BVKS

BVKS Bharath Vidyarthi Kriya Samithi taking students in a right path with cultural dimension..

ಬಿವಿಕೆಎಸ್‌ ರುವಾರಿ ಮಹೇಂದ್ರ ಕುಮಾರ್ ಹೃದಯಾಘಾತದಿಂದ ನಮ್ಮನ್ನಗಲಿದ್ದಾರೆ.
25/04/2020

ಬಿವಿಕೆಎಸ್‌ ರುವಾರಿ ಮಹೇಂದ್ರ ಕುಮಾರ್ ಹೃದಯಾಘಾತದಿಂದ ನಮ್ಮನ್ನಗಲಿದ್ದಾರೆ.

JNU ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಬೆಂಗಳೂರು ವಿವಿಯ ಸಂಶೋಧನಾ - ಪದವಿ ವಿದ್ಯಾರ್ಥಿಗಳ ಪ್ರತಿಭಟನೆ..!Read..Share..Support..
07/01/2020

JNU ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಬೆಂಗಳೂರು ವಿವಿಯ ಸಂಶೋಧನಾ - ಪದವಿ ವಿದ್ಯಾರ್ಥಿಗಳ ಪ್ರತಿಭಟನೆ..!

Read..Share..Support..

JNU ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಬೆಂಗಳೂರು ವಿವಿಯ ಸಂಶೋಧನಾ - ಪದವಿ ವಿದ್ಯಾರ್ಥಿಗಳ ಪ್ರತಿಭಟನೆ..!

29/12/2019

ಸನಾತನಿಯೊಬ್ಬ ತನ್ನ ಸನಾತನ ಧರ್ಮದ ಬಗ್ಗೆ #ಭಯಂಕರ ಅಭಿಮಾನ ಹೊಂದಿದ್ದ. ಎದುರಿಗೆ ಸಿಗುವ ಎಲ್ಲರೆದುರಿಗೆ ತನ್ನ ಸನಾತನ ಧರ್ಮದ ಕುರಿತು ಬೊಗಳೆ ಹೊಡೆಯುತ್ತಿದ್ದ. ಒಮ್ಮೆ ಸನಾತನಿ ತನ್ನ ಮಗನಿಗೆ ಶಾಲೆಗೆ ಸೇರಿಸಲು ಶಾಲೆಯನ್ನು ಹುಡುಕುತ್ತ ಬರುತ್ತಿದ್ದ. ಹಾದಿಯಲ್ಲಿ ಸ್ನೇಹಿತನೊಬ್ಬ ಸಿಗಲು ಅತನೆದುರಿಗೆ ಮತ್ತದೇ ಕಿತ್ತಿಹೋದ ಸನಾತನ ಪರಂಪರೆಯ ಬಗ್ಗೆ ಭಾಷಣ ಬಿಗಿದ. ಭಾಷಣದ ನಂತರ ಸ್ನೇಹಿತ ಸನಾತನಿಗೆ ಕೇಳಿದ :

ಸ್ನೇಹಿತ : ಮಗನನ್ನು ಕರೆದುಕೊಂಡು ಎಲ್ಲಿಗೆ ಹೊರಟಿರುವೆ.

ಸನಾತನಿ : ಮಗನಿಗೆ ಶಾಲೆಗೆ ಸೇರಿಸಲು ಹೊರಟಿರುವೆ. ಯಾವ ಶಾಲೆ ಉತ್ತಮ ?

ಸ್ನೇಹಿತ : ಮಗನನ್ನು ಯಾವ ಮಾಧ್ಯಮದಲ್ಲಿ ಹಾಕಬೇಕಂತಿಯಾ ?

ಸನಾತನಿ : ಇಂಗ್ಲೀಷ್ ಮಾಧ್ಯಮದಲ್ಲಿ.

ಸ್ನೇಹಿತ : ಇಂಗ್ಲೀಷ್ ಪರಕೀಯ. ಯಾವುದಾದರೂ ಸನಾತನಿ ಸಂಸ್ಕ್ರತ ಪಾಠಶಾಲೆಗೆ ಹಾಕಬಾರದೆ.

ಸನಾತನಿ : ಅಯ್ಯೋ ˌ ನಾಳೆ ನಮ್ಮ ಮಗ ಪಾಶ್ಚಾತ್ಯ ಅಧುನಿಕ ತಂತ್ರಜ್ಞಾನ ಕಲಿತು ವಿದೇಶಕ್ಕೆ ಹೋಗೋದು ಬೇಡವೆ ?

ಸ್ನೇಹಿತ : ಸರಿ ಈ ರಸ್ತೆ ಬದಿಯಲ್ಲೊಂದು ಜೈ ಭಜರಂಗಬಲಿ ಇಂಗ್ಲೀಷ್ ಮೇಡಿಯಂ ಶಾಲೆ ಇದೆ ನೋಡು.

ಸನಾತನಿ : ಅಯ್ಯಾ ಪುಣ್ಯಾತ್ಮ ˌ ಈ ಭಜರಂಗಬಲಿˌ ಶ್ರೀರಾಮ ಶಾಲೆಗಳಿಗೆ ಹೋಗಿ ನನಗೇನು ಶೂದ್ರರ ಮಕ್ಕಳಂತೆ ನನ್ನ ಮಗ ಮತೀಯ ದಂಗೆಗಳಲ್ಲಿ ಭಾಗವಹಿಸುವ ಸಮಾಜ ಕಂಟಕನನ್ನಾಗಿ ಮಾಡಬೇಕಿಲ್ಲ. ಯಾವುದಾದರೂ ಕ್ರಿಶ್ಚಿಯನ್ ಮಶಿನರಿಯ ಒಳ್ಳೆ ಸ್ಕೂಲಿದ್ದರೆ ಹೇಳಯ್ಯ.

