Vigour Institute of Yogic Science and Studies

Vigour Institute of Yogic Science and Studies

Share

Contact information, map and directions, contact form, opening hours, services, ratings, photos, videos and announcements from Vigour Institute of Yogic Science and Studies, Education, Bangalore 560056, Bangalore.

we provide yoga education through teaching the skills of yogic activities, and conducting yoga related courses to give qualified and knowledgeable teachers to uplift yoga in a scientific way,
our college is affiliated to Bangalore University it's exclus

12/12/2025

Gentle look @ Kodachadri nature

12/12/2025

Kodachadri trip with MSc Students

12/12/2025

Arunachala Deepam

02/02/2025

ಸಾಧು ಮತ್ತು (ಇಲಿ)ಮೂಶಕ..!! :

ಪಂಚತಂತ್ರದ ಒಂದು ಅದ್ಭುತ ಕಥೆ
ಒಂದಾನೊಂದು ಕಾಲದಲ್ಲಿ, ಒಂದು ಸಣ್ಣ ಹಳ್ಳಿಯಲ್ಲಿ ಪುರಾತನ ಶಿವ ದೇವಾಲಯದ ಮೂಲೆಯಲ್ಲಿ ಒಬ್ಬ ಸನ್ಯಾಸಿ ವಾಸಿಸುತ್ತಿದ್ದನು. ಸನ್ಯಾಸಿ ಶಿವನ ಕಟ್ಟಾ ಭಕ್ತನಾಗಿದ್ದ.
ಅವರು ತಮ್ಮ ಧಾರ್ಮಿಕ ಪ್ರವೃತ್ತಿಗಳು ಮತ್ತು ತಪಸ್ವಿ ಜೀವನಶೈಲಿಗಾಗಿ ಗ್ರಾಮಸ್ಥರಲ್ಲಿ ಪ್ರಸಿದ್ಧರಾಗಿದ್ದರು. ಸನ್ಯಾಸಿ ತನ್ನ ಅಗತ್ಯಗಳಿಗಾಗಿ ನಗರದಿಂದ ಭಿಕ್ಷೆಯನ್ನು ಸಂಗ್ರಹಿಸಿ ತನ್ನ ಆಹಾರವನ್ನು ಸ್ವಲ್ಪ ಉಳಿಸಿ ಬುಟ್ಟಿಯಲ್ಲಿ ಇಡುತ್ತಾರೆ.
ಅಷ್ಟಕ್ಕೂ, ಈ ಪುಟ್ಟ ಇಲಿಯು ಇಷ್ಟು ಸುಲಭವಾಗಿ ಮತ್ತು ಆತ್ಮವಿಶ್ವಾಸದಿಂದ ಆಹಾರವನ್ನು ಕದಿಯಲು ಹೇಗೆ ಸಾಧ್ಯವಾಯಿತು..? ಇದು ಸನ್ಯಾಸಿಗೆ ಪ್ರಶೆಯಾಗಿತ್ತು. ಈ ಸಮಸ್ಯೆಯನ್ನು ಎದುರಿಸಲು ಸನ್ಯಾಸಿ ಹಲವಾರು ವಿಧಾನಗಳನ್ನು ಅಳವಡಿಸಿಕೊಂಡರು. ಕೆಲವೊಮ್ಮೆ ಆಹಾರದ ಬುಟ್ಟಿಯನ್ನು ಎತ್ತರದ ಜಾಗದಲ್ಲಿ ಇಟ್ಟು ಕೆಲವೊಮ್ಮೆ ಕೋಲಿನಿಂದ ಇಲಿಯನ್ನು ಓಡಿಸುತ್ತಿದ್ದರೂ ಪ್ರತಿ ಬಾರಿಯೂ ಇಲಿ ಹೊಸ ಉಪಾಯವನ್ನು ಮಾಡುತ್ತಿತ್ತು.
ಒಂದು ದಿನ ಸನ್ಯಾಸಿ ಇಲಿಗಳನ್ನು ಓಡಿಸುತ್ತಿದ್ದಾಗ ಅವನ ಗುರುಗಳು ಅಲ್ಲಿಗೆ ಬಂದರು. ತನ್ನ ಶಿಷ್ಯನ ಕಾರ್ಯನಿರತತೆಯನ್ನು ನೋಡಿ, ಗುರುಗಳು ಅಲ್ಲಿಂದ ಹೊರಡಲು ಸಿದ್ಧರಾದರು ಆದರೆ ಸಾಧು ತಕ್ಷಣ ತನ್ನ ಗುರೂಜಿಗೆ ಹೋಗಬೇಡಿ ಎಂದು ವಿನಂತಿಸಿದರು ಮತ್ತು ಇಲಿಯ ಬಗ್ಗೆ ಎಲ್ಲವನ್ನೂ ಹೇಳಿದರು.
ಗುರುಗಳು ಮುಗುಳ್ನಗುತ್ತಾ ಹೇಳಿದರು,
"- ಇಲಿಗೆ ತಾನು ಸಂಗ್ರಹಿಸಿಟ್ಟ ಸಂಪನ್ಮೂಲಗಳ ಕೊರತೆಯಿಲ್ಲ, ಅದು ನಿರ್ಭೀತ ಮತ್ತು ಆತ್ಮವಿಶ್ವಾಸದಿಂದ ತುಂಬಿರುತ್ತದೆ. ಇಲಿಯ ಸ್ಥಿತಿ ಹೀಗಿರುವುದರಿಂದ ಅದರ ಆತ್ಮವಿಶ್ವಾಸವನ್ನು ಮುರಿಯಬೇಕಾದರೆ ಅದರ ಸಂಗ್ರಹವನ್ನು ನಾಶಪಡಿಸಬೇಕು. ."
ಇದಕ್ಕೆ ಒಪ್ಪಿದ ಋಷಿ ಮರುದಿನ ಇಲಿಯನ್ನು ಹಿಂಬಾಲಿಸಿ ಅದರ ಬಿಲಕ್ಕೆ ಹೋದನು. ಬಿಲವನ್ನು ಪರಿಶೀಲಿಸಿದಾಗ, ಇಲಿ ಧಾನ್ಯದ ಸಂಪೂರ್ಣ ರಾಶಿಯನ್ನು ಸಂಗ್ರಹಿಸಿರುವುದನ್ನು ಅವನು ನೋಡಿದನು. ಕೂಡಲೇ ಋಷಿಯು ಆ ಧಾನ್ಯವನ್ನು ತೆಗೆದು ಹಸುವಿಗೆ ತಿನ್ನಿಸಿದನು.
ಇಲಿಯು ತನ್ನ ಬಿಲಕ್ಕೆ ಹಿಂತಿರುಗಿದಾಗ, ತನಗೆ ಆಹಾರ ಸಿಗದ ಕಾರಣ ಅದರ ಕಾಲಕೆಳಗಿನ ಭೂಮಿ ಕುಸಿದಂತಾಗಿ ಕಣ್ಣೀರು ಸುರಿಸಿತು ಮತ್ತು ನಿರಾಶೆಗೊಂಡಿತು. ಅದು ತನ್ನ ಆತ್ಮವಿಶ್ವಾಸವನ್ನು ಕಳೆದುಕೊಂಡ ನಂತರವೂ ಮತ್ತೆ ಆಹಾರ ಸಂಗ್ರಹಿಸಲು ಪ್ರಯತ್ನಿಸಿತು. ಅದು ಸನ್ಯಾಸಿಯ ಗುಡಿಸಲಿಗೆ ಹೋಗಿ ಬುಟ್ಟಿಯನ್ನು ತಲುಪಲು ಪ್ರಯತ್ನಿಸಿತು. ಆದರೆ.., ಈ ಬಾರಿ ಅದರ ಹೆಜ್ಜೆಗಳು ನಡುಗಿದವು ಮತ್ತು ಅದು ಕೆಳಗೆ ಬಿದ್ದುಬಿಟ್ಟಿತು.
ಇಲಿ ಧೈರ್ಯವನ್ನು ಒಟ್ಟುಗೂಡಿಸಿ ಮತ್ತೊಮ್ಮೆ ಬುಟ್ಟಿಯನ್ನು ತಲುಪಲು ಪ್ರಯತ್ನಿಸಿತು. ಆದರೆ ಎತ್ತರದಲ್ಲಿ ಇರಿಸಲಾದ ಬುಟ್ಟಿಯಿಂದ ಕದಿಯಲು ಇಲಿ ಮತ್ತೆ ಪ್ರಯತ್ನಿಸಿದಾಗ ಅದಕ್ಕೆ ತನ್ನ ದುರ್ಬಲತೆಯ ಅರಿವಾಯುತು.
ಅದು ಪುನಃ ಬುಟ್ಟಿ ತಲುಪದೇ ಅರ್ಧದಲ್ಲೇ ಉರುಳಿ ಬಿದ್ದುಬಿಟ್ಟಿತು. ಅಲ್ಲಿ ಋಷಿಗಳು ಅದನ್ನು ತಡೆಯಲು ಸಿದ್ಧರಾಗಿ ನಿಂತಿದ್ದರು. ಭಯಗೊಂಡ ಇಲಿ ಓಡಿಹೋಗಿ ಆ ದಿನದ ನಂತರ ಹಿಂತಿರುಗಲಿಲ್ಲ.
ಈ ಕಥೆಯಿಂದ ನಾವು ಆತ್ಮವಿಶ್ವಾಸ ಮತ್ತು ನಿರ್ಭಯತೆ ಸ್ವಯಂಚಾಲಿತವಾಗಿ ಸೃಷ್ಟಿಯಾಗುವುದಿಲ್ಲ. ಅದರ ಹಿಂದೆ ಯಾವಾಗಲೂ ಕೆಲವು ಆಧಾರಗಳಿವೆ ಎಂಬುದನ್ನು ತಿಳಿಯುತ್ತೇವೆ. ಆ ನೆಲೆ ಇರುವವರೆಗೆ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಆದರೆ, ಈ ನೆಲೆಯನ್ನು ಕಳೆದುಕೊಂಡರೆ ಮಾತ್ರ ಪರಿಶ್ರಮದ ನಿಶ್ಚಲತೆಯೂ ಕೊನೆಗೊಳ್ಳುತ್ತದೆ.
Be safe always keep some assets for yourself

