GUPS Badagakaranduru

  • Home
  • GUPS Badagakaranduru

GUPS Badagakaranduru ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬಡಗಕಾರಂದೂರು.

ಮೆಟ್ರಿಕ್ ಮೇಳ 2024-2025
24/02/2025

ಮೆಟ್ರಿಕ್ ಮೇಳ 2024-2025

ಈ ದಿನ ನಮ್ಮ ಶಾಲೆಗೆ  ಸುಲ್ಕೇರಿಮೊಗ್ರು ಮಾಳಿಗೆ ಮನೆಯ *ಶ್ರೀ ಎಮ್ ಎನ್ ಭಟ್* ರವರು ಆಗಮಿಸಿ ತಮ್ಮ *84ನೇ ವರ್ಷದ ಹುಟ್ಟುಹಬ್ಬ* ವನ್ನು ಮಕ್ಕಳಿ ಗ...
06/08/2024

ಈ ದಿನ ನಮ್ಮ ಶಾಲೆಗೆ ಸುಲ್ಕೇರಿಮೊಗ್ರು ಮಾಳಿಗೆ ಮನೆಯ *ಶ್ರೀ ಎಮ್ ಎನ್ ಭಟ್* ರವರು ಆಗಮಿಸಿ ತಮ್ಮ *84ನೇ ವರ್ಷದ ಹುಟ್ಟುಹಬ್ಬ* ವನ್ನು ಮಕ್ಕಳಿ ಗೆ ಸಿಹಿ ಹಂಚುವ ಮೂಲಕ ಆಚರಿಸಿಕೊಂಡರು. ಶ್ರೀಯುತರಿಗೆ ಆಯುಷ್ಯ ಇನ್ನಷ್ಟು ವೃದ್ಧಿಸಲಿ. ಆರೋಗ್ಯ ನೆಮ್ಮದಿ ಗಳು ಸದಾ ಜೊತೆಗಾರರಾಗಿ ಅವರೊಂದಿಗಿರಲಿ. ಮಕ್ಕಳ, ಮುಖ್ಯ ಶಿಕ್ಷಕರ, ಅಧ್ಯಾಪಕ ವೃಂದದವರಹಾಗೂ ಎಸ್ ಡಿ ಎಂ ಸಿ ಪರವಾಗಿ ಅವರಿಗೆ ತುಂಬು ಹೃದಯದ ಧನ್ಯವಾದಗಳು. ಹಿರಿಯರ ಆಶೀರ್ವಾದ ಸದಾ ನಮ್ಮ, ಮಕ್ಕಳ ಮೇಲಿರಲಿ.💐💐💐💐💐💐💐

ಆತ್ಮೀಯರೇ,       ನಿನ್ನೆ ನಮ್ಮ ಬಡಗಕಾರಂದೂರು ಶಾಲೆಯಲ್ಲಿ  18ಮಂದಿ ಪೋಷಕರನ್ನೊಳಗೊಂಡ 24ಜನರ ನೂತನ ಎಸ್ ಡಿ ಎಂ ಸಿ ಸಮಿತಿಯು ರಚನೆಗೊಂಡಿತು. ಈ ...
06/08/2024

ಆತ್ಮೀಯರೇ,
ನಿನ್ನೆ ನಮ್ಮ ಬಡಗಕಾರಂದೂರು ಶಾಲೆಯಲ್ಲಿ 18ಮಂದಿ ಪೋಷಕರನ್ನೊಳಗೊಂಡ 24ಜನರ ನೂತನ ಎಸ್ ಡಿ ಎಂ ಸಿ ಸಮಿತಿಯು ರಚನೆಗೊಂಡಿತು. ಈ ಸಮಿತಿಯು ಮುಂದಿನ ಮೂರು ವರ್ಷಗಳ ಅಧಿಕಾರಾವಧಿಯನ್ನು ಹೊಂದಿರುತ್ತದೆ. ಅಧ್ಯಕ್ಷರಾಗಿ ಶ್ರೀಯುತ ಶಶಿಕಾಂತ ನಾಯಕ್ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಐಶ್ವರ್ಯ ರವರು ನೇಮಕಗೊಂಡರು. ತಮ್ಮ ಅಧಿಕಾರಾವಧಿಯಲ್ಲಿ ಶಾಲೆಯು ಇನ್ನೂ ಅಭಿವೃದ್ಧಿ ಹೊಂದಲಿ ಎಂಬ ಹಾರೈಕೆ ಯೊಂದಿಗೆ ಎಲ್ಲ ಸದಸ್ಯರನ್ನೊಳಗೊಂಡ ಸಮಿತಿಗೆ ಅಭಿನಂದನೆಗಳು, ಶುಭ ಹಾರೈಕೆ ಗಳು.💐💐💐💐💐💐