~ ಡಾ. ಜೆ ಎಸ್ ಪಾಟೀಲ.

😃😂😁

03/12/2019

5ನೇ ಡಿಸೆಂಬರ್ ಮತದಾನ ಮಾಡುವಾಗ ನೆನಪಿನಲ್ಲಿಡಬೇಕಾದ ಅಂಶಗಳು:

◼ ನೆರೆ ಪರಿಹಾರದಲ್ಲಿ ವಿಫಲ ಜನತೆಗೆ ದ್ರೋಹ
◼ 4 ತಿಂಗಳ ಸರ್ಕಾರದ ಸಾಧನೆ ಶೂನ್ಯ
◼ ಅಭಿವೃದ್ಧಿ ಕೆಲಸ ಸಂಪೂರ್ಣ ಸ್ಥಗಿತ
◼ ಮನಸೋ ಇಚ್ಛೆ ವರ್ಗಾವಣೆ ದಂಧೆ
◼ ಶೂನ್ಯ ಸಾಧನೆಗೆ ಕೋಟ್ಯಾಂತರ ರೂ. ಜಾಹೀರಾತು ವೆಚ್ಚ


#ಅನರ್ಹರನ್ನು_ಸೋಲಿಸಿ

30/11/2019
26/11/2019

ಪಕ್ಷದ ಪರವಾಗಿ ತಾವೆಲ್ಲರೂ ಜೊತೆಗಿದ್ದು ಯಶಸ್ವಿಗೊಳಿಸುತ್ತಿರುವುದಕ್ಕೆ ಧನ್ಯವಾದಗಳು. ನಾಳೆ ನಡೆಯಲಿರುವ ಚುನಾವಣಾ ಪ್ರಚಾರಕ್ಕೆ ಆಗಮಿಸಲು ತಮಗೆಲ್ಲರಿಗೂ ಕೋರುತ್ತೇನೆ.

23/11/2019

ರಾಷ್ಟ್ರಪತಿಗಳ ದಿನಚರಿ ಗಮನಿಸಿದೆ ದಿನಾಲು ಬೆಳಗ್ಗೆ 9.30am ಕಚೇರಿ ತಲುಪುವ ಸಮಯ, ಇಂದು ಯಾವ ತುರ್ತು ಇತ್ತು ಅಂತ ಮುಂಜಾನೆ 5ಗಂಟೆಗೆ ತಲುಪಿದ್ದು?
ಯಾವ ಹಕ್ಕು ಮಂಡನೆ ಇಲ್ಲದೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹಿಂತೆಗದದ್ದು?
ಹಕ್ಕು ರಾತ್ರಿಯಿಡೀ ಯಾವಾಗ ಮಂಡಿಸಲ್ಪಟ್ಟಿತು,
ಶಾಸಕರ ಪಟ್ಟಿಯನ್ನು ಯಾವಾಗ ಮಂಡಿಸಲಾಯಿತು?
ಎಲ್ಲಾ ಶಾಸಕರು ಯಾವಾಗ ರಾಜ್ಯಪಾಲರ ಮುಂದೆ ಹಾಜರಾದರು?

ವಿಚಿತ್ರ ಆದರೂ ಸತ್ಯ 😡
ಇದನ್ನ ಕೆಲವೊಬ್ಬರು ರಾಜಕೀಯ ಚಾಣಕ್ಯತನ ಅಂದ್ರೆ ಇನ್ನೂ ಕೆಲವು ಜನರು ಪ್ರಜಾಪ್ರಭುತ್ವದ ಕಗ್ಗೊಲೆ ಎನ್ನುತ್ತಾರೆ.
ಇದರಲ್ಲಿ ಯಾವುದು ಸತ್ಯ?

14/11/2019

ಅಯೊದ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ : ನನ್ನ ನಿರುದ್ಯೋಗ ತೊಲಗಿದಂತೆ.

ಅಯೊದ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ : ನನ್ನ ಸಹೋದರˌ ಸಹೋದರಿಯರಿಗೆ ಒಳ್ಳೆ ಶಿಕ್ಷಣ ದೊರೆತಂತೆ.

ಅಯೊದ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ : ಸ್ತ್ರೀಯರ ಮೇಲಿನ ಅತ್ಯಾಚಾರಗಳು ನಿಂತಂತೆ.

ಅಯೊದ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ : ಭಾರತದ ಆರ್ಥಿತ ಹಿಂಜರಿತ ಸರಿಹೋದಂತೆ.

ಅಯೊದ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ : ಭಾರತ ಅಭಿವ್ರದ್ಧಿ ಹೊಂದಿತ ರಾಷ್ಟ್ರವಾದಂತೆ.

ಅಯೊದ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ : ಭಾರತದ ವಿಶ್ವವಿದ್ಯಾಲಯಗಳು ಜಾಗತಿಕ ಮಟ್ಟದಲ್ಲಿ ಅಗ್ರ ಸ್ಥಾನಕ್ಕೇರಿದಂತೆ.

