Dr. Ambedkar College of Education

Dr. Ambedkar College of Education It about our Teacher Education Institution

ಡಾ. ಅಂಬೇಡ್ಕರ್ ಶಿಕ್ಷಣ ಮಹಾವಿದ್ಯಾಲಯ ಹಾಗೂ ನಳಂದ ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ಸಂಸ್ಥಾಪಕರ ದಿನಾಚರಣೆ ಹಾಗೂ ಮಾನ್ಯ ಶ್ರೀ ಮ...
21/07/2026

ಡಾ. ಅಂಬೇಡ್ಕರ್ ಶಿಕ್ಷಣ ಮಹಾವಿದ್ಯಾಲಯ ಹಾಗೂ ನಳಂದ ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ಸಂಸ್ಥಾಪಕರ ದಿನಾಚರಣೆ ಹಾಗೂ ಮಾನ್ಯ ಶ್ರೀ ಮಲ್ಲಿಕಾರ್ಜುನ ಎಂ. ಖರ್ಗಜೀ ಅವರ 84ನೇ ಜನ್ಮದಿನೋತ್ಸವವನ್ನು 2026ರ ಜುಲೈ 21ರಂದು ಬೆಳಿಗ್ಗೆ 11.00 ಗಂಟೆಗೆ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಮಾಜಸೇವೆ, ಶೈಕ್ಷಣಿಕ ಸಾಧನೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವು ಬಿ.ಎಡ್. ಪ್ರಶಿಕ್ಷಣಾರ್ಥಿನಿಯರಿಂದ ಬುದ್ಧ ಗೀತೆಯೊಂದಿಗೆ ಆರಂಭವಾಯಿತು. ನಂತರ ಡಾ. ಅಂಬೇಡ್ಕರ್ ಶಿಕ್ಷಕರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶಿವಣ್ಣ ವಿ. ಟಿ. ಅವರು ಎಲ್ಲ ಗಣ್ಯರು, ಅತಿಥಿಗಳು, ಉಪನ್ಯಾಸಕರು, ಹಾಗೂ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಸಂಸ್ಥಾಪಕರ ದಿನದ ಮಹತ್ವ ಮತ್ತು ಶ್ರೀ ಮಲ್ಲಿಕಾರ್ಜುನ ಎಂ. ಖರ್ಗೆ ಅವರ ಸಮಾಜಮುಖಿ ಸೇವೆಯನ್ನು ಸ್ಮರಿಸಿದರು.
ಇದಾದ ಬಳಿಕ ಭಗವಾನ್ ಬುದ್ಧರ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ನಂತರ ಕೇಕ್ ಅನಾವರಣ ಮಾಡುವುದರ ಮೂಲಕ ಶ್ರೀ ಮಲ್ಲಿಕಾರ್ಜುನ ಎಂ. ಖರ್ಗಜೀ ಅವರ 84ನೇ ಜನ್ಮದಿನವನ್ನು ಸಂಭ್ರಮಿಸಲಾಯಿತು.
ಮುಂದಿನ ಕಾರ್ಯಕ್ರಮವಾಗಿ 2023–2025ನೇ ಸಾಲಿನ ಬಿ.ಎಡ್. ಮತ್ತು ಎಂ.ಎಡ್. ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಪ್ರತಿಭಾವಂತ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನಗಳನ್ನು ಡಾ. ಅಪೂರ್ವ ಟಿ. ಎಂ., ಸಹಾಯಕ ಪ್ರಾಧ್ಯಾಪಕರು ಇವರು ಪ್ರಕಟಿಸಿದರು ಹಾಗೆಯೇ, ನಳಂದ ನ್ಯಾಷನಲ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಕು.ಸರೋಜಾ ಡಿ. ಅವರು ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಹೆಸರನ್ನು ಪ್ರಕಟಿಸಿ, ಅವರ ಸಾಧನೆಯನ್ನು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ “ಸಂಘ ಮಿತ್ರ” ಕಾಲೇಜು ವಾರ್ಷಿಕ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ವಾರ್ಷಿಕ ಸಂಚಿಕೆಯಲ್ಲಿ ಗಣ್ಯರ ಅತಿಥಿ ಲೇಖನಗಳು, ಬೋಧಕ ವೃಂದದ ಲೇಖನಗಳು, ವಿದ್ಯಾರ್ಥಿಗಳ ಶಿಕ್ಷಣ ಕುರಿತ ವಿಚಾರಗಳು, ಸೃಜನಾತ್ಮಕ ಬರಹಗಳು ಹಾಗೂ ವಿದ್ಯಾರ್ಥಿಗಳ ಕಲಾಕೃತಿಗಳನ್ನು ಒಳಗೊಂಡಿರುವುದನ್ನು ಮೆಚ್ಚುಗೆ ವ್ಯಕ್ತಪಡಿಸಲಾಯಿತು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಯೂತ್ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ಮಾನವೀಯ ಸೇವೆಯ ಮಹತ್ವವನ್ನು ಸಾರಿದರು. ಭಾರತೀಯ ರೆಡ್ ಕ್ರಾಸ್ ಸೊಸೈಟಿಯಿಂದ ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರಗಳನ್ನು ಪ್ರದಾನ ಮಾಡಲಾಯಿತು. ಪ್ರಮಾಣಪತ್ರ ಸ್ವೀಕರಿಸಿದ ವಿದ್ಯಾರ್ಥಿಗಳ ಹೆಸರನ್ನು ಸಹಾಯಕ ಪ್ರಾಧ್ಯಾಪಕರು ಹಾಗೂ ಯುವ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಡಾ. ಮಂಜಯ್ಯ ಅವರು ಘೋಷಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಶ್ರೀನಿವಾಸ್ ಜಿ. ಕಪ್ಪಣ್ಣ, ಮಾಜಿ ಅಧ್ಯಕ್ಷರು, ಕರ್ನಾಟಕ ನಾಟಕ ಅಕಾಡೆಮಿ, ಸಂಗೀತ ಮತ್ತು ನಾಟಕ ಅಕಾಡೆಮಿ ನವ ದೆಹಲಿ ಹಾಗು ಬಿ ವಿ ಕಾರಥ್ ಪ್ರಶಸ್ತಿ ಪುರಸ್ಕೃತರು, ಬೆಂಗಳೂರು ಅವರು ಮಾತನಾಡಿ ಶ್ರೀ ಮಲ್ಲಿಕಾರ್ಜುನ ಎಂ. ಖರ್ಗೆ ಅವರ ಬಾಲ್ಯದ ಜೀವನ, ಅವರ ಪರಿಶ್ರಮ, ಶಿಸ್ತು ಹಾಗೂ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಸಮಾಜದ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಶ್ರೀ ಖರ್ಗೆ ಅವರು ಅನೇಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಹಾಗೂ ಅವುಗಳ ಅಭಿವೃದ್ಧಿಗೆ ನೀಡಿದ ಅಪಾರ ಕೊಡುಗೆಯನ್ನು ವಿವರಿಸಿದರು. ಅಲ್ಲದೆ, ಬುದ್ಧ ವಿಹಾರದ ನಿರ್ಮಾಣದ ಹಿಂದಿನ ಉದ್ದೇಶ, ಅದರ ಐತಿಹಾಸಿಕ ಹಾಗೂ ಸಾಮಾಜಿಕ ಮಹತ್ವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಾನತೆ, ಶಾಂತಿ ಮತ್ತು ಮಾನವೀಯತೆಯ ತತ್ವಗಳನ್ನು ಸಮಾಜದಲ್ಲಿ ಬಿತ್ತರಿಸುವಲ್ಲಿ ಬುದ್ಧ ವಿಹಾರದ ಪಾತ್ರವನ್ನು ಅರ್ಥಪೂರ್ಣವಾಗಿ ವಿವರಿಸಿದರು.
ಮುಂದುವರೆದು, ಶೈಕ್ಷಣಿಕ ಸಾಲಿನಲ್ಲಿ ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ವಿಶೇಷವಾಗಿ ಅಭಿನಂದಿಸಿ, ಅವರ ನಿರಂತರ ಪರಿಶ್ರಮ, ಶಿಸ್ತು ಮತ್ತು ಸಾಧನೆಯ ಮನೋಭಾವ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದರು.
ಮತ್ತೋರ್ವ ಮುಖ್ಯ ಅತಿಥಿಗಳಾದ ಶ್ರೀ ಅಗ್ರಹಾರ ಕೃಷ್ಣಮೂರ್ತಿ, ಲೇಖಕರು ಮತ್ತು ವಿಮರ್ಶಕರು, ಕೇಂದ್ರ ಸಾಹಿತ್ಯ ಅಕಾಡೆಮಿ, ಪ್ರಾದೇಶಿಕ ಕಾರ್ಯದರ್ಶಿ(ನಿವೃತ್ತ), ನವ ದೆಹಲಿ ಅವರು ತಮ್ಮ ಭಾಷಣದಲ್ಲಿ ಭಗವಾನ್ ಬುದ್ಧ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಶ್ರೀ ಮಲ್ಲಿಕಾರ್ಜುನ ಎಂ. ಖರ್ಗೆ ಅವರ ಜೀವನ ಮೌಲ್ಯಗಳು, ಚಿಂತನೆಗಳು ಮತ್ತು ಸಮಾಜಮುಖಿ ಸೇವೆಗಳು ಪರಸ್ಪರ ಪೂರಕವಾಗಿವೆ ಎಂದು ವಿವರಿಸಿದರು. ಬುದ್ಧನ ಕರುಣೆ, ಸಮಾನತೆ ಮತ್ತು ಶಾಂತಿಯ ಸಂದೇಶ, ಡಾ. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ಹಾಗೂ ಶಿಕ್ಷಣದ ತತ್ವಗಳು ಮತ್ತು ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಜನಪರ ಸೇವೆ ಹಾಗೂ ಶೈಕ್ಷಣಿಕ ಅಭಿವೃದ್ಧಿಯ ದೃಷ್ಟಿಕೋನ ಒಂದೇ ಆದರ್ಶವನ್ನು ಪ್ರತಿಬಿಂಬಿಸುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶೈಕ್ಷಣಿಕ ವರ್ಷದಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಾಧನೆಯನ್ನು ಮುಂದುವರಿಸಿಕೊಂಡು ಸಮಾಜಕ್ಕೆ ಆದರ್ಶವಾಗುವಂತೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಇಂದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪೀಪಲ್ಸ್ ಎಜುಕೇಶನ್ ಸೊಸೈಟಿ, ಕಲಬುರಗಿಯ ಸದಸ್ಯರಾದ ಶ್ರೀ ಮಹಾಂತಪ್ಪ ಸಂಘಾವಿ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಡಾ. ಅಂಬೇಡ್ಕರ್ ಶಿಕ್ಷಣ ಮಹಾವಿದ್ಯಾಲಯದ ಸ್ಥಾಪನೆಯ ಹಿನ್ನೆಲೆ ಹಾಗೂ ಅದರ ಉದ್ದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಮಹಿಳಾ ಶಿಕ್ಷಣದ ಪ್ರಗತಿಗಾಗಿ ಶ್ರೀ ಮಲ್ಲಿಕಾರ್ಜುನ ಎಂ. ಖರ್ಗೆ ಅವರು ಸಲ್ಲಿಸಿರುವ ಅಮೂಲ್ಯ ಸೇವೆ, ಅವರ ದೂರದೃಷ್ಟಿ ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಅಪಾರ ಕೊಡುಗೆಯನ್ನು ಪ್ರಶಂಸಿಸಿದರು.
ಶೈಕ್ಷಣಿಕ ಸಾಧನೆಯಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳ ಯಶಸ್ಸಿನ ಹಿಂದೆ ಮಹಾವಿದ್ಯಾಲಯದ ಅಧ್ಯಾಪಕರ ಸಮರ್ಪಿತ ಪರಿಶ್ರಮ, ಗುಣಮಟ್ಟದ ಬೋಧನೆ ಮತ್ತು ಮಾರ್ಗದರ್ಶನವೇ ಪ್ರಮುಖ ಕಾರಣವೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ರೀತಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಇನ್ನಷ್ಟು ಸಾಧನೆ ಮಾಡಿ, ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡುವಂತೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪೀಪಲ್ಸ್ ಎಜುಕೇಶನ್ ಸೊಸೈಟಿ, ಕಲಬುರಗಿಯ ಸದಸ್ಯರಾದ ಶ್ರೀ.ಶಿವಶರಣಪ್ಪ ಅನ್ವರ್ ಅವರು ಗೌರವ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವರಾದ ಶ್ರೀ. ಸುರೇಶ್ ಹಾಗೂ ಕಲಬುರಗಿಯ ಶ್ರೀ. ಮಹದೇವಯ್ಯ ಬಿ. ಐ. ಇ.ಸಿಅವರು ಸಹ ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ನಳಂದ ನ್ಯಾಷನಲ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮಹಾಂತೇಶ್ ಎನ್ ಎಸ್. ಅವರು ವಂದನಾರ್ಪಣೆ ಸಲ್ಲಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯ ಅತಿಥಿಗಳು, ರಕ್ತದಾನಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಎಲ್ಲ ಸಹಯೋಗಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.
ಕಾರ್ಯಕ್ರಮವು ಸಂಸ್ಥಾಪಕರ ಆದರ್ಶಗಳು, ಶಿಕ್ಷಣದ ಶ್ರೇಷ್ಠತೆ, ವಿದ್ಯಾರ್ಥಿಗಳ ಸಾಧನೆಗೆ ಗೌರವ ಹಾಗೂ ಸಮಾಜ ಸೇವೆಯ ಮಹತ್ವವನ್ನು ಪ್ರತಿಬಿಂಬಿಸುವಂತಿದ್ದು, ಎಲ್ಲರ ಮನದಲ್ಲಿ ಅಚ್ಚಳಿಯದ ನೆನಪನ್ನು ಮೂಡಿಸಿತು.

