ಮೆಲ್ಪು ಬಲ್ಪನಳಿಗುಂ

ಮೆಲ್ಪು ಬಲ್ಪನಳಿಗುಂ Contact information, map and directions, contact form, opening hours, services, ratings, photos, videos and announcements from ಮೆಲ್ಪು ಬಲ್ಪನಳಿಗುಂ, Education Website, ಹಗರಿಬೊಮ್ಮನಹಳ್ಳಿ, Hospet.

꧁♡ ತುಂಬಿರುವ ಬಾಳ ತುಂಬಿರುವ ತನಕ ತುಂತುಂಬಿ ಕುಡಿಯಬೇಕು ♡꧂

🌱📖🌱

ನನ್ನ ಎಲ್ಲಾ ಪ್ರಿಯ ಸಹೃದಯ ಕನ್ನಡಿಗರಿಗೆ
🙏 ನಮಸ್ಕಾರಗಳು 🙏

━━━━━━━━━━━━━━━━━━━

😊 ನಾನು ನಿಮ್ಮ
✨ "ಮೆಲ್ಪು ಬಲ್ಪನಳಿಗುಂ" ✨

👉 ನಿಮಗಾಗಿ ಕನ್ನಡ ಸಾಹಿತ್ಯ ಅಧ್ಯಯನದ ಒಂದು ಸುಂದರ ಪ್ರಯತ್ನ 📚

06/08/2026

ಸಂಸ್ಕಾರ ಕಾದಂಬರಿ

06/08/2026

ಜೋಗ್ಯಾರ ಅಂಜಪ್ಪನ ಕೋಳಿ ಕಥೆ

06/08/2026

ಮಾರಿಕೊಂಡವರು

01/08/2026
01/08/2026

ನನ್ನ ಚಿಕ್ಕ ತಾಯಿ' ಎನ್ನುವುದು ಕನ್ನಡದ ಪ್ರಸಿದ್ಧ ಸಾಹಿತಿ ಪಂಜೆ ಮಂಗೇಶರಾಯರು ೧೯೦೦ ರಲ್ಲಿ ಬರೆದ ಕನ್ನಡದ ಮೊದಲ ಸಣ್ಣಕತೆ ಎಂದು ಪರಿಗಣಿಸಲ್ಪಟ್ಟಿರುವ ಪ್ರಮುಖ ಕಥೆಯಾಗಿದೆ

#ಮೆಲ್ಪುಬಲ್ಪನಳಿಗುಂ
#ಕನ್ನಡಸಾಹಿತ್ಯ

꧁♡ ತುಂಬಿರುವ ಬಾಳ ತುಂಬಿರುವ ತನಕ ತುಂತುಂಬಿ ಕುಡಿಯಬೇಕು ♡꧂

🌱📖🌱

ನನ್ನ ಎಲ್ಲಾ ಪ್ರಿಯ ಸಹೃದಯ ಕನ್ನಡಿಗರಿಗೆ
🙏 ನಮಸ್ಕಾರಗಳು 🙏

━━━━━━━━━━━━━━━━━━━

😊 ನಾನು ನಿಮ್ಮ
✨ "ಮೆಲ್ಪು ಬಲ್ಪನಳಿಗುಂ" ✨

👉 ನಿಮಗಾಗಿ ಕನ್ನಡ ಸಾಹಿತ್ಯ ಅಧ್ಯಯನದ ಒಂದು ಸುಂದರ ಪ್ರಯತ್ನ

📚 ಇಲ್ಲಿ ನಿಮಗೆ ಸಿಗುವವು:
• ಕನ್ನಡ ಸಾಹಿತ್ಯ ಚರಿತ್ರೆ
• ಕವಿಗಳು ಮತ್ತು ಅವರ ಕೃತಿಗಳು
• ಉಪಯುಕ್ತ ಹಾಗೂ ಆಸಕ್ತಿದಾಯಕ ಮಾಹಿತಿ

👉 ಕನ್ನಡದ ಮೆಲುಕು ಹಾಕೋಣ, ಸಾಹಿತ್ಯದ ಸೊಗಡು ಅನುಭವಿಸೋಣ!

