Madhava Peraje on Pampa

Madhava Peraje on Pampa This is a channel about the Kannada poet Pampa. The Pampa was known as the earliest poet (adikavi)

04/12/2025

ಅನೇಕಾಂತ

ಸತ್ಯ, ಸಂವಾದ ಮತ್ತು ಸಂಶೋಧನೆ

ಕನ್ನಡದಲ್ಲಿ ಉನ್ನತ ಮಟ್ಟದ ಸಂಶೋಧನೆ ಮತ್ತು ಆಳವಾದ ಅಧ್ಯಯನದಂತಹ ಶೈಕ್ಷಣಿಕ ಚಟುವಟಿಕೆಗಳಿಗೆ ಒಂದು ವೇದಿಕೆಯನ್ನು ಕಲ್ಪಿಸುವ ಪ್ರಯತ್ನವಾಗಿ ಸಮಾನ ಮನಸ್ಕರು ಪರಸ್ಪರ ಸೇರಿ 'ಅನೇಕಾಂತ' ಎನ್ನುವ ಅರ್ಧವಾರ್ಷಿಕ ವಿದ್ವತ್ ಪತ್ರಿಕೆಯನ್ನು ( ಇ - ಜರ್ನಲ್) ರೂಪಿಸುವ ಪ್ರಯತ್ನದಲ್ಲಿ ತೊಡಗಿರುತ್ತೇವೆ. ಈ ಪ್ರಯತ್ನದಲ್ಲಿ ನಾಡಿನ ಚಿಂತಕರು ಮತ್ತು ಯವ ಬರಹಗಾರರು ನಮ್ಮೊಂದಿಗಿರುತ್ತಾರೆಂಬ ಆಶಯ ನಮ್ಮದು.

ತಮ್ಮೆಲ್ಲರ ಪ್ರೋತ್ಸಾಹದ (ಮುಖ್ಯವಾಗಿ ಸಂಶೋಧನಾ ತ್ಮಕ ಲೇಖನಗಳನ್ನು ನೀಡುವುದರ ಮೂಲಕ) ನೆರವಿನಿಂದ ಮುಂದಿನ ವರ್ಷ ಅಂದರೆ ಜನವರಿ ೨೦೨೬ ರಲ್ಲಿ ಮೊದಲ ಸಂಚಿಕೆಯನ್ನು ಪ್ರಕಟಿಸುವ ಸಿದ್ಧತೆ ನಡೆಸಲಾಗಿದೆ.

ನಮ್ಮ ಪತ್ರಿಕೆಯ ಹೆಸರನ್ನು ಜೈನ ಚಿಂತನೆಯಿಂದ ಸ್ಪೂರ್ತಿಪಡೆದು "ಅನೇಕಾಂತ" ವೆಂದು ಇಡಲಾಗಿದೆ. ಈ ಪರಿಕಲ್ಪನೆಯು ಸತ್ಯವನ್ನು ಅನೇಕ ದೃಷ್ಟಿಕೋನಗಳಿಂದ ಅರಿಯಬೇಕೆಂದು ಸಾರುತ್ತದೆ. ಸಾಹಿತ್ಯ, ವಿಜ್ಞಾನ ಮತ್ತು ಮಾನವಿಕ ಕ್ಷೇತ್ರಗಳನ್ನು ಒಳಗೊಂಡು ಬಹುತ್ವವನ್ನು ಬೆಂಬಲಿಸುವ ನಮ್ಮ ಪತ್ರಿಕೆಯ ಉದ್ದೇಶಕ್ಕೆ ಈ ಹೆಸರು ಪೂರಕವಾಗಿದೆ. ಇದು ವಿಭಿನ್ನ ಅಭಿಪ್ರಾಯಗಳನ್ನು ಗೌರವಿಸುವ ಸಂವಾದ ಮತ್ತು ಸಹಿಷ್ಣುತೆಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ, ನಿರಂತರ ಪರಿಶೀಲನೆ ಮತ್ತು ಚಿಂತನೆಯ ಮೂಲಕ ಗಂಭೀರ ಸಂಶೋಧನೆಗೆ ಉತ್ತೇಜನ ನೀಡುವ ತತ್ತ್ವವಾಗಿರುವುದರಿಂದ, ನಮ್ಮ ಪತ್ರಿಕೆಯ ಶೈಕ್ಷಣಿಕ ಗಂಭೀರತೆ ಮತ್ತು ನವೀನತೆಯನ್ನು ಬಲಪಡಿಸುವ ಉದ್ದೇಶವನ್ನು ಸೂಚಿಸುತ್ತದೆ. ಹೀಗಾಗಿ "ಅನೇಕಾಂತ" ಎಂಬ ಹೆಸರು ನಮ್ಮ ಪತ್ರಿಕೆಯ ಚಿಂತನೆಗೆ ಅಧಾರವಾಗಿಯೂ, ಅದರ ಬಹುತ್ವ, ಸಂವಾದ ಮತ್ತು ಸಂಶೋಧನಾ ಮನೋಭಾವವನ್ನು ಪ್ರತಿನಿಧಿಸುವೊಂದರೊಂದಿಗೆ ಸಮರ್ಥನೆಯನ್ನೂ ಮಾಡುತ್ತದೆ.

