18/08/2023
Hi Parents,
Hope you're having a great Summer and also hope you haven't forgotten us. 😀
We apologise for the radio silence over the past few months. We could not organise classes due to unaviodable circumstances. That is in the past and we are excited to start Kannada Kali again with the same enthusiasm as always. We are adopting a new approach this time, please have a read.
We are planning to start a new session of Kannada Kali from September 15th, 2023. There are a few things new this time :-
1. We are sourcing Professional Kannada Teachers from Karnataka who have extensive experience in engaging with children to help them read and write Kannada.
2. The teachers run a certified language school called JNANAKASTHURI. Please find more details on their website, https://jnanakasthuri.business.site/
3. We are paying the professional teachers for each class they take, with the funds accumulated through registrations to Kannada Kali until now. But all the classes are completely free for the students until the end of this year.
We had already registered a few students for the previously planned sessions, we will consider those children as already registered for this session starting in September. Please use the link below to register for the upcoming session.
Thank you very much for your patience and continued support. Please contact us for any questions on Facebook, Whatsapp, PM.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
: ಕನ್ನಡ ಕಲಿ ಐರ್ಲೆಂಡ್
JNANAKASTHURI
Language School in Jayanagar
15/08/2023
ಸ್ವಾತಂತ್ರ್ಯವು ಜಾತಿ, ಬಣ್ಣ ಅಥವಾ ಆಕಾರಗಳನ್ನು ನೋಡುವುದಿಲ್ಲ. ನಮ್ಮ ಏಕತೆ, ಪ್ರಗತಿ, ಮತ್ತು ಸಮೃದ್ಧಿಯ ಕಡೆಗಿನ ಪಯಣವನ್ನು ಸಂಭ್ರಮಿಸೋಣ.
ಸರ್ವರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.
:ಕನ್ನಡ ಕಲಿ ಐರ್ಲೆಂಡ್
10/04/2022
ಕನ್ನಡ ಕಲಿ ಐರ್ಲೆಂಡ್ ಹಮ್ಮಿಕೊಂಡಿದ್ದ ಯುಗಾದಿ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ ತಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.
: ಕನ್ನಡ ಕಲಿ ಐರ್ಲೆಂಡ್ ತಂಡ
10/04/2022
ಕನ್ನಡ ಕಲಿ ಐರ್ಲೆಂಡ್ ತಂಡ ನಿಮ್ಮನೆಲ್ಲ ಸ್ವಾಗತಿಸಲು ಕಾಯುತಿದ್ದೆ.
01/04/2022
ಸಮಸ್ತ ಕನ್ನಡಿಗರಿಗೆ ನಮಸ್ಕಾರ,
ಈಗಷ್ಟೇ ಚಳಿಗಾಲ ಮುಗಿದು ವಸಂತ ಋತು ಶುರು ಆಗುತ್ತಾ ಇದೆ...ಬನ್ನಿ ನಾವೆಲ್ಲಾ ಸೇರಿ ಚೈತ್ರ ಮಾಸದ, ಈ ವರ್ಷದ ಮೊದಲನೇ ಹಬ್ಬ ಯುಗಾದಿ ಯನ್ನು ಎಲ್ಲಾರು ಸೇರಿ ಆಚರಿಸೋಣ.
ಕನ್ನಡ ಕಲಿ ಐರ್ಲೆಂಡ್ ಹಮ್ಮಿ ಕೊಂಡಿರುವ ಯುಗಾದಿ ಆಚರಣೆಯೊಂದಿಗೆ ಹಬ್ಬದ ಸಂತಸವನ್ನು ಇಮ್ಮಡಿಗೊಳಿಸೋಣ!
ಕಾರ್ಯಕ್ರಮದಲ್ಲಿ ಭಾಗವಹಿಸುವವರು ದಯವಿಟ್ಟು ಶೀಘ್ರದಲ್ಲಿ ನೋಂದಣಿ ಮಾಡಿ.
https://forms.gle/DyFMYTPCooy1ikDN6
Kannada Kali Ugadi Celebration 2022 (Teachers)
Namaskara, We team Kannada Kali Ireland cordially invite you to the Ugadi Festival Celebration 2022. This event is planned to be celebrated at 'The Kilmanagh Family Recreation Centre' on Saturday 10th April 2022. Hoping to see you at the festival and brighten the celebration. Thanks Team Kannada Kal...
