25/04/2024
ಭಾರತದ ಸತ್ಪ್ರಜೆಗಳಾದ ನನ್ನ ಆತ್ಮೀಯ ವಿದ್ಯಾರ್ಥಿಗಳೇ, ದಿನಾಂಕ:26.04.2024ರ ಶುಕ್ರವಾರ ಲೋಕಸಭೆ ಚುನಾವಣೆ ಇದೆ.
*ಚುನಾವಣೆ ನಿಜಕ್ಕೂ ಒಂದು ವಿಸ್ಮಯ.* ನಾ, ನೀ ಎನ್ನುವ ಶ್ರೀಮಂತ ಕುಳಗಳು ಕೂಡ ನಿಮ್ಮ ಮುಂದೆ ಕೈಚಾಚಿ ತಲೆಬಾಗಿ ಕೈಮುಗಿದು ನಿಲ್ಲುವ ಕಾಲವಿದು.
*ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಪವಿತ್ರ ಹಬ್ಬ.* ಮತದಾನ ಮಾಡುವುದರ ಮೂಲಕ ಈ ಹಬ್ಬವನ್ನು ಸಂಬ್ರಮ ಸಡಗರದಿಂದ ಆಚರಿಸೋಣ.
*ಚುನಾವಣೆ ನಮಗೆ ಕೊಟ್ಟಿರುವ ಬಹುದೊಡ್ಡ ಅವಕಾಶ ಮತದಾನ.* ಅರ್ಹ ಅಭ್ಯರ್ಥಿಯನ್ನು ಆಯ್ಕೆಮಾಡುವ
ಸುವರ್ಣಾವಕಾಶವನ್ನು ಕಳೆದುಕೊಳ್ಳಬೇಡಿ. ಅವಕಾಶ ಕಳೆದುಕೊಂಡು ಮತ್ತೆ ಮತ್ತೆ ಮರುಗಬೇಡಿ.
*ಮತದಾನ ಇದು ನಮ್ಮ ದೇಶದ ಗೌರವ.* ಭಾರತೀಯ ನಾಗರಿಕರು ಅಕ್ಷರಶಃ ಜಾಗೃತರು'' ಎಂಬುವುದನ್ನು
ಸಾಬೀತುಮಾಡುವಾ.
*ಮತದಾನದ ಹಕ್ಕನ್ನು ನಾವು ಅವಶ್ಯವಾಗಿ ಬಳಸಿಕೊಳ್ಳೋಣ.*
ಯಾವುದೇ ಕಾರಣಕ್ಕೂ ಮತದಾನ
ಮಾಡುವುದನ್ನು “ಮಿಸ್” ಮಾಡಬೇಡಿ.
ತಪ್ಪದೇ ಮತದಾನ ಮಾಡಿ.
ನಾವೂ ಸಹ ನಾಳೆ ಬೂತ್‌ಗೆ ಹೋಗಿ ತಪ್ಪದೇ ಮತದಾನ ಮಾಡಿ ಬರುತ್ತೇವೆ. ನೀವೂ ಮಾಡಿ.
*ಮತದಾನವಿದು ಅನ್ನದಾನ, ವಿದ್ಯಾದಾನ, ವಸತಿ ದಾನ, ನೇತ್ರದಾನ, ರಕ್ತದಾನದಷ್ಟೇ ಮಹತ್ತ್ವದ್ದು.*
ಭವ್ಯ ಭಾರತದ ಕಣ್ಮಣಿಗಳೇ ತಪ್ಪದೆ ನಿಮ್ಮ ಅತ್ಯಮೂಲ್ಯವಾದ ಮತ ಹಾಕುವುದರ ಮೂಲಕ ಸಂವಿಧಾನ ಬದ್ಧ ನಿಮ್ಮ ಹಕ್ಕನ್ನು ಚಲಾಯಿಸಿ.
ನಿಮ್ಮ ಎಲ್ಲಾ ಸ್ನೇಹಿತರು,
ಬಂಧು ಮಿತ್ರರು, ನೆರೆ ಹೊರೆಯ ವರಿಗೂ ಮತದಾನ ಮಾಡಲು ತಿಳಿಸಿ.
ನಿಮ್ಮವ
ಪ್ರೋವೆಂಕಟ ರಾಮು. ಬಿ.ಆರ್.
ಪ್ರಾಂಶುಪಾಲರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಡಿಬಂಡೆ.