Dr. HN Science Centre

Dr. HN Science Centre Dr. H. N. Science Centre (Dr. HNSC) situated in Hosur, near Gauribidanur is geographically ideally located with many scientific organizations

08/08/2026
14/06/2026

1891ರಲ್ಲಿ ಪ್ರೆಂಚ್ ವೈದ್ಯರಾದ "ಆಲ್ಬರ್ಟ್ ಕಾಲ್ಮೆಟ್ಟೆ" ಅವರು ವಿಯೆಟ್ನಾಂನಲ್ಲಿ "ಪಾಶ್ಚರ್ ಇನ್‌ಸ್ಟಿಟ್ಯೂಟ್" ನ ಹೊಸ ಶಾಖೆಯನ್ನು ಮುನ್ನಡೆಸಲು ಸೈಗಾನ್‌ ಪಟ್ಟಣಕ್ಕೆ ಬಂದರು. ಆ ವರ್ಷ ಅಲ್ಲಿನ ಮಕಾಂಗ್ ನದಿ ಪಾತ್ರದಲ್ಲಿ ಭಾರಿ ಮಳೆ ಸುರಿದು, ಭೀಕರ ಪ್ರವಾಹ ಉಂಟಾಯಿತು. ಪ್ರವಾಹದ ನೀರು ಸೈಗಾನ್ ಸಮೀಪದಲ್ಲಿದ್ದ 'ಥು ಡೌ ಮೊಟ್' ಎಂಬ ಹಳ್ಳಿಗೆ ನುಗ್ಗಿತು.

ಪ್ರವಾಹದ ನೀರಿನಿಂದ ಬಚಾವಾಗಲು ಕಾಡಿನಲ್ಲಿದ್ದ ನೂರಾರು ಭೀಕರ ವಿಷಪೂರಿತ ನಾಗರಹಾವುಗಳು ಹಳ್ಳಿಯ ಮನೆಗಳ ಒಳಗೆ ಮತ್ತು ಮರಗಳ ಮೇಲೆ ಆಶ್ರಯ ಪಡೆದವು.

ಹಳ್ಳಿಯ ಜನರು ಪ್ರವಾಹದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಈ ಹಾವುಗಳು ಎದುರಾಗಿ ಬರೋಬ್ಬರಿ 40ಕ್ಕೂ ಹೆಚ್ಚು ಜನರಿಗೆ ಕಚ್ಚಿದವು.

ಹತ್ತಿರದಲ್ಲೇ ಇದ್ದ ಕಾಲ್ಮೆಟ್ಟೆ ಅವರಿಗೆ ತಕ್ಷಣ ಈ ವಿಷಯ ತಿಳಿದ ತಕ್ಷಣ ಧಾವಿಸಿ ಬಂದು ಪರಿಸ್ಥಿತಿಯನ್ನು ಪರಿಶೀಲಿಸಿದರು. ಆದರೆ ಆ ಕಾಲದಲ್ಲಿ ಹಾವಿನ ಕಡಿತಕ್ಕೆ ಯಾವುದೇ ನಿರ್ದಿಷ್ಟ ವೈಜ್ಞಾನಿಕ ಔಷಧ ಇರಲಿಲ್ಲ. ಕಣ್ಣೆದುರೇ ಜನರು ತೀವ್ರ ನರಕಯಾತನೆ ಅನುಭವಿಸಿ ಸಾಯುವುದನ್ನು ಕಂಡು ಕಾಲ್ಮೆಟ್ಟೆ ತೀವ್ರವಾಗಿ ನೊಂದರು.

ಈ ದುರಂತ ಅವರ ಮನಸ್ಸಿನಲ್ಲಿ ತೀವ್ರ ಬದಲಾವಣೆ ತಂದಿತು. ಅವರು ತಕ್ಷಣವೇ ಆ ಹಳ್ಳಿಯಿಂದ ಬದುಕುಳಿದ ಕೆಲವು ನಾಗರಹಾವುಗಳನ್ನು ಖುದ್ದಾಗಿ ಹಿಡಿದು ತಂದು ತಮ್ಮ ಪ್ರಯೋಗಾಲಯದಲ್ಲಿ ಪಂಜರಗಳಲ್ಲಿ ಇಟ್ಟುಕೊಂಡರು.

