Pmis-ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು

Pmis-ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು

Contact information, map and directions, contact form, opening hours, services, ratings, photos, videos and announcements from Pmis-ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು, Education, .

11/12/2022
ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕೆಂಬ ಬೇಡಿಕೆ ಈಡೇರಿಸುವ ನಿಟ್ಟನಲ್ಲಿಜನಸಮುದಾಯದಧ್ಚನಿಯಾಗಿ 06/12/2022

ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕೆಂಬ ಬೇಡಿಕೆ ಈಡೇರಿಸುವ ನಿಟ್ಟನಲ್ಲಿಜನಸಮುದಾಯದಧ್ಚನಿಯಾಗಿ ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕೆಂಬ ಬೇಡಿಕೆ ಈಡೇರಿಸುವ ನಿಟ್ಟನಲ್ಲಿ ಜನಸಮುದಾಯದ ಧ್ಚನಿಯಾಗಿ ಅಭಿಯಾನ ವೇದ....

Photos from Pmis-ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು's post 06/12/2022

ಪುತ್ತೂರು ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯಿಂದ ಪತ್ರಕರ್ತರೊಂದಿಗೆ ಸಂವಹನ ಕಾರ್ಯಕ್ರಮ ಇಂದು ನಡೆಸಿದಾಗ.

ಸಮಿತಿಯ ಗೌರವಾದ್ಯಕ್ಷ, ಅಣ್ಣ ವಿನಯಚಂದ್ರ, ಅಧ್ಯಕ್ಷ ವಿಶ್ವನಾಥ ರೈ, ಉಪಾಧ್ಯಕ್ಷರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು

05/12/2022

ಪುತ್ತೂರಿನಲ್ಲಿ, ಸರಕಾರೀ ಆಸ್ಪತ್ರೆಯ ಮೇಲ್ದರ್ಜನೆ ಹೋರಾಟವಾಗುತ್ತಿದಂತೆಯೇ, ನಮಗೊಂದು ಸುಸಜ್ಜಿತ ಡಯಾಲಿಸಿಸ್ ಘಟಕವೊಂದು ಬೇಕೆಂಬ ಧ್ವನಿ ಕೇಳುತ್ತಿದೆ. ಹಾಗೆಯೇ, ೩೦೦ ಹಾಸಿಗೆ ಆಸ್ಪತ್ರೆಯಾಗುವಾಗ, ೩೦೦ ಬೆಡ್ ಸಾಕಾಗದು. ಈಗಲೇ, ೬೦೦ ಹಾಸಿಗೆ ಆಸ್ಪತ್ರೆಯನ್ನು ಕೇಳಬೇಕು ಎಂಬ ಕೂಗೂ ಕೇಳುತ್ತಿದೆ. ಇಷ್ಟಲ್ಲದೆ, ಆಶಾ ಹಾಗು ಅಂಗನವಾಡಿ ಕಾರ್ಯಕರ್ತರ ಸಮಸ್ಯೆಗಳನ್ನೂ ಕೈಗೆತ್ತಿಕೊಳ್ಳಬೇಕೆಂದು ಎಂದು ಇನ್ನೂ ಕೆಲವರ ಅಭಿಪ್ರಾಯ.

ಇದೊಂದು ಜನಾರೋಗ್ಯ ಆಂದೋಲನವಾಗಿ ಜೀವಂತ ಇಡುವುದು ನಮ್ಮೆಲ್ಲರ ಕರ್ತವ್ಯ.

ಡಾ ಸಂದೀಪ್ ನಾಯಕ್ ಸಾಮೇತಡ್ಕ
Sandeep Samethadka Nayak

Apathy ails the public health network 05/12/2022

Apathy ails the public health network When Chandbi (29) entered the Yadgir District Hospital last Sunday, she was buoyant with the thought of holding her newborn. In a span of thirty minutes, her hope morphed into fear when her husband Nawaz was unable to secure the attention of medical personnel. A recent diagnosis by a Primary Healthc...