03/03/2022
ಈ ವರ್ಷದ ಕನ್ನಡ ಕಲಿ ೬ ನೇ ಮಾರ್ಚ್ ಭಾನುವಾರ ಪ್ರಾರಂಭವಾಗುತ್ತಿದೆ . ಪ್ರತಿ ವರ್ಷದಂತೆ ಶೈಕ್ಷಣಿಕ ವರ್ಷಾರಂಭವನ್ನು ತರಗತಿಯ ಪ್ರಾರಂಭದ ಮೊದಲು ೫ ನೇ ಮಾರ್ಚ್ ಶನಿವಾರ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳನ್ನು ಸ್ವಾಗತಿಸುವ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಆತ್ಮೀಯ ಆಮಂತ್ರಣ.
ಕನ್ನಡ ಕಲಿ ಐರ್ಲೆಂಡ್
31/01/2022
“ಒಂದೇ ಒಂದೇ ಕರ್ನಾಟಕ ಒಂದೇ, ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ" ಎಂದು ನುಡಿದ ದಾರ್ಶನಿಕ, ಜಗದ ಕವಿ, ಯುಗದ ಕವಿ, ವರಕವಿ, ಶಬ್ದ ಗಾರುಡಿಗ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಅಂಬಿಕೆಯ ಪುತ್ರ ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ 126ನೇ ಜನ್ಮದಿನ ಇಂದು! 🙏🏻
ಸಂಸ್ಕೃತದಲ್ಲಿ ಬಿ.ಎ. ಪದವೀಧರ, ಅಲ್ಲದೇ ಮನೆಯ ಭಾಷೆ ಮರಾಠಿ. ಆದರೂ ಕಾವ್ಯ ಭಾಷೆಯಾಗಿ ಅಪ್ಪಿಕೊಂಡಿದ್ದು ಮಾತ್ರ ಕನ್ನಡವನ್ನು ನಮ್ಮ ಬೇಂದ್ರೆಯವರು.
ಬೇಂದ್ರೆ ಅಂದರೆ ಥಟ್ಟನೆ ನೆನಪಾಗುವುದು ಮೊದಲಮಳೆಗೆ ತೊಯ್ದ ಧಾರವಾಡದ ಮಣ್ಣಿನಿಂದ ಎದ್ದ ತಂಪುಕಂಪಿನ ಪದಗಳ ಸಾಲು. ಆ ಕಂಪು ಸಾಧನಕೇರಿಯೆಂಬ ಮೂಡಲಮನೆಯಿಂದ ಹೊರಟು, ಹುಬ್ಬಳ್ಳಿಯ ಓಣ್ಯಾಗ ಅಡ್ಡಾಡಿಕೋತಾ ಬಂದು, ಬಿದಿಗಿ ಚಂದ್ರನ ಚೊಗಚಿ ನಗಿ ಹೂವಿನ್ಹಂಗ ನಮ್ಮ ಮನೆ ಮನಗಳಲ್ಲಿ ತುಂತುಂತುಂಬಿಕೊಂಡು ನಮ್ಮ ಭಾವಕೋಶಗಳನ್ನು ಹಿಗ್ಗಿಸಿಬಿಡುತ್ತದೆ; ಬಿಡಲಾಗದಂತೆ ಅಪ್ಪಿಹಿಡಿಯುತ್ತದೆ!
*"ನಾ ತಂದ ಸಾಹಿತ್ಯ ನಿನ್ನ ಪಾಕ ಪದಾರ್ಥ"* ಅನ್ನುವ ಬೇಂದ್ರೆಯವರ ಸಾವಿರಕ್ಕೂ ಹೆಚ್ಚಿನ ಕವನಗಳು ನಾಡಿನ ಮನೆಮನಗಳಲ್ಲಿ, ಗಾಯನಪ್ರತಿಭೆಗಳ ಕಂಠಗಳಲ್ಲಿ ಇಂದಿಗೂ ಅನುರಣಿಸುತ್ತಿವೆ.