ಅವುಗಳಿಂದ ವಿಷವನ್ನು ಹೊರತೆಗೆಯುವ (Milking) ಮೂಲಕ ಹಾವಿನ ವಿಷದ ಮೇಲಿನ ಜಗತ್ತಿನ ಮೊದಲ ವ್ಯವಸ್ಥಿತ ಸಂಶೋಧನೆ ಆರಂಭವಾಯಿತು.

ಕಾಲ್ಮೆಟ್ಟೆ ಮೊದಲು ಹಾವಿನ ವಿಷವು ದೇಹದ ನರಮಂಡಲದ ಮೇಲೆ ಹೇಗೆ ದಾಳಿ ಮಾಡುತ್ತದೆ ಎಂಬುದನ್ನು ಅಧ್ಯಯನ ಮಾಡಿದರು.

ವಿಷವನ್ನು ಅತ್ಯಂತ ಸಣ್ಣ ಪ್ರಮಾಣದಲ್ಲಿ ಪ್ರಾಣಿಗಳಿಗೆ ಚುಚ್ಚಿದಾಗ, ಅವುಗಳ ರಕ್ತದಲ್ಲಿ ವಿಷವನ್ನು ತಡೆಯುವ ಶಕ್ತಿ (Antibodies) ಉತ್ಪತ್ತಿಯಾಗುತ್ತದೆ ಎಂಬುದನ್ನು ಕಂಡುಕೊಂಡರು.

ಇದೇ ಪ್ರಯೋಗವನ್ನು ಕುದುರೆಗಳ ಮೇಲೆ ನಡೆಸಿ, ಕೊನೆಗೆ 1895ರಲ್ಲಿ ಜಗತ್ತಿನ ಮೊದಲ ಯಶಸ್ವಿ 'ಕಾಲ್ಮೆಟ್ಟೆ ಸೀರಮ್' (ಆಂಟಿವೆನಮ್) ಅನ್ನು ಬಿಡುಗಡೆ ಮಾಡಿದರು.

ಅಂದು ವಿಯೆಟ್ನಾಂನಲ್ಲಿ ಸಂಭವಿಸಿದ ಭೀಕರ ಪ್ರಕೃತಿ ವಿಕೋಪ ಮತ್ತು ಹಾವಿನ ಕಡಿತದ ದುರಂತದ ಸಂದರ್ಭದಲ್ಲಿ, ಆಲ್ಬರ್ಟ್ ಕಾಲ್ಮೆಟ್ಟೆ ಅವರಂತಹ ಮಹಾನ್ ವೈದ್ಯ ವಿಜ್ಞಾನಿ ಅಲ್ಲಿದ್ದುದೇ ಇಂದು ಜಗತ್ತಿನಾದ್ಯಂತ ಕೋಟ್ಯಂತರ ಜನರ ಜೀವ ಉಳಿಸುತ್ತಿರುವ ಆಂಟಿವೆನಮ್ ಜೀವ ರಕ್ಷಕ ಔಷಧಿಯ ಆವಿಷ್ಕಾರಕ್ಕೆ ಮೂಲ ಪ್ರೇರಣೆಯಾಯಿತು.

ಅಂಕಿ ಅಂಶಗಳ ಪ್ರಕಾರ ಇಂದು ಪ್ರತಿ ವರ್ಷ ಜಗತ್ತಿನಾದ್ಯಂತ ಸುಮಾರು 54 ಲಕ್ಷ (5.4 million) ಜನರಿಗೆ ಹಾವು ಕಚ್ಚುತ್ತದೆ ಮತ್ತು ಒಟ್ಟು ಹಾವಿನ ಕಡಿತದ ಸಾವುಗಳಲ್ಲಿ ಭಾರತವು ಸುಮಾರು ಶೇಕಡಾ 50 ರಷ್ಟು ಪಾಲನ್ನು ಹೊಂದಿದೆ.( ಲಭ್ಯತೆ, ತಯಾರಿಕೆ, ಪೂರೈಕೆ ಮತ್ತಿತರ ಸವಾಲುಗಳಿಂದಾಗಿ)