Photos from Pmis-ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು's post 01/12/2022

ಪುತ್ತೂರು ಮೆಡಿಕಲ್ ಕಾಲೇಜು ಹೋರಾಟ ಸಮಿತಿ, ಪುತ್ತೂರು, ದ.ಕ. ಮನವಿ

ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಒತ್ತಾಯಿಸಲು ಹೋರಾಟ ಸಮಿತಿ ರಚನೆ – ಜನಾಂದೋಲನಕ್ಕೆ ನಿರ 26/11/2022

🔆ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಒತ್ತಾಯಿಸಲು ಹೋರಾಟ ಸಮಿತಿ ರಚನೆ
🔆ಜನಾಂದೋಲನಕ್ಕೆ ನಿರ್ಧಾರ - ಪಿ.ಪಿ.ಪಿ. ಯೋಜನೆಗೆ ವಿರೋಧ
🔆ಅಧ್ಯಕ್ಷರಾಗಿ ಎಂ.ಬಿ.ವಿಶ್ವನಾಥ ರೈ ಆಯ್ಕೆ

ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಒತ್ತಾಯಿಸಲು ಹೋರಾಟ ಸಮಿತಿ ರಚನೆ – ಜನಾಂದೋಲನಕ್ಕೆ ನಿರ ಪುತ್ತೂರು ತಾಲೂಕಿನಲ್ಲಿ ಸರಕಾರಿ ಮೆಡಿಕಲ್‌ ಕಾಲೇಜ್‌  ಸ್ಥಾಪನೆಯಾಗಬೇಕೆಂಬ ಕೂಗು ಇಂದು ನಿನ್ನೆಯದಲ್ಲ . ಬಹಳಷ್ಟು ವರ್ಷಗಳಿಂದ ಈ ಬಗ.....

Photos from Pmis-ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು's post 26/11/2022

ಪುತ್ತೂರು ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಹೋರಾಟ ಸಮಿತಿ, ಇಂದು ಗೌರಾಧ್ಯಕ್ಷರಾದ ಅಣ್ಣ ವಿನಯಚಂದ್ರ ನೇತೃತ್ವದಲ್ಲಿ, ಪುತ್ತೂರಿನ ಸ್ವಾಭಿಮಾನಿ ಸಭಾಂಗಣದಲ್ಲಿ ಸಭೆ ಸೇರಿ, ಮನವಿ ಪತ್ರ ಅಂತಿಮ ಗೊಳಿಸಿ, ಗ್ರಾ.ಪಂ, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರ ಕೋರುವ ಕುರಿತು ನಿರ್ಣಯಿಸಿ, ಆಸಕ್ತರ ಪ್ರತಿನಿಧಿಸುವ ತಂಡ ರಚನೆಯೊಂದಿಗೆ, ಮುಂದಿನ ರೂಪುರೇಷೆಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು

ಸಂಚಾಲಕರು, ಪದಾಧಿಕಾರಿಗಳು, ಸಮಿತಿ ಸದಸ್ಯರು,
ಪುತ್ತೂರು, ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ, ಸಮಿತಿ

25/11/2022

ಪುತ್ತೂರು ಸ್ವಾಭಿಮಾನಿ ಸಭಾಂಗಣದಲ್ಲಿ, ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ಸಭೆಯು ದಿನಾಂಕ 26-11-2022 ರಂದು ಶನಿವಾರ 3:30pm ಸಮಯಕ್ಕೆ ಸರಿಯಾಗಿ ನಡೆಯಲಿದೆ

ವಿಷಯ...ಮನವಿ ಪತ್ರ ಮುದ್ರಣದ ಬಗ್ಗೆ.

