ಡಿಸೆಂಬರ್ 31 2019.. ತಾರೀಖಿನಂದು ನಮ್ಮಕೋಟೆ ಶಾಲೆಯ ಮುಖ್ಯೋಪಾದ್ಯಾಯರಾದ ಬಿ.ಜಿ. ಜಗದೀಶ್ ಅವರು ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದಾರೆ ... ನಮ್ಮೆಲ್ಲರ ಪ್ರೀತಿಯ BGJ ಅವರ ನಿವೃತ್ತಿ ಜೀವನವು ಸುಖವಾಗಿರಲಿ... ನಮ್ಮಂತ ಇನ್ನೂ ಹೆಚ್ಚು ವಿದ್ಯಾರ್ಥಿಗಳಿಗೆ ಅವರ ಮಾರ್ಗದರ್ಶನ ಮುಂದೆ ಕೂಡ ದೊರಕ್ಕುತಿರಲಿ... ಶುಭಾಶಯಗಳು ಸರ್ ... ನಮ್ಮೆಲ್ಲ ಹಳೆಯ ವಿದ್ಯಾರ್ಥಿಗಳ ಪರವಾಗಿ ನಿಮಗೆ ನಮನಗಳು..
Fort High School, Chitradurga
Page of Government high school (fort) CHITRADURGA, created by the old students of the school, with an aspiration to connect all the students of the school.
ಕಲಿಯೋಕೆ ಕೋಟಿ ಭಾಷೆ.. ಆಡೋಕೆ ಒಂದೇ ಭಾಷೆ.. ಕನ್ನಡ.. ಕಸ್ತೂರಿ ಕನ್ನಡ.
ಕನ್ನಡ ರಾಜ್ಯೊತ್ಸವದ ಶುಭಾಷಯಗಳು... ಸಿರಿಗನ್ನಡಂ ಗೆಲ್ಗೆ... ಸಿರಿಗನ್ನಡಂ ಬಾಳ್ಗೆ..
Shashikumar, DCP North division, Bangalore in action against rowdy sheeters.
Shashikumar is one of the students of Fort school, chitradurga... We are proud of your commitments and dedication sir...
ನಮ್ಮ ಕೋಟೆ ಶಾಲೆಯಲ್ಲಿ ನಮ್ಮೊಂದಿಗೆ ಓದಿ ಬೆಳೆದ ಕೆ.ಪಿ. ನಾಗರಾಜ್, ಪಬ್ಲಿಕ್ ಟಿ.ವಿಯ ವಿಶೇಷ ವರದಿಗಾರರಾಗಿ ಕಾಶ್ಮೀರದ, ಪುಲ್ವಾಮದಲ್ಲಿ...ಕೋಟೆ ಶಾಲೆಯಿಂದ ಕಾಶ್ಮೀರದವರೆಗೂ ಇವರ ಬೆಳವಣಿಗೆ ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ... ಇಂತಹ ಸೂಕ್ಷ್ಮ ಸಮಯದಲ್ಲಿ ಯುದ್ದ ಭೂಮಿ ಎಂದೇ ಪರಿಗಣಿಸಲಾಗುತ್ತಿರುವ ಭಾಗದಲ್ಲಿ ಕರ್ತವ್ಯ ನಿರ್ವಹಣೆಯಲ್ಲಿರುವ ನಮ್ಮ ಹುಡುಗನಿಗೆ ನಿಮ್ಮೆಲ್ಲರ ಪ್ರೋತ್ಸಾಹ, ಹಾರೈಕೆ ಅಬಿನಂದನೀಯ...
ಸರ್ವರಿಗೂ ಸಂಕ್ರಾಂತಿಯ ಶುಭಾಶಯಗಳು....
Deepavali is approaching... Share your memories of childhood about Ur best deepavali moment...
-Team fort high school
ಚಿತ್ರದುರ್ಗದ ಹಿಂದೂ ಮಹಾ ಗಣಪತಿಯ ಶೋಭಾಯಾತ್ರೆ...
ನಮ್ಮ ಶಾಲೆಯ ಸಮೀಪದಿಂದ ಸೆರೆ ಹಿಡಿದ ಚಿತ್ರಗಳು...
ನಮ್ಮ ಪ್ರೀತಿಯ ಗುರುಗಳಿಗೆ ಶಿಕ್ಷಕರ ದಿನದ ಶುಭಾಶಯಗಳು....
RIP sir. India will miss you forever... Your work for the people of India will be always remembered.. we will miss a wonderful parliamentarian...
Wishing you all A Happy Independence day....
The best way of showing love to our country is by respecting the sacrifices made by our freedom fighters...
Wishing all of you happy Independence day in advance...
ಮತ ಚಲಾವಣೆ ನಮ್ಮ ಹಕ್ಕು.. ತಪ್ಪದೆ ಮತ ಚಲಾಯಿಸೋಣ...
https://www.facebook.com/Sri.Kshetra.Dharmasthala.Manjunatha/videos/1903540909677462/
Team Fortcitymemes joins hands for the initiative from fort school team...
https://m.facebook.com/story.php?story_fbid=683265258510786&substory_index=0&id=563141667189813
ವಿಜಯವಾಣಿ ಕನ್ನಡ ದಿನಪತ್ರಿಕೆ ನಮ್ಮ ತಂಡದ ಪ್ರಯತ್ನಕ್ಕೆ ಮೆಚುಗೆ ಸೂಚಿಸಿದೆ.. ಸಹಕರಿಸಿದ ಕೋಟೆ ಶಾಲೆಯ ಎಲ್ಲ ಹಳೆಯ ವಿದ್ಯಾರ್ತಿಗಳಿಗೂ ದನ್ಯವಾದಗಳು...
ಮತ ಚಲಾವಣೆ ನಮ್ಮ ಹಕ್ಕು .. ತಪ್ಪದೇ ಮತ ಚಲಾಯಿಸೋಣ...
ತ.ರಾ.ಸು
ಕನ್ನಡದ ಮೇರು ಲೇಖಕರಲ್ಲೊಬ್ಬರಾದ ತ.ರಾ.ಸು ಅವರು ಏಪ್ರಿಲ್ 21, 1920ರಲ್ಲಿ ಅಂದು ಚಿತ್ರದುರ್ಗ ಜಿಲ್ಲೆಯಲ್ಲಿದ್ದು ಇಂದು ದಾವಣಗೆರೆ ತಾಲ್ಲೂಕಿನಲ್ಲಿರುವ ಮಲೆಬೆನ್ನೂರಿನಲ್ಲಿ ತಳುಕಿನ ವೆಂಕಣ್ಣಯ್ಯನವರ ಮನೆತನದಲ್ಲಿ ಜನಿಸಿದರು.
