುವರೆಸಿದರು. 1974ನೇ ಇಸವಿಯ ಹೊತ್ತಿಗೆ, ಅವರು ಊಟ ಮಾಡಲೂ ಅಥವಾ ಹಾಸಿಗೆಯಿಂದ ಮೇಲೇಳಲೂ ಸಾಧ್ಯವಿಲ್ಲದಂತಹ ಸ್ಥಿತಿಗೆ ತಲುಪಿದರು. ಅವರ ಮಾತುಗಳು ಅಸ್ಪಷ್ಟವಾಗಿ, ಚೆನ್ನಾಗಿ ಬಲ್ಲವರು ಮಾತ್ರ ಅವರ ಮಾತುಗಳನ್ನು ಅರ್ಥೈಸಿಕೊಳ್ಳುತ್ತಿದ್ದರು. 1985ನೇ ಇಸವಿಯಲ್ಲಿ, ಅವರು ನ್ಯುಮೋನಿಯಾಗೆ ತುತ್ತಾಗಿ ಶ್ವಾಸನಾಳ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಮಾತನಾಡಲು ಸಹ ಅಶಕ್ತರಾದರು. ಹಾಕಿಂಗ್‌ರಿಗೆ ಕೇಂಬ್ರಿಡ್ಜ್‌ ವಿಜ್ಞಾನಿಯೊಬ್ಬರು, ಅವರ ದೇಹದ ಕೊಂಚ ಮಟ್ಟಿಗಿನ ಚಲನೆಗಳಿಂದ ಗಣಕದಲ್ಲಿ ಬರೆಯಲು ಸಾಧ್ಯವಾಗುವಂತಹ ಸಾಧನವೊಂದನ್ನು ಅಭಿವೃದ್ಧಿಪಡಿಸಿದರು, ಹಾಗೂ ಅದಕ್ಕೆ ಅವರು ಗಣಕದಲ್ಲಿ ಬರೆದುದನ್ನು ಓದಲು ಅನುವಾಗುವ ಧ್ವನಿ ಸಂಯೋಗವ್ಯವಸ್ಥೆಯನ್ನು ಅಳವಡಿಸಿದರು.[೨]

ಸಂಶೋಧನಾ ಕ್ಷೇತ್ರಗಳುಸಂಪಾದಿಸಿ

ಸಂಶೋಧನಾ ವಲಯದಲ್ಲಿ ಹಾಕಿಂಗ್‌ರ ಪ್ರಮುಖ ಕ್ಷೇತ್ರಗಳೆಂದರೆ ಸೈದ್ಧಾಂತಿಕ ವಿಶ್ವವಿಜ್ಞಾನ ಹಾಗೂ ಕ್ವಾಂಟಮ್‌ ಗುರುತ್ವಾಕರ್ಷಣೆ.

ಕೇಂಬ್ರಿಡ್ಜ್‌ನಲ್ಲಿ ಪ್ರಾಧ್ಯಾಪಕರಾಗಿ ಸ್ಟೀಫನ್‌ ಹಾಕಿಂಗ್.