ಸಮಿತಿಯ ಮೂಲಕ, ಸಂಪರ್ಕಿಸಿ ಸಹಕಾರ ಪಡೆಯ ಬೇಕಾದ ಗುಂಪುಗಳ ,ವ್ಯಕ್ತಿಗಳ ಮಾಹಿತಿ, ಪಟ್ಟಿಯೊಂದಿಗೆ ಸಭೆಯಲ್ಲಿ ಮಂಡಿಸಲು ತಯಾರಿಗೆ ಸರ್ವರಿಗೂ ಈ ಮೂಲಕ ಮನವಿ

ಸಂಚಾಲಕರು
ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ

22/11/2022

ಜನ ಆರೋಗ್ಯಕ್ಕಾಗಿ ನಾವು ಅನ್ನುವ ಆಶಯದಲ್ಲಿ ನಮ್ಮ "ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ,ಪುತ್ತೂರು",ಇದರ ಎರಡನೆಯ ಸಭೆ ಇವತ್ತು ನಡೆಯಿತು.ಸುಳ್ಯ ಮತ್ತು ಪುತ್ತೂರಿನ 41 ಸಮಾನ ಮನಸ್ಕರು ಸಭೆಯಲ್ಲಿ ಪಾಲ್ಗೊಂಡರು.ವಿವಿಧ ರಾಜಕೀಯ,ಸಾಮಾಜಿಕ ಗುಂಪುಗಳಲ್ಲಿ ಕ್ರಿಯಾಶೀಲ ಆಗಿರುವ ಪ್ರಬುದ್ಧರೆ ಆಗಿರುವ ಎಲ್ಲರೂ...ಮುಕ್ತವಾಗಿ ಸಭೆಯಲ್ಲಿ ಮಾತನಾಡಿದ್ದು ಗಮನಾರ್ಹ.
ತುಂಬಾ ವ್ಯಾಪಕ ,ಸಮಗ್ರ ಮತ್ತು ದೀರ್ಘವಾದ ಹೋರಾಟಕ್ಕೆ ಬೇಕಾದ ಮನೋಭೂಮಿಕೆ ಸಿದ್ದ ಆಯಿತು.
ಈ ವಾರದ ಒಳಗೆ ಮನವಿ ಪಾತ್ರ ಸಿದ್ದ ಮಾಡಿ,ಅದನ್ನು ಪ್ರಿಂಟ್ ಮಾಡಿಸಿ,ಶನಿವಾರ ಪುನಃ ಸಭೆ ಮಾಡುವ ತೀರ್ಮಾನ ಆಯಿತು.ಸಕಲ ನಾಗರಿಕ ಸಂಘಟನೆಗಳನ್ನು ಭೇಟಿ ಮಾಡಿ, ಈ ಆಂದೋಲನಕ್ಕೆ ಅವರನ್ನು ಜೋಡಿಸಿ ಕೊಂಡು,ವ್ಯಾಪಕ ಜನ ಜಾಗೃತಿ ಮಾಡುತ್ತಾ...ಆಡಳಿತವನ್ನು ವಿಶ್ವಾಸ ಕ್ಕೆ ತೆಗೆದುಕೊಂಡು,ಮುಂದಿನ ದಿನಗಳಲ್ಲಿ ಬೇರೆ ಬೇರೆ ಸ್ವರೂಪದ ಹೋರಾಟ,ಆಗ್ರಹ,ಸಾರ್ವಜನಿಕ ಹಕ್ಕೊತ್ತಾಯ ಸಭೆ ಇತ್ಯಾದಿಗಳನ್ನು ಮಾಡುವರೇ... ಸರ್ವಾನುಮತ ದಿಂದ ತೀರ್ಮಾನ ಮಾಡಲಾಯಿತು.
ಅತ್ಯಂತ ಉತ್ಸಾಹ ಮತ್ತು ತುಂಬಾ ದೂರದೃಷ್ಟಿ ಹೊಂದಿದ ಸಭೆ ಯಾಗಿ ಇದು ದಾಖಲು ಆಯಿತು.
ಭಾಗವಹಿಸಿದ ಎಲ್ಲರಿಗೂ ನಮನಗಳು.
ಏನಾದರೂ ಬಿಟ್ಟು ಹೋದ,ಅಥವಾ ಮುಂದುವರಿಸ ಬೇಕಾದ ವಿಚಾರ ಇದ್ದಲ್ಲಿ ಇವತ್ತು ಪಾಲ್ಗೊಂಡ, ಪಾಲ್ಗೊಳ್ಳಲು ಸಾಧ್ಯ ಆಗದೇ ಇರುವ ಸದಸ್ಯರು ಇಲ್ಲಿ ಮುಕ್ತವಾಗಿ ಬೆರೆಯಲು,ಬರೆಯಲು ಮನ ಮಾಡಿ,ನಮನಗಳು ಎಲ್ಲರಿಗೂ..
ಲಕ್ಷ್ಮೀಶ ಗಬ್ಲಡ್ಕ,ಸಂಚಾಲಕರು,
ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ.ಪುತ್ತೂರು
Lakshmeesha Gabladka