Photos from Vigour Institute of Yogic Science and Studies's post 02/02/2025

ನಕ್ಷತ್ರಮಂಡಲದಿನಾಚೆಯಿಂದೊಂದು ದನಿ ।
ವಕ್ಷೋಗುಹಾಂತರದಿನೊಂದು ದನಿಯಿಂತೀ ॥
ಸಾಕ್ಷಿದ್ವಯವು ನಿನ್ನೊಳೊಂದುಗೂಡಿದೊಡದೇ ।
ಪ್ರೇಕ್ಷೆ ಪರಬೊಮ್ಮನದು - ಮಂಕುತಿಮ್ಮ ॥ ೬೧ ॥

There is a voice that seems to come from beyond the constellations of stars (all the external influences to our intellect). There is one voice that rises from deep inside our heart (as a result of deep contemplation). When we can resolve this duality and unify them into one, we will see God. - Mankutimma

ವಕ್ಷ = ಹೃದಯ, ಪ್ರೇಕ್ಷೆ = ಸಾಕ್ಷಾತ್ಕಾರ, ದರ್ಶನ, ಪರಬೊಮ್ಮನದು = ಪರಬ್ರಹ್ಮನದು

ನಕ್ಷತ್ರ ಮಂಡಲದ ಆಚೆಯಿಂದ ಒಂದು ದನಿ, ವಕ್ಷ ಗುಹಾಂತರದಿಂದ ಒಂದು ದನಿಯಂತೆ ಈ ಸಾಕ್ಷಿ ದ್ವಯವು ನಿನ್ನೊಳಗೆ ಒಂದು ಗೂಡಿದೊಡೆ ಅದೇ ಪರ ಬ್ರಹ್ಮನ ದರ್ಶನವನ್ನು ನೀಡುತ್ತದೆ ಎಂಬುದೇ ಈ ಕಗ್ಗದ ಹೂರಣ.