All are cordially invited
20/07/2026

All are cordially invited

On 16th July 2026, Thursday at 11.00 am in collaboration with the Internal Quality Assurance Cell (IQAC) and the Youth R...
17/07/2026

On 16th July 2026, Thursday at 11.00 am in collaboration with the Internal Quality Assurance Cell (IQAC) and the Youth Red Cross Unit, organized a Blood Donation Awareness Programme in our college.

The programme commenced with a prayer song by Ku. Husnamma (B.Ed. IV Semester), followed by a welcome address delivered by Ku. Suma K. C. (B.Ed. IV Semester), who welcomed the dignitaries, faculty members, and students.

The resource person, Dr. Sunil V. Naik, Medical Officer, Karnataka Red Cross Blood Centre, delivered an informative and inspiring session on the importance of voluntary blood donation. He explained the eligibility criteria, donation procedure, health benefits, myths and misconceptions about blood donation, and emphasized that a single unit of blood can save multiple lives. He encouraged students and staff to become regular voluntary blood donors and highlighted the vital role of youth in meeting the country’s blood requirements.

The programme was presided over by Dr. Shivanna V. T., Principal, Dr. Ambedkar College of Education, who appreciated the initiative of the IQAC and Youth Red Cross Unit. In his presidential address, he motivated students to develop a spirit of social responsibility, compassion, and humanitarian service through voluntary blood donation.

The programme concluded with a vote of thanks proposed by Mr. Mahesh (B.Ed. IV Semester), expressing gratitude to the resource person, Principal, faculty members, organizers, and participants for making the programme a success. The programme was effectively anchored by Ms. Vaishnavi (B.Ed. II Semester).

The awareness programme successfully sensitized students and staff about the significance of blood donation and inspired them to contribute towards saving lives through voluntary blood donation.