"ಸರ್ಕಾರಿ ಆಸ್ಪತ್ರೆಯನ್ನು ಖಾಸಗೀಕರಣ ಮಾಡಿದರೆ ಬಡವರು ಬದುಕಬೇಕೋ ಬೇಡವೋ?" 22/11/2022

ಇವತ್ತು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ದಾವಣಗೆರೆಯಲ್ಲಿಯೂ ಇಂತಹದೇ ಚರ್ಚೆಗಳು ಆಗುತ್ತಿವೆ.

"ಸರ್ಕಾರಿ ಆಸ್ಪತ್ರೆಯನ್ನು ಖಾಸಗೀಕರಣ ಮಾಡಿದರೆ ಬಡವರು ಬದುಕಬೇಕೋ ಬೇಡವೋ?" "ಸರ್ಕಾರಿ ಆಸ್ಪತ್ರೆಯನ್ನು ಖಾಸಗೀಕರಣ ಮಾಡಿದರೆ ಬಡವರು ಬದುಕಬೇಕೋ ಬೇಡವೋ?"► "ಮೆಡಿಕಲ್ ಕಾಲೇಜು ಸ್ಥಾಪನೆಯ ನೆಪದಲ್ಲಿ ಚಿಟಗೇರಿ ಆಸ್ಪ.....

22/11/2022

*ಜನಾರೋಗ್ಯವೇ ಗ್ರಾಮ ಸ್ವರಾಜ್ಯಕ್ಕೆ ಅಡಿಪಾಯ*

ಮನುಷ್ಯನು ವ್ಯಕ್ತಿಯು ಯಾರನ್ನೂ ಆವಲಂಭಿತರಾಗದೆ ಬದುಕಲಾರ. ಜನರು ಪರಸ್ಪರ ಪೂರಕವಾಗಿ ಬದುಕುವ ಸಂಘ ಜೀವಿ. ಹೀಗೆ ಲಕ್ಷಗಟ್ಟಲೆ ವರ್ಷಗಳಿಂದ ಚಿಕ್ಕ ಚಿಕ್ಕ ಗುಂಪಾಗಿ, ಪರಸ್ಪರ ಅವಲಂಭಿತರಾಗಿ, ಒಟ್ಟಿಗೆ ಸ್ವಾವಲಂಭಿಗಳಾಗಿ ವಿಕಸನಗೊಂಡು, ಇವತ್ತಿನ ಆಧುನಿಕ ಸಮಾಜದಲ್ಲಿ ನಾವು ವಾಸಿಸುತ್ತಿದ್ದೇವೆ. ಆದ್ದರಿಂದಲೇ, ನಾವು ಸ್ವಾವಲಂಭಿಗಳಾಗಿ ಬದುಕುವ ಸ್ಥಿತಿಯನ್ನೇ ಸ್ವಾಸ್ಥ್ಯ ಎಂದು ಕರೆಯುತ್ತೇವೆ. ಅಂದರೆ, ಯಾವುದೇ ರೋಗಗಳಿಲ್ಲದೆ, ಪರಸ್ಪರ ಅವಲಂಭಿತರಾಗಿ, ಔಷಧದ ಅಗತ್ಯ ಇಲ್ಲದೆ ಇರುವ ಸ್ಥಿತಿಯೇ ಸ್ವಾಸ್ಥ್ಯ. ಹೀಗೆ, ಸ್ವಾಸ್ಥ್ಯ ಎಂಬುವುದು ಬರಿಯ ಶಾರೀರಿಕ ಮತ್ತು ಮಾನಸಿಕ ಅರೋಗ್ಯ ಮಾತ್ರ ಅಲ್ಲ, ಅದೊಂದು ಸಮಾಜವಾದದ ಪರಿಕಲ್ಪನೆ.