ಒಂದು ದೈವೀ ದನಿ ಮತ್ತೊಂದು ಅಂತರ್ದನಿ ಎರಡರ ಸಮ್ಮಿಲನವೇ ಪರಮಾತ್ಮ ದರ್ಶನ. ನಾವು ಯಾವುದಾದರೊಂದು ದನಿಯನ್ನು ಕೇಳಬಹುದಲ್ಲವೆ. ಈ ಎರಡೂ ದನಿಗಳನ್ನು ಕೇಳುವುದು ಹೇಗೆ.ಅವುಗಳನ್ನು
ಮೇಳೈಸುವುದು ಹೇಗೆ ಎಂಬುದೇ ಆಧ್ಯಾತ್ಮ ವಿದ್ಯೆಯ ಅಂತಿಮ ಪಾಠ. ಇಡೀ ಸೃಷ್ಟಿಯನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವುದು ಕಷ್ಟ. ಆದರೆ ಅಸಾಧ್ಯವಲ್ಲ. ಹಾಗೆ ಕಲ್ಪಿಸಿಕೊಳ್ಳಲಾದರೆ, ಅದನ್ನು ಅಂತಃಚಕ್ಷುವಿನಿಂದ ನೋಡಲು ಸಾಧ್ಯವಾದರೆ ಮತ್ತು ಅದನ್ನು ನಮ್ಮ ಅಂತರಂಗದಲ್ಲಿ ಈ ಪಂಚಭೂತಗಳ, ಪಂಚ ಜ್ಞಾನೇಂದ್ರಿಯಗಳ, ಪಂಚ ಸ್ಪರ್ಶೇ೦ದ್ರಿಯಗಳ ಪ್ರಭಾವ ಮತ್ತು ಪರಿಧಿಯಿಂದ ಹೊರತುಪಡಿಸಿ ನೋಡಿದಾಗ ಆ ಬೃಹತ್ ಚೇತನದ ಅದ್ಭುತ ಕಾರ್ಯದ ಅರಿವಾಗಿ, ನಾವು ಪರಮಾತ್ಮ ದರ್ಶನ ಮಾಡಿಕೊಳ್ಳಬಹುದು. ಇದನ್ನು ವಿವರಿಸುವುದು ಕಷ್ಟ. ನಾ ಹಿಂದೆ ಹೇಳಿದ ಹಾಗೆ ಇದು ಕೇವಲ ಅನುಭವ ವೇಧ್ಯ.ಇದನ್ನು ಇನ್ನೊಂದು ರೀತಿ ನೋಡಬಹುದು. ನಮಗೆ ಬಹಳಷ್ಟು ಜನರ ಬೋಧನೆಗಳು, ನಮ್ಮ ಓದಿನಿಂದ ಬಹಳಷ್ಟು ವಿಚಾರಗಳು, ತಿಳಿದವರಿಂದ, ಪಂಡಿತರಿಂದ, ಸಾಧು ಸಂತರಿಂದ, ಸಾಧನೆ ಮಾಡಿದವರಿಂದ ಕೇಳಿದ ವಿಚಾರಗಳಿಂದ ಒಂದು ಸ್ವಲ್ಪಮಟ್ಟಿಗೆ ಹಲವು ವಿಚಾರಗಳು ಅರಿವಿಗೆ ಬರುತ್ತವೆ. ನಾವು ನಮ್ಮ ಅಂತರಂಗದಲ್ಲಿ ಅಂತರ್ಮುಖಿಯಾಗಿ ಅನುಭವಿಸುವ ಕೆಲವು ವಿಚಾರಗಳು ನಮ್ಮ ಅರಿವಿಗೆ ಬರುತ್ತವೆ. ಎರಡೂ ವಿಚಾರಗಳನ್ನು ಮಂಥನ ಮಾಡಿ ಸಾಧ್ಯಾಸಾಧ್ಯತೆಗಳನ್ನು, ಸಾಧಕ ಭಾದಕಗಳನ್ನು, ವಿಚಾರದ ಒರೆಗೆಹಚ್ಚಿ ನಮಗೆ ಸರಿಕಂಡದ್ದನ್ನು ನಂಬಿ, ನಮ್ಮ ನಂಬಿಕೆಯನ್ನು ಗಟ್ಟಿ ಮಾಡಿಕೊಂಡು, ನಮ್ಮ ಅನುಭವನ್ನು ದೀರ್ಘಕಾಲ ಅನುಭವಿಸುವಂತಾದರೆ ಆ ಪರಮಾತ್ಮನ ಸತ್ಯರೂಪದ ದರ್ಶನ ನಮಗೆ ಖಂಡಿತ ಆಗುತ್ತದೆ. ಇದನ್ನೇ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ” ಸಾಕ್ಷಿ ದ್ವಯವು ” ಎಂಬ ಪದ ಪ್ರಯೋಗದಿಂದ ಉಲ್ಲೇಖಿಸಿದ್ದಾರೆ.ಇದನ್ನು ಅನುಭವಿಸ ಬೇಕು. ಅಂತರಂಗದಲ್ಲಿ ತಂದುಕೊಂಡು ಸಂತಸಿಸಬೇಕು, ಕಂಡುಕೊಳ್ಳಬೇಕು ಸ್ಥಿರಮಾಡಿಕೊಳ್ಳಬೇಕು. ನನ್ನ ಅನುಭವಕ್ಕೆ ಇನ್ನೂ ಸ್ಥಿರವಾಗಿ ಬಂದಿಲ್ಲ. ಪ್ರಯತ್ನಪಡುತ್ತಿದ್ದೇನೆ. ವಾಚಕರೆ ನೀವೂ ಪ್ರಯತ್ನ ಪಡಿ. ಜಯವಾಗಲಿ.

nakShatra manDaladina Acheinda ondu dani ।
vakSho guhAntaradinondu daniyantI ॥
sAkShidvayavu ninnoLu ondugUDidoDadE ।
prEkShe parabommanadu - Mankutimma ॥ 61 ॥

Photos from Vigour Institute of Yogic Science and Studies's post 01/02/2025

Universalism is the utmost challenge because so many customs traditions and cultures understand properly and live happily

ಗ್ರೀಸಿನಾ ಕಬ್ಬಗಳನೋದುವರು ದೆಹಲಿಯಲಿ ।
ಕಾಶಿಯಾ ಶಾಸ್ತ್ರಗಳನಾಕ್ಸ್ ಫರ್ಡಿನವರು‍ ॥
ದೇಶಕಾಲವಿಭಾಗ ಮನದ ರಾಜ್ಯದೊಳಿರದು ।
ಶ್ವಾಸವದು ಬೊಮ್ಮನದು - ಮಂಕುತಿಮ್ಮ ॥ ೬೦ ॥

People in Delhi read the epics of Greece. People in Oxford, England read about the scriptures taught in Kashi. The compartmentalizing of time and space does not exist in the kingdom of ht mind. There every word - no matter who uttered it where - is a breath of God.