ಪತ್ರಿಕೆಯ ಉದ್ದೇಶ

1. ಅಂತರಶಾಸ್ತ್ರೀಯ ಸಂವಾದ ವೇದಿಕೆಯಾಗಿ ರೂಪಿಸುವುದು: ಸಾಹಿತ್ಯ, ವಿಜ್ಞಾನ ಮತ್ತು ಮಾನವಿಕ ಕ್ಷೇತ್ರಗಳನ್ನು ಒಳಗೊಂಡಂತೆ ವಿವಿಧ ಜ್ಞಾನ ಕ್ಷೇತ್ರಗಳನ್ನು ಒಳಗೊಂಡು ಬಹುತ್ವವನ್ನು ಬೆಂಬಲಿಸುವ ವೇದಿಕೆಯಾಗುವುದು, ಕನ್ನಡದ ಜೊತೆಗೆ ಬೇರೆ ಭಾಷೆಗಳ ಸಂಶೋಧನೆಗೂ ಅವಕಾಶ ನೀಡಿ, ಬಹುಭಾಷಾ ಸಂವಾದವನ್ನು ಬೆಂಬಲಿಸುವುದು. ಪ್ರಕಟಿತ ಲೇಖನಗಳ ಬಗ್ಗೆ ಚರ್ಚೆ, ವಿಮರ್ಶೆ ಮತ್ತು ಪ್ರತಿಕ್ರಿಯೆಗಳನ್ನು ಉತ್ತೇಜಿಸಿ, ಜ್ಞಾನವನ್ನು ವಿಸ್ತರಿಸುವುದು.

2. ಉತ್ತಮ ಸಂಶೋಧನೆಗೆ ಉತ್ತೇಜನ – ನಿಖರತೆ, ತರ್ಕಬದ್ಧತೆ ಮತ್ತು ಶೈಕ್ಷಣಿಕ ಶಿಸ್ತಿನೊಂದಿಗೆ ಸಂಶೋಧನಾ ಲೇಖನಗಳನ್ನು ಪ್ರಕಟಿಸುವುದು. ಇದರ ಮೂಲಕ ಹೊಸ ಪರಿಕಲ್ಪನೆಗಳು, ಮತ್ತು ವಿಮರ್ಶಾತ್ಮಕ ಚಿಂತನೆಗಳನ್ನು ಉತ್ತೇಜಿಸುವುದುಹೊಸದಾಗಿ ಬರೆಯುತ್ತಿರುವ ವಿದ್ಯಾರ್ಥಿಗಳು ಮತ್ತು ಯುವ ಸಂಶೋಧಕರಿಗೆ ತಮ್ಮ ಬರಹಗಳನ್ನು ಪ್ರಕಟಿಸಲು ಅವಕಾಶ ನೀಡುವುದು.

3. ಭಿನ್ನ ದೃಷ್ಟಿಕೋನಗಳಿಗೆ ಅವಕಾಶ - ವಿಭಿನ್ನ ಚಿಂತನೆಗಳು, ಅಭಿಪ್ರಾಯಗಳು ಮತ್ತು ಸೃಜನಾತ್ಮಕ ಅಭಿವ್ಯಕ್ತಿಗಳಿಗೆ ವೇದಿಕೆಯನ್ನು ಒದಗಿಸುವುದು.

ಪ್ರಧಾನ ಸಂಪಾದಕರು
ಡಾ. ಮಾಧವ ಪೆರಾಜೆಯವರು

ಸಂಪಾದಕ ಮಂಡಲಿ
ಡಾ. ಹೆಚ್. ಎಸ್. ರಾಘವೇಂದ್ರ ರಾವ್
ಡಾ. ಬಸವರಾಜ ಕಲ್ಲುಡಿ,
ಡಾ. ರೇಖಾದತ್ತ,
ಡಾ. ಅಶ್ವಿನ್ ಕುಮಾರ್,
ಡಾ. ಸಿ. ಎಸ್ ಮಹೇಶ್ ಕುಮಾರ್,
ಡಾ. ಸಿರಾಜ್ ಅಹಮ್ಮದ್