ಅಯೊದ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ : ರೈತರು ಅಭಿವ್ರದ್ಧಿ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳುವುದು ನಿಲ್ಲಿಸಿದಂತೆ.

ಅಯೊದ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ : ದೇಶವು ಸರ್ವರಂಗದಲ್ಲಿ ಬೆಳೆದು ನಿಂತಂತೆ.

~ ಒಬ್ಬ ಸಾಮಾನ್ಯ ಭಕ್ತ

ಹಸನ್ ನಯೀಂ ಸುರಕೋಡ ಅವರು ಕನ್ನಡಕ್ಕೆ ಅನುವಾದಿಸಿರುವ ಬಿ ಎನ್ ಪಾಂಡೆ ಅವರ 'ಹಿಂದೂ ಮಂದಿರಗಳು ಹಾಗೂ ಔರಂಗಜೇಬನ ಆದೇಶಗಳು' ಕೃತಿಗೆ ಅತಾವುರ್ರಹಮಾನ...
11/11/2019

ಹಸನ್ ನಯೀಂ ಸುರಕೋಡ ಅವರು ಕನ್ನಡಕ್ಕೆ ಅನುವಾದಿಸಿರುವ ಬಿ ಎನ್ ಪಾಂಡೆ ಅವರ 'ಹಿಂದೂ ಮಂದಿರಗಳು ಹಾಗೂ ಔರಂಗಜೇಬನ ಆದೇಶಗಳು' ಕೃತಿಗೆ ಅತಾವುರ್ರಹಮಾನ್ ಕಾಸ್ಮಿ ಅವರು ಬರೆದಿರುವ ಟಿಪ್ಪು ಸುಲ್ತಾನ್ ಕುರಿತ ಆಸಕ್ತಿಕರ ಅಂಶಗಳು ಮತ್ತು ವಾಸ್ತವಿಕ ಚಿತ್ರಣವಿರುವ ಮುನ್ನುಡಿಯ ಆಯ್ದ ಭಾಗ ನಿಮ್ಮ ಓದಿಗೆ...

---

ಬಿ. ಎನ್. ಪಾಂಡೆ ಅವರು ಆಲಮಗೀರ್ ಕುರಿತು ಅಧ್ಯಯನ ಮಾಡಿದಂತೇ ಹುತಾತ್ಮ ಟೀಪು ಸುಲ್ತಾನ್ ಕುರಿತು ಸಹ ಸಾಹಸಪೂರ್ಣ ಅಧ್ಯಯನ ಮಾಡಿದ್ದಾರೆ. ಈ ಹುತಾತ್ಮನ ಮೇಲೆ ಆಂಗ್ಲರು ಹೊರಿಸಿದ ಆರೋಪಗಳಿಗೆ ಅವರು ಪುರಾವೆ ಸಹಿತ ಉತ್ತರ ನೀಡಿದರು. ಆದರೆ ದೀರ್ಘ ಕಾಲದ ಒಂದು ಸುನಿಯೋಜಿತ ವಿಧಾನದಲ್ಲಿ ಭಾರತದ ಮುಸಲ್ಮಾನರ ಉಜ್ವಲ ಇತಿಹಾಸವನ್ನು ಮಸುಕುಗೊಳಿಸುವ ದುರುಳತನದ ಹುನ್ನಾರ ನಡೆದಿದೆ ಎಂದು ಖೇದದಿಂದ ಹೇಳಬೇಕಾಗಿದೆ. ಎಂತೆಂಥ ಖ್ಯಾತಿವೆತ್ತ ಇತಿಹಾಸಕಾರರು ಹಾಗೂ ಪ್ರೊಫೆಸರ್ ಮಹಾಶಯರುಗಳು ಕೇವಲ ಕಪೋಲಕಲ್ಪಿತ ಸಂಗತಿಗಳನ್ನೆಲ್ಲ ಪುನರಾವರ್ತನೆ ಮಾಡುತ್ತ ಹೊಸ ಪೀಳಿಗೆಯ ಹೃನ್ಮನಗಳಲ್ಲಿ ವಿಷ ಬಿತ್ತುತ್ತಿದ್ದಾರೆ, ಹಿಂದೂ ಮುಸಲ್ಮಾನರ ಏಕತೆ ಹಾಗೂ ಸೌಹಾರ್ದದ ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ಈ ಪ್ರಕ್ರಿಯೆಯನ್ನು ಸ್ವತಃ ಬಿ. ಎನ್. ಪಾಂಡೆ ಅವರ ಬಾಯಿಂದಲೇ ಕೇಳಿರಿ:

“ಇದೇ ರೀತಿ ಟೀಪು ಸುಲ್ತಾನ್ಗೆ ಸಂಬಂಧಿಸಿದಂತೆ ಸಹ ಹೊಸ ನೋಟ ಸಿಕ್ಕಿದ್ದು 1928ರಲ್ಲಿ. ಅವನಿಗೆ ಸಂಬಂಧಿಸಿದಂತೆ ನಾನು ಅಲಹಾಬಾದಿನಲ್ಲಿ ಒಂದಷ್ಟು ಸಂಶೋಧನೆಗೆ ತೊಡಗಿದ್ದೆ. ಒಂದು ದಿನ ಮಧ್ಯಾಹ್ನ ಆಂಗ್ಲೊ ಬಂಗಾಲಿ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಬಂದರು. ಅವರು ತಮ್ಮ ಅಸೋಶಿಯೇಶನ್ ಆಫ್ ಹಿಸ್ಟ್ರಿಯ ಉದ್ಘಾಟನೆ ಮಾಡಬೇಕೆಂದು ನನ್ನನ್ನು ಕೇಳಿಕೊಂಡರು. ಅವರು ಕಾಲೇಜಿನಿಂದ ನೇರವಾಗಿ ಬಂದಿದ್ದರಿಂದ ಅವರ ಕೈಯಲ್ಲಿ ಪುಸ್ತಕಗಳಿದ್ದವು. ಅವರ ಪುಸ್ತಗಳಲ್ಲಿದ್ದ ಭಾರತದ ಇತಿಹಾಸದ ಒಂದು ಪುಸ್ತಕದ ಪುಟಗಳನ್ನು ತಿರುವಲಾರಂಭಿಸಿದೆ. ಟೀಪು ಸುಲ್ತಾನ್ ಕುರಿತ ಪಾಠಕ್ಕೆ ಬಂದಾಗ ‘ಟೀಪು ಸುಲ್ತಾನ್ ತಮ್ಮನ್ನು ಬಲವಂತವಾಗಿ ಮುಸಲ್ಮಾನರನ್ನಾಗಿ ಪರಿವರ್ತಿಸ ಬಯಸಿದ್ದರಿಂದ ಮೂರು ಸಾವಿರ ಬ್ರಾಹ್ಮಣರು ಆತ್ಮಹತ್ಯೆ ಮಾಡಿಕೊಂಡರು’ ಎಂದು ಅದರಲ್ಲಿ ನಮೂದಾಗಿದ್ದನ್ನು ಗಮನಿಸಿದೆ. ಇತಿಹಾಸಕಾರನ ಹೆಸರೇನೆಂದು ನೋಡಿದಾಗ ಮಹಾಮಹೋಪಾಧ್ಯಾಯ ಡಾ. ಹರಪ್ರಸಾದ್ ಶಾಸ್ತ್ರಿ, ಮುಖ್ಯಸ್ಥರು, ಸಂಸ್ಕೃತ ವಿಭಾಗ, ಕಲಕತ್ತಾ ವಿಶ್ವವಿದ್ಯಾಲಯ ಎಂದಿತ್ತು.

ಮರುದಿನವೇ ನಾನು ಅವರಿಗೆ ಕಾಗದ ಬರೆದೆ. ನೀವು ಯಾವ ಮೂಲದಿಂದ ಈ ಘಟನೆಯನ್ನು ಉಲ್ಲೇಖಿಸಿದ್ದೀರಿ ಎಂಬುದನ್ನು ದಯವಿಟ್ಟು ನನಗೆ ತಿಳಿಸಬೇಕೆಂದು ನಾನು ಅವರನ್ನು ಕೇಳಿಕೊಂಡೆ. ನಾಲ್ಕು ಸಲ ಅವರಿಗೆ ಈ ವಿಷಯ ನೆನಪಿಸಿದ ನಂತರ ತಾವು ಈ ಘಟನೆಯನ್ನು ಮೈಸೂರು ಗೆಜೆಟಿಯರ್ನಿಂದ ಉಲ್ಲೇಖಿಸಿರುವುದಾಗಿ ಅವರು ತಿಳಿಸಿದರು.

ಮೈಸೂರು ಗೆಜೆಟಿಯರ್ನ ಆ ಸಂಪುಟ ನನಗೆ ಅಲಹಾಬಾದ್ನಲ್ಲೂ ಸಿಗಲಿಲ್ಲ, ಕಲಕತ್ತೆಯಲ್ಲೂ ಸಿಗಲಿಲ್ಲ. ನಾನು ಡಾ.ಸಪ್ರು ಅವರ ಸಲಹೆ ಮೇರೆಗೆ ಮೈಸೂರಿನ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಅವರಿಗೆ ಕಾಗದ ಬರೆದೆ. ಸರ್ ಮಿರ್ಜಾ ಇಸ್ಮಾಯಿಲ್ ನನ್ನ ಕಾಗದವನ್ನು ವಿಶ್ವವಿದ್ಯಾಲಯದ ಕುಲಪತಿ ಸರ್ ಬೃಜೇಂದ್ರನಾಥ್ ಸೀಲ್ ಅವರಿಗೆ ರವಾನಿಸಿದರು. ಸೀಲ್ ಸಾಹೇಬರು ಆಗ ಮೈಸೂರು ಗೆಜೆಟಿಯರನ್ನು ಸಂಪಾದಿಸುತ್ತಿದ್ದ ಪ್ರೊ.ಶ್ರೀಕಂಠಯ್ಯ ಅವರಿಗೆ ನನ್ನ ಪತ್ರವನ್ನು ತಲುಪಿಸಿರುವುದಾಗಿ ನನಗೆ ತಿಳಿಸಿದರು. ಮೈಸೂರು ಗೆಜೆಟಿಯರ್ನಲ್ಲಿ ಈ ಘಟನೆ ಇಲ್ಲವೇ ಇಲ್ಲವೆಂದು ಅವರು ಸೂಚಿಸಿದರು. ಇತಿಹಾಸದ ಆ ಪುಸ್ತಕವು ಉತ್ತರ ಪ್ರದೇಶ, ಬಿಹಾರ, ಒರಿಸ್ಸಾ, ಬಂಗಾಲ ಹಾಗೂ ಆಸ್ಸಾಮಿನ ಪ್ರೌಢಶಾಲೆಗಳಿಗೆ ಪಠ್ಯವಾಗಿತ್ತು. ಲಕ್ಷಾಂತರ ಮುಗ್ಧ ವಿದ್ಯಾರ್ಥಿಗಳು ಪ್ರತಿ ವರ್ಷ ಈ ಪುಸ್ತಕವನ್ನು ಓದುತ್ತಿದ್ದಾರೆ. ಈ ಘಟನೆಯ ಪರಿಣಾಮ ಅವರ ಮನಸ್ಸಿನ ಮೇಲೆ ಎಂಥ ಪ್ರಭಾವ ಬೀರಬಲ್ಲದು?