04/05/2026
26/04/2026

ಪತ್ರಿಕೆಯೊಂದರ ಸಂಪಾದಕರಾಗಿ ಕೆಲಸ ಮಾಡುತ್ತಿದ್ದ ಹಂಗೇರಿ ಮೂಲದ ಸಂಶೋಧಕ "ಲಾಸ್ಲೋ ಬೀರೊ" ಅವರು ಫೌಂಟೇನ್ ಪೆನ್ನುಗಳ ಇಂಕ್ ಸೋರಿಕೆ ಸಮಸ್ಯೆಯಿಂದ ಹೈರಾಣಾಗಿದ್ದರು.

ಒಂದು ಸಂಜೆ ಅವರು ತಮ್ಮ ಕಚೇರಿಯ ಕೆಲಸ ಮುಗಿಸಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಅಂದು ಹಗುರವಾದ ಮಳೆ ಬಂದು ರಸ್ತೆಯಲ್ಲೆಲ್ಲ ನೀರು ನಿಂತಿತ್ತು. ಆಗ ಅವರ ಕಣ್ಣಿಗೆ ಬಿದ್ದಿದ್ದು ರಸ್ತೆಯಲ್ಲಿ ಆಟವಾಡುತ್ತಿದ್ದ ಮಕ್ಕಳ ಗುಂಪು. ಮಕ್ಕಳು ಆಟವಾಡುತ್ತಿದ್ದಾಗ ಒಂದು ಗೋಲಿ ರಸ್ತೆಯ ಮೇಲಿದ್ದ ನೀರಿನಲ್ಲಿ ಬಿದ್ದು ಆಚೆ ಉರುಳುತ್ತಾ ಬಂದಿತು.

ಬೀರೊ ಅವರು ಆ ಗೋಲಿಯನ್ನೇ ಸೂಕ್ಷ್ಮವಾಗಿ ಗಮನಿಸಿದರು. ಆ ಒದ್ದೆಯಾದ ಗೋಲಿ ನೆಲದ ಮೇಲೆ ಉರುಳುತ್ತಾ ಹೋದಂತೆ, ತಾನು ಸಾಗಿದ ಹಾದಿಯಲ್ಲೆಲ್ಲಾ ಒಂದು ತೆಳುವಾದ ನೀರಿನ ಗೆರೆಯನ್ನು ಮೂಡಿಸುತ್ತಿತ್ತು.

ಬೀರೊ ಅವರು ಯೋಚಿಸಿದರು—"ಪೆನ್ನಿನ ತುದಿಯಲ್ಲಿ ನಾವು ನಿಬ್ ಬದಲಿಗೆ ಈ ಮಕ್ಕಳ ಗೋಲಿಯಂತೆ ಒಂದು ಸಣ್ಣ ಲೋಹದ ಚೆಂಡನ್ನು ಇಟ್ಟರೆ ಏನಾಗಬಹುದು.?"

ಅಲ್ಲಿಂದ ಮನೆಗೆ ಬಂದವರೇ ತಮ್ಮ ಸಹೋದರ ಗೈರ್ಗಿ ಜೊತೆಗೂಡಿ ಕೆಲಸ ಆರಂಭಿಸಿದರು. ಪೆನ್ನಿನ ತುದಿಯಲ್ಲಿ ಒಂದು ಸಣ್ಣ ಸಾಕೆಟ್ ತಯಾರಿಸಿ ಅದರಲ್ಲಿ ಸೂಕ್ಷ್ಮವಾದ ಗೋಲಿಯನ್ನು ಅಳವಡಿಸಿದರು. ಸಾಮಾನ್ಯ ಇಂಕ್ ತೆಳುವಾಗಿರುವುದರಿಂದ ಸೋರುತ್ತಿತ್ತು. ಹಾಗಾಗಿ ಪತ್ರಿಕೆಗಳಿಗೆ ಬಳಸುವ ಗಟ್ಟಿ ಇಂಕನ್ನು ಪೆನ್ನಿನ ರೀಫಿಲ್ ಒಳಗೆ ಹಾಕಿದರು.