22/11/2025

ಯಕ್ಷಗಾನ ಕಲಾವಿದರಲ್ಲಿ ಸಲಿಂಗಕಾಮವಿದೆ ಎನ್ನುವ ವಿಷಯ ಈಗ ವಿವಾದಾಸ್ಪದವಾಗಿದೆ. ತಮ್ಮ ಸ್ನೇಹಿತರಲ್ಲಿ ಕೆಲವರು ಖಾಸಗಿಯಾಗಿ ಹೇಳಿಕೊಂಡಿದ್ದರು ಮತ್ತು ಅದು ಸಾರ್ವಜನಿಕ ವೇದಿಕೆಯಲ್ಹಿ ಪ್ರಸ್ತಾಪಿಸಲ್ಪಟ್ಟ ಕಾರಣಕ್ಕೆ ಈಗ ಬಹಿರಂಗವಾಯಿತು ಈ ಚರ್ಚೆಯ ಹಿನ್ನೆಲೆ. ಯಕ್ಷಗಾನ ವಿಷಯವಾಗಿ ಪಿಹೆಚ್. ಡಿ ಮಾಡಿರುವ, ಯಕ್ಸಗಾನ ಪ್ರಸಂಗ ಕರ್ತನೂ ಆಗಿರುವ ನನಗೆ ಈ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿವೆ.
ಯಕ್ಷಗಾನ ಕಲೆಯು ಕರಾವಳಿಯ ಒಂದು ಸಾಂಪ್ರದಾಯಿಕ ಕಲೆಯೇ. ಅದು ಪೂರ್ಣಪ್ರಮಾಣದಲ್ಲಿ ಮನೋರಂಜನ ಕಲೆಯೆಂದು ಹೇಳುವಂತಿಲ್ಲ. ಅದು ಕೇವಲ ವಾದವಷ್ಟೇ ಆಗುತ್ತದೆ. ಏಕೆಂದರೆ ಹರಕೆಯ ಮೇಳಗಳು ಅನೇಕ ಇವೆ, ಉತ್ತರ ಕರ್ನಾಟಕದ ಸಣ್ಣಾಟ ದೊಡ್ಡಾಟಗಳಲ್ಲಿ ಹೀಗಿಲ್ಲ. ಅದು ಕರಾವಳಿಯ ಯಕ್ಷಗಾನಕ್ಕೆ ಮಾತ್ರ ಸೀಮಿತವಾದುದು. ಆ ಕಾರಣಕ್ಕೆ ದೊಡ್ಡಾಟ ಸಣ್ಣಾಟಕ್ಕೆ ಹೋಲಿಸಿ ಕರಾವಳಿಯ ಯಕ್ಷಗಾನವೂ ಮನೋರಂಜನ ಕಲೆ ಎಂದು ಹೇಳುವಂತಿಲ್ಲ,ಈ ಧಾರ್ಮಿಕ ಚೌಕಟ್ಟಿನಲ್ಲಿಯೇ ಯಕ್ಷಗಾನಕ್ಕೆ ಜೀವಂತಿಕೆ ಬರುವುದು ಮತ್ತು ಇರುವುದು. ಹಾಗೆಂದು ಧರ್ಮ ಎಂದರೆ ಮೂಲಭೂತವಾದ ಎಂದು ಅರ್ಧವಲ್ಲ. ಧರ್ಮ ಎನ್ನುವುದನ್ನು ಸಾರ್ವತ್ರಿಕ ಅರ್ಥದಲ್ಲಿ ಹೇಳುವುದಾದರೆ ಕಲಾಧರ್ಮ ಎನ್ನುವ ಅರ್ಥದಲ್ಲಿ- ಕರಾವಳಿಯ ಯಕ್ಸಗಾನವು ಧಾರ್ಮಿಕವಾದ ಕಲೆಯೇ ಆಗಿದೆ. ಈ ಯಕ್ಷಗಾನದಲ್ಲಿ ವಾಲಿಯು ವಾದ ಏನೇ ಮಂಡಿಸಿದರೂ ತಾನು ಮಾಡಿದ್ದು ತಪ್ಪು ಎಂದು ರಾಮನ ಮುಂದೆ ಮಂಡಿಯೂರಲೇ ಬೇಕು: ದುರ್ಯೋಧನನು ತಾನು ಅಧರ್ಮಿಯೆಂದೇ ತನ್ನನ್ನು project ಮಾಡಲೇ ಬೇಕು: ಆತ ಧರ್ಮರಾಯನಿಗೆ ಸರಿಸಮಾನನಲ್ಲ. ಹಾಗಾದುರಿಂದ ಬಯಲಾಟದಲ್ಲಿ ಕುಣಿಯಲಿಕ್ಕೆ ಬಾರದವನು ಧರ್ಮರಾಯನಿಗುತ್ತನೆ ಎನ್ನುವ ವೈಯಕ್ತಿಕ ಉದಾಹರಣೆ ಯಕ್ಷಗಾನವು ಮನೋರಂಜನಾ ಕಲೆ ಎನ್ನುವುದಕ್ಕೆ ಪುರಾವೆ ಆಗಲಾರದು. ರಾಜಸೂಯಾಧ್ವರ ಯಕ್ಷಗಾನ ಪ್ರಸಂಗ ತಾಳಮದ್ದಳೆಯಾದಾಗ ಧರ್ಮರಾಯನಿಗೆ ವೇಷವೇ ಇರುವುದಿಲ್ಲ, ಹಾಗೆಂದು ತಾಳಮದ್ದಳೆಯಲ್ಲಿ ಆ ಪಾತ್ರ ಮಾಡುವ ವ್ಯಕ್ತಿ ಪ್ರಬಲ ವಾಗ್ಮೀಯೇ ಆಗಿರಬೇಕು. ಹಾಗಾಗಿ ಯಕ್ಷಗಾನದ ಬಯಲಾಟದ ಸ್ವರೂಪವೇ ಬೇರೆ ತಾಳಮದ್ದಳೆಯ ರೂಫವೇ ಬೇರೆ. ಒಂದು ಕಡೆ ತುಸು ಕೊರತೆ ಬಂದರೆ ಇನ್ನೊಂದು ಕಡೆ ಅದು ಮೂಲ ರೂಫವನ್ನೇ ಪಡೆಯುತ್ತದೆ. ಹಾಗೆಂದು
ಬಯಲಾಟದಲ್ಲಿಯೂ ದರ್ಮರಾಯನ ಪಾತ್ರವನ್ನು ನುರಿತ ಕಲಾವಿದರು ಮಾಡಬಾರದು ಎನ್ನುವ ನಿಯಮ ಎಲ್ಲಿದೆ? ತರ್ಕ ಯಾರ ಜತೆಗೆ ಮಾಡ ಬೇಕೋ ಅವರೊಂದಿಗೆ ಮಾಡದೇ ಈ ಸೂಕ್ಷಮವೇ ಗೊತ್ತಿಲ್ಲದವರ ಮುಂದೆ ಮಾಡಿದರೆ ಅದು ಉತ್ತರ ಪೌರುಷ ಓಲೆ ಮುಂದೆ ಎಂದಷ್ಟೇ ಆಗುತ್ತದೆ,