ಒಮ್ಮೆ ಬೇಂದ್ರೆಯಜ್ಜ ಜನಸಂದಣಿಯ ಬೀದಿಯಲ್ಲಿ ನಡೆಯುತ್ತಿದ್ದಾಗ ಭಿಕ್ಷುಕನೊಬ್ಬ ಇವರ ಪದ್ಯವೊಂದನ್ನು ಹಾಡುತ್ತಾ ಭಿಕ್ಷೆ ಬೇಡುತ್ತಾ ಇದ್ದನಂತೆ. ಬೇಂದ್ರೆಯವರಿಗೆ ಅಚ್ಚರಿಯಾಗಿ ಅವನ ಬಳಿಬಂದು, "ತಮ್ಮಾ, ಈ ಪದ್ಯಾನ ಎಲ್ಲಿಂದ ಕಲಿತಿ, ಏನ್ಕತಿ?" ಅಂತ ಕೇಳಿದರೆ ಅವನಿಗೆ ತಿಳಿದಿಲ್ಲ. "ಈ ಪದಾ ಹಾಡೋದ್ರಿಂದ ನಿನಗೇನ್ ಸಿಗತೈತಿ?" ಅಂದರೆ ಆತ "ಒಂದು ಹೊತ್ತಿನ ಊಟಾ ಸಿಗತೈತಿ. ಅದ್ಕ ಹಾಡತೇನಿ!" ಅಂದುಬಿಟ್ಟನಂತೆ.
ಆ ಮಾತುಕೇಳಿ ಸಂಭ್ರಮಾತಿಶಯದಿಂದ ಬೇಂದ್ರೆ, ತನ್ನ ಕವನವೊಂದು ಒಬ್ಬ ಬಡವನ ಹೊತ್ತಿನ ತುತ್ತಿನ ಸಂಪಾದನೆಗೆ ದಾರಿಯಾಯಿತಲ್ಲ, ತನ್ನ ಜೀವನ ಸಾರ್ಥಕವಾಯಿತು. ಒಬ್ಬ ಕವಿಗೆ ಇದಕ್ಕಿಂತಲೂ ಹೆಚ್ಚಿನ ಪ್ರಶಸ್ತಿ ಇನ್ನೊಂದು ಸಿಗಲಾರದೆಂದುಕೊಂಡು, "ಒಳ್ಳೆಯದಾಗಲಪ್ಪ" ಎಂದು ಮುಂದೆ ನಡೆದರಂತೆ!
ಬೇಂದ್ರೆಯವರ ಇಂಥ ಜೀವನ, ವ್ಯಕ್ತಿತ್ವ ಎಲ್ಲರಿಗೂ ಮಾದರಿ!
ಕೇಳಿದಷ್ಟೂ ಮತ್ತಷ್ಟು ಕುತೂಹಲ ಹುಟ್ಟಿಸುವ, ಆಧ್ಯಾತ್ಮಿಕ ಚಿಂತನೆಗಳಲ್ಲಿ ನಮ್ಮನ್ನು ತೇಲಿಸಿಬಿಡುವ ಅವರ ಅದ್ಭುತ ಕೃತಿಗಳನ್ನು ಹೆಚ್ಚೆಚ್ಚು ಓದಿ, ಅವರ ಆಶಯದಂತೆ ಕನ್ನಡವು ಕನ್ನಡವನು ಕನ್ನಡಿಸುತ್ತಾ ಇರುವಂತೆ ನೋಡಿಕೊಳ್ಳೋಣ!
ಬರಹ ಕೃಪೆ: ನಮ್ಮ ಬೇರುಗಳು
29/01/2022
Hello everyone,
In case you are not already registered for the upcoming classes here’s the link!
Kannada Kali (Ireland) Student Registration Q1 2022
Hi Parents, We are as excited as ever to begin a new semester of Kannada Kali to continue our effort in propagating our beautiful language. Please fill out this form to enroll your child for this semester by 31st January 2022 Please do not hesitate to contact us over Whatsapp or email - kannadakali....
26/01/2022
ಸಮಸ್ತ ಜನತೆಗೆ ೭೩ ನೇ ಗಣರಾಜ್ಯೋತ್ಸವದ ಶುಭಾಶಯ.
ಜನವರಿ 26, 1950ರಂದು ಭಾರತದ ಪರಮ ಪವಿತ್ರ ಸಂವಿಧಾನ ಅಧಿಕೃತವಾಗಿ ಜಾರಿಗೆ ಬಂದಿತ್ತು. ಈ ಸುದಿನವನ್ನು ಪ್ರತಿವರ್ಷ ಗಣರಾಜ್ಯೋತ್ಸವವಾಗಿ ಆಚರಿಸಿಕೊಂಡು ಬರಲಾಗುತ್ತದೆ. ಇದು ಹೊಸವರ್ಷದ ಮೊದಲ ರಾಷ್ಟ್ರೀಯ ಹಬ್ಬವೂ ಹೌದು.