🙏 ಹೆಚ್ಚಿನ ಮಾಹಿತಿಗಾಗಿ Subscribe / Follow ಮಾಡಿ 🙏

━━━━━━━━━━━━━━━━━━━

📺 YouTube Channel
https://youtube.com/channel/UCxiJIJUg8lHyfgcrcP3UrAA

📘 page
https://www.facebook.com/share/18PWRtCZzZ/

📸 Instagram Page
https://www.instagram.com/melpubalpanaligum.8118

━━━━━━━━━━━━━━━━━━━

🌱 ನಿಮ್ಮ ಬೆಂಬಲವೇ ನಮ್ಮ ಶಕ್ತಿ 🌱

ರನ್ನ ಹಳಗನ್ನಡ ಪ್ರಶಸ್ತಿ :ಈ ಪ್ರಶಸ್ತಿಯನ್ನು೧೦೧೪ ರಿಂದ ಮುಧೋಳದ ರನ್ನ ಪ್ರತಿಷ್ಠಾನದ ವತಿಯಿಂದ ನೀಡಲಾಗುವುದು.
31/07/2026

ರನ್ನ ಹಳಗನ್ನಡ ಪ್ರಶಸ್ತಿ :
ಈ ಪ್ರಶಸ್ತಿಯನ್ನು೧೦೧೪ ರಿಂದ ಮುಧೋಳದ ರನ್ನ ಪ್ರತಿಷ್ಠಾನದ ವತಿಯಿಂದ ನೀಡಲಾಗುವುದು.

31/07/2026

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಸಾಹಿತ್ಯ - ೨ |

ಕೆ.ಪಿ. ಪೂರ್ಣಚಂದ್ರ ತೇಜಸ್ವಿ (1938-2007) ಕನ್ನಡ ಸಾಹಿತ್ಯದ ಪ್ರಮುಖ ನವ್ಯ ಹಾಗೂ ಬಂಡಾಯ ಸಾಹಿತಿ, ಪರಿಸರವಾದಿ ಮತ್ತು ಚಿಂತಕರು. ರಾಷ್ಟ್ರಕವಿ ಕುವೆಂಪು ಅವರ ಪುತ್ರರಾದ ಇವರು, ಕಾದಂಬರಿ, ಕಥೆ, ವಿಜ್ಞಾನ ಸಾಹಿತ್ಯ, ಅನುವಾದಗಳ ಮೂಲಕ ಕನ್ನಡ ಸಾಹಿತ್ಯದ ಹರವನ್ನು ವಿಸ್ತರಿಸಿದರು. ಇವರ 'ಅಬಚೂರಿನ ಪೋಸ್ಟಾಫೀಸು' ಕನ್ನಡ ಸಾಹಿತ್ಯದಲ್ಲಿ ಹೊಸದೊಂದು ಮೈಲಿಗಲ್ಲಾಗಿದೆ.

ಜನನ ಮತ್ತು ವಿದ್ಯಾಭ್ಯಾಸ:
ಸೆಪ್ಟೆಂಬರ್ 8, 1938 ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ಜನಿಸಿದರು. ತಂದೆ ಕುವೆಂಪು, ತಾಯಿ ಹೇಮಾವತಿ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು.

ಸಾಹಿತ್ಯಿಕ ಶೈಲಿ ಮತ್ತು ಆಸಕ್ತಿ:
ತೇಜಸ್ವಿ ಅವರು ಕೇವಲ ಸಾಹಿತಿಯಾಗಿರದೆ, ಛಾಯಾಗ್ರಾಹಕ, ಪಕ್ಷಿ ವೀಕ್ಷಕ, ವರ್ಣಚಿತ್ರಕಾರ ಮತ್ತು ಪರಿಸರವಾದಿಯಾಗಿದ್ದರು. ಪ್ರಕೃತಿಯ ಮೇಲಿನ ಅಪಾರ ಪ್ರೀತಿಯಿಂದಾಗಿ ಮೈಸೂರು ತೊರೆದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನೆಲೆಸಿ, ಕೃಷಿಕರಾಗಿ ಜೀವನ ನಡೆಸಿದರು. ಇವರ ಬರವಣಿಗೆಯು ವೈಚಾರಿಕತೆ, ಪರಿಸರ ಕಾಳಜಿ ಹಾಗೂ ವಿಜ್ಞಾನದ ಅಂಶಗಳನ್ನು ಒಳಗೊಂಡಿರುತ್ತದೆ.

ಪ್ರಮುಖ ಕೃತಿಗಳು:

ಕಾದಂಬರಿಗಳು: ಕರ್ವಾಲೊ, ಜುಗಾರಿ ಕ್ರಾಸ್, ಚಿದಂಬರ ರಹಸ್ಯ, ಮಾಯಾಲೋಕ.

ಕಥಾ ಸಂಕಲನಗಳು: ಅಬಚೂರಿನ ಪೋಸ್ಟಾಫೀಸು, ಹುಲಿಯೂರಿನ ಸರಹದ್ದು.

ಪ್ರವಾಸ ಕಥನ/ಲೇಖನಗಳು: ಅಲೆಮಾರಿಯ ಡೈರಿ, ಪ್ರಕೃತಿ ಮತ್ತು ಪರಿಸರ.

