Rashtrotthana Vidya Kendra Hassan

Rashtrotthana Vidya Kendra Hassan Contact information, map and directions, contact form, opening hours, services, ratings, photos, videos and announcements from Rashtrotthana Vidya Kendra Hassan, Education Website, Hassan.

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಹಾಸನದಲ್ಲಿ ದಿನಾಂಕ 27/08/2026ರ ಗುರುವಾರದಂದು ರಕ್ಷಾಬಂಧನ ಆಚರಣೆಯನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯ...
27/08/2026

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಹಾಸನದಲ್ಲಿ ದಿನಾಂಕ 27/08/2026ರ ಗುರುವಾರದಂದು ರಕ್ಷಾಬಂಧನ ಆಚರಣೆಯನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ಕು. ಗಹನ ಅವರು ನಿರ್ವಹಿಸಿದರು. ಅವರು ಶಾಲೆಯ ಪ್ರಧಾನಾಚಾರ್ಯರಾದ ಶ್ರೀಮತಿ ಉಮಾ ಎಸ್. ಪಾಟೀಲ್ ಮಾತಾಜೀಯವರನ್ನು, ಪೋಷಕರನ್ನು, ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.

ನಂತರ ಕು. ಚೇತನ ಅವರು ರಕ್ಷಾಬಂಧನದ ಮಹತ್ವವನ್ನು ವಿವರಿಸಿದರು. ಅಣ್ಣ-ತಂಗಿಯರ ಬಾಂಧವ್ಯ, ಪರಸ್ಪರ ಪ್ರೀತಿ ಹಾಗೂ ರಕ್ಷಣೆಯ ಜವಾಬ್ದಾರಿಯನ್ನು ಸಾರುವ ಪವಿತ್ರ ಹಬ್ಬವೇ ರಕ್ಷಾಬಂಧನ ಎಂದು ತಿಳಿಸಿದರು.

ಅನಂತರ ಶಾಲೆಯ ಪ್ರಧಾನಾಚಾರ್ಯರಾದ ಶ್ರೀಮತಿ ಉಮಾ ಎಸ್. ಪಾಟೀಲ್ ಮಾತಾಜೀಯವರು ಮಾತನಾಡಿ, ರಕ್ಷಾಬಂಧನವನ್ನು ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ದಿನವನ್ನು ನೂಲು ಹುಣ್ಣಿಮೆ ಎಂದೂ ಕರೆಯುತ್ತಾರೆ ಎಂದು ತಿಳಿಸಿದರು. ಭಗವಂತನ ಉಪಾಸನೆಯ ಮೂಲಕ ಮಾನಸಿಕ ಹಾಗೂ ದೈಹಿಕ ಶುದ್ಧತೆಯನ್ನು ಹೊಂದಿ ಈ ಆಚರಣೆಯನ್ನು ಕೈಗೊಳ್ಳುವ ಮಹತ್ವವನ್ನು ವಿವರಿಸಿದರು.

ಕುಟುಂಬ, ಬಳಗ ಹಾಗೂ ದೇಶದ ಬಗ್ಗೆ ನಮಗಿರುವ ಜವಾಬ್ದಾರಿಯನ್ನು ನೆನಪಿಸುವ ಸಂಕೇತವೇ ರಕ್ಷೆ ಎಂದು ತಿಳಿಸಿದ ಅವರು, “ನಾವು ರಕ್ಷಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ” ಎಂಬ ಸಂಕಲ್ಪದೊಂದಿಗೆ ರಕ್ಷೆಯನ್ನು ಧರಿಸುವ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಉಪನಯನ ಹಾಗೂ ಬ್ರಹ್ಮೋಪದೇಶದ ಮಹತ್ವವನ್ನೂ ವಿವರಿಸಿದರು.