ಟೀಪು ಸುಲ್ತಾನ್ನ ಪಕ್ಷಪಾತ ಎಂಥದ್ದಾಗಿತ್ತು? ಆ ಕುರಿತು ನನಗೆ ಮಾಹಿತಿ ನೀಡಬೇಕೆಂದು ನಾನು ಪ್ರೊ.ಶ್ರೀಕಂಠಯ್ಯ ಅವರಿಗೆ ವಿನಂತಿಸಿಕೊಂಡೆ. ಟೀಪು ಸುಲ್ತಾನ್ನ ದಂಡನಾಯಕ ಕೃಷ್ಣರಾವ್ ಬ್ರಾಹ್ಮಣನಾಗಿದ್ದ. ಅವನ ಮಂತ್ರಿ ಪೂರ್ಣಯ್ಯ ಬ್ರಾಹ್ಮಣನಾಗಿದ್ದ ಎಂದು ನನಗೆ ಅವರು ಮಾಹಿತಿ ನೀಡಿದರು. ಟೀಪು ಸುಲ್ತಾನ್ ಪ್ರತಿ ವರ್ಷ ಯಾವ ಯಾವ ಮಂದಿರಗಳಿಗೆ ಕಾಣಿಕೆ ಹಾಗೂ ಮುಡಿಪುಗಳನ್ನು ಸಲ್ಲಿಸುತ್ತಿದ್ದನೋ ಅಂಥ 156 ಮಂದಿರಗಳ ಪಟ್ಟಿಯನ್ನು ನನಗೆ ನೀಡಿದರು. ಟೀಪು ಸುಲ್ತಾನ್ನ ಕೋಟೆಯೊಳಗೆ ಶ್ರೀರಂಗನಾಥ ಮಂದಿರ ಇತ್ತು. ಅವರು ಶೃಂಗೇರಿ ಮಠದ ಜಗದ್ಗುರು ಶಂಕರಾಚಾರ್ಯರು ಟೀಪು ಸುಲ್ತಾನ್ಗೆ ಕನ್ನಡದಲ್ಲಿ ಬರೆದ ಒಂದು ಡಜನ್ ಪತ್ರಗಳ ಫೋಟೊ ಪ್ರತಿಗಳನ್ನು ಸಹ ನನಗೆ ಕಳಿಸಿದ್ದರು. ಇದರಿಂದ ಆಚಾರ್ಯ ಹಾಗೂ ಟೀಪು ಸುಲ್ತಾನ್ನ ನಡುವೆ ಅಪಾರ ಸ್ನೇಹವಿತ್ತು ಎಂಬುದು ಸ್ಪಷ್ಟವಾಗುತ್ತದೆ. ತಮ್ಮ ಕಾಲದ ರಾಜಮಹಾರಾಜರುಗಳಲ್ಲಿ ಬ್ರಿಟಿಷರ ಜೊತೆ ಶಾಮೀಲಾಗಿ ಯಾರಿಗೂ ಮೋಸ ಮಾಡದವರೆಂದರೆ ಟೀಪು ಸುಲ್ತಾನ್ ಮತ್ತು ಅವನ ತಂದೆ ಮಾತ್ರ. ಟೀಪು ಸುಲ್ತಾನ್ ವಿರುದ್ಧ ಬ್ರಿಟಿಷರ ಹಲವಾರು ಕದನಗಳು ನಡೆದವು. ಕೊನೆಗೆ ಒಬ್ಬ ಶೂರ ದೇಶಪ್ರೇಮಿಯಾಗಿ ಹೋರಾಡುತ್ತ ಆತ ಹುತಾತ್ಮನ ಪಟ್ಟಕ್ಕೇರಿದ. ಅಪರಿಚಿತ ಶವಗಳ ರಾಶಿಯಲ್ಲಿ ಅವನನ್ನು ಹುಡುಕಿ ತೆಗೆದ ಮೇಲೆ ಆತ ಕತ್ತಿಯ ಹಿಡಿಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದನ್ನು ಬ್ರಿಟಿಷ್ ಜನರಲ್ ಗಮನಿಸಿದ್ದ.