ಅನುವಾದಗಳು: ಕೆನೆತ್ ಆಂಡರ್ಸನ್ ಅವರ ಬೇಟೆಯ ಕಥೆಗಳು, ಪಾಪಿಲ್ಲನ್.

ಪ್ರಶಸ್ತಿಗಳು:
ಇವರ ಸಾಹಿತ್ಯ ಸೇವೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ ಮತ್ತು ಅತ್ಯುತ್ತಮ ಕಥೆಗಾಗಿ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸಂದಿವೆ.

#ಮೆಲ್ಪುಬಲ್ಪನಳಿಗುಂ
#ಹೊಸಗನ್ನಡದಕವಿಗಳು
#ತೇಜಸ್ವಿ
#ಪೂರ್ಣಚಂದ್ರತೇಜಸ್ವಿ
#ಕನ್ನಡಸಾಹಿತ್ಯ


꧁♡ ತುಂಬಿರುವ ಬಾಳ ತುಂಬಿರುವ ತನಕ ತುಂತುಂಬಿ ಕುಡಿಯಬೇಕು ♡꧂

🌱📖🌱

ನನ್ನ ಎಲ್ಲಾ ಪ್ರಿಯ ಸಹೃದಯ ಕನ್ನಡಿಗರಿಗೆ
🙏 ನಮಸ್ಕಾರಗಳು 🙏

━━━━━━━━━━━━━━━━━━━

😊 ನಾನು ನಿಮ್ಮ
✨ "ಮೆಲ್ಪು ಬಲ್ಪನಳಿಗುಂ" ✨

👉 ನಿಮಗಾಗಿ ಕನ್ನಡ ಸಾಹಿತ್ಯ ಅಧ್ಯಯನದ ಒಂದು ಸುಂದರ ಪ್ರಯತ್ನ

📚 ಇಲ್ಲಿ ನಿಮಗೆ ಸಿಗುವವು:
• ಕನ್ನಡ ಸಾಹಿತ್ಯ ಚರಿತ್ರೆ
• ಕವಿಗಳು ಮತ್ತು ಅವರ ಕೃತಿಗಳು
• ಉಪಯುಕ್ತ ಹಾಗೂ ಆಸಕ್ತಿದಾಯಕ ಮಾಹಿತಿ

👉 ಕನ್ನಡದ ಮೆಲುಕು ಹಾಕೋಣ, ಸಾಹಿತ್ಯದ ಸೊಗಡು ಅನುಭವಿಸೋಣ!

🙏 ಹೆಚ್ಚಿನ ಮಾಹಿತಿಗಾಗಿ Subscribe / Follow ಮಾಡಿ 🙏

━━━━━━━━━━━━━━━━━━━

30/07/2026

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಸಾಹಿತ್ಯ - ೧ |

ಕೆ.ಪಿ. ಪೂರ್ಣಚಂದ್ರ ತೇಜಸ್ವಿ (1938-2007) ಕನ್ನಡ ಸಾಹಿತ್ಯದ ಪ್ರಮುಖ ನವ್ಯ ಹಾಗೂ ಬಂಡಾಯ ಸಾಹಿತಿ, ಪರಿಸರವಾದಿ ಮತ್ತು ಚಿಂತಕರು. ರಾಷ್ಟ್ರಕವಿ ಕುವೆಂಪು ಅವರ ಪುತ್ರರಾದ ಇವರು, ಕಾದಂಬರಿ, ಕಥೆ, ವಿಜ್ಞಾನ ಸಾಹಿತ್ಯ, ಅನುವಾದಗಳ ಮೂಲಕ ಕನ್ನಡ ಸಾಹಿತ್ಯದ ಹರವನ್ನು ವಿಸ್ತರಿಸಿದರು. ಇವರ 'ಅಬಚೂರಿನ ಪೋಸ್ಟಾಫೀಸು' ಕನ್ನಡ ಸಾಹಿತ್ಯದಲ್ಲಿ ಹೊಸದೊಂದು ಮೈಲಿಗಲ್ಲಾಗಿದೆ.

ಜನನ ಮತ್ತು ವಿದ್ಯಾಭ್ಯಾಸ:
ಸೆಪ್ಟೆಂಬರ್ 8, 1938 ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ಜನಿಸಿದರು. ತಂದೆ ಕುವೆಂಪು, ತಾಯಿ ಹೇಮಾವತಿ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು.