ಶಿಕ್ಷಣದ ಅಧಿದೇವತೆಗಳ ಕುರಿತು ಮಾತನಾಡುತ್ತಾ, ಶಿವನನ್ನು ದಕ್ಷಿಣಾಮೂರ್ತಿ ರೂಪದಲ್ಲಿ ವಿದ್ಯೆಯ ಅಧಿದೇವತೆಯಾಗಿ ಹಾಗೂ ವಿಷ್ಣುವಿನ ಹಯಗ್ರೀವ ರೂಪವನ್ನು ವಿದ್ಯೆಗೆ ಸಂಬಂಧಿಸಿದ ಆರಾಧ್ಯ ರೂಪವಾಗಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.

ಮಹಾಭಾರತದ ಪ್ರಸಂಗವನ್ನು ವಿವರಿಸುತ್ತಾ, ಶ್ರೀಕೃಷ್ಣನ ಬೆರಳಿಗೆ ಗಾಯವಾದ ಸಂದರ್ಭದಲ್ಲಿ ದ್ರೌಪದಿಯು ತನ್ನ ವಸ್ತ್ರದ ತುಂಡನ್ನು ಹರಿದು ಕಟ್ಟಿದ ಪ್ರಸಂಗವನ್ನು ತಿಳಿಸಿದರು. ಪ್ರತಿಯಾಗಿ ಶ್ರೀಕೃಷ್ಣನು ದ್ರೌಪದಿಗೆ ರಕ್ಷಣೆ ನೀಡಿದ ಪ್ರಸಂಗವನ್ನು ಉಲ್ಲೇಖಿಸಿ, ಪರಸ್ಪರ ರಕ್ಷಣೆ, ಪ್ರೀತಿ ಹಾಗೂ ಕರ್ತವ್ಯದ ಭಾವನೆಯೇ ರಕ್ಷಾಬಂಧನದ ಪ್ರಮುಖ ಸಂದೇಶವಾಗಿದೆ ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಬಲಿ ಚಕ್ರವರ್ತಿ ಹಾಗೂ ವಾಮನನ ಪ್ರಸಂಗವನ್ನೂ ವಿದ್ಯಾರ್ಥಿಗಳಿಗೆ ತಿಳಿಸಿದರು.

ಮುಂದುವರಿದು, ಸಂಸ್ಕೃತ ವ್ಯಾಕರಣದ ಮಹಾನ್ ವಿದ್ವಾಂಸ ಪಾಣಿನಿ ಹಾಗೂ ಅವರ ಪ್ರಸಿದ್ಧ ಅಷ್ಟಾಧ್ಯಾಯೀ ವ್ಯಾಕರಣ ಸಂಹಿತೆಯ ಕುರಿತು ಸಂಕ್ಷಿಪ್ತವಾಗಿ ಪರಿಚಯಿಸಿದರು.

ಕೊನೆಯಲ್ಲಿ, ತಾಯಿ ಸಮಾನವಾದ ನಮ್ಮ ದೇಶವನ್ನು ರಕ್ಷಿಸುತ್ತೇವೆ ಎಂಬ ಸಂಕಲ್ಪವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿ, ದೇಶಪ್ರೇಮ, ಕರ್ತವ್ಯಪ್ರಜ್ಞೆ ಹಾಗೂ ಪರಸ್ಪರ ಗೌರವದ ಮೌಲ್ಯಗಳನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

ನಂತರ ವಿದ್ಯಾರ್ಥಿಗಳು ಪರಸ್ಪರ ರಕ್ಷೆಗಳನ್ನು ಕಟ್ಟಿಕೊಂಡು, ಸಹೋದರತ್ವ ಮತ್ತು ಪ್ರೀತಿಯ ಭಾವನೆಯೊಂದಿಗೆ ರಕ್ಷಾಬಂಧನವನ್ನು ಸಂಭ್ರಮದಿಂದ ಆಚರಿಸಿದರು.