ಕನ್ನಡ ಕಲಿ ಐರ್ಲೆಂಡ್
25/01/2022
ಮಾತೃ ಭಾಷೆಯ ಮಹತ್ವ!
ತಾಯಿ ಭಾಷೆ ಸಹಜ ಸ್ವಾಭಾವಿಕ, ತಾಯಿ ಭಾಷೆಯ ಸಹಜ ಸೊಗಡು ಅನ್ಯ ಭಾಷೆಯಲ್ಲಿ ಇರುವುದಿಲ್ಲ! ನಾವು ಹಲವು ಭಾಷೆಗಳನ್ನು ತಿಳಿದಿದ್ದರೂ, ಅದರಲ್ಲಿ ಪ್ರಾವೀಣ್ಯತೆ ಇದ್ದರೂ ನಮ್ಮ ಭಾವನೆಗಳನ್ನು ಅಂದರೆ ದುಃ ಖವಾಗಲೀ, ಸುಖವಾಗಲೀ, ಸಂತೋಷವಾಗಲಿ, ವಿಶ್ವಾಸವನ್ನಾಗಲಿ, ಪ್ರೀತಿಯನ್ನಾಗಲಿ, ದುಗುಡವನ್ನಾಗಲಿ ಕೋಪವನ್ನಾಗಲಿ, ಆಸೆಯನ್ನಾಗಲಿ, ನಿರ್ಲಿಪ್ತತೆಯನ್ನಾಗಲಿ ತನ್ನ ತಾಯಿ ಭಾಷೆ ಕನ್ನಡದಲ್ಲಿ ವ್ಯಕ್ತಪಡಿಸುವಷ್ಟು ಸುಖ, ತೃಪ್ತಿ ಬೇರೆ ಭಾಷೆಯಲ್ಲಿ ಸಿಗುವುದಿಲ್ಲ.
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಕಲಿಕೆಗೆ,
ಕನ್ನಡ ಕಲಿ ಐರ್ಲೆಂಡ್
23/01/2022
Hi Parents,
We are as excited as ever to begin a new semester of Kannada Kali to continue our effort in propagating our beautiful language.
Please fill out this form to enroll your child for this semester by 31st January 2022.
https://forms.gle/zgBwE3ZTqSBjPtN68
Thank you
Kannada Kali (Ireland) Student Registration Q1 2022
Hi Parents, We are as excited as ever to begin a new semester of Kannada Kali to continue our effort in propagating our beautiful language. Please fill out this form to enroll your child for this semester by 31st January 2022 Please do not hesitate to contact us over Whatsapp or email - kannadakali....
15/01/2022
ನಿಮಗೂ, ನಿಮ್ಮ ಕುಟುಂಬದವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.
ಇಂದು ನಮ್ಮ ನಾಡಿನ ಸುಗ್ಗಿ, ಮಕರ ಸಂಕ್ರಾಂತಿ ಎಂಬ ಸುಗ್ಗಿಯ ಹಿಗ್ಗಿನ ಹಬ್ಬ. ಹೆಂಗೆಳೆಯರು ಮೊಗ್ಗಿನ ಜಡೆ ಹಾಕಿಕೊಂಡು, ಹಿರಿ ಹಿಗ್ಗಿದ ಹಿರಿಯರು, ಹೈದರುಗಳೆಲ್ಲ ಹೊಸಬಟ್ಟೆಯುಟ್ಟು, ನೆಂಟರು ಮತ್ತು ಗೆಳಯರ ಮನೆಮನೆಗೆ ತೆರಳಿ ಕಬ್ಬಿನ ತುಂಡಿನ ಜೊತೆ ಎಳ್ಳು ಬೀರುವುದು ಹೆಚ್ಚಿನ ವಾಡಿಕೆ. ಗದ್ದೆಯ ಪೈರಿನ ಕದಿರನ್ನು ಮನೆ ಬಾಗಿಲಿಗೆ ಕಟ್ಟುವುದು, ಹೊಸ ಅಕ್ಕಿಯಲ್ಲಿ ತಿಂಡಿ ತಿನಿಸುಗಳನ್ನು ಮಾಡುವುದು, ಆರಂಬಕ್ಕೆ ನೆರವಾದ ದನಕರುಗಳನ್ನು ಮತ್ತು ನಗ, ನೇಗಿಲುಗಳನ್ನು ಪೂಜೆ ಮಾಡಿ ಕಿಚ್ಚು ಹಾಯಿಸುವುದು, ಇವು ಹಬ್ಬವನ್ನು ಕೊಂಡಾಡುವ ಕೆಲಬಗೆಗಳು.