ಸಾಹಿತ್ಯಿಕ ಶೈಲಿ ಮತ್ತು ಆಸಕ್ತಿ:
ತೇಜಸ್ವಿ ಅವರು ಕೇವಲ ಸಾಹಿತಿಯಾಗಿರದೆ, ಛಾಯಾಗ್ರಾಹಕ, ಪಕ್ಷಿ ವೀಕ್ಷಕ, ವರ್ಣಚಿತ್ರಕಾರ ಮತ್ತು ಪರಿಸರವಾದಿಯಾಗಿದ್ದರು. ಪ್ರಕೃತಿಯ ಮೇಲಿನ ಅಪಾರ ಪ್ರೀತಿಯಿಂದಾಗಿ ಮೈಸೂರು ತೊರೆದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನೆಲೆಸಿ, ಕೃಷಿಕರಾಗಿ ಜೀವನ ನಡೆಸಿದರು. ಇವರ ಬರವಣಿಗೆಯು ವೈಚಾರಿಕತೆ, ಪರಿಸರ ಕಾಳಜಿ ಹಾಗೂ ವಿಜ್ಞಾನದ ಅಂಶಗಳನ್ನು ಒಳಗೊಂಡಿರುತ್ತದೆ.

ಪ್ರಮುಖ ಕೃತಿಗಳು:

ಕಾದಂಬರಿಗಳು: ಕರ್ವಾಲೊ, ಜುಗಾರಿ ಕ್ರಾಸ್, ಚಿದಂಬರ ರಹಸ್ಯ, ಮಾಯಾಲೋಕ.

ಕಥಾ ಸಂಕಲನಗಳು: ಅಬಚೂರಿನ ಪೋಸ್ಟಾಫೀಸು, ಹುಲಿಯೂರಿನ ಸರಹದ್ದು.

ಪ್ರವಾಸ ಕಥನ/ಲೇಖನಗಳು: ಅಲೆಮಾರಿಯ ಡೈರಿ, ಪ್ರಕೃತಿ ಮತ್ತು ಪರಿಸರ.

ಅನುವಾದಗಳು: ಕೆನೆತ್ ಆಂಡರ್ಸನ್ ಅವರ ಬೇಟೆಯ ಕಥೆಗಳು, ಪಾಪಿಲ್ಲನ್.

ಪ್ರಶಸ್ತಿಗಳು:
ಇವರ ಸಾಹಿತ್ಯ ಸೇವೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ ಮತ್ತು ಅತ್ಯುತ್ತಮ ಕಥೆಗಾಗಿ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸಂದಿವೆ.

#ಮೆಲ್ಪುಬಲ್ಪನಳಿಗುಂ
#ಹೊಸಗನ್ನಡದಕವಿಗಳು
#ತೇಜಸ್ವಿ
#ಪೂರ್ಣಚಂದ್ರತೇಜಸ್ವಿ
#ಕನ್ನಡಸಾಹಿತ್ಯ

29/07/2026

ಡಾ. ಯು. ಆರ್. ಅನಂತಮೂರ್ತಿ (ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ) ಅವರ ಸಾಹಿತ್ಯ ||
ಅವರು ಕನ್ನಡದ ಪ್ರಮುಖ ನವ್ಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ವಿಜೇತರು ಹಾಗೂ ಹೆಸರಾಂತ ಚಿಂತಕರು. ಇವರು ಡಿಸೆಂಬರ್ 21, 1932 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಿಗೆಯಲ್ಲಿ ಜನಿಸಿದರು.

ಪ್ರಮುಖ ಕೃತಿಗಳು 👇

ಕಾದಂಬರಿಗಳು: ಸಂಸ್ಕಾರ (1965), ಭಾರತಿಪುರ, ಅವಸ್ಥೆ, ಪ್ರಶ್ನೆ, ದಿಕ್ಕು.

ಕಥಾಸಂಕಲನಗಳು: ಎಂದೆಂದೂ ಮುಗಿಯದ ಕಥೆ, ಘಟಶ್ರಾದ್ಧ, ಸೂರ್ಯನ ಕುದುರೆ.

ಪ್ರಶಸ್ತಿಗಳು: 1994ರಲ್ಲಿ ಜ್ಞಾನಪೀಠ ಪ್ರಶಸ್ತಿ, 1998ರಲ್ಲಿ ಪದ್ಮಭೂಷಣ ಪ್ರಶಸ್ತಿ.