God,ದೇವ, ಮನ, Mind - Mankutimma

ಕಬ್ಬಗಳು = ಕಾವ್ಯಗಳು ಬೊಮ್ಮನದು = ಪರಮಾತ್ಮನದು.

ಗ್ರೀಸಿನ ಕಬ್ಬಗಳನ್ನು ಓದುವರು ದೆಹಲಿಯವರು. ಕಾಶಿಯಾ ಶಾಸ್ತ್ರಗಳನ್ನು ಆಕ್ಸಫರ್ಡಿನವರು
ದೇಶ ಕಾಲ ವಿಭಾಗ ಮನ ರಾಜ್ಯದೊಳು ಇರದು ಶ್ವಾಸವದು ಬೊಮ್ಮನದು ಮಂಕುತಿಮ್ಮ.

ಜಗತ್ತಿನ ವಿಶಾಲತೆಗೆ ಒಂದು ಕನ್ನಡಿ ಈ ಕಗ್ಗ. “ಗ್ಲೋಬಲ್ ವಿಲೇಜ್” ಎಂದು ಇತ್ತೀಚೆಗೆ ಒಂದು ಪದ ಪ್ರಯೋಗವನ್ನು ನಾವು ಕೇಳುತಿದ್ದೇವೆ. ನಾವು ಇಲ್ಲಿ ಕುಳಿತುಕೊಂಡು ಪ್ರಪಂಚದ ಯಾವುದೇ ಮೂಲೆಯಲಿರುವ ಜನರೊಡನೆ ನಾನಾ ವಿಧವಾದ ಸಂಪರ್ಕಗಳನ್ನು ಇಂದು ಹೊಂದಿದ್ದೇವೆ. ಎಲ್ಲಿಯೋ ಹುಟ್ಟಿ ಬೆಳೆದ, ಆಲ್ಬರ್ಟ್ ಕಾಮೂವಿನ ನಾಟಕಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತೇವೆ. ಶೇಕ್ಸಪಿಯರನ ನಾಟಕಗಳನ್ನೂ ಆಡುತ್ತೇವೆ. ಆಲ್ಲಿ ಅವರುಗಳು ನಮ್ಮ ಭಾರತೀಯ ಸಂಸ್ಕೃತಿಯ ಕತೆ ನಾಟಕ ಶಾಸ್ತ್ರಗಳನ್ನು ಓದುತ್ತಾರೆ. ಇಂಗ್ಲೆಂಡಿನ ಶಾಲೆಗಳಲ್ಲಿ ” ಸಹನಾವವತು” ಹೇಳುತ್ತಾರೆ ಪ್ರಾರ್ಥನೆಯಲ್ಲಿ. ಆದರೆ ದುರಂತವೆಂದರೆ, ಇಲ್ಲಿ ಭಾರತದಲ್ಲಿ ಅದನ್ನು ಶಾಲೆಗಳಲ್ಲಿ ಹೇಳಿದರೆ ಅದಕ್ಕೊಂದು ಬಣ್ಣ ಕಟ್ಟಿ ಗೊಂದಲವೇ ಆಗುತ್ತದೆ. ಇರಲಿ, ಹೀಗೆ ಬೇರೆ ಬೇರೆ ದೇಶಗಳ ಭಾಷೆ ಮತ್ತು ಸಂಸ್ಕೃತಿಗಳನ್ನು ಬೇರೆ ಬೇರೆ ದೇಶಗಳಲ್ಲಿ ಅನುಕರಿಸಿ, ಅನುಸರಿಸುವಾಗ ಇಡೀ ಜಗತ್ತೇ ಒಂದು ಮನೆಯಾಗುವ ಸಂಭವ ಇದೆ ಎಂದು ಅರ್ಥ ತಾನೇ.

