03/10/2019
ಜಮಖಂಡಿ ಜಿಲ್ಲಾ ಕೇಂದ್ರವನ್ನಾಗಿ ಹಾಗೆ ಸಾವಳಗಿ ತಾಲ್ಲೂಕು ಕೇಂದ್ರವನ್ನಾಗಿ ಮಾಡಲು ಇವತ್ತು ಜಮಖಂಡಿ ಬಂದ್ ಗೆ ಕರೆ ಕೊಟ್ಟಿದ್ದು ಈ ಒಂದು ಬಂದ್ ತಮ್ಮೆಲ್ಲರ ಸಹಕಾರದಿಂದ ಯಶಸ್ವಿಯಾಗಿ ಪೂರ್ಣಗೊಂಡಿತು.ಈ ಒಂದು ಸಂದರ್ಭದಲ್ಲಿ ಎಲ್ಲ ಜಮಖಂಡಿಯ ಪೂಜ್ಯ ಗುರುಗಳು,ಪ್ರಗತಿಪರ ಚಿಂತಕರು,ವಿದ್ಯಾರ್ಥಿಗಳು ವಿವಿಧ ಸಂಘ- ಸಂಸ್ಥೆಗಳು, ವ್ಯಾಪಾರಸ್ಥರು, ಸಾರ್ವಜನಿಕರು,ಪತ್ರಿಕಾ ಬಳಗದವರು, ಮಾಧ್ಯಮ ಮಿತ್ರರು ಹಾಗೆ ಎಲ್ಲ ಪಕ್ಷದ ಮುಖಂಡರು ಹಾಗೆ ಕಾರ್ಯಕರ್ತರು ಪಕ್ಷಾತೀತವಾಗಿ ಬೆಂಬಲವನ್ನು ಸೂಚಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ🙏🏻ಈ ಒಂದು ಬಂದ್ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೆಲವೊಂದು ಚಿಕ್ಕ ಪುಟ್ಟ ತೊಂದರೆಗಳಾಗಿದ್ದಕ್ಕೆ ಕ್ಷಮೆ ಇರಲಿ🙏🏻ಆದರೆ ಜಮಖಂಡಿ ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಹಾಗೆ ಬೆಳವಣಿಗೆಗೆ ಇದು ಅನಿವಾರ್ಯವಾಗಿದೆ.....