ಡಾ. ಶಾಂತಿನಾಥ ದೇಸಾಯಿ ನವ್ಯಮಾರ್ಗದ  ಪ್ರಮುಖ ಬರಹಗಾರರೆಂದು ಖ್ಯಾತರಾದವರು.ಶಾಂತಿನಾಥ ಕುಬೇರಪ್ಪ ದೇಸಾಯಿ 1929ರ ಜುಲೈ 22ರಂದು ಹಳಿಯಾಳ ಎಂಬಲ್ಲಿ...
22/07/2026

ಡಾ. ಶಾಂತಿನಾಥ ದೇಸಾಯಿ ನವ್ಯಮಾರ್ಗದ ಪ್ರಮುಖ ಬರಹಗಾರರೆಂದು ಖ್ಯಾತರಾದವರು.

ಶಾಂತಿನಾಥ ಕುಬೇರಪ್ಪ ದೇಸಾಯಿ 1929ರ ಜುಲೈ 22ರಂದು ಹಳಿಯಾಳ ಎಂಬಲ್ಲಿ ಜನಿಸಿದರು. ಹಳಿಯಾಳ ಉತ್ತರ ಕನ್ನಡ ಜಿಲ್ಲೆಯಲ್ಲಿಯ ಕಾಡು ಪ್ರದೇಶ. ಅವರ ಪ್ರಾಥಮಿಕ ಶಿಕ್ಷಣ ಅಲ್ಲಿಯೇ ಆಯಿತು. ಮುಂದೆ ಧಾರವಾಡದಲ್ಲಿ ವಿದ್ಯಾಭ್ಯಾಸ ಮಾಡಿದರು.

ಶಾಂತಿನಾಥ ದೇಸಾಯಿ ಅವರ ಮೇಲೆ ಗಂಗಾಧರ ಚಿತ್ತಾಲರ ಪ್ರಭಾವ ಮೂಡಿತು. ಚಿಂತನಕಾರ ಮಾನವೇಂದ್ರರಾಯ ಅವರ ಪ್ರಭಾವವೂ ಸೇರಿತು. ಇಂಗ್ಲಿಷ್‍ನಲ್ಲಿ ವಿಶೇಷ ಅಧ್ಯಯನಕ್ಕೆಂದು ಮುಂಬಯಿಯ ವಿಲ್ಸನ್ ಕಾಲೇಜಿಗೆ ಸೇರಿದರು. ಮುಂದೆ ಪಿಎಚ್.ಡಿ ಗೌರವ ಬಂತು. ಬ್ರಿಟಿಶ್ ಕೌನ್ಸಿಲ್ ಶಿಷ್ಯವೃತ್ತಿಯ ಮೇಲೆ ಇಂಗ್ಲೆಂಡಿಗೆ ತೆರಳುವ ಅವಕಾಶ ಲಭಿಸಿತು. ಹಡಗಿನಲ್ಲಿಯ ಪ್ರವಾಸ ಅನೇಕ ಲೇಖಕರನ್ನು ಸ್ಫುರಿಸಿದಂತೆ, ಶಾಂತಿನಾಥರಿಗೂ ಒಂದು ಉತ್ತಮ ಕತೆಯನ್ನು ಬರೆಯುವುದಕ್ಕೆ ಉಪಯುಕ್ತವಾಯಿತು. ಅವರನ್ನು ಸಣ್ಣಕತೆಯಲ್ಲಿ ಜನಪ್ರಿಯರನ್ನಾಗಿ ಮಾಡಿದ ‘ಕ್ಷಿತಿಜ’ ಹಡಗಿನಿಂದ ಇಂಗ್ಲೆಂಡಿಗೆ ಹೋಗುವ ಒಬ್ಬ ಮಹಿಳೆಯನ್ನು ಕೇಂದ್ರದಲ್ಲಿರಿಸಿದ ಕತೆ.

ವಿದೇಶದಲ್ಲಿ ಎರಡು ವರ್ಷಗಳಷ್ಟು ವಾಸ್ತವ್ಯಮಾಡಿ ಬಂದ ಶಾಂತಿನಾಥರಿಗೆ ಕೊಲ್ಹಾಪುರದ ರಾಜಾರಾಮ ಕಾಲೇಜಿನಲ್ಲಿ ಪ್ರಾಧ್ಯಾಪಕ ವೃತ್ತಿ ದೊರಕಿತು. ಕೆಲವು ವರ್ಷ ಔರಂಗಾಬಾದದಲ್ಲಿ ಪ್ರಾಧ್ಯಾಪಕರಾಗಿದ್ದರು. ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹಲವಾರು ವರ್ಷ ರೀಡರ್ ಮತ್ತು ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಪ್ರಮುಖರಾಗಿ ಸೇವೆ ಸಲ್ಲಿಸಿ, 1988ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳ ಸ್ಥಾನವನ್ನು ಏರಿದರು.