ಇಂತಹ ಒಂದು ಚರ್ಚೆ ಸಾರ್ವಜನಿಕವಾಗಿ ಬಂದಾಗ ಸಾಂಪ್ರದಾಯಿಕ ಹಿನ್ನಲೆಯಿಂದ ಬಂದ ಕಲಾವಿದರಿಗೆ ನೋವಾಗುತ್ತದೆ. ಮಾನಸಿಕ ಹಿಂಸೆಯೂ ಹಿಂಸೆಯೇ ಎಂದು ಮಹಾಭಾರತದಲ್ಲಿಯೂ ಇರುವಾಗ ತರ್ಕವೇ ಮುಖ್ಯವಾಗುವುದೇ? ಹಾಗಾದರೆ ಓದು ವಯಸ್ಸು ಎಲ್ಲವೂ ಪಾಂಡಿತ್ಯ ಪ್ರದರ್ಶನಕ್ಕೇ ಮೀಸಲಾಯೀತೇ? ಪೌರಾಣಿಕ ವಿಷಯ ಬಂದಾಗ ಜಗತ್ತಿನ ಯಾವ ವಿದ್ವಾಂಸನೂ ಯಕ್ಷಗಾನ ಕಲಾವಿದರಿಗೆ ವಾದ ಮತ್ವು ಪಾಂಡಿತ್ಯದಲ್ಲಿ ಸಮನಲ್ಲ. ಆದರೆ ಮರೆಯಲ್ಲಿ ನಿಂತು ಬಾಣ ಪ್ರಯೋಗ ಮಾಡಿದಾಗ ವಾಲಿಗೂ ಸಹ ದೇಹಕ್ಕೂ ಆ ಮೂಲಕ ಮನಸ್ಸಿಗೂ ನೋವಾಗುತ್ತದೆ: ತರ್ಕ ಆಮೇಲೆ - ವಾಲಿ - ಸುಗ್ರೀವರ ಕಾಳಗ ಯಕ್ಷಗಾನ ಪ್ರಸಂಗ ಅದನ್ನೇ ಹೇಳುವುದು, ಅದಕ್ಕೆ ಈರೀತಿಯ ವಿದ್ಯಯನ್ನು ಎಷ್ಟು ದಿನ ಕಲಿತೆ ಎನ್ನುವ ಪ್ರಶ್ನೆ ಅಲ್ಲಿ ಬರುತ್ತದೆ. ಯಕ್ಷಗಾನ ಮನೋರಂಜನೆಯ ಕಲೆ ಎಂದರೆ ಇದೇ ಅರ್ಥವೇ? ಅದರಿಂದ ಯಾರೂ ಏನನ್ನೂ ಕಲಿಯುವುದಕ್ಕೆ ಇಲ್ಲವೇ?
ಪ್ರಖ್ಳಾತ ಫ್ರೆಂಚ್ ವಿದ್ವಾಂಸನಷ್ಛೇ ಅಲ್ಲದೇ ಜಗತ್ತಿನ ಶ್ರೇಷ್ಟ ವಿದ್ವಾಂಸನೂ ಆದ ಮಿಶೆಲ್ ಪುಕೋ ಸಲಿಂಗ ಕಾಮಿಯಾಗಿದ್ದ.ಆದರೆ ಈ ವೈಯಕ್ತಿಕ ವಿಷಯದಿಂದ ಆತನ ವಿದ್ವತ್ ಮಾನ್ಯತೆಗೆ ಯಾವ ಕೊರತೆಯೂ ಅಗಿಲ್ಲ.ಏಕೆಂದರೆ ವಿದ್ವತ್ತಿಗೂ ವೈಯಕ್ತಿ ರೀತಿಗೂ ಸಂಬಂಧ ಕಲ್ಪಿಸುವುದರಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ.ಆ ಘನತೆಯನ್ನು ಫುಕೋ ನ ವಿಚಾರದಲ್ಲಿ ವಿದ್ವತ್ ಲೋಕ ಮೆರೆದಿದೆ. ಈಗ ಇಲ್ಲಿ ಎರಡು ವಿಷಯಗಳಿವೆ. ಮೊದಲನೆಯದಾಗಿ ಫುಕೋ ಸಲಿಂಗ ಕಾಮಿ ಎಂದು ಹೇಳುವುದರ ಮೂಲಕ ಯಾರು ಬೇಕಾದರೂ ಆತನ ಕುರಿತು ಓದದೆಯೂ ಸಾರ್ವಜನಿಕ ಚರ್ಚೆಯನ್ನು ಪ್ರವೇಶಿಸಬಹುದು. ಏಕೆಂದರೆ ವಿದ್ವತ್ ಚರ್ಚೆಯಲ್ಲಿ ಸಿಗದಷ್ಟು ಜನಪ್ರಿಯತೆ ವಿವಾದಾತ್ಮಕ ವಿಷಯಗಳ ಚರ್ಚೆಯಿಂದ ಬರುತ್ತದೆ, ಎರಡನೆಯದಾಗಿ ಇಂತಹ ವಿಷಯ ಪ್ರಸ್ತಾಪಿಸಲ್ಟಾಗ ಅದನ್ನು ನಿರಾಕರಿಸಲು ಬೇರೆಯವರಿಗೆ ಆಗುವುದೇ ಇಲ್ಲ.ಏಕೆಂದರೆ ಇದಕ್ಕೆ ಎದುರಾಳಿಯ ಹೇಳಿಕೆಯಷ್ಟೇ ಆಧಾರ ಆದುದರಿಂದ ಚರ್ಚೆಯ ಭಾರ ಆ ಕಡೆಗೇ ವಾಲುತ್ತದೆ. ಆಗ ಬಾಯೇ ಬಂಡವಾಳ ಆಗುತ್ತದೆ.
ಈಗ ಯಕ್ಷಗಾನದ ಚರ್ಚೆ ಇಲ್ಲಿಗೆ ಬಂದು ನಿಂತಿದೆ. ಯಕ್ಷಗಾನ ತಾಳಮದ್ದಳೆಯನ್ನು ವಾಕ್ಯಾರ್ಥ ಗೋಷ್ ಠಿ ಎಂದೂ ಕರೆಯಲಾಗಿದೆ. ಅದರ ಪರಿಸ್ಥಿತಿ ಇಂದು ಈ ಹಂತಕ್ಕೆ ಬಂದು ನಿಂತಿದೆ. ಈಗ ಕೇವಲ ಕ್ರಿಯೆ ಪ್ರತಿಕ್ರಿಯೆ ಅಷ್ಚೇ ಸಾಧ್ಯ.