ಈ ಸಮಾಜವಾದದ ಪರಿಕಲ್ಪನೆಯನ್ನು ವ್ಯವಸ್ಥಿತವಾಗಿ ಆಡಳಿತ ಮಾಡಲು ಭಾರತದಲ್ಲಿ ನಾವು ಪ್ರಜಾಪ್ರಭುತ್ವವನ್ನು ಆಯ್ಕೆ ಮಾಡಿದ್ದೇವೆ. ಗ್ರಾಮ ಮಟ್ಟದಲ್ಲಿ ಜನರನ್ನು ನಾವು ಸ್ವಾವಲಂಭಿಗಳನ್ನಾಗಿಸುವ ಮುಖಾಂತರ ಗ್ರಾಮ ಸ್ವರಾಜ್ಯದ ಆಂದೋಲನವನ್ನು ಭಾರತವು ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭಿಸಿ, ಇವತ್ತಿಗೂ ಅದನ್ನು ಅನಷ್ಠಾನಗೊಳಿಸುವ ಕಡೆಗೆ ನಡೆಯುತ್ತಿದೆ. ಇದರ ಪರಿಣಾಮವೇ ಮುಂಬರುವ ಗ್ರಾಮ ಪಂಚಾಯತ್ತುಗಳ ಚುನಾವಣೆ.

ಜನಾರೋಗ್ಯವು ಸ್ವಾಸ್ಥ್ಯಕ್ಕೆ ತಳಹದಿ. ಈ ಕಾರಣದಿಂದಾಗಿ, ಗ್ರಾಮಮಟ್ಟದಲ್ಲಿ ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಉಪಕೇಂದ್ರಗಳು, ಆಶಾ ಕಾರ್ಯಕರ್ತರಂತಹ ಆರೋಗ್ಯ ಪಡೆ ಇಡೀ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ವ್ಯವಸ್ಥೆಯನ್ನು ಬಲಪಡಿಸುವುದೂ ಗ್ರಾಮ ಸ್ವರಾಜ್ಯದ ಒಂದು ಮಹತ್ವದ ಹೆಜ್ಜೆ. ಆದ್ದರಿಂದ, ವೈದ್ಯಕೀಯ ಚಿಕಿತ್ಸೆಯ ಹಕ್ಕನ್ನು ಗ್ರಾಮ ಮಟ್ಟದಲ್ಲಿ ಅನುಷ್ಠಾನಗೊಳಿಸದೆ ಇದ್ದರೆ, ಸ್ವರಾಜ್ಯವು ಫಲಕಾರಿಯಾಗದು.