1959ರಲ್ಲಿ ದೇಸಾಯಿಯವರ ಮೊದಲಿನ ಸಾಹಿತ್ಯ ಕೃತಿ ಸಣ್ಣಕತೆಗಳ ಸಂಗ್ರಹ ಪ್ರಕಟವಾಯಿತು.

ಕಾದಂಬರಿ ಶಾಂತಿನಾಥರಿಗೆ ಮೇಲ್ಪಂಕ್ತಿಯ ಬರಹಗಾರನೆನ್ನುವ ಮಾನ್ಯತೆಯನ್ನು ಒದಗಿಸಿತು. ನವ್ಯಕಾದಂಬರಿ ‘ಮುಕ್ತಿ’(1961) ಬರೆದು ನವ್ಯಮಾರ್ಗವನ್ನು ಕಾದಂಬರಿ ಪ್ರಾಂತ್ಯಕ್ಕೆ ತಂದ ಪ್ರಮುಖರೆಂದು ಅವರು ಖ್ಯಾತರಾದರು. ಸಣ್ಣಕತೆಯಲ್ಲಿನ ಅವರ ಸಾಧನೆ ಅಷ್ಟೇ ಗಮನಾರ್ಹ. ‘ಮಂಜುಗಡ್ಡೆ’, ‘ಕ್ಷಿತಿಜ’, ಅವರ ಬಹುಚರ್ಚಿತ ಕತೆಗಳು. ‘ಕೂರ್ಮಾವತಾರ’, ‘ವಾಸನೆ’, ‘...ನಿಖಿಲವಾದದ್ದು’ ಈ ಕತೆಗಳಲ್ಲಿ ಸಾಮಾನ್ಯವಾಗಿ ನಿರ್ಲಕ್ಷಿಸುವ ವಿಷಯಗಳು ಪ್ರಧಾನರೂಪ ಪಡೆಯುತ್ತವೆ. 'ನಾನಾನ ತೀರ್ಥಯಾತ್ರೆ’ ಒಬ್ಬ ಕುಡುಕನ ಕತೆ. ಆದರೆ ವಿಲಕ್ಷಣ ಪರಿಣಾಮಕಾರಿ. ನಾನಾ ಕುಡುಕನೆಂದಲ್ಲ. ಅವನದೂ ವಿಶ್ವವಿದೆ. ಅಲ್ಲಿಯ ಅಂತರ್ಯುದ್ಧದಲ್ಲಿ ರಾಮನನ್ನು ಗೆಲ್ಲುವ ರಾವಣನೇ ಹೀರೋ. ಜೀವನದ ಬಗೆಗಿನ ಕಹಿ, ಹತಾಶೆಯ ಕಿಂಚಿತ್ ಬಣ್ಣ ಬಳಸಿ ನಾನಾನ ಚಿತ್ರ ಎದ್ದು ನಿಲ್ಲುತ್ತದೆ. ಅವನ ತೀರ್ಥಯಾತ್ರೆಯ ಉದಾರಕತೆ ಉಳಿದ ಮಹತ್ವದ ದುರಂತಗಳಷ್ಟೇ ಮಹತ್ವದ್ದು. ‘...ನಿಖಿಲವಾದದ್ದು’ ಕತೆಯಲ್ಲಿಯ ಮನೆಯಾಳು ತನ್ನ ಮಾಲಿಕರ ಸರ್ಟಿಫಿಕೇಟುಗಳನ್ನು ಕದ್ದು ಶಹರಿಗೆ ಹೋಗಿ ನಿಖಿಳವಾಗುವ ಪ್ರಕರಣ ವ್ಯಂಗ್ಯದಿಂದ ತುಂಬಿದರೂ, ಸಿಟ್ಟು, ಬೆಲೆಯಿಲ್ಲದ ಮೌಲ್ಯಗಳನ್ನು ತುಳಿದು ಹೊರದಾಟುವ ಹೊಂಚು ರಹಸ್ಯಮಯತೆಯನ್ನು ತರುತ್ತದೆ. ಸಾಮಾಜಿಕ – ಸ್ಥಿತ್ಯಂತರಗಳ ಬಗ್ಗೆ ಅತ್ಯಂತ ಸೂಚಕವಾಗಿ ಮೆಲುದನಿಯಲ್ಲಿಯೇ ಎಷ್ಟೆಲ್ಲಾ ಹೇಳಿಹೋಗುತ್ತದೆ. ಹೀಗೆ ಒಂದೊಂದು ಕತೆಗೂ ಒಳದನಿಯಿದೆ. ‘ನದಿಯ ನೀರು’ ಕತೆಯಲ್ಲಿಯ ವ್ಯಕ್ತಿ ಸುಳ್ಳನ್ನು ಸಮರ್ಥವಾಗಿ ಹೇಳಿದ್ದಾನೆ. ತನ್ನ ಗೆಳೆಯನನ್ನು ನದಿಯಲ್ಲಿ ಮುಳುಗಿ ಸಾಯುವುದಕ್ಕೆ ತಾನೇ ಕಾರಣನಾಗಿರುವಾಗಲೂ ಅದಕ್ಕೂ ತನಗೂ ಏನೇನೂ ಸಂಬಂಧವಿಲ್ಲವೆಂದು ಚಿಕ್ಕಂದಿನಿಂದ ಬದುಕುತ್ತಾನೆ. ಆದರೆ ಹೀಗೆ ಬಾಹ್ಯರೂಪದಲ್ಲಿ ಅರಗಿಸಿಕೊಂಡ ಒಂದು ಅನುಭವ ಅವನನ್ನು ಹಿಂಸೆ ಮಾಡದೆ ಉಳಿಯುವಷ್ಟು ನಿಷ್ಠುರನಾಗಿ ಬಾಳಲು ಬಿಟ್ಟಿದೆಯೇ ಎನ್ನುವುದನ್ನು ಸಹ್ಯವಾಗಿ ಇಟ್ಟಿದ್ದಾರೆ.