ನಾನು ಈ ಪತ್ರ ವ್ಯವಹಾರದ ಎಲ್ಲ ದಾಖಲೆಗಳನ್ನು ಕಲಕತ್ತಾ ವಿಶ್ವವಿದ್ಯಾಲಯದ ಕುಲಪತಿಗಳಿಗೆ ರವಾನಿಸಿದೆ. ಈ ಪತ್ರ ವ್ಯವಹಾರದ ದಾಖಲೆಗಳಿಂದ ಶಾಸ್ತ್ರಿ ಅವರ ಪುಸ್ತಕದಲ್ಲಿ ಉಲ್ಲೇಖಿಸಲಾದ ಘಟನೆ ಸುಳ್ಳೆಂದು ತಮಗೆ ಖಚಿತವಾದರೆ ಆ ಕುರಿತು ಕ್ರಮ ಜರುಗಿಸಬೇಕೆಂದೂ, ಇಲ್ಲದಿದ್ದರೆ ನನ್ನ ಪತ್ರವ್ಯವಹಾರದ ದಾಖಲೆಗಳನ್ನು ವಾಪಸು ಕಳಿಸಬೇಕೆಂದೂ ನಾನು ಅವರಿಗೆ ವಿನಂತಿಸಿಕೊಂಡೆ. ಅವರಿಂದ ನನಗೆ ಶೀಘ್ರವೇ ಉತ್ತರ ಬಂತು. ಅಷ್ಟೇ ಅಲ್ಲ ಅದರ ಜೊತೆಗೆ ಶಾಸ್ತ್ರಿ ಅವರ ಇತಿಹಾಸದ ಪುಸ್ತಕವನ್ನು ಪ್ರೌಢಶಾಲೆಗಳಿಂದ ವಾಪಸ್ ಪಡೆಯಲಾಗಿದೆ ಎಂಬ ಆದೇಶದ ಪ್ರತಿಯೂ ಬಂತು.”

ಈ ಸಂಬಂಧ ಒಂದಿಷ್ಟು ವಿವರಣೆಯ ಅಗತ್ಯವಿದೆ. ಫೆಬ್ರುವರಿ 14, 1992ರಂದು ನನ್ನ ‘ಅಲ್ವಾಹ್ ಅಲ್ಸನಾದೀದ್ ಭಾಗ – 2’ ಪುಸ್ತಕವನ್ನು ಡಾ. ಬಿ. ಎನ್. ಪಾಂಡೆ ಬಿಡುಗಡೆ ಮಾಡಿ, ಅವರು ಭಾರತದ ಇತಿಹಾಸದ ತಿರುಚುವಿಕೆ ಹಾಗೂ ತಿದ್ದುಪಡಿ ಕುರಿತು ಒಂದು ಪಾಂಡಿತ್ಯಪೂರ್ಣ ಉಪನ್ಯಾಸ ನೀಡಿದರು. ಅವರು ಈ ಕುತೂಹಲಕರ ಘಟನೆಯನ್ನು ಪ್ರಸ್ತಾಪಿಸಿದರು. (ಅದರಿಂದ ಹರಪ್ರಸಾದ್ ಶಾಸ್ತ್ರಿ ಅವರ ಕಿಡಿಗೇಡಿತನ ಹಾಗೂ ಪ್ರಚೋದನಕಾರಿ ಸಂಶೋಧನೆ ಮಟ್ಟ ಗೊತ್ತಾಗುತ್ತದೆ.) ಈ ಕುರಿತು ಅವರು ಹೇಳಿದ್ದು: “ನಾನು 25 ವರ್ಷಗಳಿಂದ ಮೈಸೂರು ಗೆಜೆಟಿಯರನ್ನು ಸಂಪಾದಿಸುತ್ತಿದ್ದ ಪುಸ್ತಕದಲ್ಲಿ ಪ್ರಸ್ತಾಪಿಸಲಾದ ಆ ಘಟನೆ ಅದರಲ್ಲಿ ಇಲ್ಲವೆಂದು ತಿಳಿಸಿದ ಪ್ರೊ.ಶ್ರೀಕಂಠಯ್ಯ ಅವರ ಪತ್ರ ನನಗೆ ಸಿಕ್ಕ ಮೇಲೆ ಕಲಕತ್ತಾ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಹರಪ್ರಸಾದ್ ಶಾಸ್ತ್ರಿ ಅವರಿಗೆ ಪತ್ರ ಬರೆದೆ. ನೀವು ನಿಮ್ಮ ಪುಸ್ತಕದಲ್ಲಿ ಮೈಸೂರು ಗೆಜೆಟಿಯರ್ನಿಂದ ಉಲ್ಲೇಖಿಸಿದ್ದು ಎನ್ನಲಾದ ಟೀಪು ಸುಲ್ತಾನ್ ಕುರಿತ ಘಟನೆ ಮೈಸೂರು ಗೆಜೆಟಿಯರ್ನಲ್ಲಿ ಇಲ್ಲವೆಂದು ನಾನು ಅವರಿಗೆ ತಿಳಿಸಿದೆ. ತುಂಬ ದಿನಗಳ ನಂತರ ಪ್ರೊ.ಶಾಸ್ತ್ರಿ ಅವರ ಪತ್ರ ಬಂತು. ‘ಮೈಸೂರು ಗೆಜೆಟಿಯರ್ನಲ್ಲಿ ಈ ಘಟನೆ ಇತ್ತೆಂದು ನನಗೆ ಅನಿಸಿತ್ತು. ಅದು ಮೈಸೂರು ಗೆಜೆಟಿಯರ್ನಲ್ಲಿ ಇಲ್ಲದಿದ್ದರೆ ಅದೆಲ್ಲಿಂದ ಈ ಘಟನೆಯನ್ನು ಉಲ್ಲೇಖಿಸಿದೆನೋ ನನಗೆ ತಿಳಿಯದು’ ಎಂದು ಅವರು ನನಗೆ ಬರೆದರು.”