1938ರಲ್ಲಿ ತಾವು ತಯಾರಿಸಿದ ಈ ಆಧುನಿಕ ಬಾಲ್‌ಪಾಯಿಂಟ್ ಪೆನ್ನನ್ನು ಜಗತ್ತಿಗೆ ಪರಿಚಯಿಸಿದರು.

ಈ ಒಂದು ಸಣ್ಣ "ಘಟನೆ" ಇಡೀ ಜಗತ್ತಿನ ಬರವಣಿಗೆಯ ಇತಿಹಾಸವನ್ನೇ ಬದಲಿಸಿತು. ಇಂದು ನಾವು ಬಳಸುವ ಪ್ರತಿಯೊಂದು ಬಾಲ್‌ಪಾಯಿಂಟ್ ಪೆನ್ನಿನ ಹಿಂದೆಯೂ ಅಂದು ಬೀರೊ ಅವರ ಮುಂದೆ ರಸ್ತೆಯಲ್ಲಿ ಉರುಳಿದ ಆ *ಮಕ್ಕಳ ಗೋಲಿ'*ಯ ಪ್ರೇರಣೆಯಿದೆ.

ಹಂಗೇರಿಯಲ್ಲಿ ಜನಿಸಿದ ಲಾಸ್ಲೋ ಬೀರೊ ಅವರು ಬಹುಮುಖ ಪ್ರತಿಭೆಯ ವ್ಯಕ್ತಿಯಾಗಿದ್ದರು. ವಿಧ್ಯಾರ್ಥಿ ದೆಸೆಯಲ್ಲಿ ವೈದ್ಯಕೀಯ ವಿಜ್ಞಾನವನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದರೂ, ಪದವಿ ಪಡೆಯುವ ಮೊದಲೇ ಅದನ್ನು ಬಿಟ್ಟು ಪತ್ರಿಕೋದ್ಯಮ ಮತ್ತು ಚಿತ್ರ ಕಲೆಯತ್ತ ಆಸಕ್ತಿ ಬೆಳೆಸಿಕೊಂಡರು.

ಎರಡನೇ ಮಹಾಯುದ್ಧದ ಸಮಯದಲ್ಲಿ ಬೀರೊ ಅವರು ಅರ್ಜೆಂಟೀನಾಗೆ ವಲಸೆ ಹೋದರು. ಅಲ್ಲಿ ಅವರ ಪೆನ್ನುಗಳು ವಿಮಾನ ಚಾಲಕರಲ್ಲಿ ಹೆಚ್ಚು ಜನಪ್ರಿಯವಾದವು, ಏಕೆಂದರೆ ಎತ್ತರದ ಪ್ರದೇಶದಲ್ಲೂ ಈ ಪೆನ್ನುಗಳು ಶಾಯಿ ಸೋರುತ್ತಿರಲಿಲ್ಲ. ಇಂದಿಗೂ ಅನೇಕ ದೇಶಗಳಲ್ಲಿ ಪೆನ್ನನ್ನು "ಬೈರೋ" ಎಂದೇ ಕರೆಯಲಾಗುತ್ತದೆ. ಅರ್ಜೆಂಟೀನಾದಲ್ಲಿ ಇವರ ಜನ್ಮದಿನವಾದ ಸೆಪ್ಟೆಂಬರ್ 29 ಅನ್ನು "ರಾಷ್ಟ್ರೀಯ ಅನ್ವೇಷಕರ ದಿನ" ಎಂದು ಗೌರವಿಸಲಾಗುತ್ತದೆ.