ಸುಮಾರು ಐವತ್ತಕ್ಕೂ ಹೆಚ್ಚು ಕತೆಗಳನ್ನು ಬರೆದ ದೇಸಾಯಿ ಕಥಾ ಪ್ರಕಾರಗಳಲ್ಲಿ ಅಪಾರ ಪ್ರಯೋಗಶೀಲತೆಯನ್ನು ತಂದಿದ್ದಾರೆ. ಅತ್ಯಂತ ಮಿತವಾದ ರೇಖೆಗಳನ್ನು ಉಪಯೋಗಿಸಿ ವ್ಯಕ್ತಿ, ಮನೋವ್ಯಾಪಾರ ಮತ್ತು ಒಂದು ಸಾಮಾಜಿಕ ಸಂಬಂಧವನ್ನು ನಿರ್ಮಿಸುವಲ್ಲಿ ಅವರು ಯಶಸ್ಸು ಗಳಿಸಿದರು.

ಸೃಜನಶೀಲ ಸಾಹಿತ್ಯಕ ಚಟುವಟಿಕೆಗಳಷ್ಟೇ ವಿಚಾರಶೀಲ ಲೇಖನದ ಕಡೆಗೂ ಗಮನಕೊಟ್ಟ ಶಾಂತಿನಾಥ ದೇಸಾಯಿ ಕನ್ನಡದ ಅತ್ಯುತ್ತಮ ವಿಮರ್ಶಕರು. ‘ಸಾಹಿತ್ಯ ಮತ್ತು ಭಾಷೆ’, ‘ಗಂಗಾಧರ ಚಿತ್ತಾಲರ ಕಾವ್ಯಸೃಷ್ಟಿ’, ‘ಕನ್ನಡ ಕಾದಂಬರಿ ನಡೆದು ಬಂದ ದಾರಿ’, ‘ನವ್ಯಸಾಹಿತ್ಯದರ್ಶನ’ – ಅವರು ವಿಚಾರ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ. ಅವರು ಬೇಂದ್ರೆ ಅವರ ಮೇಲೆ ತಯಾರಿಸಿದ ನಿರ್ಬಂಧ ಸಭಿಕರನ್ನು ಮುಗ್ಧಗೊಳಿಸಿತ್ತು. ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಕಾದಂಬರಿಯನ್ನು ಅದರ ಅಂತಃಸತ್ವವನ್ನು ದಾರ್ಶನಿಕ ಹಿನ್ನೋಟವನ್ನು, ಆಳದಲ್ಲಿ ಹುದುಗಿದ ಮಾನವೀ ಸಭ್ಯತೆಯನ್ನು ಜ್ಞಾನಪೀಠದ ಸಮಿತಿಗೆ ಮಾನ್ಯವಾಗುವಂತೆ ಮಂಡಿಸಿದ್ದರು. ಗೋಕಾಕರ ಒಂದು ‘ಜೀವನ ಚಿತ್ರಣ’ದ ಚಿತ್ರೀಕರಣಕ್ಕೆ ಅವರ ವಿವಿಧ ಅಂಗಗಳ ವಿಶಿಷ್ಟತೆ ಹೊರಬರುವಂತೆ ಸಂದರ್ಶನ ಮಾಡಿದ್ದರು.

‘ಕನ್ನಡದ ಕಾದಂಬರಿ ನಡೆದು ಬಂದ ರೀತಿ’ ಒಂದು ವ್ಯಾಸಂಗಪೂರ್ಣ ಗ್ರಂಥ. ತಮ್ಮ ‘ಮುಕ್ತಿ’ ಕಾದಂಬರಿಯ ಗುಣ ದೋಷಗಳನ್ನೂ ಬಿಡದೆ ನಮೂದಿಸಿದ್ದು ಅವರ ನಿರ್ದಾಕ್ಷಿಣ್ಯಕ್ಕೆ ಕನ್ನಡಿ ಹಿಡಿಯುತ್ತದೆ. ‘ನವ್ಯ ಸಾಹಿತ್ಯ ದರ್ಶನ’ ಕೃತಿ ಒಂದು ಸಂದರ್ಭಗ್ರಂಥವೆನ್ನುವಷ್ಟು ಮಹತ್ವದ್ದು.

ಕನ್ನಡದ ಉತ್ತಮ ಕೃತಿಗಳು ಸಾಧ್ಯವಾದಷ್ಟು ಹೊರಭಾಷೆಯ ಓದುಗರಿಗೂ ತಲುಪಬೇಕು ಎನ್ನುವ ಕಳಕಳಿಯನ್ನು ಅವರು ಹೊಂದಿದ್ದರು. ‘Here Comes Revolution’ ಪಿ. ಲಂಕೇಶರ ‘ಕ್ರಾಂತಿ ಬಂತು ಕ್ರಾಂತಿ’ ಎಂಬ ನಾಟಕದ ಇಂಗ್ಲಿಷ್ ಅನುವಾದ. ಹಾಗೆಯೇ ‘Awasthe’ ಯು. ಆರ್. ಅನಂತಮೂರ್ತಿ ಅವರ ಕನ್ನಡ ಕಾದಂಬರಿ ‘ಅವಸ್ಥೆ’ಯ ಇಂಗ್ಲಿಷ್ ಅನುವಾದ. ಮರಾಠಿಯ ಆದ್ಯ ಕಾದಂಬರಿಕಾರರಾದ ಹರಿನಾರಾಯಣ ಆಪ್ಟೆ ಕುರಿತಾದ ‘ಮಿ.ಹರಿನಾರಾಯಣ ಆಪ್ಟೆ’ ಎನ್ನುವ ಮರಾಠಿ ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿದರು.

'ಸೃಷ್ಟಿ’ ಕಾದಂಬರಿಯಿಂದ ಹಿಡಿದು ಶಾಂತಿನಾಥ ದೇಸಾಯಿ ಅವರ ಮುಂದಿನ ಎಲ್ಲ ಕಾದಂಬರಿಗಳಲ್ಲಿ ಸಾಮಾಜಿಕ ಧೋರಣೆಗಳ ಬಗ್ಗೆ ಚಿಂತನೆಯಿದೆ. ‘ಬೀಜ’ ಕಾದಂಬರಿ ಕೂಡ ಗ್ರಾಮಾಂತರದಲ್ಲಿ ಭರಭರನೆ ನಡೆಯುತ್ತಿರುವ ಜಾರುಗುಂಡಿಯ ಕಡೆ ಉರುಳು ಚಿತ್ರಿಸುತ್ತದೆ. ‘ಅಂತರಾಳ’ ಇನ್ನೊಂದು ಮಹತ್ವಾಕಾಂಕ್ಷೆಯ ಕಾದಂಬರಿ. ಶಾಂತಿನಾಥರ ಜೀವನ ದೃಷ್ಟಿಯಲ್ಲಿ ಮಾನವೀ ವಿಕಾಸದ ಸಂಕಲ್ಪನೆಯನ್ನು ಕುರಿತು ಇಲ್ಲಿ ಚಿಂತನವಾಗಿದೆ. ‘ಓಂಣಮೋ’ ಕಾದಂಬರಿ ಹುಟ್ಟಿನಿಂದ ಬಂದ ಅರಿವು, ಇರುವಿನ ಕೊನೆಯ ಅಂತರಾಳದಲ್ಲಿ ಬರೆದ ಕೃತಿ.

ಶಾಂತಿನಾಥ ದೇಸಾಯಿ 1998ರ ಮಾರ್ಚ್ 26ರಂದು ನಿಧನರಾದರು. 2000ರಲ್ಲಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಅರ್ಪಿತಗೊಂಡಿತು.

Address

ಹಗರಿಬೊಮ್ಮನಹಳ್ಳಿ
Hospet

Alerts

Be the first to know and let us send you an email when ಮೆಲ್ಪು ಬಲ್ಪನಳಿಗುಂ posts news and promotions. Your email address will not be used for any other purpose, and you can unsubscribe at any time.

Shortcuts

Share