ಕೊನೆಗೆ ವಂದೇ ಮಾತರಂ ಗಾಯನದೊಂದಿಗೆ ಕಾರ್ಯಕ್ರಮವು ಭಕ್ತಿಭಾವ, ದೇಶಪ್ರೇಮ ಹಾಗೂ ಸಂತಸದ ವಾತಾವರಣದಲ್ಲಿ ಸಂಪನ್ನವಾಯಿತು.

RVK Hassan students on the move—books in hand, sports in their hearts, and the future of the nation in their sight."
21/08/2026

RVK Hassan students on the move—books in hand, sports in their hearts, and the future of the nation in their sight."

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಣೆಸ್ಥಳ: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಹಾಸನದಿನಾಂಕ: 20-08-2026, ಗುರುವ...
20/08/2026

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಣೆ

ಸ್ಥಳ: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಹಾಸನ
ದಿನಾಂಕ: 20-08-2026, ಗುರುವಾರ

ಹಾಸನದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಧಾನಾಚಾರ್ಯರಾದ ಶ್ರೀಮತಿ ಉಮಾ ಎಸ್. ಪಾಟೀಲ್ ಮಾತಾಜೀ ಹಾಗೂ ಇಂಗ್ಲೀಷ್ ಮೆಂಟರ್ ಶ್ರೀ ರೋಹಿತ್ ಗುರೂಜಿ ಅವರು ಉಪಸ್ಥಿತರಿದ್ದರು. ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾರ್ಯಕ್ರಮವು ಭಕ್ತಿಪೂರ್ವಕ ಪ್ರಾರ್ಥನೆ ಹಾಗೂ ಪುಷ್ಪಾರ್ಚನೆಯೊಂದಿಗೆ ಆರಂಭವಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಕು. ಅನನ್ಯ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಅತಿಥಿಗಳು ತಾಯಿ ಮಹಾಲಕ್ಷ್ಮಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ದೈವಿಕ ಮೆರುಗು ನೀಡಿದರು. ನಂತರ ಸಂಗೀತ ಶಿಕ್ಷಕರಾದ ಶ್ರೀ ಹರೀಶ್ ಗುರೂಜಿ ಅವರು ಮಹಾಲಕ್ಷ್ಮಿ ತಾಯಿಯ ಕುರಿತಾದ ಭಕ್ತಿಗೀತೆಯನ್ನು ಭಾವಪೂರ್ಣವಾಗಿ ಅರ್ಪಿಸಿದರು. ಶಾಲೆಯ ಎಲ್ಲಾ ಮಾತಾಜೀಯವರು ಮಹಾಲಕ್ಷ್ಮಿ ತಾಯಿಗೆ ಪೂಜೆಯನ್ನು ನೆರವೇರಿಸಿದರು.

ನಂತರ ಚಿ. ವೇದಾಂತ್ ಅವರು ವರಮಹಾಲಕ್ಷ್ಮಿ ಹಬ್ಬದ ಮಹತ್ವವನ್ನು ಸುಂದರವಾಗಿ ವಿವರಿಸಿದರು. ವಿದ್ಯಾರ್ಥಿಗಳು ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಎಂಬ ಭಕ್ತಿಗೀತೆಯನ್ನು ಸಾಮೂಹಿಕವಾಗಿ ಹಾಡಿ ಭಕ್ತಿಭಾವವನ್ನು ಮೂಡಿಸಿದರು. ಬಳಿಕ 5ನೇ ತರಗತಿ ‘ಎ’ ವಿಭಾಗದ ವಿದ್ಯಾರ್ಥಿಗಳು ‘ಮಹಾಲಕ್ಷ್ಮಿ ನಮೋಸ್ತುತೇ’ ಎಂಬ ಭಕ್ತಿಗೀತೆಗೆ ಸಾಮೂಹಿಕ ನೃತ್ಯ ಪ್ರದರ್ಶನ ನೀಡಿ ಎಲ್ಲರ ಮನಸೂರೆಗೊಂಡರು.