ಬೀರೊ ಅವರ ಬುದ್ಧಿಶಕ್ತಿ ಕೇವಲ ಪೆನ್ನಿಗೆ ಸೀಮಿತವಾಗಿರಲಿಲ್ಲ. ಅವರು ವಾಹನಗಳಿಗಾಗಿ ಆಟೋಮ್ಯಾಟಿಕ್ ಗೇರ್ ಬಾಕ್ಸ್, ಬಟ್ಟೆ ಒಗೆಯುವ ಯಂತ್ರ ಮತ್ತು ಸುಧಾರಿತ ಥರ್ಮಾಮೀಟರ್‌ಗಳನ್ನು ಸಹ ವಿನ್ಯಾಸಗೊಳಿಸಿದ್ದರು. ಅವರ ಆಟೋಮ್ಯಾಟಿಕ್ ಗೇರ್ ಬಾಕ್ಸ್ ವಿನ್ಯಾಸವನ್ನು ಅಂದಿನ ಕಾಲದ ದೈತ್ಯ ಕಂಪನಿ ಜನರಲ್ ಮೋಟಾರ್ಸ್ ಖರೀದಿಸಿದ್ದು ಅವರ ತಾಂತ್ರಿಕ ಪ್ರೌಢಿಮೆಗೆ ಸಾಕ್ಷಿ.

ಇಂದು ಜಗತ್ತಿನ ಅತ್ಯಂತ ಶಕ್ತಿಶಾಲಿ ಆಯುಧವೆಂದರೆ ಅದು ಈ 'ಪೆನ್ನು'. ಅಂತಹ ಪೆನ್ನನ್ನು ಸಾಮಾನ್ಯ ಜನರಿಗೂ ಸುಲಭವಾಗಿ ಸಿಗುವಂತೆ ಮಾಡಿದ ಕೀರ್ತಿ ಲಾಸ್ಲೋ ಬೀರೊ ಅವರಿಗೆ ಸಲ್ಲುತ್ತದೆ.

26/04/2026

ಹೃದಯದ ವಿದ್ಯುತ್ ಚಟುವಟಿಕೆಯನ್ನು ಡಿಜಿಟಲ್ ಪರದೆಯ ಮೇಲೆ ತೋರಿಸಿ ನಮ್ಮ ಹೃದಯ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಸುಲಭವಾಗಿ ಅರ್ಥವಾಗುವಂತೆ ತಿಳಿಸುವ ECG ಯಂತ್ರವನ್ನು 1903ರಲ್ಲಿ ಕಂಡು ಹಿಡಿದ ಡಚ್ ವಿಜ್ಞಾನಿ "ವಿಲೆಮ್ ಐಂತೋವನ್" ರವರಿಗೆ ಈ ಮಹಾ ಸಂಶೋಧನೆಗಾಗಿ 1924ರಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಲಭಿಸಿತು.

ಈ ಸಾಧನೆಗೆ ತಮ್ಮ ಪ್ರಯೋಗಾಲಯದ ಸಹಾಯಕನ ಪಾಲೂ ಇದೆ ಎಂದು ನಂಬಿದ್ದ "ಹೃದಯವಂತ" ಐಂಥೋವನ್ ರವರು ತಮಗೆ ಬಂದಿದ್ದ ಪ್ರಶಸ್ತಿ ಹಣದಲ್ಲಿ (40,000 ಡಾಲರ್) ಅರ್ಧ ಭಾಗವನ್ನು (20,000 ಡಾಲರ್) ವ್ಯಾನ್ ಡೆರ್ ವೋರ್ಡ್ ಗೆ ನೀಡಲು ನಿರ್ಧರಿಸಿದರು. ಆದರೆ ಆ ವೇಳೆಗೆ ಆತ ಮೃತಪಟ್ಟಿದ್ದರಿಂದ ಆತನ ಇಬ್ಬರು ಸಹೋದರಿಯರ ಮನೆಗಳನ್ನು ಹುಡುಕಿಕೊಂಡು ಹೋಗಿ ತಲುಪಿಸಿ ಬಂದರು.

ವಿಲ್ಲೆಮ್ ಐಂಥೋವನ್ ಅವರು 1860ರ ಮೇ 21 ರಂದು ಇಂಡೋನೇಷ್ಯಾದ ಜಾವಾದಲ್ಲಿ ಜನಿಸಿದರು. ನಂತರ ಅವರ ಕುಟುಂಬ ನೆದರ್ಲ್ಯಾಂಡ್‌ಗೆ ವಲಸೆ ಬಂದಿತು. ಉಟ್ರೆಕ್ಟ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿದ ಇವರು, ಕೇವಲ 25ನೇ ವಯಸ್ಸಿನಲ್ಲಿ ಲೈಡನ್ ವಿಶ್ವವಿದ್ಯಾಲಯದಲ್ಲಿ ಶರೀರಶಾಸ್ತ್ರದ (Physiology) ಪ್ರಾಧ್ಯಾಪಕರಾಗಿ ನೇಮಕಗೊಂಡರು.