ಪ್ರತಿ ಕಲ್ಲೂ ಇತಿಹಾಸದ ವೀರರ ಕಥೆಯನ್ನೂ ಇತಿಹಾಸದ ದುರಂತ ಕಥೆಯನ್ನೂ ಸಾರಿ ಹೇಳುವ ಅಂದಿನ ಚಿತ್ರದುರ್ಗದಲ್ಲಿ ಹುಟ್ಟಿದ ಸುಬ್ಬರಾಯರು ಆ ಸ್ಥಳದೊಂದಿಗೆ ಅತ್ಯಂತ ಆತ್ಮೀಯವಾದ ಸಂಬಂಧವನ್ನೂ ಬೆಳೆಸಿಕೊಂಡರು. ತಮ್ಮ ಕೊನೆಯ ಕಾದಂಬರಿ ‘ದುರ್ಗಾಸ್ತಮಾನ’ದ ಮುನ್ನುಡಿಯಲ್ಲಿ ಅವರು ಹೀಗೆ ಬರೆದರು: “ಚಿತ್ರದುರ್ಗದ ಜನರಿಗೆ ಚಿತ್ರದುರ್ಗ ಎಂದರೆ ಒಂದು ಊರಲ್ಲ, ಕೋಟೆಯಲ್ಲ, ಬೆಟ್ಟವಲ್ಲ, ತಮ್ಮ ಕರುಳಿಗೆ ಹೊಂದಿಕೊಂಡು ಬೆಳೆದ ಜೀವಂತ ವಸ್ತು.” ಚಿತ್ರದುರ್ಗದ ಉತ್ಸಾಹೀ ಇತಿಹಾಸಕಾರರಾದ ಹುಲ್ಲೂರು ಶ್ರೀನಿವಾಸ ಜೋಯಿಸರು ಹುಡುಗನ ಚಿತ್ರದುರ್ಗದ ಅಭಿಮಾನಕ್ಕೆ ನೀರೆರೆದರು. ಮುಂದೆ ತ.ರಾ.ಸು ಐತಿಹಾಸಿಕ ಕಾದಂಬರಿಗಳನ್ನು ಒಂದು ವಿಶಿಷ್ಟ ಮಾಧ್ಯಮ ಮಾಡಿಕೊಳ್ಳಲು ಇದು ಕಾರಣವಾದದ್ದಷ್ಟೇ ಅಲ್ಲ ಸಾಮಾನ್ಯ ಜನರನ್ನು ಮೀರಿ ನಿಂತ, ಸಿಡಿಲಿನ ಚೈತನ್ಯವನ್ನು ತುಂಬಿಕೊಂಡ, ಅಸಾಧಾರಣ ಭಾವಗಳ-ರಾಗಗಳ ದೈತ್ಯವ್ಯಕ್ತಿಗಳು ಇದರಿಂದ ತ.ರಾ.ಸು ಗೆ ವಾಸ್ತವಿಕ ಸ್ತ್ರೀ ಪುರುಷರಾದರು. ಅವರ ಕಾದಂಬರಿಗಳ ಪಾತ್ರಗಳ ಸೃಷ್ಟಿಯ ಮೇಲೆ ಇದು ಪ್ರಭಾವವನ್ನು ಬೀರಿತು.
ತಳುಕಿನ ವೆಂಕಣ್ಣಯ್ಯನವರ ಮನೆತನಕ್ಕೆ ಸಾಹಿತ್ಯ ಸಂಸ್ಕೃತಿಗಳಲ್ಲಿ ವಿಶೇಷ ಅಭಿಮಾನ. ಇವರ ಹಿರಿಯರು ಯಕ್ಷಗಾನದಲ್ಲಿ ತೀವ್ರ ಆಸಕ್ತಿಯಿದ್ದವರು. ದೊಡ್ಡಪ್ಪ ವೆಂಕಣ್ಣಯ್ಯನವರು ವಿದ್ವಾಂಸರು. ಸದಭಿರುಚಿಯ ತೂಕದ ಮಾತಿನ ವಿಮರ್ಶಕರು. ತಂದೆ ರಾಮಸ್ವಾಮಿಯವರಿಗೆ ಸಾಹಿತ್ಯದಲ್ಲಿ ಆಸಕ್ತಿ. ಚಿಕ್ಕಪ್ಪ ಶಾಮರಾಯರು ವಿದ್ವಾಂಸರು, ಒಳ್ಳೆಯ ವಿಮರ್ಶಕರು.
ಸ್ವಾತಂತ್ರ್ಯ ಸಂಗ್ರಾಮವನ್ನು ಹತ್ತಿರದಿಂದ ಕಂಡವರು, ಅನಂತರ ಅದರಲ್ಲಿ ಭಾಗವಹಿಸಿ ಸೆರೆಮನೆವಾಸವನ್ನು ಅನುಭವಿಸಿದವರು ತ.ರಾ.ಸು. ಬೆಂಗಳೂರಿಗೆ ಬಂದು ಪತ್ರಿಕಾವೃತ್ತಿಯನ್ನು ಆರಿಸಿಕೊಂಡರು. ಸೇರಿದ್ದು ‘ವಿಶ್ವಕರ್ನಾಟಕ’ ಪತ್ರಿಕೆಯ ಕಚೇರಿಯನ್ನು. ಅದು ಸ್ವಾತಂತ್ರ್ಯದ ಹೋರಾಟದಲ್ಲಿ ತಮ್ಮ ಆಸ್ತಿಯನ್ನೆಲ್ಲಾ ಕಳೆದು ಆದರ್ಶದ ಬೆನ್ನುಹತ್ತಿ ಧೀರಜೀವನ ನಡೆಸುತ್ತಿದ್ದ ತಿರುಮಲೆ ತಾತಾಚಾರ್ಯ ಶರ್ಮರ ಪತ್ರಿಕೆ. ಜೊತೆಗೆ ಮತ್ತೊಂದು ಧೀರ ಜೀವ ಸಿದ್ಧವನಹಳ್ಳಿ ಕೃಷ್ಣಶರ್ಮ. ಇಬ್ಬರದೂ ಶಕ್ತಿಯುತವಾದ ತೇಜಸ್ವಿ ಶೈಲಿ. ತ.ರಾ.ಸು ಕೃಷ್ಣಶರ್ಮರಿಗೆ ಹತ್ತಿರವಾಗಿ, ಅವರ ಧ್ಯೇಯಗಳನ್ನೂ ಜೀವನ ರೀತಿಯನ್ನೂ ಬರಹವನ್ನೂ ಮೆಚ್ಚಿಕೊಂಡರು. ಅವರಂತೆಯೇ, ಬರಹವನ್ನೇ ವೃತ್ತಿಯನ್ನಾಗಿ ಮಾಡಿಕೊಂಡರು. ಪತ್ರಿಕೋದ್ಯಮಿಯಾಗಿ ಅರೆಹೊಟ್ಟೆ ಊಟಮಾಡಿ ಆದರ್ಶತ್ವ ಕೇಳುವ ಬೆಲೆಯನ್ನು ತೆತ್ತರು.