“ವಿದ್ವತ್ವಂಚ ನೃಪತ್ವಂಚ ನೈವ ತುಲ್ಯಂ ಕದಾಚನ | ಸ್ವದೇಶೆ ಪೂಜ್ಯತೆ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೆ ” ಎನ್ನುತ್ತದೆ ಸುಭಾಷಿತ. ಹಾಗೆ ವಿದ್ಯೆಗೆ ದೇಶ ಕಾಲದ ಎಲ್ಲೆ ಇರುವುದಿಲ್ಲ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ . ಹೌದು ಮನಸ್ಸು ವಿಶಾಲವಾದರೆ, ಮನಸ್ಸಿನ ಚಿಂತನೆ ವಿಶಾಲವಾದರೆ ಅದು ಸಾಧ್ಯ. ಆದರೆ ಜಾತಿ, ಮತ, ದೇಶ, ಭಾಷೆ, ವರ್ಣಗಳ ಸಣ್ಣ ಸಣ್ಣ ವೃತ್ತಗಳ ಗೆರೆಗಳನ್ನು ನಮ್ಮ ಸುತ್ತ ನಾವೇ ಎಳೆದುಕೊಂಡು ನಮ್ಮ ಜಾತಿ, ನಮ್ಮ ಭಾಷೆ, ನಮ್ಮ ವರ್ಣ, ನಮ್ಮ ರಾಜ್ಯ. ಹೀಗೆ ಬೇರೆ ಬೇರೆ ರೀತಿಯ ವೃತ್ತಗಳನ್ನು ಎಳೆದುಕೊಂಡು “ಕೂಪಸ್ಥ ಮಂಡೂಕ” ದ ರೀತಿ ಬಾಳುವ ನಮಗೆ ಜಗದ್ವೈಶಾಲ್ಯದ ಮನೋಭಾವ ಹೇಗೆ ಬರಬೇಕು ಹೇಳಿ? ಇಂದು ಜಗತ್ತು ಇರುವುದೇ ಹಾಗೆ. ಒಬ್ಬರು ಹಾಗಾದರೆ, ಮತ್ತೊಬ್ಬರೂ ತಮ್ಮ ಪ್ರತಿಷ್ಠೆ ತೋರುವುದಕ್ಕೋ ಅಥವಾ ತಮ್ಮನ್ನು ಮತ್ತು ತಮ್ಮತನವನ್ನು ಕಾಪಾಡಿಕೊಳ್ಳುವುದಕ್ಕೋ, ಇವರೂ ಹಾಗಾಗುತ್ತಾರೆ. ಇದಕ್ಕೆ ಕೊನೆ ಎಲ್ಲಿ. ಆ ದೇವರೇ ಬಲ್ಲ.ಇಷ್ಟೆಲ್ಲಾ ವಿರೋಧ-ವೈವಿಧ್ಯತೆಗಳಲ್ಲಿ ಮನುಷ್ಯ ಒಂದು ವಿಚಾರ ಮರೆತು ಹೋಗಿದ್ದಾನೆ. ಎಲ್ಲ ಮನುಷ್ಯರೂ ಬದುಕಿರುವುದೇ ಉಸಿರಾಟದಿಂದ. ಮತ್ತು ಆ ಉಸಿರು ಪರಮ ಚೇತನದ ಕರುಣೆಯಿಂದ ನಮಗೆ ಸಿಕ್ಕಿದೆ. ವಾಚಕರೆ, ನೋಡಿ ಒಂದು ಉಸಿರು ಒಳಗೆ ಹೋದದ್ದು ಹೊರಗೆ ಬರದಿದ್ದರೆ ಅಥವಾ ಹೊರಗೆ ಬಿಟ್ಟ ಉಸಿರು ಮತ್ತೆ ಒಳಗೆ ಹೋಗದಿದ್ದರೆ, ನಾವು ಇಲ್ಲ. ಇಷ್ಟು ದುರ್ಬಲ, ಸೂಕ್ಷ್ಮ, ನಾಜೂಕಾದದ್ದು ( fragile ) ನಮ್ಮ ಬದುಕು, ನಾವು ಎಷ್ಟು ದಿವಸ ಬದುಕಿರಬೇಕು ಎನ್ನುವುದು ಆ ಪರಮ ಶಕ್ತಿಯ ಇಚ್ಚೆಯ ಮೇಲೆ ನಿರ್ಭರವಾಗಿದೆ ಎಂಬುವುದು ಆಸ್ತಿಕರ ನಂಬಿಕೆ. ಇರಲಿ ಯಾವುದೋ ಒಂದು ಶಕ್ತಿಯ ಅಧೀನ ನಾವೆಲ್ಲಾ. ಹಾಗೆ ಅಷ್ಟು ನಾಜೂಕಾದ ಬದುಕನ್ನು ನಡೆಸುವ ನಾವು, ಈ ಕ್ಷಣ ಇದೆ-ಮತ್ತೊಂದು ಕ್ಷಣ ಇಲ್ಲ, ಎನ್ನುವಂಥಾ ಬದುಕಿಟ್ಟುಕೊಂಡು ನಾವು ಅಹಂಕಾರ ಪಡುವುದು ಮೂರ್ಖತನವಲ್ಲದೆ ಮತ್ತೇನು.ಬನ್ನಿ ನಾವು ಈ ಜಾತಿ, ಮತ, ದೇಶ, ಭಾಷೆ, ವರ್ಣಗಳ ಸಣ್ಣ ಸಣ್ಣ ವೃತ್ತಗಳ ಗೆರೆಗಳನ್ನು ಅಳಿಸಿ ಅಹಂಕಾರವನ್ನು ತೊರೆದು, ಪರಸ್ಪರ ಪ್ರೀತಿ, ಸದ್ಭಾವನೆ, ವಿಶ್ವಾಸಗಳನ್ನು ಬೆಳೆಸಿಕೊಂಡುವಿಶ್ವಮಾನವರಾಗೋಣ. ಇಡೀ ವಿಶ್ವವನ್ನೇ ಎಲ್ಲ ಪ್ರಾಣಿಗಳೂ ಪ್ರಶಾಂತವಾಗಿ ಜೀವಿಸಲು ಒಂದು ಸುಂದರ ತಾಣವನ್ನಾಗಿ ಪರಿವರ್ತಿಸುವ ಪ್ರಯತ್ನ ಮಾಡೋಣ.

grIsinA kabbagaLanu Oduvaru dehaliyali ।
kAshiyA shAstragaLanu AkspharDinavaru ॥
dEshakAlavibhAga manada rAjyadoLu iradu ।
shvAsavadu bommanadu - Mankutimma ॥ 60 ॥

Photos from Vigour Institute of Yogic Science and Studies's post 01/02/2025

Respect your parents, the karmapala returns back
ಹಣ್ಣು ಹಣ್ಣು ಮುದುಕನೊಬ್ಬ ಮಗ-ಸೊಸೆ, ನಾಲ್ಕು ವರ್ಷದ ಮೊಮ್ಮಗನೊಂದಿಗೆ ವಾಸವಾಗಿದ್ದ. ಹೆಂಡತಿ ತೀರಿಹೋಗಿ ವರ್ಷಗಳೇ ಕಳೆದು ಹೋಗಿದ್ದವು. ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದ ಮಡದಿ ತೀರಿದ ಮೇಲೆ ಈ ಮುದುಕಪ್ಪ ಯಾರಿಗೂ ಬೇಡದವನಾಗಿದ್ದ. ವಯೋಸಹಜವಾಗಿ ಆತನಿಗೆ ಸರಿಯಾಗಿ ಕಣ್ಣು ಕಾಣಿಸುತ್ತಿರಲಿಲ್ಲ, ನಡೆಯಲು ಆಗುತ್ತಿರಲಿಲ್ಲ, ಊಟ ಮಾಡುವಾಗ ಕೈ ನಡುಗುತ್ತಿತ್ತು. ಪ್ರತಿ ರಾತ್ರಿ ನಾಲ್ಕೂ ಜನರು ಒಟ್ಟಿಗೆ ಊಟ ಮಾಡುತ್ತಿದ್ದರು. ಆದರೆ ನಡುಗುವ ಕೈಗಳ ಅಜ್ಜ ಊಟ ಮಾಡುವಾಗ ಆಹಾರ ಕೆಳಗೆ ಬೀಳುತ್ತಿತ್ತು, ಗಾಜಿನ ಲೋಟ ಬಿದ್ದು ಒಡೆದು ಹೋಗುತ್ತಿತ್ತು, ಊಟದ ಮೇಜು ಪ್ರತಿದಿನವೂ ಆತನಿಂದ ಗಲೀಜಾಗುತ್ತಿತ್ತು. ಸೊರ ಸೊರ ಶಬ್ದ ಮಾಡುತ್ತಾ ಊಟ ಮಾಡುವ ಅವನಿಂದ ಮಗ-ಸೊಸೆಗೆ ಕಿರಿಕಿರಿಯಾಗುತ್ತಿತ್ತು. ಅತಿಥಿಗಳು ಮನೆಗೆ ಬಂದರೆ ಮುದುಕನನ್ನು ವಿಚಿತ್ರವಾಗಿ ನೋಡುತ್ತಿದ್ದರು.