ಲುಯಿಗಿ ಗ್ಯಾಲ್ವಾನಿ, ಕಾರ್ಲೊ ಮಟ್ಟೂಚಿ, ಗೇಬ್ರಿಯಲ್ ಲಿಸ್ಬನ್ ಮತ್ತು ಆಗಸ್ಟಸ್ ವಾಲರ್ ಅವರ ಕೆಲಸಗಳಿಂದ ಪ್ರೇರಿತರಾಗಿದ್ದ ಶರೀರಶಾಸ್ತ್ರಜ್ಞ ಐಂತೋವನ್ ಅವರು 1903 ರಲ್ಲಿ 'ಸ್ಟ್ರಿಂಗ್ ಗಾಲ್ವನೋಮೀಟರ್' ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದರು. ಇದು ಹೃದಯದ ಸ್ನಾಯುಗಳು ಸಂಕುಚಿತಗೊಂಡಾಗ ಉಂಟಾಗುವ ಅತ್ಯಂತ ಸೂಕ್ಷ್ಮವಾದ ವಿದ್ಯುತ್ ಸಂಕೇತಗಳನ್ನು ದಾಖಲಿಸುವ ಸಾಮರ್ಥ್ಯ ಹೊಂದಿತ್ತು.

ಆಗಿನ ಕಾಲದಲ್ಲಿ ಹೃದಯದ ವಿದ್ಯುತ್ ಪ್ರವಾಹವನ್ನು ಅಳೆಯಲು ಆಗಸ್ಟಸ್ ವಾಲರ್ ಅವರು ಬಳಸುತ್ತಿದ್ದ ಯಂತ್ರಗಳು ಅಷ್ಟು ನಿಖರವಾಗಿರಲಿಲ್ಲ. ಐಂಥೋವನ್ ಅವರು ಅಂದು ಅಭಿವೃದ್ಧಿಪಡಿಸಿದ 'ಸ್ಟ್ರಿಂಗ್ ಗಾಲ್ವನೋಮೀಟರ್' ಯಂತ್ರವು ಸುಮಾರು 270 ಕೆಜಿ ತೂಕವಿದ್ದು, ಅತಿದೊಡ್ಡದಾಗಿತ್ತು ಮತ್ತು ಇದನ್ನು ನಿರ್ವಹಿಸಲು ಐದು ಜನರ ಅವಶ್ಯಕತೆಯಿತ್ತು. ಹಾಗಾಗಿ ಸಹಾಯಕನ ಪಾತ್ರವೂ ಇಲ್ಲಿ ಮಹತ್ವದ್ದಾಗಿತ್ತು.

ಐಂತೋವನ್ ಅವರು ECG ಲೀಡ್‌ಗಳನ್ನು ದೇಹದ ಮೇಲೆ ಹೇಗೆ ಜೋಡಿಸಬೇಕು ಎಂಬುದನ್ನು ವಿವರಿಸಲು 'ಐಂತೋವನ್ ತ್ರಿಕೋನ' ಎಂಬ ಕಲ್ಪನೆಯನ್ನು ನೀಡಿದರು. ಇದರ ಪ್ರಕಾರ ಬಲಗೈ, ಎಡಗೈ ಮತ್ತು ಎಡಗಾಲುಗಳ ನಡುವೆ ಹೃದಯವು ಮಧ್ಯಭಾಗದಲ್ಲಿದ್ದು, ವಿದ್ಯುತ್ ಪ್ರವಾಹವು ಒಂದು ತ್ರಿಕೋನದಂತೆ ಹರಿಯುತ್ತದೆ. ಅವರು ನೀಡಿದ 'ಐಂತೋವನ್ ನಿಯಮ' (Lead I + Lead III = Lead II) ಇಂದಿಗೂ ವೈದ್ಯಕೀಯ ಕ್ಷೇತ್ರದಲ್ಲಿ ಇಸಿಜಿ ನಿಖರತೆಯನ್ನು ಪರೀಕ್ಷಿಸಲು ಬಳಕೆಯಾಗುತ್ತಿದೆ.