ತ.ರಾ.ಸು ಬೆಂಗಳೂರಿಗೆ ಬಂದು ‘ವಿಶ್ವ ಕರ್ನಾಟಕ’ ಸೇರಿದ ದಿನಗಳಲ್ಲಿ ಅ.ನ.ಕೃ ಪ್ರಗತಿಶೀಲ ಪಂಥವನ್ನು ನಿರ್ಮಿಸುತ್ತಿದ್ದರು. ಅ.ನ.ಕೃ ಅವರು ತ.ರಾ.ಸು ಮೇಲೆ ಗಾಢವಾದ ಪ್ರಭಾವ ಬೀರಿದರು. ತರುಣ ಸಾಹಿತಿಗಳಿಗೆ ಪ್ರೋತ್ಸಾಹ ಕೊಡುವುದರಲ್ಲಿ ಸಂತೋಷವನ್ನು ಕಾಣುತ್ತಿದ್ದ ಅ.ನ.ಕೃ ಈ ತರುಣ ಪ್ರತಿಭೆಯನ್ನು ಮೆಚ್ಚಿಕೊಂಡರು. ತ.ರಾ.ಸು ಅ.ನ.ಕೃ ಅವರಲ್ಲಿ ಗಾಢವಾದ ಗೌರವವನ್ನು ಬೆಳೆಸಿಕೊಂಡರು. ಪ್ರಗತಿಶೀಲ ಪಂಥದ ದೃಷ್ಟಿ, ಆದರ್ಶಗಳು ಅವರಿಗೆ ಮೆಚ್ಚಿಗೆಯಾದವು. ಆ ಚಳವಳಿಯ ಅತಿರಥಮಹಾರಥರಲ್ಲಿ ಒಬ್ಬರಾದರು.
1946ರಲ್ಲಿ ತ.ರಾ.ಸು ಅವರ ಮೊದಲನೆಯ ಕಥಾಸಂಕಲನ ‘ರೂಪಸಿ’ ಪ್ರಕಟವಾಯಿತು. ಇದೇ ಸರಿಸುಮಾರಿಗೆ ಅವರ ಮೊದಲನೆಯ ಕಾದಂಬರಿ ‘ಮನೆಗೆ ಬಂದ ಮಹಾಲಕ್ಷ್ಮಿ’ ಪ್ರಕಟವಾಯಿತು. ಈ ಕಥೆಗಳನ್ನು ಹೇಳುವಾಗ ತ.ರಾ.ಸು ಒಬ್ಬ ಹುಟ್ಟು ಕಥೆಗಾರನಾಗಿಯೂ, ಉದ್ದೇಶಪೂರ್ಣ ಕಲೆಗಾರನಾಗಿಯೂ ಕಾಣುತ್ತಾರೆ. ಇಲ್ಲಿಂದ ಮುಂದೆ ಮುವ್ವತ್ತಾರು ವರ್ಷಗಳ ಕಾಲ ತ.ರಾ.ಸು ಸಾಹಿತ್ಯ ರಚನೆ ಮಾಡಿದರು. ಅತ್ಯಂತ ಜನಪ್ರಿಯ ಬರಹಗಾರರಲ್ಲಿ ಒಬ್ಬರಾದರು. ಒಟ್ಟು ಅವರ ಹೆಸರನ್ನು ಹೊತ್ತ ಕೃತಿಗಳು ತೊಂಬತ್ತಾರು. ಈ ಸಂಖ್ಯೆಯಲ್ಲಿ ಅವರು ಸಂಪಾದಕರಾಗಿ ಸಿದ್ಧಮಾಡಿದ ಕೃತಿಗಳೂ ಇವೆ. ನಾಲ್ಕು ಕಥೆಗಳ ಸಂಗ್ರಹಗಳು ಎಪ್ಪತ್ತು ಕಾದಂಬರಿಗಳು. ‘ಮದಾಂಬವರಿ’ ಭಾಷಾಂತರ, ಮೂರು ರೇಡಿಯೋ ರೂಪಕಗಳ ಸಂಗ್ರಹ, ‘ಮಹಾಶ್ವೇತೆ’, ‘ಮೃತ್ಯು ಸಿಂಹಾಸನ’ ಎನ್ನುವ ಐತಿಹಾಸಿಕ ನಾಟಕಗಳು ಇಂತಹ ಹಲವಾರು ಕೃತಿಗಳೂ ಅವರ ಲೇಖನಿಯಿಂದ ಮೂಡಿಬಂದವು. ಅ.ನ.ಕೃ ಅವರನ್ನು ಮುಕ್ತವಾಗಿ ಪ್ರಶಂಸಿಸುವ ಅವರ ಕೃತಿ ‘ಅ.ನ.ಕೃ’.
ತ.ರಾ.ಸು ಅವರ ಅನೇಕ ಕಾದಂಬರಿಗಳು ಚಲನಚಿತ್ರಗಳಾಗಿ ಲಕ್ಷಾಂತರ ಮಂದಿ ಪ್ರೇಕ್ಷಕರ ಮೆಚ್ಚಿಗೆಯನ್ನು ಗಳಿಸಿದವು. ‘ಹಂಸಗೀತೆ’ಯು ಹಿಂದಿಯಲ್ಲಿ ‘ಬಸಂತ ಬಹಾರ್’ ಆಗಿ ಅಖಿಲ ಭಾರತ ಮಟ್ಟದಲ್ಲಿ ಮೆಚ್ಚಿಗೆಯನ್ನು ಗಳಿಸಿತು. ಅದೇ ‘ಹಂಸಗೀತೆ’ ಕನ್ನಡದಲ್ಲೂ ಚಿತ್ರವಾಗಿ ವಿಶ್ವದೆಲ್ಲೆಡೆ ಜನಪ್ರಿಯಗೊಂಡ ಚಿತ್ರವಾಯಿತು. ‘ನಾಗರಹಾವು’ ಗಳಿಸಿದ ಅಪಾರ ಯಶಸ್ಸು, ಕನ್ನಡ ಚಿತ್ರರಂಗದಲ್ಲಿ ಮೂಡಿಸಿದ ಹಲವಾರು ಪ್ರತಿಭೆ ವೈಶಿಷ್ಟ್ಯಗಳು ಇತ್ಯಾದಿಗಳು ಅಜರಾಮರವಾದದ್ದು. ಅವರ ಇನ್ನೂ ಬಹಳಷ್ಟು ಕಾದಂಬರಿಗಳು ಕೂಡಾ ಚಲನಚಿತ್ರಗಳಾಗಿದ್ದವು ಎಂಬುದು ನಾಡಿನ ಜನತೆಗೆ ತಿಳಿದಿರುವ ಸಂಗತಿ. ತ.ರಾ.ಸು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅವರನ್ನು ಸನ್ಮಾನಿಸಿತು. ಅವರ ‘ದುರ್ಗಾಸ್ತಮಾನ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಂದಿತು. (ಈ ಮನ್ನಣೆಯಿಂದ ಸಂತೋಷಪಡಲು ಅವರು ಬದುಕಿರಲಿಲ್ಲ ಎನ್ನುವುದೇ ವಿಷಾದದ ಸಂಗತಿ).