‘ಅಪ್ಪನಿಗೆ ವಯಸ್ಸಾಗಿದೆ. ಎಷ್ಟೊಂದು ಗಲೀಜಾಗಿ ಊಟ ಮಾಡುತ್ತಾರೆ. ನನಗಂತೂ ಸಾಕಾಗಿ ಹೋಗಿದೆ’ ಎಂದು ಒಂದು ದಿನ ಮಗ ಹೆಂಡತಿಗೆ ಹೇಳಿದ.‘ಅಯ್ಯೋ ದಿನವೂ ಹಾಲು ಚೆಲ್ಲಿಕೊಳ್ಳುತ್ತಾರೆ, ಅವರಿಂದ ಒಡೆದು ಹೋದ ಗಾಜಿನ ಪಾತ್ರೆಗಳಿಗೆ ಲೆಕ್ಕವೇ ಇಲ್ಲ’ ಎಂದಳು ಹೆಂಡತಿ. ಅಂದಿನಿಂದ ಅಡುಗೆ ಮನೆಯ ಮೂಲೆಯಲ್ಲಿ ಮುದುಕನಿಗೆ ಪ್ರತ್ಯೇಕವಾಗಿ ಊಟದ ಟೇಬಲ್ ಹಾಕಿಕೊಡಲಾಯಿತು. ಗಾಜಿನ ಪಾತ್ರೆ ಬಿದ್ದರೆ ಒಡೆಯುತ್ತದೆ, ಸ್ಟೀಲ್ ಪಾತ್ರೆ ಬಿದ್ದರೆ ಶಬ್ದವಾಗಿ ರಗಳೆಯಾಗುತ್ತದೆ ಎಂದು ಆತನಿಗೆ ಮರದ ಪಾತ್ರೆಯೊಂದರಲ್ಲಿ ಊಟ ನೀಡುವ ವ್ಯವಸ್ಥೆ ಮಾಡಿದರು. ಅಂದಿನಿಂದ ಮುದುಕ ಒಂಟಿಯಾಗಿ ಮೂಲೆಯಲ್ಲಿ ಕುಳಿತು ಊಟ ಮಾಡತೊಡಗಿದ. ಉಳಿದವರು ಒಟ್ಟಿಗೆ ಕುಳಿತು ನಗು ನಗುತ್ತಾ ಊಟ ಮಾಡುತ್ತಿದ್ದರು. ದಿನವೂ ಹೆಂಡತಿಯನ್ನು ನೆನೆದು, ತನ್ನ ಪರಿಸ್ಥಿತಿಗೆ ಮರುಗಿ ಮುದುಕ ಕಣ್ಣೀರಾಗುತ್ತಿದ್ದ. ನಾಲ್ಕು ವರ್ಷದ ಮೊಮ್ಮಗ ಇವೆಲ್ಲವನ್ನೂ ಮೌನವಾಗಿಯೇ ನೋಡಿಕೊಂಡಿದ್ದ.

ಒಂದು ದಿನ ಸಂಜೆ ಹುಡುಗ ಮರದ ತುಂಡುಗಳನ್ನು ತಂದು ಗುಡ್ಡೆ ಹಾಕಿಕೊಂಡು ಏನೋ ಮಾಡುತ್ತಿದ್ದ. ಅಲ್ಲಿಗೆ ಬಂದ ಅವನ ತಂದೆ ‘ಏನು ಮಾಡುತ್ತಿದ್ದೀಯಾ ಮಗು?’ ಎಂದು ಕೇಳಿದ. ‘ಓಹ್ ಅದಾ, ನಾನು ಎರಡು ಪುಟ್ಟ ಪುಟ್ಟ ಪಾತ್ರೆಗಳನ್ನು ಮಾಡುತ್ತಿದ್ದೇನೆ. ಈಗ ನಮ್ಮಲ್ಲಿ ಒಂದೆರಡು ಪಾತ್ರೆಗಳಷ್ಟೇ ಇವೆ. ಅವು ಅಜ್ಜನಿಗೆ ಆಗುತ್ತವೆ. ಆದರೆ ನೀವು ದೊಡ್ಡವರಾದ ಮೇಲೆ ನಾನು ನಿಮಗೆ ಊಟ ಹಾಕಲು ಮರದ ಬೌಲ್ ಬೇಕಲ್ಲ’ ಎಂದು ಹೇಳಿ ಮತ್ತೆ ಕೆಲಸದಲ್ಲಿ ಮಗ್ನನಾದ. ಅಪ್ಪನಿಗೆ ಯಾರೋ ಕೆನ್ನೆಗೆ ಬಾರಿಸಿದಂತಾಯಿತು. ನಾಲ್ಕು ವರ್ಷದ ಮಗನ ಮಾತನ್ನು ಅರಗಿಸಿಕೊಳ್ಳಲಾಗಲಿಲ್ಲ. ಹಿಂದೆಯೇ ನಿಂತಿದ್ದ ಹೆಂಡತಿಯ ಕಣ್ಣುಗಳಲ್ಲೂ ಪಶ್ಚಾತ್ತಾಪದ ನೀರಿತ್ತು. ಅಂದು ರಾತ್ರಿ ಅಜ್ಜನ ಕೈ ಹಿಡಿದು ನಡೆಸಿಕೊಂಡು ಬಂದ ಮಗ, ಅವನನ್ನು ಎಲ್ಲರೊಂದಿಗೆ ಊಟಕ್ಕೆ ಕೂರಿಸಿದ. ಆತನ ಕೈ ನಡುಗಿದಾಗ, ಹಾಲು ಚೆಲ್ಲಿದಾಗ, ಅವನಿಂದ ಊಟದ ಟೇಬಲ್ ಗಲೀಜಾದಾಗ ಯಾರೂ ಅವನನ್ನು ಅಪಹಾಸ್ಯ ಮಾಡಲಿಲ್ಲ, ಮುಖ ಸಿಂಡರಿಸಲಿಲ್ಲ. ನಿಮ್ಮ ಮಕ್ಕಳು ನಿಮ್ಮಿಂದ ಕಲಿಯುತ್ತಾರೆ. ನೀವು ಕಲಿಸಬೇಕೆಂದೇನಿಲ್ಲ ನಿಮ್ಮ ಪ್ರತಿ ಮಾತು, ವರ್ತನೆ, ಹಾವ-ಭಾವ ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಮಕ್ಕಳೊಂದಿಗೆ ವ್ಯವಹರಿಸುವಾಗ ಗಮನವಿರಲಿ. ನೀವು ನಿಮ್ಮ ಹೆತ್ತವರೊಂದಿಗೆ ಹೇಗೆ ನಡೆದುಕೊಳ್ಳುತ್ತೀರೋ ಹಾಗೆಯೇ ನಿಮ್ಮ ಮಕ್ಕಳು ಮುಂದೆ ನಿಮ್ಮನ್ನು ನಡೆಸಿಕೊಳ್ಳುತ್ತಾರೆ. ನೀವೇನು ಬಿತ್ತುತ್ತೀರೋ ಅದೇ ಬೆಳೆಯುತ್ತದೆ, ಅದನ್ನೇ ಪಡೆಯುತ್ತೀರಿ!