ಇದೇ ಸಮಾರಂಭದಲ್ಲಿ ಟೀಪು ಸುಲ್ತಾನ್ನ ಪಕ್ಷಪಾತ ಹಾಗೂ ಸಂಕುಚಿತ ದೃಷ್ಟಿಕೋನಕ್ಕೆ ಸಂಬಂಧಿಸಿದಂತೆ ಮೈಸೂರು ಗೆಜೆಟಿಯರ್ನಲ್ಲಿ ಯಾವುದಾದರೂ ಘಟನೆ ಇದ್ದರೆ ಅವಶ್ಯವಾಗಿ ನನಗೆ ಮಾಹಿತಿ ನೀಡಿರೆಂದು ಅವರಿಗೆ ಕಾಗದ ಬರೆದುದನ್ನು ಪ್ರಸ್ತಾಪಿಸಿದರು. ಅವರಿಗೆ ಪ್ರೊ. ಶ್ರೀಕಂಠಯ್ಯ ಅವರಿಂದ ಪತ್ರ ಬಂತು. ಅದರಲ್ಲಿ ಅವರು ಈ ಮಾಹಿತಿ ನೀಡಿದ್ದರು:

“ಟೀಪು ಸುಲ್ತಾನ್ ತುಂಬ ನ್ಯಾಯನಿಷ್ಠುರ ಹಾಗೂ ಜಾತ್ಯತೀತ ಬಾದಶಾಹನಾಗಿದ್ದ. ಅವನು ಕೋಮುವಾದಿ ಹಾಗೂ ಸಂಕುಚಿತ ಮನಸ್ಸಿನವನಾಗಿದ್ದ ಎಂಬುದಕ್ಕೆ ಒಂದೇ ಒಂದು ಉದಾಹರಣೆ ಇಲ್ಲ. ಅವನನ್ನು ಕೋಮುವಾದಿ ಹಾಗೂ ಸಂಕುಚಿತ ಮನಸ್ಸಿನವನೆನ್ನಬಹುದಾದರೆ ಆ ಸಂಬಂಧ ಒಂದೇ ಒಂದು ಘಟನೆಯ ಪ್ರಸ್ತಾಪವಿದೆ. ಮೈಸೂರಿನ ಒಂದು ಪ್ರದೇಶ ಕೊಡಗಿನಲ್ಲಿ ಕೆಳಜಾತಿಯ ಹಿಂದೂಗಳು ವಾಸವಾಗಿದ್ದರು. ಮೇಲ್ಜಾತಿಯ ಹಿಂದೂಗಳ ಅನ್ಯಾಯ, ಅತ್ಯಾಚಾರದಿಂದ ಬೇಸತ್ತ ಅವರು ಕ್ರೈಸ್ತ ಧರ್ಮಕ್ಕೆ ಸೇರಬೇಕೆಂದಿದ್ದರು. ಈ ಸುದ್ದಿ ತಿಳಿದೊಡನೆ ಬಾದಶಾಹನು ಅಲ್ಲಿಯ ಜನರನ್ನು ದರಬಾರಿಗೆ ಬರಹೇಳಿದನು. ‘ನೀವು ಕ್ರೈಸ್ತ ಧರ್ಮವನ್ನು ಅಂಗೀಕರಿಸುವವರಿದ್ದೀರೆಂದು ಕೇಳಿದೆನಲ್ಲ’ ಎಂದು ಆತ ಕೇಳಿದಾಗ ‘ಹೌದು ಬಾದಶಾಹ್ ಸಲಾಮತ್, ನಾವು ಕ್ರೈಸ್ತ ಧರ್ಮವನ್ನು ಅಂಗೀಕರಿಸುವವರಿದ್ದೇವೆ. ನಿಮಗೆ ಸರಿಯಾದ ಮಾಹಿತಿ ಸಿಕ್ಕಿದೆ’ ಎಂದು ಅವರೆಲ್ಲ ಒಕ್ಕೊರಲಿನಿಂದ ಹೇಳಿದರು. ‘ನೀವು ನಿಮ್ಮ ಪೂರ್ವಜರ ಧರ್ಮದಲ್ಲಿ ಮುಂದುವರಿಯಬೇಕು. ಹೊಸ ಧರ್ಮಕ್ಕೆ ಸೇರಬೇಕೆನ್ನುವ ವಿಚಾರ ನಿಮ್ಮ ತಲೆಯಲ್ಲಿ ಸುಳಿಯಬಾರದು. ನೀವೆಲ್ಲರೂ ನಿಮ್ಮ ನಿಮ್ಮ ಮನೆಗೆ ಹೋಗಿರಿ. ಈ ಕುರಿತು ಸಾರಾಸಾರ ವಿಚಾರ ಮಾಡಿ ಆ ಮೇಲೆ ನನಗೆ ವಿಷಯ ತಿಳಿಸಿರಿ’ ಎಂದ ಟೀಪು.