1960ನೇ ದಶಕದ ಅಂತ್ಯದಲ್ಲಿ, ಅವರು ತಮ್ಮ ಕೇಂಬ್ರಿಡ್ಜ್‌ನ ಸ್ನೇಹಿತ ಹಾಗೂ ಸಹೋದ್ಯೋಗಿ ರೋಜರ್ ಪೆನ್‌ರೋಸ್‌ಜೊತೆಗೂಡಿ, ಆಲ್ಬರ್ಟ್ ಐನ್‌ಸ್ಟೀನ್‌ರ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತವನ್ನು ಆಧಾರವಾಗಿ ಇಟ್ಟುಕೊಂಡು ಒಂದು ಹೊಸ, ಕ್ಲಿಷ್ಟಕರ ಗಣಿತದ ಮಾದರಿಯೊಂದನ್ನು ತಯಾರಿಸಿದರು.[೩] ಇದರಿಂದಾಗಿ, 1970ನೇ ಇಸವಿಯಲ್ಲಿ, ಹಾಕಿಂಗ್ ವಿಶಿಷ್ಟತೆಯ ಸಿದ್ಧಾಂತಗಳನ್ನು ನೀಡಿದವರಲ್ಲಿ ಪ್ರಥಮ ಎಂದು ಎನಿಸಿಕೊಂಡರು; ಈ ರೀತಿಯ ಸಿದ್ಧಾಂತಗಳು ಅವಕಾಶ-ಕಾಲದಲ್ಲಿ ವಿಶಿಷ್ಟತೆಯ ಇರುವಿಕೆಗೆ ಸಾಕಷ್ಟು ಪುರಾವೆಗಳನ್ನು ನೀಡುತ್ತದೆ. ಈ ಕಾರ್ಯಸಾಧನೆಯು, ವಿಶೇಷ ಸಂದರ್ಭಗಳಲ್ಲಿ ಮಾತ್ರ ಕಾಣಿಸಿಕೊಂಡು ದೂರವೇ ಇದ್ದ ಗಣಿತಶಾಸ್ತ್ರದ ಕುತೂಹಲಗಳಿಗೆ ತೆರೆಯೆಳೆದಿದ್ದು, ಈ ವಿಶಿಷ್ಟತೆಗಳು ಸಾಮಾನ್ಯ ಸಾಪೇಕ್ಷತೆ ಸಿದ್ಧಾಂತದಲ್ಲಿ ಕಾಣಸಿಗುವ ಸಾಧಾರಣ ಲಕ್ಷಣವಾಗಿದೆ.[೪]

ಬ್ರಾಂಡನ್ ಕಾರ್ಟರ್‌, ವೆರ್ನರ್ ಇಸ್ರೇಲ್‌ ಹಾಗೂ D. ರಾಬಿನ್‌ಸನ್ ಜೊತೆಗೂಡಿ ಅವರು ಜಾನ್ ವ್ಹೀಲರ್‌ರ "ನೊ-ಹೇರ್ ಪ್ರಮೇಯ"ದೊಂದಿಗೆ ಗಣಿತೀಯ ಪುರಾವೆಗಳನ್ನು ಒದಗಿಸಿ, ಯಾವುದೇ ಕಪ್ಪು ರಂಧ್ರ/ಕೃಷ್ಣ ವಿವರವನ್ನು ಕೂಡಾ ಮೂರು ಲಕ್ಷಣಗಳಾದ ದ್ರವ್ಯರಾಶಿ, ಕೋನೀಯ ಚಲನಾ ಪರಿಮಾಣ, ವಿದ್ಯುತ್ ಆವೇಶವನ್ನು ಬಳಸಿಕೊಂಡು ಸಂಪೂರ್ಣವಾಗಿ ವಿವರಿಸಬಹುದಾಗಿದೆ ಎಂದು ತೋರಿಸಿದರು.