04/11/2021
ಈ ದೀಪಾವಳಿಯ ಶುಭ ಸಂದರ್ಭದಲ್ಲಿ, ದೀಪಗಳ ಬೆಳಕು ಎಲ್ಲರ ಮನೆ, ಮನಗಳಲ್ಲಿ ಖುಷಿಯ ರಂಗು ಚೆಲ್ಲಲಿ. ಸುಖ, ಸಂತೋಷದಿಂದ ನಿಮ್ಮ ಬಾಳು ಬೆಳಗಲಿ.
ದೀಪಾವಳಿ ಹಬ್ಬದ ಶುಭಾಶಯಗಳು 💐
ದೀಪಾವಳಿಯ ಶುಭ ಸಂಧರ್ಭದಲ್ಲಿ ಕನ್ನಡ ಕಲಿ ಐರ್ಲೆಂಡ್ ಮಕ್ಕಳಿಂದ ಗೂಡುದೀಪ ರಚನೆ.
ಶಿಕ್ಷಕರು : Jayaram Navada
01/11/2021
ನಾವು ಇತರರ ಭಾಷೆ ಕಲಿಯುವ ಆಸಕ್ತಿಯನ್ನು, ಕನ್ನಡವನ್ನು ಇತರರಿಗೆ ಕಲಿಸುವಲ್ಲಿಯೂ ತೋರೋಣ, ನವೆಂಬರ್ ಮಾಸಕ್ಕೆ ಮೀಸಲಾಗದಿರಲಿ ಕನ್ನಡ ರಾಜ್ಯೋತ್ಸವ, ಕನ್ನಡ ಭಾಷೆಯನ್ನು ಮತ್ತಷ್ಟು ಬೆಳಸೋಣ.
ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು.
: ಕನ್ನಡ ಕಲಿ ಐರ್ಲೆಂಡ್
10/10/2021
ಕನ್ನಡ ಕಲಿ ಐರ್ಲೆಂಡ್ ನ ಸೃಜನಶೀಲ ಕಲಿಕೆ ವಿಭಾಗದ ಶಿಕ್ಷಕರಾದ ಶಿವಾನಂದ್ ರವರ ಕಲೆಯನ್ನು ಒಳಗೊಂಡಿರುವ ಅದ್ಭುತ ಗೀತೆ.
ನಾದಂ ಕ್ರಿಯೇಷನ್ಸ್ ಅರ್ಪಣೆಯ
ತವರ ನೆನಪು
https://youtu.be/NB9xfd8ueMk
ಹೆಣ್ಣಿಗೆ ತವರೊಂದು ದೇವರ ವರ. ಅಲ್ಲೇ ಹುಟ್ಟಿ
ಆಡಿ ಬೆಳೆದ ಇವಳಿಗೆ ತವರೆಂದರೆ ನಿತ್ಯ ಗಾನ. ತವರಿನವರಿಗಾಗಿ ಹಾತೊರೆಯುವ ಹೆಣ್ಣೊಬ್ಬಳ ಭಾವನೆಯನ್ನು ಅಕ್ಷರದಲ್ಲಿ ಹೆಣೆದ ಹಾಡೊಂದು ನಿಮ್ಮೆದುರು ಬಿಡುಗಡೆಯಗಿದೆ.
Tavara Nenapu || ತವರ ನೆನಪು | ಕನ್ನಡ ಭಾವಗೀತೆ | VANI PARKALA | CHAITRA KALLADKA
ಹೆಣ್ಣಿಗೆ ತವರೊಂದು ದೇವರ ವರ.ಅಲ್ಲೇ ಹುಟ್ಟಿ ಆಡಿ ಬೆಳೆದ ಇವಳಿಗೆ ತವರೆಂದರೆ ನಿತ್ಯ ಗಾನ. ತವರಿನವರಿಗಾಗಿ ಹಾತೊರೆಯುವ ಹೆಣ್ಣೊಬ್ಬಳ ಭ.....
26/09/2021
From today’s creative learning class.
Thanks,
Team Kannada Kali
10/09/2021
ಭಗವಾನ್ ಗಣೇಶನು ಎಲ್ಲರಿಗೂ ಉತ್ತಮ ಮಾರ್ಗದರ್ಶಕ ಹಾಗೂ ರಕ್ಷಕ.
