22/05/2026
rvk.klbg
Contact information, map and directions, contact form, opening hours, services, ratings, photos, videos and announcements from rvk.klbg, Education, Sharan Sirasgi, Devala Gangapur Road, Gulbarga.
Rashtrotthana Vidya Kendra located in Kalaburagi provides a distinctive educational environment that enables a young person to grow in intellectual, physical, psychological, emotional and spiritual dimensions.
22/05/2026
20/05/2026
ಕಲಬುರ್ಗಿ- 20-5-2026 ನಗರದ ಶರಣಸಿರಸಗಿಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಇಂದು 'ನಶೆ ಮುಕ್ತ ಚಾಲಕ' ಎಂಬ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವು ಪ್ರಾರ್ಥನೆ ಯೊಂದಿಗೆ ಪ್ರಾರಂಭವಾಗಿ ಶಾಲೆಯ ಕರೆಸ್ಪಾಂಡೆಂಟ್ ರಾದ ಶ್ರೀ ಕೃಷ್ಣಾ ಜೋಶಿ ಯವರು ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು.
ನಂತರ ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ ಕಲಬುರ್ಗಿಯ ಪ್ರಾದೇಶಿಕ ಸಾರಿಗೆ ಕಚೇರಿ ಪರಿಶೀಲಕರಾದ ಶ್ರೀ ಪರಮಾನಂದ ಸಜ್ಜನ್ ರವರು ಮಾತನಾಡುತ್ತಾ ಈ ಅಭಿಯಾನ ಕೇವಲ ಒಂದೇ ಶಾಲೆಯಲ್ಲಿ ಆಗದೆ ಕಲಬುರ್ಗಿಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ನಡೆಯಬೇಕು ಎಂದು ಹೇಳಿದರು. ನಿಯಮಗಳನ್ನು ಪಾಲಿಸಿದಲ್ಲಿ ಅಪಘಾತಗಳಾಗುವುದು ಕಡಿಮೆಯಾಗುವುದು, ನಮ್ಮ ಜೀವನದ ಶೈಲಿಯನ್ನು ಸರಿಯಾಗಿ ನಡೆಸಿಕೊಂಡು ಹೋದಾಗ ಮಾತ್ರ ಇಂತಹ ತಪ್ಪುಗಳನ್ನು ತಡೆಗಟ್ಟಲು ಸಾಧ್ಯವಾಗುವುದು ಹಾಗೂ ವಾಹನ ಚಾಲಕರಿಗೆ ಚಾಲನೆಯ ಸಂದರ್ಭದಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ತಿಳಿಸಿಕೊಡುತ್ತ ಹಲವಾರು ಚಿಹ್ನೆಗಳನ್ನು ತೋರಿಸುತ್ತಾ ಅವುಗಳನ್ನು ಬಳಸದಿದ್ದರೆ ನಾವು ಅವುಗಳ ಹಾಗೆ ನಿರ್ಜೀವವಾಗಬೇಕಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಇನ್ನೋರ್ವ ಅಭ್ಯಾಗತರಾಗಿ ಆಗಮಿಸಿದಂತಹ ಶ್ರೀ ಶಕೀಲ್ ಅಂಗಡಿಯವರು ಮಾತನಾಡುತ್ತಾ ನಗರದಲ್ಲಿ 180 ITMC ಕ್ಯಾಮೆರಾಗಳನ್ನು ಅಳವಡಿಸಿರುವುದಾಗಿ ನಿಯಮ ತಪ್ಪಿದರೆ ಅವರಿಗೆ ದಂಡ ವಿಧಿಸುವುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಸಾರಿಗೆ ವಿಭಾಗದ ಮುಖ್ಯಸ್ಥರಾದ ಜಯರಾಮ ನಾಯಕರವರು ಉಪಸ್ಥಿತರಿದ್ದು, ಈ ಕಾರ್ಯಕ್ರಮದ ಸಮಾರೋಪ ನುಡಿಗಳನ್ನು ತಿಳಿಸುತ್ತಾ ಚಾಲಕರು ಕೇವಲ ಚಾಲಕನಾಗಿರದೆ ಅವನು ಸಜ್ಜನ, ಸಂಸ್ಕಾರಯುತ ಚಾಲಕನಾಗಿರಬೇಕು ಎಂದು ಹೇಳುತ್ತಾ, ಇಂದು ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಕಲಬುರ್ಗಿಯ ಚಾಲಕರು ಈ ಅಭಿಯಾನಕ್ಕೆ ಮುನ್ನುಡಿಯಾಗಿದ್ದಾರೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ
ಶಾಲೆಯ ಪ್ರಧಾನಾಚಾರ್ಯರಾದ ಶ್ರೀ ಲಾಲದೀಪ ಎಸ್., ಕರೆಸ್ಪಾಂಡೆಂಟರಾದ ಕೃಷ್ಣ ಜೋಶಿ, ಆಡಳಿತಾಧಿಕಾರಿ ಶ್ರೀಕಾಂತ್ ಪಾಟೀಲ್, ಶಿಕ್ಷಕ ಸಿಬ್ಬಂದಿಯವರು, ಶಾಲೆಯ ಎಲ್ಲ ವಾಹನ ಚಾಲಕರು
ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ವಾಹನ ಚಾಲಕರಾದ ಮಲ್ಲಪ್ಪ ಸ್ವಾಗತಸಿದರು, ಹರೀಶ್ ವಂದಿಸಿದರು, ಸಚೀನ್ ನಿರೂಪಿಸಿದರು. ಈ ಕಾರ್ಯಕ್ರಮವು ಶಾಂತಿ ಮಂತ್ರದೊಂದಿಗೆ ಮುಕ್ತಾಯಗೊಂಡಿತು.
Click here to claim your Sponsored Listing.
Location
Category
Website
Address
Gulbarga
585103
Opening Hours
| Monday | 9:30am - 5pm |
| Tuesday | 9:30am - 5pm |
| Wednesday | 9:30am - 5pm |
| Thursday | 9:30am - 5pm |
| Friday | 9:30am - 5pm |
| Saturday | 9:30am - 2pm |