ಗಾಮಾ ವಿಕಿರಣ ಹೊರಸೂಸುವಿಕೆಗಳ ವಿಶ್ಲೇಷಣೆಯನ್ನು ಆಧರಿಸಿ, ಮಹಾ ವಿಸ್ಫೋಟದ ನಂತರ, ಸೃಷ್ಟಿ ಕಾಲದಲ್ಲಿ ಸಣ್ಣ ಕಪ್ಪು ರಂಧ್ರ/ಕೃಷ್ಣ ವಿವರಗಳು ಮೂಡಿದವು ಎಂದು ಹಾಕಿಂಗ್ ಹೇಳುತ್ತಾರೆ. ಬ್ರಾಂಡನ್ ಹಾಗೂ ಕಾರ್ಟರ್‌ ಜೊತೆಗೂಡಿ, ಕಪ್ಪು ರಂಧ್ರ/ಕೃಷ್ಣ ವಿವರ ಯಂತ್ರಶಾಸ್ತ್ರದ ನಾಲ್ಕು ನಿಯಮಗಳನ್ನು ಪ್ರತಿಪಾದಿಸುತ್ತಾ ಉಷ್ಣಬಲ ವಿಜ್ಞಾನಕ್ಕೆ ಒಂದು ಹೋಲಿಕೆಯನ್ನು ನೀಡಿದರು. ಕಪ್ಪು ರಂಧ್ರ/ಕೃಷ್ಣ ವಿವರಗಳು ಉಷ್ಣದ ಮೂಲಕ ಉಪಾಣು ಕಣಗಳನ್ನು ಸೃಷ್ಟಿಸಿ ಹೊರಸೂಸಬೇಕು ಎಂಬುದನ್ನು ಅವರು 1974ನೇ ಇಸವಿಯಲ್ಲಿ ಲೆಕ್ಕಹಾಕಿದ್ದರು, ಅದನ್ನೇ ಇಂದು ಹಾಕಿಂಗ್ ವಿಕಿರಣ ಹೊರಸೂಸುವಿಕೆ ಎಂದು ಕರೆಯುತ್ತಿದ್ದು, ಅವುಗಳ ಶಕ್ತಿಯು ಸಂಪೂರ್ಣವಾಗಿ ಕುಂದಿದ ಅನಂತರ ಆವಿಯಾಗುತ್ತವೆ.[೫]

ಅವಕಾಶ-ಕಾಲದ ಬ್ರಹ್ಮಾಂಡದಲ್ಲಿ ಯಾವುದೇ ರೀತಿಯ ಎಲ್ಲೆ ಇರುವುದಿಲ್ಲ ಎನ್ನುವುದಕ್ಕೆ ಹಾಕಿಂಗ್ ಜಿಮ್ ಹಾರ್ಟಲ್‌ ಸಹಯೋಗದೊಂದಿಗೆ ಮಾದರಿಯನ್ನು ಅಭಿವೃದ್ಧಿ ಪಡಿಸಿದ್ದು, ಇದು ಉತ್ತರ ಧ್ರುವ ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಪ್ರಾಥಮಿಕ ವೈಶಿಷ್ಟ್ಯತೆಯ ಕುರಿತಾದ ಮಹಾ ವಿಸ್ಫೋಟದ ಮೂಲ ಮಾದರಿಗಳನ್ನು ತೆಗೆದುಹಾಕಿತು: ಉತ್ತರ ಧ್ರುವದ ಉತ್ತರಕ್ಕೆ ಯಾವುದೇ ರೀತಿಯ ಸೀಮಾರೇಖೆ ಇಲ್ಲದಿರುವುದರಿಂದ ಯಾರೊಬ್ಬರೂ ಪ್ರಯಾಣ ಬೆಳೆಸಲು ಸಾಧ್ಯವಿಲ್ಲ. ಇದರಿಂದಾಗಿ ಮೊದಲ ಬಾರಿಗೆ ನೋ ಬೌಂಡರಿ ಪ್ರಸ್ತಾಪವು ಸೀಮಿತ ಪರಿಧಿಯ ಬ್ರಹ್ಮಾಂಡವನ್ನು ಸೂಚಿಸಿತ್ತಾದರೂ, ನೀಲ್ ಟುರೊಕ್‌ರೊಂದಿಗಿನ ಸಂವಾದಿಂದಾಗಿ ನೋ ಬೌಂಡರಿ ಪ್ರಸ್ತಾಪವೂ ಸಹ ಮುಕ್ತ ಬ್ರಹ್ಮಾಂಡವನ್ನು ಒಳಗೊಂಡಿದೆ ಎಂಬುದನ್ನು ತಿಳಿದುಕೊಂಡರು.