ಕೆಲ ದಿನಗಳ ನಂತರ ಆ ಜನ ಮತ್ತೆ ಬಂದರು. ‘ನಾವು ಕ್ರೈಸ್ತ ಧರ್ಮ ಅಂಗೀಕರಿಸುವುದಾಗಿ ತೀರ್ಮಾನಿಸಿದ್ದೆವು. ನಮಗೆ ಅನುಮತಿ ನೀಡಬೇಕಾಗಿ ಬಿನ್ನವಿಸಿಕೊಳ್ಳುತ್ತೇವೆ’ ಎಂದರು. ಬಾದಶಾಹ್ ಮತ್ತೆ ಅವರಿಗೆ ತಿಳಿ ಹೇಳಿದ. ನೋಡಿ ನೀವು ನಿಮ್ಮ ಪೂರ್ವಜರ ಧರ್ಮ ತ್ಯಜಿಸಬಾರದು. ನಿಮ್ಮ ಪ್ರಾಚೀನ ಧರ್ಮದಲ್ಲಿ ನಿಮಗೆ ನಂಬಿಕೆ ಇರಬೇಕು. ಒಂದು ವೇಳೆ ನೀವು ಮತಾಂತರ ಕುರಿತು ತೀರ್ಮಾನ ಮಾಡಿರುವುದೇ ಆದರೆ ಸಪ್ತಸಾಗರದಾಚೆಗಿನ ಧರ್ಮವನ್ನು ಅಂಗೀಕರಿಸುವುದಕ್ಕೆ ಬದಲಾಗಿ ನಿಮ್ಮ ಬಾದಶಹನ ಧರ್ಮವನ್ನೇ ಅಂಗೀಕರಿಸಿ’ ಎಂದು ಆತ ಹೇಳಿದ. ಹೀಗಾಗಿ ಅವರು ತಮ್ಮ ಬಾದಶಾಹನ ಧರ್ಮವನ್ನು ಅಂಗೀಕರಿಸಿದರು. ಕೇವಲ ಇದೊಂದೇ ಅಂಥ ಘಟನೆ. ಅದೂ ಇಂಥ ಹಿನ್ನೆಲೆಯದು. ಇದರ ಹೊರತಾಗಿ ಅವನನ್ನೊಬ್ಬ ಪಕ್ಷಪಾತಿ ಎಂದು ತೀರ್ಮಾನಿಸಲು ಇನ್ನೊಂದು ಘಟನೆ ಸಿಗುವುದಿಲ್ಲ."

ಡಾ. ಬಿ. ಎನ್. ಪಾಂಡೆ ತಮ್ಮ ಜೀವನದುದ್ದಕ್ಕೂ ಔರಂಗಜೇಬ ಆಲಮಗೀರ್ ಹಾಗೂ ಹುತಾತ್ಮ ಟೀಪು ಸುಲ್ತಾನ್ರನ್ನು ಸಮರ್ಥಿಸಿಕೊಂಡರು, ಅವರ ವಿರುದ್ಧ ಮಾತಾಡುವವರಿಗೆ ಪುರಾವೆ ಸಹಿತ ಉತ್ತರ ನೀಡುತ್ತಿದ್ದರು. ತಮ್ಮ ಬಾಳ ಸಂಜೆಯಲ್ಲಿ ಮುಪ್ಪನ್ನೂ ಲೆಕ್ಕಿಸದೆ ಅವರು ಯಾವಾಗಲಾದರೂ ರಾಜಕೀಯ, ಸಾಮಾಜಿಕ ಅಥವಾ ಸಾಂಸ್ಕೃತಿಕ ಸಮಾರಂಭದಲ್ಲಿ ಪಾಲ್ಗೊಂಡರೆ ಔರಂಗಜೇಬ ಹಾಗೂ ಟೀಪು ಸುಲ್ತಾನ್ರು ಹಿಂದೂ ಮಂದಿರಗಳಿಗೆ ಹಾಗೂ ಮಠಗಳಿಗೆ ನೀಡಿದ ಇನಾಮುಗಳು ಹಾಗೂ ಜಾಗೀರುಗಳ ಪ್ರಸ್ತಾಪ ಅವರು ಅವಶ್ಯವಾಗಿ ಮಾಡುತ್ತಿದ್ದರು. ಅವರು ಮುಸ್ಲಿಂ ಸುಲ್ತಾನ್ರನ್ನು ತುಂಬ ಗೌರವದಿಂದ ಸ್ಮರಿಸಿಕೊಳ್ಳುತ್ತಿದ್ದರು. ಇದರಿಂದಾಗಿಯೇ ಒಂದು ಕೋಮು ಅವರ ಬಗ್ಗೆ ಸಿಡಿಮಿಡಿಗೊಳ್ಳುತ್ತಿತ್ತು.
(ಪುಟ ೪-೮)

---

ಲಡಾಯಿ ಪ್ರಕಾಶನ ಪ್ರಕಟಿಸಿರುವ 'ಹಿಂದೂ ಮಂದಿರಗಳು ಹಾಗೂ ಔರಂಗಜೇಬನ ಆದೇಶಗಳು' ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...

ಉರ್ದುವಿನಲ್ಲಿ ಬಿ ಎನ್ ಪಾಂಡೆ ಅವರು ರಚಿಸಿರುವ ಕೃತಿಯನ್ನು ಹಸನ್ ನಯೀಂ ಸುರಕೋಡ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ

05/11/2019

Girl Takes Minister CT Ravi To Task Over Pothole Roads In Chikmagalur.., ► Download TV9 Kannada Android App: https://goo.gl/OM6nPA ► Subscribe to Tv9 Kannada...

Address

Nagarabavi
Bangalore
560072

Alerts

Be the first to know and let us send you an email when BVKS posts news and promotions. Your email address will not be used for any other purpose, and you can unsubscribe at any time.

Contact The School

Send a message to BVKS:

Shortcuts

Share