11/07/2026
ಅಣಕು ಸಂಸತ್ ಕಾರ್ಯಕ್ರಮದ ಕುರಿತು ವರದಿ         ನಮ್ಮ ಕಾಲೇಜಿನಲ್ಲಿ ಸಮಾಜ ವಿಜ್ಞಾನ ಸಂಘದ ವತಿಯಿಂದ  ದಿನಾಂಕ:10/07/2026 ರಂದು     ಮಧ್ಯಾಹ್...
11/07/2026

ಅಣಕು ಸಂಸತ್ ಕಾರ್ಯಕ್ರಮದ ಕುರಿತು ವರದಿ
ನಮ್ಮ ಕಾಲೇಜಿನಲ್ಲಿ ಸಮಾಜ ವಿಜ್ಞಾನ ಸಂಘದ ವತಿಯಿಂದ ದಿನಾಂಕ:10/07/2026 ರಂದು ಮಧ್ಯಾಹ್ನ 2:30 ಗಂಟೆಗೆ ಅಣಕು ಸಂಸತ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು.
ಕಾರ್ಯಕ್ರಮವು ಬಿ.ಎಡ್. ಎರಡನೇ ವರ್ಷದ ವಿದ್ಯಾರ್ಥಿನಿ ಹುಸೇನಮ್ಮ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು,
ಕಾರ್ಯಕ್ರಮಕ್ಕೆ ಎಲ್ಲರನ್ನು ಬಿ.ಎಡ್. ಎರಡನೇ ವರ್ಷದ ವಿದ್ಯಾರ್ಥಿ ಶ್ರೀ ಶಿವಾನಂದ್ ಕೋಟಿ ಅವರು ಹೃತ್ಪೂರ್ವಕವಾಗಿ ಸ್ವಾಗತಿಸಿದರು.
ಸಮಾಜವಿಜ್ಞಾನ ಸಂಘದ ಸಿಬ್ಬಂದಿ ಸಲಹೆಗಾರರು ಹಾಗು ಸಹ ಪ್ರಾಧ್ಯಾಪಕರು ಆದ ಡಾ. ನರಸಿಂಗಪ್ಪ ಎಚ್.ಎನ್. ಪ್ರಾಸ್ತವಿಕ ನುಡಿಗಳನ್ನಾಡಿದರು. ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವದ ಮಹತ್ವವನ್ನು ಅವರು ವಿವರಿಸಿ ಮತ್ತು ಸಂಸತ್ತಿನ ರಚನೆ, ಸ್ಪೀಕರ್, ಸಚಿವರು, ವಿರೋಧ ಪಕ್ಷ ಮತ್ತು ಸಂಸತ್ತಿನ ಸದಸ್ಯರ ಜವಾಬ್ದಾರಿಗಳನ್ನು ಅವರು ತಿಳಿಸಿದರು. ಶಿಸ್ತು, ರಚನಾತ್ಮಕ ಚರ್ಚೆಗಳು, ವೈವಿಧ್ಯಮಯ ಅಭಿಪ್ರಾಯಗಳಿಗೆ ಗೌರವ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಬದ್ಧತೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು.