ನಂತರ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಗಗನ ಮಾತಾಜೀ ಅವರು ವರಮಹಾಲಕ್ಷ್ಮಿ ಹಬ್ಬದ ಪೌರಾಣಿಕ ಹಿನ್ನೆಲೆ ಹಾಗೂ ವರಮಹಾಲಕ್ಷ್ಮಿ ವ್ರತಾಚರಣೆಯ ಮಹತ್ವವನ್ನು ವಿವರಿಸಿದರು. ಶ್ರೀ ರೋಹಿತ್ ಗುರೂಜಿ ಅವರು ತಮ್ಮ ಸಂದೇಶದಲ್ಲಿ, ವರಮಹಾಲಕ್ಷ್ಮಿ ಹಬ್ಬವು ಭಕ್ತಿ, ಶ್ರದ್ಧೆ ಮತ್ತು ಸತ್ಕಾರ್ಯಗಳ ಮೂಲಕ ದೇವರನ್ನು ಸೇರುವ ಮಾರ್ಗವನ್ನು ತೋರಿಸುತ್ತದೆ ಎಂದು ತಿಳಿಸಿದರು.

ಕೊನೆಯಲ್ಲಿ ನೆರೆದಿದ್ದ ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಲಾಯಿತು. ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮವು ಭಕ್ತಿಪೂರ್ವಕವಾಗಿ ಹಾಗೂ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.

ವರಮಹಾಲಕ್ಷ್ಮಿ ಹಬ್ಬದ ಆಚರಣೆಯು ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ, ಭಕ್ತಿ ಮತ್ತು ಮೌಲ್ಯಗಳ ಬಗ್ಗೆ ಅರಿವು ಹಾಗೂ ಗೌರವವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು.

ರಾಷ್ಟ್ರೋತ್ಥಾನ ಶಾಲೆಯಲ್ಲಿ ಸಂಭ್ರಮದ ೮೦ನೇ ಸ್ವಾತಂತ್ರ್ಯೋತ್ಸವ ಆಚರಣೆಹಾಸನ, ಆಗಸ್ಟ್ ೧೫: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಹಾಸನದಲ್ಲಿ ೮೦ನೇ ...
19/08/2026