ಅಂತೆಯೆ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡು ಶಾಲೆಯನ್ನು ಉನ್ನತಿಯತ್ತ ಕೊಂಡೊಯ್ದ ನಿಕಟಪೂರ್ವ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ರಾವ್ ದೋರಿಂಜ ಮತ್ತು ಉಪಾಧ್ಯಕ್ಷರಾದ ಶ್ರೀಯುತ ಆನಂದ ಪೂಜಾರಿ ಯವರ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು. ಮುಂದೆಯೂ ತಮ್ಮ ಸಹಕಾರ ನಮ್ಮೊಂದಿಗಿರಲಿ 🙏

ನಮ್ಮ ಶಾಲೆಯ ಮಕ್ಕಳಿಗೆ ಬೆಂಗಳೂರಿನ Texas instrument ಸೇವಾ ಸಂಸ್ಥೆ ಯವರು ಉಚಿತ ಶಾಲಾ ಬ್ಯಾಗ್, ಪುಸ್ತಕ, ಪೆನ್ಸಿಲ್, ರಬ್ಬರ್, ಸ್ಕೇಲ್  ಕಥೆಪ...
30/06/2024

ನಮ್ಮ ಶಾಲೆಯ ಮಕ್ಕಳಿಗೆ ಬೆಂಗಳೂರಿನ Texas instrument ಸೇವಾ ಸಂಸ್ಥೆ ಯವರು ಉಚಿತ ಶಾಲಾ ಬ್ಯಾಗ್, ಪುಸ್ತಕ, ಪೆನ್ಸಿಲ್, ರಬ್ಬರ್, ಸ್ಕೇಲ್ ಕಥೆಪುಸ್ತಕಗಳನ್ನು ವಿತರಿಸಿರುತ್ತಾರೆ. ಈ ಸಂದರ್ಭ ವಿತರಿಸಲು ಆಗಮಿಸಿದ ಸದ್ರಿ ಸಂಸ್ಥೆಯ ಕಾರ್ಯಕರ್ತರಾದ ಶ್ರೀ ಧನುಷ್ ಮತ್ತು ಶ್ರೀಇಶಾನ್ ರವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ರಾವ್, ಸದಸ್ಯರಾದ ಶ್ರೀ ಶಶಿಕಾಂತ ನಾಯಕ್, ಶ್ರೀ ಸಂದೀಪ್ ನೀರಲ್ಕೆ, ಶಾಲಾ ಮುಖ್ಯ ಶಿಕ್ಷಕ ಶ್ರೀ ಸುರೇಶ್, ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. Texas instrument ಸೇವಾಸಂಸ್ಥೆಯ ಸರ್ವ ಸದಸ್ಯರಿಗೆ ಶಾಲಾ ಪರವಾಗಿತುಂಬು ಹೃದಯದ ಧನ್ಯವಾದಗಳು🙏🙏🙏🙏Date 29/06/2024

ಈ ದಿನ ನಮ್ಮ ಶಾಲೆಯಲ್ಲಿ ವೇಣೂರು ಪೋಲಿಸ್ ಠಾಣೆಯ ASI  ಶ್ರೀ ಲೋಕೇಶ್ ಮತ್ತು  ಪೋಲೀಸ್ ಕಾನ್ಸ್ ಟೇಬಲ್  ಶ್ರೀ ತ್ರಿಮೂರ್ತಿ ಯವರು  ಮಾದಕ ವಸ್ತುಗಳ...
25/06/2024

ಈ ದಿನ ನಮ್ಮ ಶಾಲೆಯಲ್ಲಿ ವೇಣೂರು ಪೋಲಿಸ್ ಠಾಣೆಯ ASI ಶ್ರೀ ಲೋಕೇಶ್ ಮತ್ತು ಪೋಲೀಸ್ ಕಾನ್ಸ್ ಟೇಬಲ್ ಶ್ರೀ ತ್ರಿಮೂರ್ತಿ ಯವರು ಮಾದಕ ವಸ್ತುಗಳ ಮಾರಾಟ,ದುರುಪಯೋಗ, ಮತ್ತು ದುಷ್ಪರಿಣಾಮಗಳ ಬಗೆಗೆ ಮಕ್ಕಳಲ್ಲಿ ಅರಿವು ಮೂಡಿಸುವ ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಶಾಲಾ ವತಿಯಿಂದ ಧನ್ಯವಾದಗಳು. 🙏

21/06/2024

ಶಾಲಾ ಸಂಸತ್ತಿನ ಚುನಾವಣೆ 2024-2025

21/06/2024

10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ. ದಿನಾಂಕ 21/06/2024

02/11/2021
*ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಸರೋಜಿನಿ ಅವರಿಗೆ ಬೀಳ್ಕೊಡುಗೆ ಸಮಾರಂಭ*ಸ.ಉ.ಪ್ರಾ ಶಾಲೆ ಬಡಗಕಾರಂದೂರು ಇಲ್ಲಿ 5 ವರ್ಷಗಳ ಕಾಲ ಮುಖ್ಯಶಿಕ್ಷಕ...
15/09/2021

*ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಸರೋಜಿನಿ ಅವರಿಗೆ ಬೀಳ್ಕೊಡುಗೆ ಸಮಾರಂಭ*
ಸ.ಉ.ಪ್ರಾ ಶಾಲೆ ಬಡಗಕಾರಂದೂರು ಇಲ್ಲಿ 5 ವರ್ಷಗಳ ಕಾಲ ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಮತಿ ಸರೋಜಿನಿ ಇವರಿಗೆ ಶಾಲಾ ಎಸ್ ಡಿ ಎಂ ಸಿ, ಅಧ್ಯಾಪಕ ವೃಂದ, ಹಾಗೂ ಪೋಷಕರ ವತಿಯಿಂದ ಸನ್ಮಾನಿಸಿ ಗೌರವದ ಬೀಳ್ಕೊಡುಗೆ ನೀಡಲಾಯಿತು.
ಈ ಸಮಾರಂಭದಲ್ಲಿ ಶ್ರೀಮತಿ ಸರೋಜಿನಿ ಹಾಗೂ ಶ್ರೀ ರುಕ್ಯಯ ಪೂಜಾರಿ ದಂಪತಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ, ಶ್ರೀಮತಿ ಸರೋಜ ಹಾಗೂ ಮಾಜಿ ಗ್ರಾಮ ಪಂಚಾತ್ ಸದಸ್ಯರಾದ ಶ್ರೀ ಸದಾನಂದ ಪೂಜಾರಿ ಉಂಗಿಲಬೈಲು ಸನ್ಮಾನಿತರ ಬಗ್ಗೆ ಅನಿಸಿಕೆ ವ್ಯಕ್ತ ಪಡಿಸಿ ಅವರ ಸೇವೆಯನ್ನು ಸ್ಮರಿಸಿದರು. ಸನ್ಮಾನ ಸ್ವೀಕರಿಸಿದ ಶ್ರೀಮತಿ ಸರೋಜಿನಿ ಯವರು ಮಾತನಾಡಿ ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸಲು ಸಹಕರಿಸಿದ ಎಲ್ಲರನ್ನೂ ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು. ಹಾಗೂ ಈ ಸಂದರ್ಭ ಶಾಲೆಗೆ ಲ್ಯಾಪ್ ಟಾಪ್ ವೊಂದನ್ನು ಕೊಡುಗೆ ನೀಡಿದರು.
ಎಸ್ ಡಿ ಎಂಸಿ ಅಧ್ಯಕ್ಷ ಶ್ರೀ ಶ್ರೀನಿವಾಸ ರಾವ್ ದೋರಿಂಜ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶ್ರೀಮತಿ ಸರೋಜಿನಿಯವರ ಅತ್ಯುತ್ತಮ ಸೇವೆಯನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಎಸ್ ಡಿ ಎಂಸಿ ಉಪಾಧ್ಯಕ್ಷರಾದ ಶ್ರೀ ಆನಂದ ಪೂಜಾರಿ, ಮಾಜಿ ಗ್ರಾಮ ಪಂಚಾತ್ ಸದಸ್ಯರಾದ ಶ್ರೀ ಸದಾನಂದ ಪೂಜಾರಿ ಉಂಗಿಲಬೈಲು, ಗ್ರಾಮ ಪಂಚಾತ್ ಸದಸ್ಯರಾದ ಶ್ರೀ ಕೃಷ್ಣಪ್ಪ ಪೂಜಾರಿ ಹಾಗೂ ನಾರಾವಿ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀ ಸಂತೋಷ್ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಸುನಿಲ್ ಎಂ ಬಾಪಟ್, ಸ್ವಾಗತಿಸಿ ಸಹಶಿಕ್ಷಕಿ ಶ್ರೀಮತಿ ಶಾಲಿನಿ ಧನ್ಯವಾದವನ್ನಿತ್ತರು. ಸಹಶಿಕ್ಷಕಿ ಶ್ರೀಮತಿ ಶ್ವೇತಾ ಎಚ್ ಎನ್ ಸನ್ಮನಪತ್ರ ವಾಚಿಸಿದರು. ಶ್ರೀಮತಿ ಮಂಗಳಾ ಕೆ ಕಾರ್ಯಕ್ರಮ ನಿರ್ವಹಿಸಿದರು.