ನಂತರ, ಅಣಕು ಸಂಸತ್ತು ಅಧಿವೇಶನವನ್ನು ನಡೆಸಲಾಯಿತು. ವಿದ್ಯಾರ್ಥಿಗಳು ಮುಖ್ಯಮಂತ್ರಿ, ಸ್ಪೀಕರ್, ಸಚಿವರು, ವಿರೋಧ ಪಕ್ಷದ ನಾಯಕ, ಸಂಸತ್ತಿನ ಸದಸ್ಯರು ಮತ್ತು ಸಂಸದೀಯ ಕಾರ್ಯದರ್ಶಿಯಂತಹ ವಿವಿಧ ಸಂಸದೀಯ ಪಾತ್ರಗಳನ್ನು ವಹಿಸಿಕೊಂಡಿದ್ದರು. ಸ್ಪೀಕರ್ ಅವರ ನಿರ್ದೇಶನದಂತೆ ಅಧಿವೇಶನ ಪ್ರಾರಂಭವಾಯಿತು, ನಂತರ ಪ್ರಶ್ನೋತ್ತರ ಅವಧಿ, ಪ್ರಸ್ತುತ ಸಾಮಾಜಿಕ ಮತ್ತು ಶೈಕ್ಷಣಿಕ ವಿಷಯಗಳ ಕುರಿತು ಚರ್ಚೆಗಳು, ಅಣಕು ಮಸೂದೆಯ ಮಂಡನೆ, ಮತ್ತು ಪ್ರಸ್ತಾಪಿತ ಮಸೂದೆಯ ಮೇಲೆ ಮತದಾನ ನಡೆಯಿತು. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಸಕ್ರಿಯವಾಗಿ ಭಾಗವಹಿಸಿದರು, ಸಂಸದೀಯ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಗಮನಿಸುವಾಗ ಅತ್ಯುತ್ತಮ ಸಂವಹನ, ನಾಯಕತ್ವ, ವಿಮರ್ಶಾತ್ಮಕ ಚಿಂತನೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯಗಳನ್ನು ಪ್ರದರ್ಶಿಸಿದರು.
ಪ್ರಾಂಶುಪಾಲರಾದ ಡಾ. ಶಿವಣ್ಣ ವಿ.ಟಿ. ಅವರ ಅಧ್ಯಕ್ಷೀಯ ನುಡಿಗಳೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು. ಇಂತಹ ಶೈಕ್ಷಣಿಕ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಸಮಾಜ ವಿಜ್ಞಾನ ಸಂಘ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ಅಣಕು ಸಂಸತ್ತಿನಂತಹ ಚಟುವಟಿಕೆಗಳು ಸಿದ್ಧಾಂತ ಮತ್ತು ಆಚರಣೆಯ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ ಹಾಗೆಯೇ ವಿದ್ಯಾರ್ಥಿ ಶಿಕ್ಷಕರು ಜವಾಬ್ದಾರಿಯುತ ನಾಗರಿಕರಾಗಲು ಮತ್ತು ಶಾಲಾ ಕಾಲೇಜುಗಳ ಮುಖಾಂತರ ಸಮಾಜದಲ್ಲಿ ಪ್ರಜಾಪ್ರಭುತ್ವ ತತ್ವಗಳನ್ನು ಉತ್ತೇಜಿಸಲು ಸಲಹೆ ನೀಡಿದರು. ಭವಿಷ್ಯದ ಶಿಕ್ಷಕರಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು, ನಾಯಕತ್ವ, ತಂಡದ ಕೆಲಸ ಮತ್ತು ಸಾರ್ವಜನಿಕ ಭಾಷಣ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಇಂತಹ ಕಾರ್ಯಕ್ರಮಗಳು ಸಹಾಯ ಮಾಡುತ್ತವೆ ಎಂದು ಅವರು ಹೇಳಿದರು.