ರಾಷ್ಟ್ರೋತ್ಥಾನ ಶಾಲೆಯಲ್ಲಿ ಸಂಭ್ರಮದ ೮೦ನೇ ಸ್ವಾತಂತ್ರ್ಯೋತ್ಸವ ಆಚರಣೆ

ಹಾಸನ, ಆಗಸ್ಟ್ ೧೫: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಹಾಸನದಲ್ಲಿ ೮೦ನೇ ಸ್ವಾತಂತ್ರ್ಯೋತ್ಸವವನ್ನು ಶಾಲಾ ಆವರಣದಲ್ಲಿ ಶನಿವಾರ ಬೆಳಗ್ಗೆ ೯:೧೫ಕ್ಕೆ ದೇಶಭಕ್ತಿ ಹಾಗೂ ಸಂಭ್ರಮದ ವಾತಾವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೆಎಸ್‌ಆರ್‌ಪಿ, ಹಾಸನದ ಡೆಪ್ಯುಟಿ ಕಮಾಂಡೆಂಟ್ ಶ್ರೀ ವೀರೇಂದ್ರ ನಾಯಕ್ ಎನ್. ಅವರು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲನ ಸಮಿತಿಯ ಸದಸ್ಯರಾದ ಡಾ. ದೀಪಿಕಾ ಮಾತಾಜೀ ಅವರು ವಹಿಸಿದ್ದರು. ಪ್ರಧಾನಾಚಾರ್ಯರಾದ ಶ್ರೀಮತಿ ಉಮಾ ಎಸ್. ಪಾಟೀಲ್ ಮಾತಾಜೀ, ಶಾಲಾ ಸಂಚಾಲನ ಸಮಿತಿಯ ಸದಸ್ಯರಾದ ಶ್ರೀ ಭಾನು ಚಿದಾನಂದ ಮಾತಾಜೀ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವು ಮುಖ್ಯ ಅತಿಥಿಗಳಿಂದ ಭಾರತ ಭಾರತೀ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಹಾಗೂ ಭಕ್ತಿಪೂರ್ವಕ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಬಳಿಕ ಅತಿಥಿಗಳನ್ನು ಗೌರವಾದರಗಳೊಂದಿಗೆ ಕಾರ್ಯಕ್ರಮದ ಆವರಣಕ್ಕೆ ಕರೆತರಲಾಯಿತು. ವಿದ್ಯಾರ್ಥಿಗಳಿಂದ ‘ವಂದೇ ಮಾತರಂ’ ಗಾಯನದೊಂದಿಗೆ ಸ್ವಾತಂತ್ರ್ಯೋತ್ಸವದ ಅಧಿಕೃತ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ಶಾಲೆಯ ನಾಲ್ಕು ವಾಹಿನಿಗಳಾದ ‘ಅಭಯ, ಅಜೇಯ, ಅತುಲ ಮತ್ತು ಅಚಲ’ ತಂಡಗಳನ್ನು ಮುಖ್ಯ ಅತಿಥಿಗಳು ಪರಿವೀಕ್ಷಿಸಿದರು. ಈ ಸಂದರ್ಭದಲ್ಲಿ ನಾಲ್ಕು ವಾಹಿನಿಗಳ ವಿದ್ಯಾರ್ಥಿಗಳು ಅತಿಥಿಗಳಿಗೆ ಗೌರವ ಸಮರ್ಪಿಸಿದರು. ನಂತರ ಮುಖ್ಯ ಅತಿಥಿಗಳಾದ ಶ್ರೀ ವೀರೇಂದ್ರ ನಾಯಕ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಧ್ವಜವಂದನೆಯ ಬಳಿಕ ನಾಲ್ಕು ವಾಹಿನಿಗಳ ವಿದ್ಯಾರ್ಥಿಗಳು ಶಿಸ್ತುಬದ್ಧ ಮಾರ್ಚ್‌ಫಾಸ್ಟ್‌ ಮೂಲಕ ಮುಖ್ಯ ಅತಿಥಿಗಳಿಗೆ ಗೌರವ ಸಲ್ಲಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಕು. ಅನ್ವಿತ ರಂಗನಾಥ್ ಅಚ್ಚುಕಟ್ಟಾಗಿ ನಿರ್ವಹಿಸಿದರು. ಕು. ಸನ್ನಿಧಿ ಸ್ವಾಗತ ಭಾಷಣದ ಮೂಲಕ ಗಣ್ಯರನ್ನು, ಪೋಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ದೇಶಭಕ್ತಿಯ ಭಾವನೆಯೊಂದಿಗೆ ಸ್ವಾಗತಿಸಿದರು. ಕು. ಧೃವ್ ಸ್ವಾತಂತ್ರ್ಯೋತ್ಸವದ ಮಹತ್ವವನ್ನು ವಿವರಿಸಿದರು.

ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ದೇಶಭಕ್ತಿ ಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಡಂಬಲ್ಸ್ ಪ್ರದರ್ಶನ, ಲೆಜಿಮ್ಸ್ ಪ್ರದರ್ಶನ ಹಾಗೂ ಸಾಮೂಹಿಕ ದೇಶಭಕ್ತಿ ಗೀತೆಗಳ ಗಾಯನ ಗಮನ ಸೆಳೆದವು. ಒಂದನೇ ಮತ್ತು ಎರಡನೇ ತರಗತಿಯ ಪುಟಾಣಿ ವಿದ್ಯಾರ್ಥಿಗಳು ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ದೇಶಭಕ್ತರ ವೇಷಭೂಷಣ ಧರಿಸಿ, ಅವರ ಘೋಷವಾಕ್ಯಗಳನ್ನು ದೇಶಭಕ್ತಿ ಮತ್ತು ಮುಗ್ಧತೆಯಿಂದ ಪ್ರದರ್ಶಿಸಿ ನೆರೆದವರ ಮನಸೂರೆಗೊಂಡರು. ನಾಲ್ಕನೇ ತರಗತಿಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗೆ ಸಾಮೂಹಿಕ ನೃತ್ಯ ಪ್ರದರ್ಶನ ನೀಡಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು.

ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ವೀರೇಂದ್ರ ನಾಯಕ್ ಎನ್. ಅವರು ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಮಂಗಲ್ ಪಾಂಡೆ, ಭಗತ್ ಸಿಂಗ್ ಸೇರಿದಂತೆ ಅನೇಕ ವೀರರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅವರ ತ್ಯಾಗ, ದೇಶಪ್ರೇಮ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಭಾರತದ ಪ್ರತಿಯೊಂದು ಜಾಗವೂ ನಮ್ಮದೇ ಎಂಬ ಹೆಮ್ಮೆಯ ಭಾವನೆ ಬೆಳೆಸಿಕೊಳ್ಳಬೇಕು ಹಾಗೂ ಭಾರತದ ಶ್ರೀಮಂತ ಸಂಸ್ಕೃತಿಗೆ ಯಾವುದೇ ಧಕ್ಕೆ ಬಾರದಂತೆ ಸಂರಕ್ಷಿಸುವ ಸಂಕಲ್ಪವನ್ನು ಎಲ್ಲರೂ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ದೀಪಿಕಾ ಮಾತಾಜೀ ಅವರು ಮಾತನಾಡಿ, ದೇಶಭಕ್ತಿ, ನಾಗರಿಕ ಶಿಷ್ಟಾಚಾರ ಮತ್ತು ಅಖಂಡ ಭಾರತದ ಪರಿಕಲ್ಪನೆಯ ಕುರಿತು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮಾರ್ಗದರ್ಶನ ನೀಡಿದರು. ದೇಶದ ಪ್ರಗತಿ ಮತ್ತು ಸಾಮರಸ್ಯವನ್ನು ಕಾಪಾಡುವಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು.

ಕೊನೆಯಲ್ಲಿ ಕು. ಯುಕ್ತ ವಂದನಾರ್ಪಣೆ ಸಲ್ಲಿಸಿದರು. ಮುಖ್ಯ ಅತಿಥಿಗಳಿಗೆ ಗೌರವಾದರಗಳನ್ನು ಸಲ್ಲಿಸಿ, ನೆನಪಿನ ಕಾಣಿಕೆಯನ್ನು ಸಮರ್ಪಿಸಿ ಕೃತಜ್ಞತೆ ಅರ್ಪಿಸಲಾಯಿತು. ದೇಶಭಕ್ತಿಯ ಘೋಷಣೆಗಳೊಂದಿಗೆ ಕಾರ್ಯಕ್ರಮವು ಅರ್ಥಪೂರ್ಣವಾಗಿ ಸಂಪನ್ನವಾಯಿತು.

“ಭಾರತ್ ಮಾತಾಕೀ ಜೈ!”

KALA KUTEERA -2
13/08/2026

KALA KUTEERA -2

CELEBRATION OF KALA KUTEERA Kala Kuteera was celebrated with great enthusiasm at Rashtrotthana Vidya Kendra, Hassan – Go...
13/08/2026

CELEBRATION OF KALA KUTEERA

Kala Kuteera was celebrated with great enthusiasm at Rashtrotthana Vidya Kendra, Hassan – Gokulam, on 13th August 2026 at the Auditorium. The programme began with Pushparchane, followed by an inspiring Invocation Song. The Welcome Speech warmly welcomed all the dignitaries, teachers, parents and students. The programme was formally inaugurated with great joy and enthusiasm. The significance of Kala Kuteera was explained by a student and teacher, highlighting the importance of art, culture and creativity in the holistic development of children. Pradhanacharya Smt.Uma S Patil Mathaj addressed the gathering and shared valuable thoughts with the students. Smt.Yashoda ji Speech added inspiration and significance to the occasion.