ಕ್ವಾಂಟಮ್‌ ವಿಶ್ವವಿಜ್ಞಾನ, ವಿಶ್ವದ ಹಿಗ್ಗುವಿಕೆ, ಭಿನ್ನ ಭಿನ್ನ ಅಕ್ಷಗಳಲ್ಲಿ ಮಹಾ ವಿಸ್ಫೋಟದಿಂದ ಉಂಟಾದ ಬ್ರಹ್ಮಾಂಡಗಳಲ್ಲಿ ಹೀಲಿಯಂ ಉತ್ಪಾದನೆ, ದೊಡ್ಡ N ವಿಶ್ವವಿಜ್ಞಾನ, ಬ್ರಹ್ಮಾಂಡದ ಸಾಂದ್ರತೆಯ ವ್ಯೂಹ, ಸ್ಥಳಸ್ವರೂಪ ಹಾಗೂ ಬ್ರಹ್ಮಾಂಡದ ರಚನೆ, ಎಳೆಯ ಬ್ರಹ್ಮಾಂಡಗಳು, ಯಾಂಗ್-ಮಿಲ್ಸ್ ಇನ್ಸ್‌ಟಂಟಾನ್‌ಗಳು ಹಾಗೂ S ವ್ಯೂಹ, ಆಂಟಿ ಡೆ ಸಿಟ್ಟೆರ್ ಅವಕಾಶ, ಕ್ವಾಂಟಮ್‌ ತೊಡಕುಗಳು ಹಾಗೂ ಅಲಭ್ಯ ಪ್ರಮಾಣ, ಆರೋ ಆಫ್ ಟೈಮ್ ಸೇರಿದಂತೆ ಆಕಾಶ ಮತ್ತು ಕಾಲದ ಲಕ್ಷಣಗಳು, ಸ್ಪೇಸ್‌ಟೈಂ ಫೋಮ್, ಸ್ಟ್ರಿಂಗ್ ಸಿದ್ಧಾಂತ, ಅತಿಗುರುತ್ವಾಕರ್ಷಣೆ, ಯೂಕ್ಲೀಡ್‌ನ ಕ್ವಾಂಟಮ್‌ ಗುರುತ್ವಾಕರ್ಷಣೆ, ಗುರುತ್ವಾಕರ್ಷಣಾ ಹ್ಯಾಮಿಲ್ಟನಿಯನ್, ಬ್ರಾನ್ಸ್-ಡಿಕ್ ಹಾಗೂ ಹೋಯ್ಲ್-ನಾರ್ಲಿಕಾರ್‌ರ ಗುರುತ್ವಾಕರ್ಷಣಾ ಸಿದ್ಧಾಂತಗಳು, ಗುರುತ್ವಾಕರ್ಷಣಾ ವಿಕಿರಣ, ಹಾಗೂ ವರ್ಮ್‌ಹೋಲ್‌ಗಳು ಹಾಕಿಂಗ್‌ರ ಇನ್ನಿತರೆ ಹಲವು ವೈಜ್ಞಾನಿಕ ಸಂಶೋಧನೆಗಳಾಗಿವೆ.

ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ NASAದ 50ನೇ ವರ್ಷಾಚರಣೆಯ ಸಂದರ್ಭದಲ್ಲಿ ನಡೆದ ಉಪನ್ಯಾಸದಲ್ಲಿ, "ಮಾನವನ ಪ್ರಾರಂಭದ ಜೀವನ ಸಾಮಾನ್ಯವಾಗಿದ್ದು ಬುದ್ಧಿವಂತಿಕೆಯಿಂದ ಜೀವನ ನಡೆಸುತ್ತಿದ್ದು ಬಹಳ ಅಪರೂಪವಾಗಿತ್ತು" ಎಂದು ನಂಬಲಾಗಿದ್ದು ಪ್ರೊ. ಹಾಕಿಂಗ್ ಭೂಮ್ಯಾತೀತ ಜೀವಿಗಳ ಕುರಿತು ಹೇಳಿದ್ದರು."

Address

Jamkhandi

Website

Alerts

Be the first to know and let us send you an email when B.ed at Govt College of Teacher Education Jamkhandi posts news and promotions. Your email address will not be used for any other purpose, and you can unsubscribe at any time.

Shortcuts

Share