ವೈದ್ಯಕೀಯ ವಿದ್ಯಾಕೇಂದ್ರವೊಂದು ಪುತ್ತೂರಿನಲ್ಲಿ ಆಗಬೇಕೆಂದು ಆದ ಅಭಿಯಾನವು ಒಂದು ವಿಶೇಷ ಅಭಿಯಾನ. ಯಾಕೆಂದರೆ, ದೇಶದ ಬೇರೆ ಎಲ್ಲೂ ಜನಸಾಮಾನ್ಯರು ಒಂದು ವೈದ್ಯಕೀಯ ವಿದ್ಯಾಕೇಂದ್ರ ಆಗಬೇಕೆಂದು ಅಭಿಯಾನ ನಡೆಸಿದ ಉದಾಹರಣೆ ಇಲ್ಲ. ಇದರೊಂದಿಗೆ, ಜನರು ಹಲವಾರು ಬೇಡಿಕೆಗಳನ್ನು ಸರಕಾರದ ಮುಂದೆ ಯಶಸ್ವಿಯಾಗಿ ಇಟ್ಟಿದ್ದಾರೆ. ಉದಾಹರಣೆಗೆ, ಸರಕಾರೀ ಅರೋಗ್ಯ ಇಲಾಖೆಯಲ್ಲಿರುವ ಖಾಲಿ ಹುದ್ದೆಯನ್ನು ಭರ್ತಿಗೊಳಿಸುವುದು, ೨೫೦೦೦ದಿಂದ ೩೫೦೦೦ ಜನಸಂಖ್ಯೆಗೊಂಡು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯುವುದು, ಪುತ್ತೂರಿನ ಸರಕಾರಿ ಆಸ್ಪತ್ರೆಯನ್ನು ೩೦೦ ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜನೆ ಮಾಡುವುದು, ಒಂದು ಸುಸಾಜಿತ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವುದು ಇತ್ಯಾದಿಗಳೆಲ್ಲಾ ಸ್ವರಾಜ್ಯಕ್ಕೆ ಪೂರಕವಾದ ಅಭಿಯಾನಗಳು. ಈ ಅಭಿಯಾನ ಮನೆ ಮನೆಗೆ ತಲುಪಿದ ಕೆಲವೇ ವಾರಗಳಲ್ಲಿ ಗ್ರಾಮ ಪಂಚಾಯತ್ತು ಚುನಾವಣಾ ಬಂದದ್ದು, ಆರೋಗ್ಯ ಸ್ವರಾಜ್ಯದ ಕಡೆಗೆ ಒಂದು ನಿರ್ಣಯಾತ್ಮಕ ಹೆಜ್ಜೆ ಇಡಲು ಸುಲಭಗೊಳಿಸಿದೆ.

ಗ್ರಾಮ ಸ್ವರಾಜ್ಯದಲ್ಲಿ, ಗ್ರಾಮಸ್ಥರು ತಮಗೆ ವೈದ್ಯಕೀಯ ಶಾಲೆ ಬೇಕೆಂದು ಗ್ರಾಮ ಪಂಚಾಯತ್ತಿನಲ್ಲಿ ನಿರ್ಣಯ ತೆಕೊಳ್ಳುವ ಕಡೆಗೆ ಕಾರ್ಯನಿರ್ವಹಿಸಬೇಕು. ಆ ನಿರ್ಣಯವನ್ನು ರಾಜ್ಯ ಸರಕಾರಕ್ಕೆ ಕಳುಹಿಸುವಾಗ, ರಾಜ್ಯ ಸರಕಾರವು ಜನಾಭಿಪ್ರಾಯಕ್ಕೆ ಮನ್ನಣೆ ಕೊಡಲು ಸುಲಭ ಆಗುತ್ತದೆ. ಹೀಗೆ ದಕ್ಷಿಣ ಕನ್ನಡದ ಪ್ರತೀ ಗ್ರಾಮ ಪಂಚಾಯತ್ತಿನಲ್ಲಿ ಈ ನಿರ್ಣಗಳಾದಾಗ, ಆರೋಗ್ಯ ಸ್ವರಾಜ್ಯದ ಒತ್ತಡವನ್ನು ರಾಜ್ಯಸರ್ಕಾರದ ಮೇಲೆ ಹೇರಲು ಅನುಕೂಲವಾಗುತ್ತದೆ. ಅದಲ್ಲದೆ, ಶಾಸಕಾಂಗದಲ್ಲಿ ಪುತ್ತೂರಿನ ಶಾಸಕರಿಗೆ ಜನರ ಪರವಾಗಿ ಹಕ್ಕೊತ್ತಾಯ ಮಾಡಲು ಪ್ರೇರಣೆಯಾಗುತ್ತದೆ.