What you will do and give, talk and think the same will return back, be careful

ರೈತನೊಬ್ಬ ಪ್ರತಿನಿತ್ಯ ಬೇಕರಿಯವನಿಗೆ ಒಂದು ಪೌಂಡ್ ಬೆಣ್ಣೆಯನ್ನು ಮಾರುತ್ತಿದ್ದ. ಒಂದು ದಿನ ಅಂಗಡಿಯವನು ಬೆಣ್ಣೆಯನ್ನು ತೂಕ ಮಾಡಿ ನೋಡಿ, ಅದು ಒಂದು ಪೌಂಡ್ ಇದೆಯೇ ಎಂದು ಪರೀಕ್ಷಿಸಿದ. ಆದರೆ ಬೆಣ್ಣೆ ಒಂದು ಪೌಂಡ್ ತೂಗಲಿಲ್ಲ, ಸ್ವಲ್ಪ ಕಡಿಮೆಯೇ ಇತ್ತು. ಅದರಿಂದ ಕೋಪಗೊಂಡ ಬೇಕರಿಯವನು ರೈತನ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ. ನ್ಯಾಯಾಧೀಶರು ‘ನೀನು ಯಾವ ಮಾದರಿಯ ತಕ್ಕಡಿಯಲ್ಲಿ ಬೆಣ್ಣೆಯನ್ನು ಅಳತೆ ಮಾಡುತ್ತೀಯಾ?’ ಎಂದು ರೈತನನ್ನು ಕೇಳಿದರು. ಅದಕ್ಕೆ ರೈತ ‘ಸ್ವಾಮಿ ನಾನು ರೈತ. ನನಗೆ ಓದು-ಬರಹ ಗೊತ್ತಿಲ್ಲ, ವ್ಯವಹಾರ ಜ್ಞಾನವೂ ಅಷ್ಟಕ್ಕಷ್ಟೆ. ನನಗೆ ಈ ಅಳತೆಯ ಲೆಕ್ಕವೆಲ್ಲ ತಿಳಿಯದು, ಆದರೆ ನನ್ನ ಬಳಿ ತಕ್ಕಡಿಯೊಂದಿದೆ’ ಎಂದ. ‘ಹಾಗಾದರೆ ನೀನು ಬೆಣ್ಣೆಯನ್ನು ಹೇಗೆ ತೂಕ ಮಾಡುತ್ತೀಯ?’ ಎಂದು ಕೇಳಿದರು ನ್ಯಾಯಾಧೀಶರು.

‘ಮಹಾಸ್ವಾಮಿ, ಈ ಬೇಕರಿಯಾತ ಬಹಳ ಹಿಂದಿನಿಂದಲೂ ನನ್ನಿಂದ ಬೆಣ್ಣೆ ಖರೀದಿಸುತ್ತಿದ್ದಾರೆ. ನಾನೂ ಕೂಡ ಇವರ ಅಂಗಡಿಯಿಂದ ಒಂದು ಪೌಂಡ್ ಬ್ರೆಡ್ ಖರೀದಿಸುತ್ತಾ ಬಂದಿದ್ದೇನೆ. ಪ್ರತಿದಿನ ಇವರು ಬ್ರೆಡ್ ತಂದುಕೊಟ್ಟಾಗ ನಾನು ಅದನ್ನು ತಕ್ಕಡಿಯ ಮೇಲಿಟ್ಟು ಅಷ್ಟೇ ತೂಕದ ಬೆಣ್ಣೆಯನ್ನು ಅವರಿಗೆ ಕೊಡುತ್ತಿದ್ದೇನೆ. ನೀವು ಶಿಕ್ಷಿಸುವುದಾದರೆ ಮೊದಲು ಅಂಗಡಿಯವನನ್ನೇ ಶಿಕ್ಷಿಸಿ’ ಎಂದ. ಇಲ್ಲಿ ಯಾರು ತಪ್ಪಿತಸ್ಥರು? ಬದುಕಿನಲ್ಲಿ ನೀವೇನು ಕೊಡುತ್ತೀರೋ, ಅದೇ ನಿಮಗೆ ವಾಪಸ್ ಬರುತ್ತದೆ. ನೀವು ಪ್ರಾಮಾಣಿಕರಾಗಿದ್ದರೆ ಜಗತ್ತು ನಿಮ್ಮೊಂದಿಗೆ ಪ್ರಾಮಾಣಿಕವಾಗಿಯೇ ವರ್ತಿಸುತ್ತದೆ. ಕೆಲವರು ಮೋಸ, ವಂಚನೆ, ಸುಳ್ಳು ಹೇಳುವುದನ್ನೇ ಅಭ್ಯಾಸವನ್ನಾಗಿಸಿಕೊಂಡಿರುತ್ತಾರೆ. ಅವರು ಎಷ್ಟು ಸುಳ್ಳು ಹೇಳುತ್ತಾರೆಂದರೆ ಅವರಿಗೂ ಸತ್ಯ ಏನೆಂಬುದು ತಿಳಿದಿರುವುದಿಲ್ಲ. ಹಾಗಾದರೆ ಅವರು ನಿಜಕ್ಕೂ ಯಾರಿಗೆ ಮೋಸ ಮಾಡುತ್ತಿರುತ್ತಾರೆ?