ಬಿ.ಎಡ್. ಮೊದಲ ವರ್ಷದ ವಿದ್ಯಾರ್ಥಿ ಸೋಮಶೇಖರಯ್ಯ ರವರ ವಂದನಾರ್ಪಣೆಗಳೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು.
ದ್ವಿತೀಯ ವರ್ಷದ ವಿದ್ಯಾರ್ಥಿನಿ ದೇವಿ, ಕಾರ್ಯಕ್ರಮದ ನಿರೂಪಣೆ ಮಾಡಿದರು.
ಅಧಿವೇಶನದುದ್ದಕ್ಕೂ ಪ್ರೇಕ್ಷಕರ ಉತ್ಸಾಹವನ್ನು ಕಾಯ್ದುಕೊಂಡ ವಿದ್ಯಾರ್ಥಿಗಳು ಭಾರತೀಯ ಸಂಸತ್ತಿನ ಕಾರ್ಯವೈಖರಿಯ ಪ್ರಾಯೋಗಿಕ ಜ್ಞಾನವನ್ನು ನಾಯಕತ್ವ, ಸಂವಹನ ಮತ್ತು ಚರ್ಚಾ ಕೌಶಲ್ಯಗಳನ್ನು ಪಡೆದರು. ವಿದ್ಯಾರ್ಥಿಗಳು ಸಂಸದೀಯ ಕಾರ್ಯವಿಧಾನಗಳು, ಶಾಸಕಾಂಗ ಪ್ರಕ್ರಿಯೆಗಳು ಮತ್ತು ಜವಾಬ್ದಾರಿಯುತ ಪೌರತ್ವದ ಮಹತ್ವವನ್ನು ಅರಿತುಕೊಂಡರು.
ಅಣಕು ಸಂಸತ್ತು ಬಿ.ಎಡ್. ಪ್ರಶಿಕ್ಷಣಾರ್ಥಿಗಳಲ್ಲಿ ಆತ್ಮವಿಶ್ವಾಸ, ತಂಡದ ಕೆಲಸ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಹೆಚ್ಚಿಸಿತು. ಬಿ.ಎಡ್. ವಿದ್ಯಾರ್ಥಿಗಳಿಗೆ ಭಾರತೀಯ ಸಂಸದೀಯ ವ್ಯವಸ್ಥೆಯ ಕಾರ್ಯವೈಖರಿ, ಪ್ರಜಾಪ್ರಭುತ್ವ ಮೌಲ್ಯಗಳು, ಶಾಸಕಾಂಗ ಕಾರ್ಯವಿಧಾನಗಳು ಮತ್ತು ಸಂಸದೀಯ ಶಿಷ್ಟಾಚಾರದ ಬಗ್ಗೆ ಪರಿಚಿತರಾಗುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಸಕ್ರಿಯ ಭಾಗವಹಿಸುವಿಕೆಯ ಮೂಲಕ ಪ್ರಜಾಪ್ರಭುತ್ವ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಅನುಭವಿಸಲು ಅವಕಾಶವನ್ನು ಒದಗಿಸಿತು.
ಒಟ್ಟಾರೆಯಾಗಿ, ಅಣಕು ಸಂಸತ್ತು ಕಾರ್ಯಕ್ರಮವು ಹೆಚ್ಚು ಮಾಹಿತಿಯುಕ್ತ, ಸಂವಾದಾತ್ಮಕ ಮತ್ತು ವಿವಿಧ ಶೈಕ್ಷಣಿಕ ಉದ್ದೇಶಗಳನ್ನು ಸಾಧಿಸುವಲ್ಲಿ ಯಶಸ್ವಿಯಾಯಿತು.