ತ.ರಾ.ಸು ಹಲವಾರು ಕಥೆಗಳನ್ನು ಬರೆದರೂ ಅದೇ ಅವರ ಮುಖ್ಯ ಮಾಧ್ಯಮವಾಗಲಿಲ್ಲ. ‘೦-೦=೦’, ‘ಒಂದು ತುಂಡು ಸುದ್ಧಿ’, ‘ಇನ್ನೊಂದು ಮುಖ’ ಇವು ತ.ರಾ.ಸು ಸಣ್ಣಕಥೆಯ ಮಾಧ್ಯಮದ ಮೇಲೆ ಪ್ರಭುತ್ವಕ್ಕೆ ಸಾಕ್ಷಿ. ಆದರೆ ಮುಖ್ಯವಾಗಿ ಅವರ ಮಾಧ್ಯಮ ಕಾದಂಬರಿ. ಮತ್ತೊಂದು ಪ್ರಮುಖ ವಿಚಾರವೆಂದರೆ, ಪ್ರಾಯಶಃ ಬಹು ಶ್ರೇಷ್ಠ ನಾಟಕಕಾರರಾಗಬಹುದಾಗಿದ್ದ ತ.ರಾ.ಸು ತಮ್ಮ ಕಾಲದ ಸಂದರ್ಭದಲ್ಲಿ ಕಾದಂಬರಿ ಮಾಧ್ಯಮವನ್ನು ಬಳಸಿಕೊಂಡರು ಎನ್ನುವ ಮಾತನ್ನು ಹೇಳಬೇಕು. ಅವರ ಕಾದಂಬರಿಗಳಲ್ಲಿ ಕಥಾವಸ್ತು ಸಾಗುವುದು ಶಕ್ತಿಯುತವಾದ ದೃಶ್ಯಗಳ ಮೂಲಕ. ಪಾತ್ರ-ಪಾತ್ರಗಳ ಪರಸ್ಪರ ಪ್ರತಿಕ್ರಿಯೆ, ಪ್ರಭಾವ ಅಥವಾ ಘರ್ಷಣೆ ಈ ದೃಶ್ಯಗಳಲ್ಲಿ ಸ್ಪಷ್ಟವಾಗುತ್ತದೆ.
ತ.ರಾ.ಸು ಅವರ ಕಾದಂಬರಿಗಳನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು. ಮೊದಲನೆಯದು, ಪ್ರಗತಿಶೀಲ ಪಂಥದ ಉತ್ಸಾಹೀ ಅತಿರಥರಾಗಿ ಬರೆದ ಕಾದಂಬರಿಗಳು. ‘ಕೇದಿಗೆ ವನ’, ‘ಜೀತದ ಜೀವ’, ‘ಪುರುಷಾವತಾರ’, ‘ಬೆಂಕಿಯ ಬಲೆ’, ‘ಬಿಡುಗಡೆಯ ಬೇಡಿ’, ‘ಮುಂಜಾವಿನ ಮುಂಜಾವು’, ‘ರಕ್ತತರ್ಪಣ’ ಇವೆಲ್ಲಾ ಈ ವರ್ಗದ ಕೃತಿಗಳು.
ಎರಡನೆಯದು ಐತಿಹಾಸಿಕ ಕಾದಂಬರಿಗಳು. ‘ಕಂಬನಿಯ ಕುಯಿಲು’, ‘ರಕ್ತರಾತ್ರಿ’, ‘ತಿರುಗುಬಾಣ’, ‘ಮೃತ್ಯು ಸಿಂಹಾಸನ’, ‘ದುರ್ಗಾಸ್ತಮಾನ’ ಇವೆಲ್ಲಾ ಚಿತ್ರದುರ್ಗದ ಉಜ್ವಲ ಚರಿತ್ರೆಗೆ ಮುಡಿಪು. ಇವಲ್ಲದೆ ‘ನೃಪತುಂಗ’, ‘ವಿಜಯೋತ್ಸಾಹ’, ‘ಶಿಲ್ಪಶ್ರೀ’, ‘ಸಿಡಿಲಮೊಗ್ಗು’, ‘ಕೀರ್ತಿನಾರಾಯಣ’, ಇಂತಹ ಚಾರಿತ್ರಿಕ ಕಾದಂಬರಿಗಳನ್ನು ಬರೆದರು.
ಮೂರನೆಯದು ಇತರ ಕಾದಂಬರಿಗಳು. ಈ ಸ್ವರೂಪದ ಕಾದಂಬರಿಗಳು ಬಹುಮಟ್ಟಿಗೆ ಪ್ರಗತಿಶೀಲ ಪಂಥದ ಕಕ್ಷೆಯಲ್ಲಿ ಬರುತ್ತವೆ. ಅವರ ಬಹು ಜನಪ್ರಿಯ ಕೃತಿಗಳಲ್ಲಿ ಹಲವು ‘ನಾಗರಹಾವು’, ‘ಚಂದನದ ಗೊಂಬೆ’, ‘ಚಂದವಳ್ಳಿಯ ತೋಟ’, ‘ಚಕ್ರತೀರ್ಥ’, ‘ಹಂಸಗೀತೆ’ ಇತ್ಯಾದಿ. ಈ ಕಾದಂಬರಿಗಳಲ್ಲಿ ವ್ಯಕ್ತಿ-ವ್ಯಕ್ತಿಗಳ ಸಂಬಂಧ, ವ್ಯಕ್ತಿತ್ವ ರೂಪುಗೊಳ್ಳುವುದು ಅಲ್ಲಿನಮುಖ್ಯ ಆಸಕ್ತಿಯಾಗಿ ಹೊರಹೊಮ್ಮುತ್ತವೆ.