Photos from Vigour Institute of Yogic Science and Studies's post 01/02/2025

How to lead healthy and peaceful life

*** ಔಷಧಿ ರಹಿತ ಜೀವನ

ಓಂ ಧನ್ವಂತರಿಯೇ ನಮಃ***

*1.* ಬೇಗ ಮಲಗುವುದು ಮತ್ತು ಬೇಗ ಏಳುವುದು ಔಷಧ.
*2.* ದೇವರನ್ನು ಪ್ರಾರ್ಥಿಸುವುದು ದೈವಿಕ ಔಷಧವಾಗಿದೆ.
*3.* ಯೋಗ ಪ್ರಾಣಾಯಾಮ ಧ್ಯಾನ ಮತ್ತು ವ್ಯಾಯಾಮ ಔಷಧ.
*4.* ಮುಂಜಾನೆ ಮತ್ತು ಸಂಜೆಯ ನಡಿಗೆಯೂ ಔಷಧೀಯ.
*5.* ಉಪವಾಸವು ಎಲ್ಲಾ ರೋಗಗಳಿಗೆ ಪರಿಹಾರವಾಗಿದೆ.
*6.* ಸೂರ್ಯನ ಬೆಳಕು ಕೂಡ ಔಷಧವಾಗಿದೆ.
*7.* ಮಡಕೆಯ ನೀರು ಕುಡಿಯುವುದು ಕೂಡ ಔಷಧ.
*8.* ಚಪ್ಪಾಳೆ ಕೂಡ ಔಷಧಿ.
*9.* ಆಹಾರವನ್ನು ಚೆನ್ನಾಗಿ ಜಗಿಯುವುದು ಕೂಡ ಔಷಧೀಯ.
*10.* ಆಹಾರದಂತೆ, ಜಗಿಯುವ ನೀರು ಮತ್ತು ಕುಡಿಯುವ ನೀರು ಔಷಧವಾಗಿದೆ.
*11.* ಊಟ ಮಾಡಿದ ನಂತರ ವಜ್ರಾಸನದಲ್ಲಿ ಕುಳಿತುಕೊಳ್ಳುವುದು ಔಷಧ.
*12.* ಸಂತೋಷದ ನಿರ್ಧಾರವೂ ಒಂದು ಔಷಧ.
*13.* ಕೆಲವೊಮ್ಮೆ ಮೌನವೇ ಔಷಧ.
*14.* ನಗು ಮತ್ತು ಹಾಸ್ಯವೇ ಔಷಧ.
*15.* ತೃಪ್ತಿಯೂ ಔಷಧವೇ.
*16.* ಮನಸ್ಸಿನ ಶಾಂತಿ ಮತ್ತು ಆರೋಗ್ಯಕರ ದೇಹವೂ ಔಷಧವಾಗಿದೆ.
*17.* ಪ್ರಾಮಾಣಿಕತೆ ಮತ್ತು ಸಕಾರಾತ್ಮಕತೆಯು ಔಷಧವಾಗಿದೆ.
*18.* ನಿಸ್ವಾರ್ಥ ಪ್ರೀತಿಯೂ ಒಂದು ಔಷಧ.
*19.* ಎಲ್ಲರಿಗೂ ಒಳ್ಳೆಯದನ್ನು ಮಾಡುವುದೂ ಕೂಡ ಔಷಧ.
*20.* ಯಾರಿಗಾದರೂ ಆಶೀರ್ವಾದವನ್ನು ತರುವ ಕೆಲಸವನ್ನು ಮಾಡುವುದು ಔಷಧವಾಗಿದೆ.
*21.* ಎಲ್ಲರೊಂದಿಗೆ ಬಾಳುವುದು ಔಷಧ.
*22.* ತಿನ್ನುವುದು, ಕುಡಿಯುವುದು ಮತ್ತು ಕುಟುಂಬದೊಂದಿಗೆ ಇರುವುದು ಕೂಡ ಔಷಧವಾಗಿದೆ.
*23.* ನಿಮ್ಮ ಪ್ರತಿಯೊಬ್ಬ ನಿಜವಾದ ಮತ್ತು ಒಳ್ಳೆಯ ಸ್ನೇಹಿತ ಕೂಡ ಹಣವಿಲ್ಲದೆ ಸಂಪೂರ್ಣ ಮೆಡಿಕಲ್ ಸ್ಟೋರ್ ಆಗಿದೆ.
*24.* ಸಂತೋಷವಾಗಿರಿ, ಕಾರ್ಯನಿರತರಾಗಿರಿ, ಆರೋಗ್ಯವಾಗಿರಿ ಮತ್ತು ಸಂತೋಷವಾಗಿರುವ ಮನಸ್ಸನ್ನು ಹೊಂದಿರಿ, ಇದು ಕೂಡ ಔಷಧವಾಗಿದೆ.
*25.* ಪ್ರತಿ ಹೊಸ ದಿನವನ್ನು ಪೂರ್ಣವಾಗಿ ಆನಂದಿಸುವುದು ಸಹ ಔಷಧವಾಗಿದೆ.

ಪ್ರಕೃತಿಯ *"ಶ್ರೇಷ್ಠತೆ"*ಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದಕ್ಕೆ ಕೃತಜ್ಞತೆ ಸಲ್ಲಿಸುವುದು ಸಹ ಔಷಧವಾಗಿದೆ.

*ಈ ಎಲ್ಲಾ ಔಷಧಗಳು ನಿಮಗೆ ಸಂಪೂರ್ಣವಾಗಿ ಉಚಿತವಾಗಿ .

Want your school to be the top-listed School/college in Bangalore?

Click here to claim your Sponsored Listing.

Location

Category

Address

Bangalore 560056
Bangalore