01/03/2025

ಗೆಳೆಯರೇ , ಇದು ನನ್ನ ವೆಬ್ಸೈಟ್, ದಯವಿಟ್ಟು ಗಮನಿಸಿ ಈಗ live ಆಗಿದೆ

18/01/2025
26/12/2024

ಪದ್ಯ - ೮೧
ಭೀಷ್ಮನಿಗೆ ಸತ್ಯವತಿಯ ಬುದ್ದಿವಾದ
Follow ; Madhava Peraje on Pampa

24/12/2024

ವಚನ - ೧೮

17/12/2024

ಪದ್ಯ - ೮೦
ಪರಶುರಾಮರ ಸೋಲು

16/12/2024

ಪದ್ಯ - ೭೯
ಭೀಷ್ಮ - ಪರಶುರಾಮರ ಯುದ್ಧ

14/12/2024

ವಚನ - ೧೭
Follow : Madhava Peraje on Pampa

12/12/2024

ಪದ್ಯ - ೭೮
ಭೀಷ್ಮೆರಿಗೆ ಪರಶುರಾಮರ ಆದೇಶ

11/12/2024

ವಚನ - ೧೬

Address

Hampi University
Hampi
583239

Alerts

Be the first to know and let us send you an email when Madhava Peraje on Pampa posts news and promotions. Your email address will not be used for any other purpose, and you can unsubscribe at any time.

Contact The School

Send a message to Madhava Peraje on Pampa:

Shortcuts

Share