ತ.ರಾ.ಸು ಅವರ ಐತಿಹಾಸಿಕ ಕಾದಂಬರಿಗಳ ಪ್ರಾತಿನಿಧಿಕವಾಗಿ ‘ದುರ್ಗಾಸ್ತಮಾನ’ವನ್ನೇ ಪರಿಗಣಿಸಬಹುದು. ಅವರ ಎಲ್ಲ ಐತಿಹಾಸಿಕ ಕಾದಂಬರಿಗಳಂತೆ ಇದೂ ಘಟನೆಗಳಿಂದ ತುಂಬಿಹೋಗಿವೆ. ಇಡೀ ಕೃತಿ ಪೌರುಷದ ಜಯಘೋಷವಾಗಿ, ಅಗ್ನಿಪರ್ವತವೊಂದು ಪುರುಷರೂಪ ತಾಳಿ ನಾಯಕನಾಗಿ ಬಂದಂತೆ ಭಾಸವಾಗುತ್ತದೆ. ಅಂತಹ ಚೈತನ್ಯಮಯ ಮನುಷ್ಯ ಮದಕರಿನಾಯಕ. ದುರ್ಗ-ನಾಯಕರ ಅವಿನಾಭಾವ ಕೃತಿಯಲ್ಲಿ ರೂಪ ತಾಳುತ್ತದೆ. ದುರ್ಗವೇ ನಾಯಕ. ನಾಯಕನೇ ದುರ್ಗ. ಇಡೀ ರಾಜ್ಯದ ಹಂಬಲ ಅವನನ್ನು ಬೆಳೆಸುತ್ತದೆ. ಅವನು ರಾಜ್ಯದ ಅಂತರ್ ಶಕ್ತಿಯ ಮೂರ್ತಿಯಾಗುತ್ತಾನೆ. ಅವನ ಅವನತಿ ಪ್ರಾರಂಭವಾಗುವುದು ರಾಜ್ಯದ ಮತ್ತು ರಾಜಮನೆತನದ ಕಲ್ಯಾಣವನ್ನೇ ಬಯಸುವ ದಾರ್ಮಿಕ ಗುರುಗಳಿಬ್ಬರಿಂದಲೂ ದೂರವಾದಾಗ. ಇದರ ನಂತರ ಅವನ ಇಂದ್ರಿಯ ಸಂಯಮವೂ ಸಡಿಲಾಗುತ್ತದೆ. ‘ಕೀಚಕತನ’ ಪ್ರಕಟವಾಗುತ್ತದೆ ಅತ್ಯಂತ ಬುದ್ಧಿವಂತನಾದ ಪ್ರಧಾನಿಯೂ ದೂರವಾಗುತ್ತಾನೆ. ಒಂದು ಧರ್ಮ ಸೂಕ್ಷ್ಮಕ್ಕೆ ಸಿಲುಕಿದಾಗ (ಹೈದರಾಲಿ ದುರ್ಗವನ್ನು ಮುತ್ತಿದಾಗ ‘ಪಂಜಾ’ ತೊಳೆಯಲು ತಾವು ಊರ ಹೊರಕ್ಕೆ ಹೋಗಬೇಕೆಂದು ಕೆಲವರು ಮುಸ್ಲಿಮರು ಪ್ರಾರ್ಥನೆಯನ್ನು ಸಲ್ಲಿಸಬೇಕೆ?) ಸರಿಯಾದ ಮಾರ್ಗದರ್ಶನ ಮಾಡುವವರಿಲ್ಲದೆ ತಪ್ಪು ಹೆಜ್ಜೆ ಇಡುತಾನೆ. ಅಪಾತ್ರಕ್ಕೆ ತೋರಿದ ಉದಾತ್ತತೆಯ ದುರಂತವಾಗುತ್ತದೆ ಅವನ ಬಾಳು. ಪೌರುಷಕ್ಕೆ ನೀತಿ, ವ್ಯವಹಾರ ಜ್ಞಾನ ಎರಡೂ ಜೊತೆಗಾರರಾಗಬೇಕು . ಈ ಜೊತೆ ತಪ್ಪಿದಾಗ ದುರಂತ ಅನಿವಾರ್ಯ.
ಶಿವರಾಮ ಕಾರಂತರು ದುಡಿಮೆಯನ್ನು ಮೌಲ್ಯ ಮಾಡಿದಂತೆ ತ.ರಾ.ಸು ಪೌರುಷವನ್ನು ಒಂದು ಮೌಲ್ಯವನ್ನಾಗಿ ಮಾಡಿದರು.
ತ.ರಾ,ಸು ಅವರ ಇತರ ಕಾದಂಬರಿಗಳಲ್ಲಿ ಮಾನವೀಯ ಸಂಬಂಧಗಳೇ ಮುಖ್ಯ. ‘ಚಂದವಳ್ಳಿಯ ತೋಟ’, ‘ಚಂದನದ ಗೊಂಬೆ’, ‘ಚಕ್ರತೀರ್ಥ’, ಮೊದಲಾದ ಕಾದಂಬರಿಗಳಲ್ಲೆಲ್ಲ ಕಾಣುವುದು ಅಂತಃಕರಣದ ಮಹತ್ವ, ಪಾವಿತ್ರ್ಯ. ಈ ವರ್ಗದ ಬಹುಮಟ್ಟಿನ ಕಾದಂಬರಿಗಳಲ್ಲಿ ಅತಿ ಅಹಂಭಾವ, ಛಲ ಇವು ಸುಂದರಾವಾದ ಬಾಳನ್ನು ಕೆಡಿಸುತ್ತವೆ. ಈ ವರ್ಗದಲ್ಲಿ ‘ಹಂಸಗೀತೆ’ ಒಂದು ವಿಶಿಷ್ಟ ಕೃತಿ. ಪರಿಪಕ್ವತೆಗೆ ಗಟ್ಟಿತನದ ಯಾತ್ರೆ ಇದು. ಈ ಯಾತ್ರೆಯ ಹಾದಿ ಸಂಗೀತ. ಬಂಡೆಯಂತಹ ವ್ಯಕ್ತಿತ್ವದ ವೆಂಕಟಸುಬ್ಬಯ್ಯ ಕ್ರಮೇಣ ಮನುಷ್ಯನಾಗಿ, ಕಡೆಗೆ ದೇವರಿಗೇ ಮೀಸಲಾದ ಚೇತನವಾಗಿ ಬೆಳೆಯುವ ಪ್ರಕ್ರಿಯೆ ಕಾದಂಬರಿಯ ವಸ್ತು. ಕಥೆಯನ್ನು ಬೇರ ಬೇರೆ ಸ್ಥಳಗಳ ಮತ್ತು ಸ್ತರಗಳ ಪಾತ್ರಗಳಿಂದ ಹೇಳಿಸುವ ತಂತ್ರದಿಂದಾಗಿ ಕಥೆ ಭೂತ-ವರ್ತಮಾನಗಳ ನಡುವೆ ತೂಗುವಂತಾಗುತ್ತದೆ. ವಸ್ತುವನ್ನು ಸಾಕಷ್ಟು ದೂರದಿಂದ ಹಲವು ಕೋನಗಳಿಂದ ನೋಡುವುದು ಸಾಧ್ಯವಾಗುತ್ತದೆ.