ಆದ್ದರಿಂದ, ಈ ಗ್ರಾಮ ಪಂಚಾಯತ್ತಿನ ಚುನಾವಣೆಯು ಆರೋಗ್ಯ ಸ್ವರಾಜ್ಯಕ್ಕೆ ನಾಂದಿಯಾಗುವ ಕಡೆಗೆ ಗ್ರಾಮಸ್ಥರು ಮತ ಹಾಕುವುದು ಬಹಳ ಅಗತ್ಯದ ಕಾರ್ಯ. ಆರೋಗ್ಯ ಕ್ಷೇತ್ರದಲ್ಲಾಗಬೇಕಾದ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯತ್ತು ಮಹತ್ವ ಪಾತ್ರ ವಹಿಸಿ, ತನ್ಮೂಲಕ ಗ್ರಾಮ ಪಂಚಾಯತ್ತಿನ ರಾಜಕೀಯ ಇಚ್ಚಾಶಕ್ತಿ/ತಾಕತ್ತನ್ನು ದೇಶಕ್ಕೆ ತೋರಿಸುವ ಮತ್ತು ಮಾದರಿಯಾಗುವ ಅವಕಾಶ ದಕ್ಷಿಣ ಕನ್ನಡ ಜಿಲ್ಲೆಯ ಪ್ರಜಾಪ್ರಭುತ್ವದ ಪ್ರಭುಗಳಿಗೆ (ಜನಸಾಮಾನ್ಯರಿಗೆ) ಈ ಸರ್ತಿ ಇದೆ. ಅದನ್ನು ಉಪಯೋಗಿಸಿಕೊಳ್ಳೋಣ.
Sandeep Samethadka Nayak

Special Discussion 22/11/2022

ವೈದ್ಯಕೀಯ ಸೇವೆಗಳ ಖಾಸಗೀಕರಣ
ವಾರ್ತಾಭಾರತಿ ಚರ್ಚೆ
ಡಾ. ಶ್ರೀನಿವಾಸ ಕಕ್ಕಿಲ್ಲಾಯ
ಡಾ. ಪಿವಿ ಭಂಡಾರಿ
ಡಾ. ಸಂದೀಪ್ ನಾಯಕ್ ಸಾಮೆತ್ತಡ್ಕ
ಮಂಜುಳಾ ಮಾಸ್ತಿಕಟ್ಟೆ

Special Discussion Special Discussion

Photos from Pmis-ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು's post 21/11/2022

"ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ,ಪುತ್ತೂರು".ಇದರ ಎರಡನೆಯ ಸಭೆ ಪುತ್ತೂರು ಸ್ವಾಭಿಮಾನಿ ಸಭಾಂಗಣದಲ್ಲಿ ನಡೆಯಿತು.
ಸರಕಾರೀ ಆಸ್ಪತ್ರೆಗಳನ್ನು ಖಾಸಗೀಕಾರಣಕ್ಕೆ ಒಳಪಡಿಸುವ ಸರಕಾರದ ಪ್ರಸ್ತಾವನೆ ಯ ಕೆಟ್ಟ ಪರಿಣಾಮಗಳನ್ನು ಚರ್ಚಿಸಿ ಹೋರಾಟದ ಬಗ್ಗೆ ಚಿಂತಿಸಲಾಯಿತು.ಮತ್ತು ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟವನ್ನು ಸಮಗ್ರ ಮತ್ತು ಸಶಕ್ತವಾಗಿ ರೂಪಿಸಲು ವಿಸ್ತೃತ ಚಿಂತನೆ ಮಾಡಲಾಯಿತು.

19/11/2022

ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ, ಇದರ ಆಶ್ರಯದಲ್ಲಿ ಸಮಾನ ಮನಸ್ಕರ ಸಭೆ.
ದಿನಾಂಕ :-
21-11-2022, , ಸೋಮವಾರ
ಸ್ಥಳ:-
ಸ್ವಾಭಿಮಾನಿ ಸಹಕಾರ ಭವನ, 2ನೇ ಮಹಡಿ, ಕೆ.ಪಿ.ಕಾಂಪ್ಲೆಕ್ಸ್, ಮುಖ್ಯರಸ್ತೆ , ಪುತ್ತೂರು.
(ಹಳೆ ಹೋಟೇಲ್, ಹರಿಪ್ರಸಾದ್ 2ನೇ ಮಾಳಿಗೆ.)

28/11/2020
Want your school to be the top-listed School/college?

Website