ದಿನಾಂಕ 06/07/2026 ರಂದು ನಮ್ಮ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಬ...
07/07/2026

ದಿನಾಂಕ 06/07/2026 ರಂದು ನಮ್ಮ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಬೆಂಗಳೂರಿನ ಪೀಣ್ಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಶೃತಿ. ಟಿ. ರವರು ಹಾಗೂ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಶ್ರೀಮತಿ. ರೇಖಾ. ವಿ. ಹಾಗೂ ಪೊಲೀಸ್ ಕಾನ್ಸ್ಟೇಬಲ್ ಶ್ರೀಮತಿ. ಕೋಮಲ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಡಾ. ಶೃತಿ. ಟಿ. ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಸಬಲೀಕರಣ ಎನ್ನುವುದು ಮೊದಲು ನಮ್ಮಲ್ಲಿ ಪ್ರಾರಂಭವಾಗಬೇಕು, ಇಲ್ಲಿ ಯಾರು ಮಹಿಳೆಯನ್ನು ಸಬಲೀಕರಣ ಗೊಳಿಸಲು ಬರುವುದಿಲ್ಲ, ನಮಗೆ ನಾವೇ ಸಬಲಗೊಳ್ಳಬೇಕು ಎಂದರು. ಮಹಿಳೆಗೆ ಸಬಲೀಕರಣಗೊಳ್ಳಲು ಬೇಕಾಗಿರುವ ಕೌಶಲ್ಯಗಳ ಬಗ್ಗೆ ತಿಳಿಸಿಕೊಟ್ಟರು. ಮುಂದುವರೆದು ಭವಿಷ್ಯದ ಶಿಕ್ಷಕರಾಗಿರುವ ನೀವುಗಳು ಯಾವುದೇ ಪಕ್ಷಪಾತ, ಲಿಂಗ ತಾರತಮ್ಯ ಮಾಡದೇ ನಿಷ್ಪಕ್ಷಪಾತ ಧೋರಣೆಯೊಂದಿಗೆ ಸಮಾಜಸೇವೆ ಮಾಡಬೇಕೆಂದು ಕರೆಯಿತ್ತರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಿವಣ್ಣ ವಿ. ಟಿ. ರವರು ಮಾತನಾಡಿ ಪುರಾಣ ಕಾಲದಿಂದಲೂ ಪಿತೃ ಪ್ರಧಾನ ವ್ಯವಸ್ಥೆಯಿಂದ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಯ ಬಗ್ಗೆ ವಿವರಿಸಿದರು. ಮಹಿಳಾ ದಿನಾಚರಣೆಯು ಸಫಲವಾಗಬೇಕಾದರೆ ಪ್ರತಿಯೊಬ್ಬರಲ್ಲೂ ಸಮಾನತೆಯ ಮನಸ್ಥಿತಿ ಬೆಳೆಯಬೇಕು. ಇಲ್ಲಿ ಯಾರು ಶ್ರೇಷ್ಠರಲ್ಲ ಯಾರು ಕನಿಷ್ಠರು ಅಲ್ಲ ಎನ್ನುವ ಸಾರ್ವಕಾಲಿಕ ಸತ್ಯವನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಸಂದೇಶ ಕೊಟ್ಟರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ಮಂಜಯ್ಯ ಹಾಗೂ ಸಹ ಪ್ರಾಧ್ಯಾಪಕರಾದ ಡಾ. ಎಚ್. ಎನ್. ನರಸಿಂಗಪ್ಪ ಮತ್ತು ಗ್ರಂಥಪಾಲಕರಾದ ಶ್ರೀ. ವಿ. ಜಿ. ಮಾನಶೆಟ್ಟಿ ರವರು ಮಹಿಳಾ ದಿನಾಚರಣೆಯ ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಮಹಿಳಾ ಸಿಬ್ಬಂದಿಗಳಾದ ಡಾ. ಅಪೂರ್ವ. ಟಿ. ಎಂ. ಮತ್ತು ಶ್ರೀಮತಿ ಚಂದ್ರಕಲಾ ಟಿ. ಬಿ. ಹಾಗೂ ಕಚೇರಿ ಸಿಬ್ಬಂದಿಯಾದ ಶ್ರೀಮತಿ ಮಹಾಲಕ್ಷ್ಮಿ, ಕಚೇರಿ ಸೇವಕರಾದ ಶ್ರೀಮತಿ ಮಗ್ಗಿಯಮ್ಮ ಹಾಗೂ ಪೌರಕಾರ್ಮಿಕರಾದ ಶ್ರೀಮತಿ ರಂಗಮ್ಮ ಅವರುಗಳನ್ನು ಅಭಿನಂದಿಸಲಾಯಿತು
ಕಾರ್ಯಕ್ರಮದಲ್ಲಿ ಬಿ. ಇಡಿ. ವಿದ್ಯಾರ್ಥಿಗಳು ಮಹಿಳಾ ದಿನಾಚರಣೆಗೆ ಸೂಕ್ತವಾದ ಸಂದೇಶ ಹೊಂದಿರುವ ನೃತ್ಯ ರೂಪಕ ಹಾಗೂ ಕಿರು ನಾಟಕಗಳನ್ನು ಪ್ರದರ್ಶನ ಮಾಡಿದರು

Few seats are available for B.Ed . Interested can contact
06/03/2026

Few seats are available for B.Ed . Interested can contact

Address

Pipeline Road
Bangalore
560086

Opening Hours

Monday 9am - 5pm
Tuesday 9am - 5pm
Wednesday 9:30am - 5pm
Thursday 9:30am - 5pm
Friday 9:30am - 5pm
Saturday 9:30am - 5pm
Sunday 9:30am - 5pm

Telephone

+918023492503

Alerts

Be the first to know and let us send you an email when Dr. Ambedkar College of Education posts news and promotions. Your email address will not be used for any other purpose, and you can unsubscribe at any time.

Contact The School

Send a message to Dr. Ambedkar College of Education:

Shortcuts

Share

Category