ತ.ರಾ.ಸು ಅವರ ಒಟ್ಟು ಕಾದಂಬರಿಗಳ ಬಗ್ಗೆ ಹೇಳುವುದಾದರೆ ಉತ್ಕಟತೆ, ಭಾವತೀವ್ರತೆ ಅವರ ಸಾಹಿತ್ಯದಲ್ಲಿ ಎದ್ದು ಕಾಣುವ ಲಕ್ಷಣ. ಈ ಗುಣವೇ ಅವರ ಸ್ನೇಹ, ಪ್ರೇಮ, ವಿಶ್ವಾಸ, ಅಭಿಮಾನಗಳ ತಂಪನ್ನೂ, ಸತ್ವವನ್ನೂ ಒಂದು ಸನ್ನಿವೇಶದಲ್ಲಿ ಹಿಡಿದಿರುವುದನ್ನು ಸಾಧ್ಯಮಾಡಿತು. ಎಲ್ಲಕ್ಕಿಂತ ಮೊದಲಾಗಿ ತ.ರಾ.ಸು ಹೃದಯವಂತಿಕೆಯ ಕಾದಂಬರಿಕಾರ. ಅವರ ಐತಿಹಾಸಿಕ ಕಾದಂಬರಿಗಳಲ್ಲಂತೂ ಮುಖ್ಯ ಪಾತ್ರಗಳು ಜೀವನದಲ್ಲಿ ನಾವು ಕಾಣುವ ಮನುಷ್ಯರನ್ನು ಮೀರಿದವು. ಇತರ ಕಾದಂಬರಿಗಳಲ್ಲೂ ಒಬ್ಬ ವೆಂಕಟಸುಬ್ಬಯ್ಯನಾಗಲಿ, ಒಬ್ಬ ರಾಮಾಚಾರಿಯಾಗಲಿ ಇಂತಹ ಪಾತ್ರವೇ. ಪೌರುಷ, ಅಂತಃಕರಣ ಇವಿದ್ದರೆ ಮನುಷ್ಯ ಎಂತಹ ಎತ್ತರಕ್ಕೆ ಬೆಳೆಯಬಲ್ಲ ಎಂಬ ಕನಸು ಅವರ ಅನೇಕ ಕಾದಂಬರಿಗಳ ಕೇಂದ್ರದಲ್ಲಿದೆ.
ತ.ರಾ.ಸು ಅವರು ತಮ್ಮ ಬರವಣಿಗೆಯಲ್ಲಿ ಗಾದೆಯ ಮಾತಿನಂತೆ ಕೆಲವೇ ಮಾತುಗಳಲ್ಲಿ ಗಾಢ ಭಾವನೆಯನ್ನೋ, ಜೀವನದ ಪ್ರತಿಕ್ರಿಯೆಯನ್ನೋ ಅಡಗಿಸಬಲ್ಲವರು. ಅದೃಶ್ಯವಾದ ಆದರೆ ನಾಡಿನ ಜೀವನದಲ್ಲಿ ಪ್ರಭಾವಶಾಲಿಯಾದ ಜನತೆಯ ಸಂಸ್ಕೃತಿಗೆ ಹತ್ತಿರವಾಗಿದ್ದವರು ಅವರು. ಉದಾತ್ತತೆಯನ್ನು, ತ್ಯಾಗವನ್ನು, ಹೃದಯವಂತಿಕೆಯನ್ನು ಮೆಚ್ಚುವ ಸಂಸ್ಕೃತಿ ಇದು. ಇದರಿಂದಲೇ ಸಾಮಾನ್ಯ ಓದುಗ ತ.ರಾ.ಸು ಬರಹಕ್ಕೆ ರೋಮಾಂಚನಗೊಂಡ. ವಾಸ್ತವಿಕತೆ, ರೊಮ್ಯಾಂಟಿಸಿಸಂ, ಆದರ್ಶತ್ವ ಮೂರರ ಸಂಗಮ ತ.ರಾ.ಸು. ಅವರ ಸಾಹಿತ್ಯಸೃಷ್ಟಿ.
ಸಮಸ್ತ ಭಾರತೀಯರಿಗೆ,
ಸಂವಿಧಾನ ಶಿಲ್ಪಿ
ಶ್ರೀ ಡಾ|| ಬಾಬಾ ಸಾಹೇಬ್ ಭೀಮರಾವ್ ರಾಮ್ಜಿ ಅಂಬೇಡ್ಕರ್ ಭಾರತ ರತ್ನ ರವರ ಹುಟ್ಟ ಹಬ್ಬದ ಶುಭಾಶಯಗಳು
ಭೀಮರಾವ್ ರಾಮ್ಜಿ ಅಂಬೇಡ್ಕರ್ 14 ಏಪ್ರಿಲ್ 1891 - ಭಾರತೀಯ ಬಾಲಕನಾಗಿದ್ದು, ಅರ್ಥಶಾಸ್ತ್ರಜ್ಞ, ರಾಜಕಾರಣಿ ಮತ್ತು ಸಾಮಾಜಿಕ ಸುಧಾರಕರಾಗಿದ್ದರು, ಅವರು ದಲಿತ ಬೌದ್ಧ ಚಳವಳಿಯನ್ನು ಪ್ರೇರಿತರಾಗಿದ್ದರು ಮತ್ತು ಅಸ್ಪೃಶ್ಯತೆ ( ಅನ್ಟಚಬಲ್ಸ್ ) ದಲಿತರು, ವಿರುದ್ಧ ಸಾಮಾಜಿಕ ತಾರತಮ್ಯದ ವಿರುದ್ಧ ಪ್ರಚಾರ ಮಾಡಿದರು, ಮಹಿಳಾ ಮತ್ತು ಕಾರ್ಮಿಕರ ಹಕ್ಕುಗಳು.
ಅವರು ಭಾರತದ ಸಂವಿಧಾನದ ಪ್ರಧಾನ ವಾಸ್ತುಶಿಲ್ಪಿ ಮತ್ತು ಭಾರತದ ಗಣರಾಜ್ಯದ ಸ್ಥಾಪಕ ತಂದೆಯ ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿದ್ದರು.
ಅಂಬೇಡ್ಕರ್ ಅವರು ಕೊಲಂಬಿಯಾ ವಿಶ್ವವಿದ್ಯಾನಿಲಯ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದರು ಮತ್ತು ಅವರು ಕಾನೂನು, ಅರ್ಥಶಾಸ್ತ್ರ ಮತ್ತು ರಾಜಕೀಯ ವಿಜ್ಞಾನದ ಸಂಶೋಧನೆಗಾಗಿ ವಿದ್ವಾಂಸರಾಗಿ ಖ್ಯಾತಿಯನ್ನು ಪಡೆದರು.