The cultural programme began with a beautiful dance performance by Pre-KG students. Two Pre-KG students presented an entertaining mono act, which was enjoyed by everyone. A Shloka recitation by a Pre-KG student added a spiritual touch to the programme. The folk dance showcased our rich cultural heritage. The LKG students presented a melodious song, followed by a graceful Bharatanatyam performance by LKG and UKG students. Another song by LKG students added more joy to the celebration. The UKG students presented a meaningful Shloka, followed by an engaging skit. The cultural programme concluded with an energetic dance performance by LKG students.

The Vote of Thanks was delivered with gratitude to all those who contributed to the success of the programme. After the programme, the students and staff enjoyed a snacks break. A special performance involving colouring, drawing and clay modelling activities provided an opportunity for children to express their creativity. The celebration also included individual and group classroom activities, encouraging teamwork, imagination and active participation. Overall, Kala Kuteera was an enriching and joyful programme that provided children with opportunities to explore their artistic talents and appreciate Indian culture and creativity. The programme was successfully conducted with active participation and enthusiasm from the students and teachers.

ಡಾ. ವಿಕ್ರಮ್ ಸಾರಾಭಾಯ್ ಹಾಗೂ ಡಾ. ಎಸ್. ಆರ್. ರಂಗನಾಥನ್ ಜಯಂತಿ ಆಚರಣೆಸ್ಥಳ: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಹಾಸನದಿನಾಂಕ: 12-08-2026, ಬ...
12/08/2026

ಡಾ. ವಿಕ್ರಮ್ ಸಾರಾಭಾಯ್ ಹಾಗೂ ಡಾ. ಎಸ್. ಆರ್. ರಂಗನಾಥನ್ ಜಯಂತಿ ಆಚರಣೆ

ಸ್ಥಳ: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಹಾಸನ
ದಿನಾಂಕ: 12-08-2026, ಬುಧವಾರ

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಹಾಸನದಲ್ಲಿ ಡಾ. ವಿಕ್ರಮ್ ಸಾರಾಭಾಯ್ ಹಾಗೂ ಡಾ. ಎಸ್. ಆರ್. ರಂಗನಾಥನ್ ಅವರ ಜಯಂತಿಯನ್ನು(ರಾಷ್ಟ್ರೀಯ ಗ್ರಂಥಾಲಯ ದಿನ) ಅರ್ಥಪೂರ್ಣವಾಗಿ ಆಚರಿಸಲಾಯಿತು. ಭಕ್ತಿಯ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಾಲೆಯ ಪ್ರಧಾನಾಚಾರ್ಯರಾದ ಶ್ರೀಮತಿ ಉಮಾ ಎಸ್. ಪಾಟೀಲ್ ಮಾತಾಜೀ ಹಾಗೂ ಶ್ರೀಮತಿ ಯಶೋಧ ಷಣ್ಮುಗಮ್ ಮಾತಾಜೀ, ಅಕಾಡೆಮಿಕ್ ಪ್ರಮುಖ್, ಸೌತ್ ಕ್ಲಸ್ಟರ್, ಕರ್ನಾಟಕ ಅವರು ಗಣ್ಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ನಿರೂಪಣೆಯನ್ನು ಕು. ಭಕ್ತಿ (5ನೇ ಬಿ) ನಡೆಸಿದರು. ಕು. ಸಾನಿಧ್ಯ ಅವರು ಡಾ. ವಿಕ್ರಮ್ ಸಾರಾಭಾಯ್ ಅವರ ಜನನ, ಜೀವನ ಹಾಗೂ ಸಾಧನೆಗಳ ಕುರಿತು ಪರಿಚಯ ನೀಡಿದರು. ವಿಜ್ಞಾನ ಶಿಕ್ಷಕರಾದ ಶ್ರೀ ಎಸ್. ಜಿ. ಪೃಥ್ವಿಕುಮಾರ್ ಗುರೂಜಿಯವರು PPT ಮೂಲಕ ಸಾರಾಭಾಯ್ ಅವರ ವೈಜ್ಞಾನಿಕ ಸಾಧನೆಗಳು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ವಿವರಿಸಿದರು.