ದ.ಕ.ಜಿ. ಪಂ. ಉ.ಪ್ರಾಥಮಿಕ ಶಾಲೆ. ಬಡಗಕಾರಂದೂರು ಇಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಕಾರ್ಯಕ್ರಮ ಸರಳವಾಗಿ ನೆರವೇರಿತು. ಶಾಲ...
15/08/2021

ದ.ಕ.ಜಿ. ಪಂ. ಉ.ಪ್ರಾಥಮಿಕ ಶಾಲೆ. ಬಡಗಕಾರಂದೂರು ಇಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಕಾರ್ಯಕ್ರಮ ಸರಳವಾಗಿ ನೆರವೇರಿತು. ಶಾಲಾ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀನಿವಾಸ ದೋರಿಂಜೆ ಇವರು ಧ್ವಜರೋಹಣ ಕಾರ್ಯಕ್ರಮ ನೆರವೇರಿಸಿ ಸರ್ವರಿಗೂ ಸ್ವಾತಂತ್ರೋತ್ಸವದ ಶುಭಾಶಯ ಕೋರಿದರು .
ಶಾಲಾ ಮುಖ್ಯ ಶಿಕ್ಷಕರಾದ ಶ್ರೀಯುತ ಸುನೀಲ್ ಇವರು ಸರ್ವರನ್ನು ಸ್ವಾಗತಿಸಿದರು. ಶ್ರೀಮತಿ ಮಂಗಳ ರವರು ಧನ್ಯವಾದ ಸಮರ್ಪಿಸಿದರು.ಶಾಲಾ ನಿಕಟ ಪೂರ್ವ ಅಧ್ಯಕ್ಷರಾದ ಸದಾನಂದ ಉಂಗಿಲಬೈಲು,ಶಾಲಾ ಶಿಕ್ಷಕ ವೃಂದ. ಎಸ್.ಡಿ.ಎಮ್.ಸಿ ಸದಸ್ಯರು. ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.

ದಿನಾಂಕ 05/07/2021 ರಂದು 2021-2022ನೇ ಶೈಕ್ಷಣಿಕ ವರ್ಷದ ಮೊದಲ ಪೋಷಕರ ಸಭೆಯನ್ನು ನಡೆಸಿ ಶಾಲಾ ಮಕ್ಕಳ  ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ಚರ್ಚಿಸ...
14/07/2021

ದಿನಾಂಕ 05/07/2021 ರಂದು 2021-2022ನೇ ಶೈಕ್ಷಣಿಕ ವರ್ಷದ ಮೊದಲ ಪೋಷಕರ ಸಭೆಯನ್ನು ನಡೆಸಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಯಿತು.
ಹಾಗೂ ಅಕ್ಷರ ದಾಸೋಹ ಬಿಸಿ ಊಟ ದ ಆಹಾರ ಧಾನ್ಯ ಹಾಗೂ ಎಣ್ಣೆಯನ್ನು ಜನಪ್ರತಿನಿಧಿಗಳ ಸಮ್ಮುಖದಲ್ಲಿ ವಿತರಿಸಲಾಯಿತು.

ದಿನಾಂಕ 01/07/2021 ರಂದು 2021-2022 ನೇ ಶೈಕ್ಷಣಿಕ ವರ್ಷದ ಶಾಲಾರಂಭವನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಯುತ ಶ್ರೀನಿವಾಸ ರಾವ್ ದೋರಿ...
14/07/2021

ದಿನಾಂಕ 01/07/2021 ರಂದು 2021-2022 ನೇ ಶೈಕ್ಷಣಿಕ ವರ್ಷದ ಶಾಲಾರಂಭವನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಯುತ ಶ್ರೀನಿವಾಸ ರಾವ್ ದೋರಿಂಜ ಇವರು ಶಾಲಾ ಎಸ್ ಡಿ ಎಂ ಸಿ ಸದಸ್ಯರು, ಅಧ್ಯಾಪಕ ವೃಂದ , ಅಳದಂಗಡಿ ಪಂಚಾಯತ್ ಪ್ರತಿನಿಧಿಗಳಾದ
ಶ್ರೀ ಕೃಷ್ಣಪ್ಪ ಪೂಜಾರಿ ಬಿಕ್ಕಿರ, ಶ್ರೀ ಹರೀಶ ಆಚಾರ್ಯ ಹಾಗೂ ಶ್ರೀಮತಿ ಗೀತಾ ಮತ್ತು ಶಾಲಾ ನಿಕಟಪೂರ್ವ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಸದಾನಂದ ಪೂಜಾರಿ ಉಂಗಿಲಬೈಲು ಇವರ ಸಮ್ಮುಖದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.😊💐

Address

GUPS Badagakaraduru

574217

Website

Alerts

Be the first to know and let us send you an email when GUPS Badagakaranduru posts news and promotions. Your email address will not be used for any other purpose, and you can unsubscribe at any time.

Contact The School

Send a message to GUPS Badagakaranduru:

Shortcuts

  • Want your school to be the top-listed School/college?

Share