ಹೃದಯದ ಬಡಿತವನ್ನು ಅಲೆಗಳ ರೂಪದಲ್ಲಿ ದಾಖಲಿಸುವಾಗ, ಪ್ರತಿಯೊಂದು ಏರಿಳಿತಕ್ಕೂ ಐಂತೋವನ್ ಅವರು P, Q, R, S, ಮತ್ತು T ಎಂದು ಹೆಸರಿಟ್ಟರು. ಈ ಅಕ್ಷರಗಳು ಹೃದಯದ ರಕ್ತನಾಳಗಳು ಹೇಗೆ ಸಂಕುಚಿತಗೊಳ್ಳುತ್ತವೆ ಮತ್ತು ವಿಶ್ರಾಂತಿ ಪಡೆಯುತ್ತವೆ ಎಂಬುದನ್ನು ಸೂಚಿಸುತ್ತವೆ. ಇಂದಿಗೂ ಜಗತ್ತಿನಾದ್ಯಂತ ವೈದ್ಯರು ಇದೇ ಮಾನದಂಡವನ್ನು ಬಳಸಿ ಹೃದಯದ ಕಾಯಿಲೆಗಳನ್ನು ಪತ್ತೆಹಚ್ಚುತ್ತಾರೆ.

ಐಂತೋವನ್ ಅವರ ಕಾಲದಲ್ಲಿ ಸುಮಾರು 270 ಕೆಜಿ ತೂಕವಿದ್ದ ಇಸಿಜಿ ಯಂತ್ರವು ಇಂದು ಅದು ಕೈಯಲ್ಲಿ ಹಿಡಿಯುವಷ್ಟು ಸಣ್ಣ ಸಾಧನವಾಗಿ ಮಾರ್ಪಟ್ಟಿದೆ. ಆದರೆ ತಂತ್ರಜ್ಞಾನ ಎಷ್ಟೇ ಬೆಳೆದಿದ್ದರೂ, ಐಂತೋವನ್ ಅವರು ರೂಪಿಸಿದ ಹೃದಯ ಪರೀಕ್ಷೆಯ ಮೂಲಭೂತ ತತ್ವಗಳು ಇಂದಿಗೂ ಬದಲಾಗಿಲ್ಲ. ಕೋಟ್ಯಂತರ ಜನರ ಜೀವ ಉಳಿಸಲು ಅವರ ಈ ಸಂಶೋಧನೆ ದಾರಿದೀಪವಾಗಿದೆ.

ಆಸ್ಪತ್ರೆಗಳ ICUನಲ್ಲಿ ಜೀವದ ಸಂಕೇತವಾಗಿ ಡಿಜಿಟಲ್ ಪರದೆಯ ಮೇಲೆ ಮೂಡಿಬರುವ ECG ಗ್ರಾಫ್ ನೋಡಿದಾಗ ಅಥವಾ ಅದರ ಹಿನ್ನೆಲೆಯಲ್ಲಿ "ಬೀಪ್... ಬೀಪ್... ಸದ್ದು ಕೇಳಿ ಬಂದಾಗ ಐಂತೋವನ್ ಮತ್ತವರ ಸಹಾಯಕನ ಶ್ರಮವನ್ನು ಒಮ್ಮೆ ಸ್ಮರಿಸಿಕೊಳ್ಳಿ.

07/04/2026

ಗಾಳಿಯ ಜೊತೆ ಹಾರುವ ಬೀಜ 🌬️🌱
ಏಕ್ಕದ ಗಿಡದ ಬೀಜ – A Seed That Flies with the Wind, 🌬️🌱

04/04/2026

Address

Gauribidanur
561210

Telephone

+919741310802

Alerts

Be the first to know and let us send you an email when Dr. HN Science Centre posts news and promotions. Your email address will not be used for any other purpose, and you can unsubscribe at any time.

Contact The School

Send a message to Dr. HN Science Centre:

Shortcuts

Share