04/10/2020
ಶ್ರೀಗಳ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 10 ಕ್ಕೆ 😭😭😭😢
ಇಂದು ಲಿಂಗೈಕ್ಯ ರಾದ ಗೋಡೆಕೆರೆಯ ಶ್ರೀ ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿಯವರ ಕ್ರಿಯಾ ಸಮಾಧಿ ಯನ್ನು ಗೋಡೆಕೆರೆ ಭೂ ಸುಕ್ಷೇತ್ರದ ಸಿದ್ದರಾಮೇಶ್ವರ ತಪೋವನದಲ್ಲಿ ಹರಗುರುಚರ ಮೂರ್ತಿಗಳ ಸಮ್ಮುಖದಲ್ಲಿ ನಾಳೆ ವಿಧಿ ವಿಧಾನಗಳಲ್ಲಿ ನೆರೆವಿಸಲಾಗುತ್ತದೆ ಎಂದು ಶ್ರೀಗಳ ಮಠ ದಿಂದ ಮಾಹಿತಿ ನೀಡಲಾಗಿದೆ. ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ ಲಿಂಗೈಕ್ಯ
ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಮಠದ ಸ್ಥಿರ ಪಟ್ಟಧ್ಯಕ್ಷರಾಗಿದ್ದ ಶ್ರೀಗಳು ಗೋಡೆಕೆರೆ ಯಲ್ಲಿ ಆಕ್ಟೊಬರ್ 6 1952 ರಲ್ಲಿ ವೇದಮೂರ್ತಿ ಶಿವಯ್ಯ ಹಾಗೂ ಗಂಗಮ್ಮನವರ 3 ನೆ ಪುತ್ರರಾಗಿ ಜನಸಿದ್ದರು ನಂತರ ಶ್ರೀ ಮಠಕ್ಕೆ 9 ನೇ ಗುರುಗಳಾಗಿ ತಮ್ಮ 28 ನೇ ವಯಸ್ಸಿನಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದರು ಶ್ರೀಗಳು ಪದವಿ ಶಿಕ್ಷಣ ಪಡೆದು ಕೊಂಡು ಸಾಮಾಜಿಕವಾಗಿ ಶ್ಯಕ್ಷಣಿಕ ವಾಗಿ ಹಾಗೂ ಧಾರ್ಮಿಕವಾಗಿ ಸಾಕಷ್ಟು ಕೆಲಸ ಕಾರ್ಯದಲ್ಲಿ ತೊಡಗಿದ್ದರು ಶ್ರೀ ಮಠದಿಂದ ಶಾಲಾ ಕಾಲೇಜುಗಳು ತೆರೆದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶ್ಯಕ್ಷಣಿಕ ವಾಗಿ ನೆರವಾಗಿದ್ದರು. ಇದೆ ಅಲ್ಲದೆ ವಿದ್ಯಾರ್ಥಿಗಳು ಉಳಿದು ಕೊಳ್ಳಲು ವಸತಿ ನಿಲಯ ಮಾಡಿ ಅವರಿಗೆ ಅನುಕೂಲ ಕಲ್ಪಿಸಿದ್ಧರು. ಹಾಗೂ ಅನಾಥಾಶ್ರಮಸಹ ನಿರ್ಮಾಣ ಮಾಡಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ನೆರವು ನೀಡಿದ್ದರು,
ಸಮುದಾಯ ಭವನ ನಿರ್ಮಾಣ ಮಾಡಿ ನೂರಾರು ಡ್ ಧಾರ್ಮಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಇಡೀ ಜಿಲ್ಲೆಯಲ್ಲಿ ಸಾಕಷ್ಟು ಸಾಮಾಜಿಕ ಸೇವೆಯಲ್ಲಿ ತೊಡಗಿದ್ದ ಶ್ರೀಗಳ ಅಕಾಲಿಕ ಮರಣ ಅವರ ಭಕ್ತರಿಗೆ ನೋವ್ವು ನೀಡಿದೆ