ಅವರ ಆರಂಭಿಕ ವೃತ್ತಿಜೀವನದಲ್ಲಿ ಅವರು ಅರ್ಥಶಾಸ್ತ್ರಜ್ಞ, ಪ್ರಾಧ್ಯಾಪಕ ಮತ್ತು ವಕೀಲರಾಗಿದ್ದರು. ಅವರ ನಂತರದ ಜೀವನವನ್ನು ಅವರ ರಾಜಕೀಯ ಚಟುವಟಿಕೆಗಳಿಂದ ಗುರುತಿಸಲಾಯಿತು; ಅವರು ಭಾರತದ ಸ್ವಾತಂತ್ರ್ಯ, ಪ್ರಕಟಣೆ ನಿಯತಕಾಲಿಕೆಗಳಿಗಾಗಿ ಪ್ರಚಾರ ಮತ್ತು ಸಮಾಲೋಚನೆಯಲ್ಲಿ ಭಾಗಿಯಾಗಿದ್ದರು, ರಾಜಕೀಯ ಹಕ್ಕುಗಳನ್ನು ಮತ್ತು ದಲಿತರಿಗೆ ಸಾಮಾಜಿಕ ಸ್ವಾತಂತ್ರ್ಯವನ್ನು ಸೂಚಿಸಿದರು, ಮತ್ತು ಭಾರತದ ರಾಜ್ಯವನ್ನು ಸ್ಥಾಪಿಸಲು ಗಣನೀಯವಾಗಿ ಕೊಡುಗೆ ನೀಡಿದರು. 1956 ರಲ್ಲಿ ಅವರು ಬೌದ್ಧ ಧರ್ಮಕ್ಕೆ ಪರಿವರ್ತಿಸಿದರು, ದಲಿತರ ಸಾಮೂಹಿಕ ಪರಿವರ್ತನೆಗಳನ್ನು ಆರಂಭಿಸಿದರು.
1990 ರಲ್ಲಿ, ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವು ಮರಣೋತ್ತರವಾಗಿ ಅಂಬೇಡ್ಕರ್ಗೆ ಗೌರವಿಸಲ್ಪಟ್ಟಿತು. ಅಂಬೇಡ್ಕರ್ ಅವರ ಪರಂಪರೆ ಜನಪ್ರಿಯ ಸಂಸ್ಕೃತಿಯಲ್ಲಿ ಹಲವಾರು ಸ್ಮಾರಕಗಳು ಮತ್ತು ಚಿತ್ರಣಗಳನ್ನು ಒಳಗೊಂಡಿದೆ.
🌾💐ನಿಮಗೂ ನಿಮ್ಮ ಕುಟುಂಬಕ್ಕು ಯುಗಾದಿ ಹಾಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು 🌾💐
ಸ್ವೀಕರಿಸುವ ಮನಸ್ಸಿದ್ದರೆ ಸದ್ಗುಣಗಳನ್ನು ಸ್ವೀಕರಿಸು
ಈಜುವ ಮನಸ್ಸಿದ್ದರೆ ಜ್ಞಾನ ಸಾಗರದಲ್ಲಿ ಈಜು
ನಡೆಯುವ ಮನಸ್ಸಿದರೆ ಸನ್ಮಾರ್ಗದಲ್ಲಿ ನಡೆ
ಮಾತನಾಡುವುದಿದ್ದರೆ ಸತ್ಯವನ್ನೇ ಮಾತನಾಡು
ಆಡುವುದಿದ್ದರೆ ಅನುಭವದ ಮಾತುಗಳನ್ನೇ ಆಡು
ಕೇಳುವುದಿದ್ದರೆ ಸದುಪುದೇಶಗಳನ್ನೇ ಕೇಳು
ದೊರಕಿಸುವುದಿದ್ದರೆ ಜಯವನ್ನೇ ದೊರಕಿಸು.
ರಾಮಕೃಷ್ಣ ಪರಮಾಹಂಸ;
18 ಫೆಬ್ರವರಿ 1836 - ಜನಿಸಿದ ಗದಧರ್ ಚಟರ್ಜಿ ಅಥವಾ ಗದಧರ್ ಚಟ್ಟೋಪಾಧ್ಯಾಯ (ಬಂಗಾಳಿ: ಗೊಡಧಾರ್ ಚಟ್ಟಪ್ಪಧೇಯ ಭಾರತೀಯ ಮಿಸ್ಟಿಕ್ ಮತ್ತು ಯೋಗಿ 19 ನೇ ಶತಮಾನದಲ್ಲಿ. ಚಿಕ್ಕ ವಯಸ್ಸಿನಲ್ಲೇ ರಾಮಕೃಷ್ಣರಿಗೆ ಆಧ್ಯಾತ್ಮಿಕ ಸ್ತೋತ್ರಗಳನ್ನು ನೀಡಲಾಯಿತು ಮತ್ತು ಕಾಳಿ, ತಂತ್ರ, ವೈಷ್ಣವ ಭಕ್ತಿ,ಮತ್ತು ಅದ್ವೈತ ವೇದಾಂತದ ದೇವತೆಗೆ ಭಕ್ತಿ ಸೇರಿದಂತೆ ಅನೇಕ ಧಾರ್ಮಿಕ ಸಂಪ್ರದಾಯಗಳಿಂದ ಪ್ರಭಾವಿತರಾಗಿದ್ದರು. ಬಂಗಾಳಿ ಗಣ್ಯರಲ್ಲಿ ಅವರಿಗೆ ಗೌರವ ಮತ್ತು ಮೆಚ್ಚುಗೆಯನ್ನು ರಾಮಕೃಷ್ಣ ಮಿಶನ್ ರಚನೆಗಾಗಿ ಅವರ ಮುಖ್ಯ ಶಿಷ್ಯರಾದ ಸ್ವಾಮಿ ವಿವೇಕಾನಂದರು ರಚಿಸಿದರು.ಅವರ ಭಕ್ತರು ಅವರನ್ನು ಅವತಾರವೆಂದು ಅಥವಾ ರೂಪವಿಲ್ಲದ ಸುಪ್ರೀಂ ಬ್ರಹ್ಮದ ಅವತಾರವೆಂದು ವೇದಾಂತದಲ್ಲಿ ವಿವರಿಸಿರುವಂತೆ ಕೆಲವು ಭಕ್ತರು ಅವರನ್ನು ವಿಷ್ಣುವಿನ ಅವತಾರವೆಂದು ನೋಡುತ್ತಾರೆ.