ಅವನು ನಿಮ್ಮ ಕೆಲಸ ಕಾರ್ಯಗಳಲ್ಲಿ ಉತ್ತಮ ಆರಂಭವನ್ನು ನೀಡಲಿ.
ನಿಮ್ಮ ಜೀವನದಲ್ಲಿ ಯಾವುದೇ ಅಡೆತಡೆ ಬರದಂತೆ
ಕಾಯುವುದರ ಮೂಲಕ ಉತ್ಕೃಷ್ಟ ಜೀವನವನ್ನು ದಯ ಪಾಲಿಸಲಿ.
ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಗಣೇಶ ಚತುರ್ಥಿಯ ಶುಭಾಶಯಗಳು!
ಪಾರ್ವತಿ ದೇವಿಯ ಸೃಷ್ಟಿಯಿಂದ ಜನಿಸಿದ ಗಣೇಶನು ತಂದೆ ಶಿವನಿಂದ ಆನೆಯ ಮುಖವನ್ನು ಪಡೆಯುತ್ತಾನೆ. ಶಿವ-ಪಾರ್ವತಿಯ ಪ್ರಿಯ ಪುತ್ರ ಹಾಗೂ ಜನರ ಕಷ್ಟಗಳ ನಿವಾರಣೆಗೆ ನಿಲ್ಲುವ ಶಕ್ತಿಶಾಲಿ ದೇವ ಗಣೇಶ.
ಇವನ ಹುಟ್ಟಿದ ಹಬ್ಬದ ಸಂಭ್ರದ ಆಚರಣೆಯೇ ಗಣೇಶ ಚತುರ್ಥಿ. ಭಗವಾನ್ ಗಣೇಶನು ಬುದ್ಧಿವಂತಿಕೆ, ಸಮೃದ್ಧಿ ಮತ್ತು ಅದೃಷ್ಟದ ಸಂಕೇತವಾಗಿದ್ದಾನೆ.
ಭಾದ್ರಪದ ಚೌತಿಯಂದು ಮನೆಗೆ ಬರುವ ಗಜಮುಖ
ವಿಘ್ನಗಳ ನಿವಾರಕ ಗಣೇಶನ ಹಬ್ಬವನ್ನು ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಚೌತಿಯ ದಿನದಂದು ಆಚರಿಸಲಾಗುವುದು.
: ಕನ್ನಡ ಕಲಿ ಐರ್ಲೆಂಡ್
20/08/2021
ಮಕ್ಕಳ ಅಭಿವ್ಯಕ್ತಿಗೆ ಕಲೆ ಪ್ರಮುಖ ಮಾಧ್ಯಮ.
ಕನ್ನಡ ಕಲಿ ಐರ್ಲೆಂಡ್ ನಮ್ಮ ತಾಯ್ನಾಡು, ನುಡಿ, ಸಂಸ್ಕೃತಿ, ಆಚಾರ ವಿಚಾರಗಳನ್ನು ಮಕ್ಕಳಿಗೆ ಪರಿಚಯಿಸುವ ಧ್ಯೇಯವನ್ನು ಹೊಂದಿದೆ. ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಕನ್ನಡ ಕಲಿಸಲು ಬೇಕಾದ ಪಠ್ಯಕ್ರಮ ಹಾಗು ಸಾಮಗ್ರಿಗಳನ್ನು ಕನ್ನಡ ಕಲಿ ಒದಗಿಸುತ್ತದೆ.
ಕನ್ನಡ ಕಲಿಯ ಭಾಗವಾಗಲು ಸಂಪರ್ಕಿಸಿ.
ಐರ್ಲೆಂಡಿನಲ್ಲಿದ್ದರೂ ಕರುನಾಡಿನ ನಂಟು : ಮಕ್ಕಳಿಗೆ ನಿರಂತರವಾಗಿ ವಿಶೇಷ ಕನ್ನಡ ಪಾಠ
ಐರ್ಲೆಂಡ್ ನಿವಾಸಿಯಾಗಿರುವ ಬೆಂಗಳೂರಿನ ಪ್ರಕಾಶ್ ಮಾತನಾಡಿ, ಕನ್ನಡಿಗರ ಮಕ್ಕಳ ಕನ್ನಡ ಕಲಿಕೆಗೆ ಹೆತ್ತವರಿಂದಲೂ ಉತ್ತಮ ಸ್ಪಂದನೆ ಇದ.....