ಕು. ಆರಾಧ್ಯ ಟಿ. (8ನೇ ಎ) ಅವರು ರಾಷ್ಟ್ರೀಯ ಗ್ರಂಥಾಲಯ ದಿನದ ಮಹತ್ವ ಹಾಗೂ ಡಾ. ಎಸ್. ಆರ್. ರಂಗನಾಥನ್ ಅವರ ಜೀವನ ಮತ್ತು ಗ್ರಂಥಾಲಯ ಕ್ಷೇತ್ರದ ಕೊಡುಗೆಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಧಾನಾಚಾರ್ಯರಾದ ಶ್ರೀಮತಿ ಉಮಾ ಎಸ್ ಪಾಟೀಲ್ ಮಾತಾಜಿ, ಶ್ರೀಮತಿ ಯಶೋಧ ಷಣ್ಮುಗಮ್ ಮಾತಾಜೀ, ಅಕಾಡೆಮಿಕ್ ಪ್ರಮುಖ್,ಸೌತ್ ಕ್ಲಸ್ಟರ್. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ವಂದೇ ಮಾತರಂ ಹಾಡುವುದರ ಮೂಲಕ ಯಶಸ್ವಿಯಾಗಿ ಸಂಪನ್ನವಾಯಿತು.

FEST - DAY 2FIELD TRIP TO ALL THE STUDENTS RELATED TO THEIR DEPARTMENT.
07/08/2026

FEST - DAY 2

FIELD TRIP TO ALL THE STUDENTS RELATED TO THEIR DEPARTMENT.

REPORT BY: RASHTROTTHANA VIDYA KENDRA, HASSANREPORT TOPIC: First Day of the Students' FestThe first day of the Students'...
07/08/2026

REPORT BY: RASHTROTTHANA VIDYA KENDRA, HASSAN
REPORT TOPIC: First Day of the Students' Fest

The first day of the Students' Fest was conducted with great enthusiasm and active participation from students and teachers. The programme commenced with the inauguration ceremony from 9:00 a.m. to 10:00 a.m.

The fest was inaugurated by Shri Sathyanarayana Guruji, retired Social Science Teacher, who addressed the gathering and inspired the students to make the best use of the learning opportunities provided through the fest. The programme was graced by Shri K. V. Bhanu Chidananda, Steering Committee Member, Shri R. V. K., and our respected Pradhanacharya, Smt. Uma S. Patil Mataji. Their presence added dignity and encouragement to the event.

From 10:00 a.m. onwards, various fests were conducted simultaneously at different venues. The major fests included Anveshana, Ganita, English, Kannada, Hindi, Samskrutha, Adhyatma, and Kalothsava. Eminent and experienced resource persons led the sessions in their respective domains.
Each fest featured unique and engaging activities designed to enhance students' knowledge, creativity, communication skills, and critical thinking. The sessions were interactive and provided opportunities for students to learn through participation, discussion, exploration, and hands-on experiences.

The students enthusiastically took part in the various activities and benefited greatly from the expertise of the resource persons. The sessions created a vibrant learning environment and encouraged students to think creatively and broaden their perspectives.

Overall, the first day of the Students' Fest was innovative, informative, and highly useful for the students. It served as a wonderful platform for experiential learning and skill development, making the day both memorable and enriching for all participants.

Address

Hassan

Alerts

Be the first to know and let us send you an email when Rashtrotthana Vidya Kendra Hassan posts news and promotions. Your email address will not be used for any other purpose, and you can unsubscribe at any time.

Shortcuts

Share