On behalf of BGJ sir.. we invite you all for the marriage of BGJ sir daughter on 18th & 19th of February 2018 Shimoga
Please attend the marriage...
Keep the city clean...
ಕ್ರಿಕೆಟ್ ಜಗತ್ತಿನ 'ಗೋಡೆ' ಖ್ಯಾತಿಯ ಆಟಗಾರ, ಹಲವು ವರ್ಷಗಳ ಕಾಲ ವಿಶ್ವ ಕ್ರಿಕೆಟ್ ರಂಗದಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯ ಆಟದ ಮೂಲಕ ಕರ್ನಾಟಕದ ಹಿರಿಮೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ನಿಸ್ವಾರ್ಥ ಸಾಧಕ, ಸರಳಜೀವಿ ಹಾಗೂ ನಾಡಿನ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗೆ ಜನ್ಮ ದಿನದ ಶುಭಾಶಯಗಳು.
Let us be a better human being, a better person and a better citizen. New Year’s is a time to better ourselves for a better world. Have a grand New Year 2018!!! -Admin
ಸಮಸ್ತ ಕನ್ನಡಿಗರಿಗೆ,
ಕುವೆಂಪುರವರ ಹುಟ್ಟುಹಬ್ಬದ ಶುಭಾಶಯಗಳು
1920 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕುವೆಂಪು ಅಧ್ಯಯನ ಮಾಡಿದರು, ಸುಮಾರು 3 ದಶಕಗಳಿಂದ ಅಲ್ಲಿ ಕಲಿಸಿದರು ಮತ್ತು ವಿಶ್ವವಿದ್ಯಾನಿಲಯದ ವೈಸ್-ಚಾನ್ಸೆಲರ್ ಆಗಿ (1956-60) ಏರಿದರು. ಅವರು ಕನ್ನಡ ಮಾಧ್ಯಮದಲ್ಲಿ ಬೋಧನೆ ಆರಂಭಿಸಿದರು. ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ, ಕರ್ನಾಟಕ ಸರ್ಕಾರವು 1958 ರಲ್ಲಿ ರಾಷ್ಟ್ರಕೂವ ("ರಾಷ್ಟ್ರೀಯ ಕವಿ") ಮತ್ತು ಕರ್ನಾಟಕ ರತ್ನ (1992 ರ "ಕರ್ನಾಟಕದ ಜೆಮ್") ಅನ್ನು ಗೌರವಾನ್ವಿತವಾಗಿ ಅಲಂಕರಿಸಿದೆ. ಅವರ ಮಹಾಕಾವ್ಯವಾದ ಶ್ರೀ ರಾಮಾಯಣ ದರ್ಶನಂ, ಭಾರತೀಯ ಹಿಂದೂ ಮಹಾಕಾವ್ಯ ರಾಮಾಯಣವು ಮಹಾಕಾವ್ಯ ಯುಗದ ಪುನರುಜ್ಜೀವನ (ಸಮಕಾಲೀನ ರೂಪ ಮತ್ತು ಮೋಡಿ) ನಲ್ಲಿ "ಗ್ರೇಟ್ ಎಪಿಕ್ ಕವಿತೆ" ಎಂದು ಪರಿಗಣಿಸಲ್ಪಟ್ಟಿದೆ. ಅವರ ಬರಹಗಳು ಮತ್ತು "ಯುನಿವರ್ಸಲ್ ಹ್ಯೂಮನಿಸಂ" (ಅವನ ಮಾತಿನಲ್ಲಿ, "ವಿಶ್ವ ಮನಾವತ ವಾಡಾ") ಅವರ ಕೊಡುಗೆ ಅವರು ಆಧುನಿಕ ಭಾರತೀಯ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಳವನ್ನು ನೀಡುತ್ತದೆ. ಅವರಿಗೆ 1988 ರಲ್ಲಿ ಭಾರತ ಸರ್ಕಾರದ ಪದ್ಮ ವಿಭೂಷಣವನ್ನು ನೀಡಲಾಯಿತು. ಕರ್ನಾಟಕ ರಾಜ್ಯ ಗೀತೆ ಜಯ ಭಾರತಾ ಜನನಿಯಾ ತಾನುಜೇಟ್ ಅವರು ಬರೆದಿದ್ದಾರೆ.
# ಮಹಮ್ಮದ್ ರಫಿ
ಕೋಟೆ ಪ್ರೌಢಶಾಲೆಯ ಎಲ್ಲಾ ಹಳೆಯ ವಿದ್ಯಾರ್ಥಿಗಳಿಗೆ ನಮಸ್ಕಾರ... ಡಿಸೆಂಬರ್ ೨೩ರಂದು 1೯೯೮ ಸಾಲಿನ ವಿದ್ಯಾರ್ಥಿಗಳು ೧೯೯೮ ಸಾಲಿನಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಶಿಕ್ಷಕರಿಗೆ ಗುರುವಂದನ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಿಕೊಟ್ಟರು...
ಈ ಸಮಯದಲ್ಲಿ ನಮ್ಮ ಗಮನಕ್ಕೆ ಬಂದ ಸಂಗತಿ ಎಂದರೆ ಶಾಲಾ ಕಟ್ಟಡ ಶಿತಿಲಾವಸ್ತೆಗೆ ತಲುಪಿದೆ... ಕೊಟಡಿಗಳ ಕೊರತೆ, ಮೂಲಭೂತ ಸೌಕರ್ಯಗಳ ಕೊರತೆ ಇದೆ..
ಈ ನಿಟ್ಟಿನಲ್ಲಿ ಸಂಬಂದ ಪಟ್ಟ ಇಲಾಖೆಗಳ ಗಮನ ಸೆಳೆದು ಈ ಕೊರತೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯ ಇರುತ್ತದೆ... ಈ ನಿಟ್ಟಿನಲ್ಲಿ ಎಲ್ಲಾ ಹಳೆಯ ವಿದ್ಯಾರ್ಥಿಗಳು ಕ್ಯೆ ಜೋಡಿಸಬೇಕಾಗಿ ಕೋರುತ್ತಿದ್ದೇವೆ....
-Admin
ಖ್ಯಾತನಾಮರನ್ನು ಬೆಳೆಸಿದ 'ಅಕ್ಷರ ದೇಗುಲ'ಕ್ಕೆ ಬೇಕಿದೆ ಕಾಯಕಲ್ಪ ! - Prajavani | DailyHunt ಚಿತ್ರದುರ್ಗ: ಹಲವು ಖ್ಯಾತನಾಮರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ ಕೋಟೆ ಸರ್ಕಾರಿ ಪ್ರೌಢಶಾಲೆ ಈಗ ಹಲವು ಮೂಲ ಸೌಲಭ್ಯಗಳಿಂದ ನಲುಗುತ�...