15/08/2021
೭೫ ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಶಿವಾನಂದ್ ಅವರು ಐರ್ಲೆಂಡ್ ದೇಶದಲ್ಲಿನ ಕನ್ನಡ ಮೂಲದ ಮಕ್ಕಳಿಗೆ ಕಾಲಾತ್ಮಕವಾಗಿ ಸ್ವಾತಂತ್ರ ದಿನಾಚರಣೆಯ ಮಹತ್ವವನ್ನು ತಮ್ಮ ಅದ್ಬುದ ಚಿತ್ರಗಳ ಮೂಲಕ ತಿಳಿಸಿ ಕೊಟ್ಟರು.
ಶಿವಾನಂದ್ ಅವರಿಗೆ ಐರ್ಲೆಂಡ್ ಕನ್ನಡ ಕಲಿ ಬಳಗ ಧನ್ಯವಾದಗಳನ್ನು ಅರ್ಪಿಸುತ್ತದೆ.
09/07/2021
ಕನ್ನಡ ಕಲಿ ವಾರದ ಪ್ರಶ್ನೆ 16 💛❤
ನಿಮ್ಮ ಉತ್ತರವನ್ನು ಕಾಮೆಂಟ್ ಮಾಡಿ
ಸುವರ್ಣ ವಿಧಾನಸೌಧ ಎಲ್ಲಿದೆ
೧. ಧಾರವಾಡ
೨. ಬೆಳಗಾವಿ
೩. ಮಂಗಳೂರು
೪. ಕಲ್ಬುರ್ಗಿ
02/07/2021
ಕನ್ನಡ ಕಲಿ ವಾರದ ಪ್ರಶ್ನೆ 15 💛❤
ನಿಮ್ಮ ಉತ್ತರವನ್ನು ಕಾಮೆಂಟ್ ಮಾಡಿ
ಕರ್ನಾಟಕದ ಅತ್ಯುನ್ಮತ ಶಿಖರ ಯಾವುದು ?
೧. ನಂದಿ ಬೆಟ್ಟ
೨. ಚಾಮುಂಡಿ ಬೆಟ್ಟ
೩. ಪುಷ್ಪಗಿರಿ
೪. ಮುಳ್ಳಯ್ಯನಗಿರಿ
28/06/2021
Hello everyone,
Kannada Kali Ireland is actively looking for teaching volunteers. If you are interested in teaching Kannada, join us to make a difference. We have a well planned syllabus and team to help the teaching volunteers to either take just one class or many. And these classes will be online using zoom. We have a rewards system to transparently reward the volunteers.
Reach out to us to join the great team to promote Kannada language and culture.
Thanks,
Team Kannada Kali Ireland
29/05/2021
Kannada Kali Ireland would like to announce that, we are in discussion to launch the kRewards, a Blockchain technology powered Rewards System for our Kannada Kali Ireland volunteers. Volunteers get transparently rewarded with crypto coins (Kannada Kali) for their contributions.
Watch this SPACE, soon we will come up with more updates on this.
29/05/2021
ಕನ್ನಡ ಕಲಿ ವಾರದ ಪ್ರಶ್ನೆ 13 💛❤
ನಿಮ್ಮ ಉತ್ತರವನ್ನು ಕಾಮೆಂಟ್ ಮಾಡಿ ತಿಳಿಸಿ..
ಭಾರತ ರತ್ನ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ವ್ಯಕ್ತಿ ಯಾರು?
a) ಗಿರೀಶ್ ಕಾರ್ನಾರ್ಡ್
b) ಸಿ ನ್ ರ್ ರಾವ್
c) ಪಂಡಿತ್ ಭೀಮಸೇನ್ ಜೋಶಿ
d) ಸರ್ ವಿ ಮ್ ವಿಶ್ವೇಶ್ವರಯ್ಯ
22/05/2021
ಕನ್ನಡ ಕಲಿ ವಾರದ ಪ್ರಶ್ನೆ 12 💛❤
ನಿಮ್ಮ ಉತ್ತರವನ್ನು ಕಾಮೆಂಟ್ ಮಾಡಿ ತಿಳಿಸಿ..
ಕರ್ನಾಟಕದ ಸಹ್ಯಾದ್ರಿ ಪರ್ವತದ ಅತ್ಯುನ್ನತ ಶಿಖರ ಯಾವುದು?
a) ಬಾಬಬುಡನಗಿರಿ
b) ಕುಮಾರಪರ್ವತ
c) ಮುಳ್ಳಯ್ಯನಗಿರಿ
d) ಪುಷ್ಪಗಿರಿ
14/05/2021
ಕನ್ನಡ ಕಲಿ ವಾರದ ಪ್ರಶ್ನೆ 11 💛❤
ನಿಮ್ಮ ಉತ್ತರವನ್ನು ಕಾಮೆಂಟ್ ಮಾಡಿ ತಿಳಿಸಿ..
ಚಾಲುಕ್ಯರ ಎರಡನೇ ರಾಜಧಾನಿಯಾದ ಬಾದಾಮಿಯನ್ನು ಹಿಂದೆ ಹೀಗೆ ಕರೆಯಲಾಗುತ್ತಿತ್ತು
a.ಐಹೊಳೆ
b.ಹಳೇಬೀಡು
c.ವಾತಾಪಿ
d.ಬೇಳೂರು
07/05/2021
ಕನ್ನಡ ಕಲಿ ವಾರದ ಪ್ರಶ್ನೆ 10 💛❤
ನಿಮ್ಮ ಉತ್ತರವನ್ನು ಕಾಮೆಂಟ್ ಮಾಡಿ ತಿಳಿಸಿ..
ಇವುಗಳಲ್ಲಿ ಯಾವುದನ್ನು ಕರ್ನಾಟಕದ ರೇಷ್ಮೆ ನಾಡು ಎಂದು ಕರೆಯಲಾಗುತ್ತದೆ?
a)ಬೆಳಗಾವಿ
b)ಚನ್ನಪಟ್ಟಣ
c)ರಾಮನಗರ
d)ಚಾಮರಾಜನಗರ
30/04/2021
ಕನ್ನಡ ಕಲಿ ವಾರದ ಪ್ರಶ್ನೆ 9 💛❤
ನಮ್ಮ ಕರ್ನಾಟಕದ ಐಪಿಎಲ್ ತಂಡದ ರಾಯಲ್ ಚಾಲೆಂಜ್ರ್ಸ್ ಬೆಂಗಳೂರಿನ (2008 ) ಮೊದಲ ಕ್ಯಾಪ್ಟನ್ ಯಾರು ?
ನಿಮ್ಮ ಉತ್ತರವನ್ನು ಕಾಮೆಂಟ್ ಮಾಡಿ ತಿಳಿಸಿ.
Please comment the answer to the question.
23/04/2021
ಕನ್ನಡ ಕಲಿ ವಾರದ ಪ್ರಶ್ನೆ 8 💛❤
ನಟ ಸಾರ್ವಭೌಮ ಡಾ.ರಾಜಕುಮಾರ್ ಈ ದಿನದಂದು ಜನಿಸಿದರು.
Please click on the image to answer to the question.
QUIZ: ಕನ್ನಡ ಕಲಿ ವಾರದ ಪ್ರಶ್ನೆ 8
ನಟ ಸಾರ್ವಭೌಮ ಡಾ.ರಾಜಕುಮಾರ್ ಈ ದಿನದಂದು ಜನಿಸಿದರು
16/04/2021
ಕನ್ನಡ ಕಲಿ ವಾರದ ಪ್ರಶ್ನೆ 7 💛❤
ಕನ್ನಡಕ್ಕೆ ದೊರೆತ ಒಟ್ಟು ಜ್ಯಾನಪೀಠ ಪ್ರಶಸ್ತಿಗಳು
Please click on the image to answer to the question.
QUIZ: ಕನ್ನಡ ಕಲಿ ವಾರದ ಪ್ರಶ್ನೆ 7
Think you’re smart? Take our quiz and test your knowledge!
13/04/2021
ಹೋಳಿ ಹಬ್ಬದ ಪ್ರಯುಕ್ತ ಕನ್ನಡ ಕಲಿ ಮಕ್ಕಳು ಮಾಡಿರುವ ಚಿತ್ರಗಳು💛❤
13/04/2021
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು
ಕನ್ನಡ ಕಲಿ ಐರ್ಲೆಂಡ್ 💛❤
09/04/2021
ಕನ್ನಡ ಕಲಿ ವಾರದ ಪ್ರಶ್ನೆ 6 💛❤
ಕರ್ನಾಟಕದ ಪ್ರಸಿದ್ಧ ಜೋಗ ಜಲಪಾತ ಯಾವ ಜಿಲ್ಲೆಯಲ್ಲಿ ಇದೆ?
Please click on the image to answer to the question.
QUIZ: ಕನ್ನಡ ಕಲಿ ವಾರದ ಪ್ರಶ್ನೆ 6
Think you’re smart? Take our quiz and test your knowledge!